ಕರೋನಾ ಆರ್ಭಟದ ನಡುವೆಯೂ ಹತ್ತು ಲಕ್ಷ ವಾಹನ ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಕರೋನಾ ಲಾಕ್‌ಡೌನ್ ನಡುವೆಯೂ 2021-22ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 1 ಮಿಲಿಯನ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿರುವುದಾಗಿ ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತಿಳಿಸಿದೆ.

ಕರೋನಾ ಆರ್ಭಟದ ನಡುವೆಯೂ ಹತ್ತು ಲಕ್ಷ ವಾಹನ ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

2021-22ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್-ಜೂನ್ ನಡುವೆ 10,24,507 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿರುವುದಾಗಿ ಹೀರೋ ಮೋಟೊಕಾರ್ಪ್ ಹೇಳಿದೆ. ಏಪ್ರಿಲ್ 1ರಂದು ಆರಂಭವಾದ 2021-22ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕರೋನಾ ವೈರಸ್ ಎರಡನೇ ಅಲೆ ತನ್ನ ಆರ್ಭಟವನ್ನು ತೋರಿಸಿತು.

ಕರೋನಾ ಆರ್ಭಟದ ನಡುವೆಯೂ ಹತ್ತು ಲಕ್ಷ ವಾಹನ ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಕರೋನಾ ವೈರಸ್ ಹರಡುವುದನ್ನು ತಡೆಯಲು ದೇಶದ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಯಿತು. ಲಾಕ್‌ಡೌನ್ ಅವಧಿಯಲ್ಲಿ ಹಲವು ರಾಜ್ಯಗಳಲ್ಲಿ ಮಾರಾಟ ಕೇಂದ್ರಗಳನ್ನು ಮುಚ್ಚಲಾಗಿತ್ತು.

ಕರೋನಾ ಆರ್ಭಟದ ನಡುವೆಯೂ ಹತ್ತು ಲಕ್ಷ ವಾಹನ ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಈ ಲಾಕ್‌ಡೌನ್ ಮೇ ತಿಂಗಳ ಅಂತ್ಯದವರೆಗೂ ಜಾರಿಯಲ್ಲಿತ್ತು. ಲಾಕ್‌ಡೌನ್ ನಡುವೆಯೂ ಅಂದರೆ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ಹೀರೋ ಮೋಟೊಕಾರ್ಪ್ 1 ಮಿಲಿಯನ್ ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಕರೋನಾ ಆರ್ಭಟದ ನಡುವೆಯೂ ಹತ್ತು ಲಕ್ಷ ವಾಹನ ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ದೇಶಿಯ ಮಾರುಕಟ್ಟೆಯಲ್ಲಿ ಬೈಕ್'ಗಳನ್ನು ಮಾತ್ರವಲ್ಲದೇ ಸ್ಕೂಟರ್‌ಗಳನ್ನು ಸಹ ಮಾರಾಟ ಮಾಡುತ್ತದೆ. ಲಾಕ್‌ಡೌನ್ ನಡುವೆಯೂ ಹೀರೋ ಮೋಟೊಕಾರ್ಪ್ ಮಾರಾಟಟವು 1 ಮಿಲಿಯನ್ ದಾಟಿರುವುದು ಜನರು ವೈಯಕ್ತಿಕ ವಾಹನ ಖರೀದಿಗೆ ಮುಂದಾಗಿರುವುದನ್ನು ತೋರಿಸುತ್ತದೆ.

ಕರೋನಾ ಆರ್ಭಟದ ನಡುವೆಯೂ ಹತ್ತು ಲಕ್ಷ ವಾಹನ ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಮಾರಾಟವಾದ ಒಟ್ಟು 10,24,507 ವಾಹನಗಳಲ್ಲಿ ಸುಮಾರು ಅರ್ಧ ಭಾಗದಷ್ಟು ವಾಹನಗಳು ಜೂನ್‌ ತಿಂಗಳಿನಲ್ಲಿಯೇ ಮಾರಾಟವಾಗಿವೆ. ಹೀರೋ ಮೋಟೊಕಾರ್ಪ್ ಜೂನ್ ತಿಂಗಳಿನಲ್ಲಿ 4,69,160 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಕರೋನಾ ಆರ್ಭಟದ ನಡುವೆಯೂ ಹತ್ತು ಲಕ್ಷ ವಾಹನ ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಇದರಲ್ಲಿ 4,41,536 ಯುನಿಟ್ ಬೈಕ್'ಗಳಾದರೆ, 27,624 ಯುನಿಟ್ ಸ್ಕೂಟರ್‌ಗಳಾಗಿವೆ. ಈ ಪೈಕಿ 4,38,514 ಯುನಿಟ್ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗಿದ್ದರೆ, 30,646 ಯುನಿಟ್ ವಾಹನಗಳನ್ನು ರಫ್ತು ಮಾಡಲಾಗಿದೆ.

ಕರೋನಾ ಆರ್ಭಟದ ನಡುವೆಯೂ ಹತ್ತು ಲಕ್ಷ ವಾಹನ ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು 2020ರ ಜೂನ್ ತಿಂಗಳಿನಲ್ಲಿ 4,51,983 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. ಇನ್ನು ಹೀರೋ ಮೋಟೊಕಾರ್ಪ್ 2020-21ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 5,64,665 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು.

ಕರೋನಾ ಆರ್ಭಟದ ನಡುವೆಯೂ ಹತ್ತು ಲಕ್ಷ ವಾಹನ ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಕಳೆದ ವರ್ಷ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ ಕಾರಣಕ್ಕೆ 2020ರ ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಒಂದೇ ಒಂದು ವಾಹನವನ್ನು ಸಹ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ ಎಂಬುದನ್ನು ಗಮನಿಸಬೇಕು.

ಕರೋನಾ ಆರ್ಭಟದ ನಡುವೆಯೂ ಹತ್ತು ಲಕ್ಷ ವಾಹನ ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಆದರೂ ಸಹ ಕಳೆದ ಹಣಕಾಸು ವರ್ಷವಾದ 2020-21ರ ಮೊದಲ ತ್ರೈಮಾಸಿಕದಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು 5,64,665 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು.

Most Read Articles

Kannada
English summary
Hero Motocorp sells more than one million vehicles in first quarter of FY 2021-22. Read in Kannada.
Story first published: Saturday, July 3, 2021, 14:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X