ನವೆಂಬರ್ ತಿಂಗಳಿನಲ್ಲಿ 3.49 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Hero Motocorp

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ 2021ರ ನವೆಂಬರ್ ತಿಂಗಳಿನ ತನ್ನ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಕಂಪನಿಯು 3,49,393 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ನವೆಂಬರ್ ತಿಂಗಳಿನಲ್ಲಿ 3.49 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Hero Motocorp

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು 5,91,091 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಕುಸಿತವಾಗಿದೆ ಹಬ್ಬದ ಸೀಸನ್ ನಂತರ ಬೇಡಿಕೆಯ ಮೇಲೆ ಪರಿಣಾಮ ಬೀರಿತು. ದೇಶೀಯ ಮಾರುಕಟ್ಟೆಯಲ್ಲಿ ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಭಾರೀ ಇಳಿಕೆಯನ್ನು ಕಂಡಿದೆ.

ನವೆಂಬರ್ ತಿಂಗಳಿನಲ್ಲಿ 3.49 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Hero Motocorp

ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಕಂಪನಿಯು 3,49,393 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಇದರಲ್ಲಿ 3,29,185 ಬೈಕ್ ಗಳ ಮಾರಾಟವಾಗಿದ್ದರೆ, ಉಳಿದವು ಸ್ಕೂಟರ್‌ಗಳಾಗಿವೆ. ಇನ್ನು ಕಳೆದ ವರ್ಷ ಹೀರೋ ಮೋಟೊಕಾರ್ಪ್ ಕಂಪನಿಯು 20,531 ಯುನಿಟ್ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಿದ್ದಾರೆ. ಉಳಿದಂತೆ 3,28,862 ಯುನಿಟ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ.

ನವೆಂಬರ್ ತಿಂಗಳಿನಲ್ಲಿ 3.49 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Hero Motocorp

ಹೀರೋ ಮೋಟೊಕಾರ್ಪ್ ಪ್ರಕಾರ, ಆರ್ಥಿಕತೆಯು ಕ್ರಮೇಣ ತೆರೆದುಕೊಳ್ಳುವುದರೊಂದಿಗೆ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವುದು, ಆತ್ಮವಿಶ್ವಾಸದ ಗ್ರಾಹಕ ಸೂಚ್ಯಂಕ ಮತ್ತು ಮದುವೆಯ ಸೀಸನ್ ನಂತಹ ಹಲವಾರು ಸಕಾರಾತ್ಮಕ ಸೂಚಕಗಳೊಂದಿಗೆ ನಾಲ್ಕನೇ ತ್ರೈಮಾಸಿಕದಲ್ಲಿ ಮಾರಾಟದಲ್ಲಿ ತ್ವರಿತ ಪುನರುಜ್ಜೀವನವನ್ನು ನಿರೀಕ್ಷಿಸಲಾಗಿದೆ.

ನವೆಂಬರ್ ತಿಂಗಳಿನಲ್ಲಿ 3.49 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Hero Motocorp

ಹೆಚ್ಚುವರಿಯಾಗಿ, ಸರಕುಗಳ ಬೆಲೆಗಳು ಕೆಲವು ಲಕ್ಷಣಗಳನ್ನು ತೋರಿಸುತ್ತಿವೆ, ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವುದರೊಂದಿಗೆ ಸಹಾಯ ಮಾಡುತ್ತವೆ ಮತ್ತು ಸರ್ಕಾರದಿಂದ ಕ್ಯಾಪೆಕ್ಸ್ ಕಾರ್ಯಕ್ರಮಗಳ ಮೇಲೆ ಹೆಚ್ಚಿದ ಖರ್ಚು ದ್ವಿಚಕ್ರ ವಾಹನ ಉದ್ಯಮದಲ್ಲಿ ವೇಗವನ್ನು ಮರಳಿ ತರುವ ಸಾಧ್ಯತೆಯಿದೆ.

ನವೆಂಬರ್ ತಿಂಗಳಿನಲ್ಲಿ 3.49 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Hero Motocorp

ಕಂಪನಿಯ ಎಲೆಕ್ಟ್ರಿಕ್ ವಾಹನಗಳ (ಇವಿ) ಯೋಜನೆಯು ಯೋಜನೆಗಳ ಪ್ರಕಾರ ಪ್ರಗತಿಯಲ್ಲಿದೆ ಮತ್ತು ಆಂಧ್ರಪ್ರದೇಶದ ಚಿತ್ತೂರು ಉತ್ಪಾದನಾ ಘಟಕವು ಎಲೆಕ್ಟ್ರಿಕ್ ಮಾದರಿಗಳನ್ನು ಉತ್ಪಾದಿಸಲು ಸಜ್ಜಾಗಿದೆ. ಹೀರೋ ಮೋಟೊಕಾರ್ಪ್ ನಲ್ಲಿನ ತಂಡಗಳು ಬ್ಯಾಟರಿ ತಂತ್ರಜ್ಞಾನ ಮತ್ತು ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳು, ಪವರ್‌ಟ್ರೇನ್, ಟೆಲಿಮ್ಯಾಟಿಕ್ಸ್, ಅನಾಲಿಟಿಕ್ಸ್ ಮತ್ತು ಡಯಾಗ್ನೋಸ್ಟಿಕ್ಸ್ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳಂತಹ ಸಂಪೂರ್ಣ ಇವಿ ವ್ಯವಸ್ಥೆಯಲ್ಲಿ ಕೆಲಸ ಮಾಡುವುದರ ಮೇಲೆ ಕೇಂದ್ರೀಕೃತವಾಗಿವೆ.

ನವೆಂಬರ್ ತಿಂಗಳಿನಲ್ಲಿ 3.49 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Hero Motocorp

ಸ್ವದೇಶ್ ಶ್ರೀವಾಸ್ತವ ಅವರನ್ನು ಇತ್ತೀಚೆಗೆ ಹೀರೋ ಮೋಟೋಕಾರ್ಪ್‌ನ ಎಮರ್ಜಿಂಗ್ ಮೊಬಿಲಿಟಿ ಬ್ಯುಸಿನೆಸ್ ಯೂನಿಟ್ (ಇಎಂಬಿಯು) ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ, ಇದು ಮಾರ್ಚ್ 2022ರ ವೇಳೆಗೆ ಮೊದಲ ಇವಿ ಉತ್ಪನ್ನವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.

ನವೆಂಬರ್ ತಿಂಗಳಿನಲ್ಲಿ 3.49 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Hero Motocorp

ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಮೋಟೋಕಾರ್ಪ್ ತನ್ನ ಹೊಸ ಎಕ್ಸ್‌ಪಲ್ಸ್ 200 4ವಿ ಬೈಕನ್ನು ಇತ್ತೀಚೆಗೆ ಬಿಡುಗಡೆಗೊಳಿತು. ಈ ಹೀರೋ ಎಕ್ಸ್‌ಪಲ್ಸ್ 200 4ವಿ ಯಾವಾಗಲೂ ನೈಜ ಆಫ್-ರೋಡ್ ಸಾಮರ್ಥ್ಯ ಹೊಂದಿರುವ ಅತ್ಯಂತ ಸಮರ್ಥ ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್ ಆಗಿದೆ. ಈ ಹೊಸ ಬೈಕ್ ಕೈಗೆಟುಕುವ ಬೆಲೆಯನ್ನು ಹೊಂದಿದೆ.

ನವೆಂಬರ್ ತಿಂಗಳಿನಲ್ಲಿ 3.49 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Hero Motocorp

ಈಗ ಟಾಪ್ಲ್ ಅಲರ್ಟ್ ಫೀಚರ್ ಎಕ್ಸ್‌ಪಲ್ಸ್ 200 ಬೈಕ್ ನಲ್ಲಿ ಲಭ್ಯವಿದೆ. ಇದು ಬೈಕ್ ಉರುಳಿದಲ್ಲಿ ಆಟೋಮ್ಯಾಟಿಕ್ ಅಪ್ಲಿಕೇಶನ್ ನೋಟಿಫಿಕೇಶನ್ ಕಳುಹಿಸಿ ಮತ್ತು ಎಸ್‌ಎಂಎಸ್ ಅನ್ನು ತುರ್ತು ಸಂಪರ್ಕಗಳಿಗೆ ಕಳುಹಿಸಲಾಗುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ನೋಟಿಫಿಕೇಶನ್ ಅನ್ನು ಕಳುಹಿಸಲಾಗುತ್ತದೆ. ವಾಹನ ಉರುಳಿಬಿದ್ದಾಗ ಬಳಕೆದಾರರು ತಮಗೆ ನೋಟಿಫಿಕೇಶನ್ ಗಾಗಿ ತುರ್ತು ಸಂಪರ್ಕಗಳನ್ನು ಆಯ್ಕೆ ಮಾಡಬಹುದು.

ನವೆಂಬರ್ ತಿಂಗಳಿನಲ್ಲಿ 3.49 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Hero Motocorp

ಅಪಘಾತದ ಸಂದರ್ಭದಲ್ಲಿ ಸಕಾಲಿಕ ವೈದ್ಯಕೀಯ ಸಹಾಯವು ನಿರ್ಣಾಯಕವಾಗಿರುವುದರಿಂದ ಈ ಫೀಚರ್ ಜೀವ ರಕ್ಷಕವಾಗಬಹುದು.ವಾಹನ ಉರುಳಿ ಬಿದ್ದಾಗ ನೋಟಿಫಿಕೇಶನ್ ಸ್ವೀಕರಿಸಿದ ನಂತರ, ತುರ್ತು ಸಂಪರ್ಕಗಳು ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಬಹುದು.ಪರಿಸ್ಥಿತಿ ಅಗತ್ಯವಿದ್ದಲ್ಲಿ ವೈದ್ಯಕೀಯ ಸಹಾಯವನ್ನು ಕೋರಬಹುದು.

ನವೆಂಬರ್ ತಿಂಗಳಿನಲ್ಲಿ 3.49 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Hero Motocorp

ಹೀರೋ ಮೋಟೋಕಾರ್ಪ್ ಕಂಪನಿಯು ದುಬೈನಲ್ಲಿ ಹೊಸ ವಿಶೇಷ ಡೀಲರ್‌ಶಿಪ್ ಅನ್ನು ಉದ್ಘಾಟಿಸುವ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿದೆ. ಹೊಸ ಅತ್ಯಾಧುನಿಕ ಡೀಲರ್‌ಶಿಪ್ 625 ಚದರ ಅಡಿಗಳಿಂದ ಕೂಡಿದೆ. ಈ ಹೊಸ ಹೀರೋ ಡೀಲರ್‌ಶಿಪ್ ನಲ್ಲಿ ಸೇಲ್ಸ್, ಸರ್ವಿಸ್ ಮತ್ತು ಅಕ್ಸೆಸರೀಸ್ ಗಳು ಲಭ್ಯವಿರುತ್ತದೆ. ಹೀರೋ ಮೋಟೋಕಾರ್ಪ್ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಸಂಪೂರ್ಣ ಸರಣಿಯನ್ನು ಸಹ ಪ್ರದರ್ಶಿಸುತ್ತದೆ.

ನವೆಂಬರ್ ತಿಂಗಳಿನಲ್ಲಿ 3.49 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Hero Motocorp

ಕಾರ್ಯಾಗಾರವು ಎರಡು ಸೇವಾ ವಿಭಾಗವನ್ನು ಹೊಂದಿದ್ದು, ಗ್ರಾಹಕರಿಗೆ ಉತ್ತಮ-ದರ್ಜೆಯ ಮಾರಾಟದ ನಂತರದ ಸೇವಾ ಅನುಭವ ಮತ್ತು ಬಿಡಿಭಾಗಗಳನ್ನು ಒದಗಿಸುತ್ತದೆ. ಹೊಸ ದುಬೈ ಡೀಲರ್‌ಶಿಪ್‌ನೊಂದಿಗೆ ಹೀರೋ ಮೋಟೋಕಾರ್ಪ್ಈಗ ಗಲ್ಫ್ ಮಾರುಕಟ್ಟೆಯಲ್ಲಿ 5 ದೇಶಗಳಲ್ಲಿ 10 ಗ್ರಾಹಕ ಟಚ್‌ಪಾಯಿಂಟ್‌ಗಳನ್ನು ಹೊಂದಿದೆ.ಉದ್ಘಾಟನೆಯ ಸಮಯದಲ್ಲಿ, 100 ಹೀರೋ ಮೋಟೋಕಾರ್ಪ್ ಬೈಕ್ ಗಳನ್ನ್ ಎಸ್‌ಎಸ್ ಡೆಲಿವರಿ ಸರ್ವಿಸಸ್ ಎಲ್‌ಎಲ್‌ಸಿಗೆ ಹಸ್ತಾಂತರಿಸಲಾಯಿತು, ಇದು ಪ್ರದೇಶದ ಪ್ರಮುಖ ಆಹಾರ ವಿತರಣಾ ಅಗ್ರಿಗೇಟರ್‌ಗಳಿಗೆ ಆದ್ಯತೆಯ ಪಾಲುದಾರ.

ನವೆಂಬರ್ ತಿಂಗಳಿನಲ್ಲಿ 3.49 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Hero Motocorp

ಹೀರೋ ಮೋಟೋಕಾರ್ಪ್ 2018 ರಲ್ಲಿ ಈ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.ಮಧ್ಯಪ್ರಾಚ್ಯ ಮಾರುಕಟ್ಟೆಯಲ್ಲಿ ಕಂಪನಿಯ ವಿಶೇಷ ವಿತರಕರಾದ Afriventures FZE ಸಹಯೋಗದೊಂದಿಗೆ. ಗಲ್ಫ್ ರಾಷ್ಟ್ರಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೀರೋ ಮೋಟೋಕಾರ್ಪ್ ಕಂಪನಿಯು ಹೊಂದಿದೆ. ಒಟ್ಟಿನಲ್ಲಿ ಜನಪ್ರಿಯ ಹೀರೋ ಮೋಟೋಕಾರ್ಪ್ ಕಂಪನಿಯು ಜಾಗತಿಕವಾಗಿ ಮಾರುಕಟ್ಟೆಯನ್ನು ವಿಸ್ತರಿಸಲು ಯೋಜಿಸುತ್ತಿದೆ.ಇನ್ನು ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ.

Article Published On: Thursday, December 2, 2021, 10:32 [IST]
English summary
Hero motocorp sells 3 49 lakh units in november 2021 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+