ಮಾರ್ಚ್ ತಿಂಗಳಿನಲ್ಲಿ 5.77 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ 2021ರ ಮಾರ್ಚ್ ತಿಂಗಳಿನ ತನ್ನ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಕಂಪನಿಯು 5,76,957 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಮಾರ್ಚ್ ತಿಂಗಳಿನಲ್ಲಿ 5.77 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಇನ್ನು ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು 334,647 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕೆ ಹೋಲಿಸಿದರೆ ಶೇ.72 ರಷ್ಟು ಬೆಳವಣಿಗೆಯನ್ನು ಕಂಡಿದೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಕೊರೊನಾದಿಂದಾಗಿ ಲಾಕ್‌ಡೌನ್ ಇದ್ದ ಕಾರಣ ಮಾರಾಟದಲ್ಲಿ ಕುಸಿತವನ್ನು ಕಂಡಿತ್ತು. ಆದರೂ ಹೀರೋ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳೆವಣಿಗೆಯನ್ನು ಸಾಧಿಸುತ್ತದೆ.

ಮಾರ್ಚ್ ತಿಂಗಳಿನಲ್ಲಿ 5.77 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಇನ್ನು 2021ರ ಫೆಬ್ರವರಿ ತಿಂಗಳಿನಲ್ಲಿ ಹೀರೋ ಮೊಟೊಕಾರ್ಪ್ ಕಂಪನಿಯು 505,467 ಯುನಿಟ್‌ಗಳನ್ನು ಮಾರಾಟಗೊಳಿಸಿತು. ಇದನ್ನು ಕಳೆದ ತಿಂಗಳಿಗೆ ಹೋಲಿಸಿದರೆ ಶೇ.14.14 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಮಾರ್ಚ್ ತಿಂಗಳಿನಲ್ಲಿ 5.77 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಜಾಗತಿಕ ವ್ಯವಹಾರದ ಮುಖ್ಯಸ್ಥರಾದ ಸಂಜಯ್ ಭನ್ ಅವರು ಮಾತನಾಡಿ, ಜಾಗತಿಕ ಮಟ್ಟಕೆ ಹೀರೋ ಮೋಟೊಕಾರ್ಪ್ ಕಾಲಿಡುತ್ತಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ಕಾಪಾಡಿಕೊಳ್ಳುವ ಆಶಾವಾದವನ್ನು ನಾವು ಹೊಂದಿದ್ದೇವೆ.

ಮಾರ್ಚ್ ತಿಂಗಳಿನಲ್ಲಿ 5.77 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಕೊರೊನಾ ವೈರಸ್ ನಿಂದ ಜಾಗತಿಕ ವಾಹನ ಉದ್ಯಮದ ಮೇಲೆ ಪರಿಣಾಮ ಬೀರುತ್ತಲೇ ಇದ್ದರೂ, ಮಾರುಕಟ್ಟೆಗಳಲ್ಲಿ, ವಿಶೇಷವಾಗಿ ಲ್ಯಾಟಿನ್ ಅಮೆರಿಕಾದಲ್ಲಿ ಪ್ರೀಮಿಯಂ ಎಕ್ಸ್‌ಪಲ್ಸ್ ಮತ್ತು ಹಂಕ್ 160 ಆರ್ ಸೇರಿದಂತೆ ಹಲವು ಮಾದರಿಗಳಿಗೆ ಉತ್ತಮ ಬೇಡಿಕೆ ಇದೆ ಎಂದು ಹೇಳಿದರು.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಮಾರ್ಚ್ ತಿಂಗಳಿನಲ್ಲಿ 5.77 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಇತ್ತೀಚೆಗೆ 100 ಮಿಲಿಯನ್(10 ಕೋಟಿ) ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ. ವಾಹನ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 10 ಕೋಟಿ ಯುಮಿಟ್ ಗಳನ್ನು ಉತ್ಪಾದನೆ ಮಾಡಿ ಹೊಸ ದಾಖಲೆಯನ್ನು ನಿರ್ಮಿಸಿದೆ.

ಮಾರ್ಚ್ ತಿಂಗಳಿನಲ್ಲಿ 5.77 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಈ 100 ಮಿಲಿಯನ್ ಉತ್ಪಾದನಾ ಮೈಲಿಗಲ್ಲಿನ ಸಂಭ್ರಮಕ್ಕಾಗಿ 100 ಮಿಲಿಯನ್ ಎಡಿಷನ್ ಬಣ್ಣದಲ್ಲಿ ಇತರ 5 ಮಾದರಿಗಳನ್ನು ಕೂಡ ಬಿಡುಗಡೆಗೊಳಿಸಿದೆ. ಇದರಲ್ಲಿ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಕೂಡ ಒಳಗೊಂಡಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಮಾರ್ಚ್ ತಿಂಗಳಿನಲ್ಲಿ 5.77 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಇನ್ನು ಕೇರಳದಲ್ಲಿ ಈ ಹೀರೋ ಎಕ್ಸ್‌ಪಲ್ಸ್ 200 ಮಾದರಿಯು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಹೀರೋ ಎಕ್ಸ್‌ಪಲ್ಸ್ 200 ಮಾದರಿಯು ಕೇರಳದಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟವಾಗಿ ಹೊಸ ಮೈಲಿಗಲ್ಲನ್ನು ದಾಖಲಿಸಿದೆ.

ಮಾರ್ಚ್ ತಿಂಗಳಿನಲ್ಲಿ 5.77 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಮೊಟೊಕಾರ್ಪ್ ತನ್ನ ಮಾದರಿಗಳನ್ನು ಮಧ್ಯ ಅಮೆರಿಕದ ದೇಶದಲ್ಲಿ ಮಾರಾಟ ಮಾಡಲು ಗ್ರೂಪೋ ಸಲಿನಾಸ್ ಜೊತೆ ಪಾಲುಗಾರಿಕೆ ಮಾಡಿ ವಿಶ್ವದ ಅತಿದೊಡ್ಡ ವಿತರಣಾ ಜಾಲಗಳಲ್ಲಿ ಒಂದಾಗಲಿದೆ.

ಮಾರ್ಚ್ ತಿಂಗಳಿನಲ್ಲಿ 5.77 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಹೀರೋನ ಜಾಗತಿಕ ಪರಿಣಿತಿ ಮತ್ತು ನೂತನ ತಂತ್ರಜ್ಞಾನದ ಜೊತೆ ಗ್ರೂಪೋ ಸಲಿನಾಸ್‌ನ ಸ್ಥಳೀಯ ಮಾರುಕಟ್ಟೆ ಜ್ಞಾನದಿಂದ, ಮುಂದಿನ ಮೂರು ವರ್ಷಗಳಲ್ಲಿ ಹೀರೋ ಬ್ರ್ಯಾಂಡ್ ಅನ್ನು ವಿಸ್ತರಿಸುವ ಗುರಿ ಹೊಂದಿದ್ದೇವೆ" ಎಂದು ಹೀರೋ ಮೊಟೊಕಾರ್ಪ್‌ನ ಅಧ್ಯಕ್ಷ ಮತ್ತು ಸಿಇಒ ಪವನ್ ಮುಂಜಾಲ್ ಹೇಳಿದ್ದಾರೆ.

Most Read Articles

Kannada
English summary
Hero MotoCorp Despatches 5.77 Lakh Units. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X