ಕಾರುಗಳಲ್ಲಿರುವಂತಹ ಫೀಚರ್ ಹೊಂದಲಿದೆ ಈ ಎಲೆಕ್ಟ್ರಿಕ್ ಸ್ಕೂಟರ್
ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಹೀರೋ ಎಲೆಕ್ಟ್ರಿಕ್ (Hero Electric) ತನ್ನ ಆಪ್ಟಿಮಾ ಹೆಚ್‌ಎಕ್ಸ್ (Optima HX) ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಹೊಸ ಫೀಚರ್ ಅನ್ನು ಸೇರಿಸಿದೆ. ಕಂಪನಿಯು ಈಗ ಈ ಸ್ಕೂಟರ್ ಮಾದರಿಯಲ್ಲಿ ಕ್ರೂಸ್ ಕಂಟ್ರೋಲ್ ಫೀಚರ್ ಅನ್ನು ಸೇರಿಸಿದೆ. ಸಾಮಾನ್ಯವಾಗಿ ಈ ಫೀಚರ್ ಅನ್ನು ದುಬಾರಿ ಬೈಕ್ ಅಥವಾ ಕಾರುಗಳಲ್ಲಿ ಮಾತ್ರ ನೀಡಲಾಗುತ್ತದೆ.

ಈಗ ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸವಾರಿಯ ಗುಣಮಟ್ಟವನ್ನು ಸುಧಾರಿಸಲು ಈ ಫೀಚರ್ ಅನ್ನು ನೀಡಲು ನಿರ್ಧರಿಸಿದೆ. ಇನ್ನು ಮುಂದೆ ಆಪ್ಟಿಮಾ ಹೆಚ್‌ಎಕ್ಸ್ ಹೊಸ ಮಾದರಿಗಳಲ್ಲಿ ಕ್ರೂಸ್ ಕಂಟ್ರೋಲ್ ಫೀಚರ್ ಲಭ್ಯವಿರಲಿದೆ ಎಂದು ಕಂಪನಿ ಹೇಳಿದೆ. ಕ್ರೂಸ್ ಕಂಟ್ರೋಲ್ ಫೀಚರ್ ಅನ್ನು ಆಕ್ಟಿವೇಟ್ ಮಾಡಿದ ನಂತರ ಸ್ಪೀಡೋಮೀಟರ್‌ನಲ್ಲಿ ಗೋಚರಿಸುತ್ತದೆ.

ಕ್ರೂಸ್ ಕಂಟ್ರೋಲ್ ಫೀಚರ್, ಆಕ್ಟಿವೇಶನ್ ಬಟನ್ ಅನ್ನು ಒತ್ತುವ ಮೂಲಕ ಸ್ಥಿರವಾದ ವೇಗವನ್ನು ಕಾಯ್ದುಕೊಳ್ಳಲು ಸವಾರರಿಗೆ ನೆರವಾಗಲಿದೆ. ಇದರಿಂದಾಗಿ ಸ್ಕೂಟರ್ ಸವಾರಿ ಮಾಡುವಾಗ ಆಕ್ಸಲರೇಟರ್ ಅನ್ನು ಆಗಾಗ್ಗೆ ತಿರುಗಿಸುವ ಅಗತ್ಯ ಇಲ್ಲವಾಗುತ್ತದೆ. ಒಮ್ಮೆ ಆಕ್ಟಿವೇಟ್ ಆದ ನಂತರ ಆಪ್ಟಿಮಾ ಹೆಚ್‌ಎಕ್ಸ್ ಸ್ಕೂಟರ್‌ನ ಸ್ಪೀಡೋಮೀಟರ್ ಕ್ರೂಸ್ ಕಂಟ್ರೋಲ್ ಸಿಗ್ನಲ್ ಅನ್ನು ತೋರಿಸುತ್ತದೆ.

ಥ್ರೊಟಲ್ ಅನ್ನು ತಿರುಗಿಸುವ ಮೂಲಕ ಅಥವಾ ಬ್ರೇಕ್ ಗಳನ್ನು ಅನ್ವಯಿಸುವ ಮೂಲಕ ಅದನ್ನು ನಿಷ್ಕ್ರಿಯಗೊಳಿಸಬಹುದು. ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಹೆಚ್‌ಎಕ್ಸ್ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಫೇಮ್ 2 ಸಬ್ಸಿಡಿಯ ನಂತರ ಎಕ್ಸ್ ಶೋರೂಂ ದರದಂತೆ ರೂ. 55,580 ಗಳಾಗಿದೆ. ಆಪ್ಟಿಮಾ ಹೆಚ್‌ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ 51.2 ವ್ಯಾ / 30 ಎಹೆಚ್ ಪೋರ್ಟಬಲ್ ಲಿಥಿಯಂ ಐಯಾನ್ ಬ್ಯಾಟರಿ ಹೊಂದಿರುವ 1200 ವ್ಯಾಟ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ.

ಈ ಸ್ಕೂಟರಿನಲ್ಲಿರುವ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಎಲೆಕ್ಟ್ರಿಕ್ ಸ್ಕೂಟರ್ 82 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಬ್ಯಾಟರಿಯು 5 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಈ ಸ್ಕೂಟರಿನ ಗರಿಷ್ಠ ವೇಗ ಪ್ರತಿ ಗಂಟೆಗೆ 42 ಕಿ.ಮೀಗಳಾಗಿದೆ. ಹೀರೋ ಆಪ್ಟಿಮಾ ಹೆಚ್‌ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಆಪ್ರಾನ್ ಮೌಂಟೆಡ್ ಟರ್ನ್ ಇಂಡಿಕೇಟರ್, ಯುಎಸ್‌ಬಿ ಪೋರ್ಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 12 ಇಂಚಿನ ಅಲಾಯ್ ವ್ಹೀಲ್, ರಿಮೋಟ್ ಲಾಕ್, ಎಲ್‌ಇಡಿ ಹೆಡ್‌ಲೈಟ್ ಹಾಗೂ ಆ್ಯಂಟಿ ಥೆಫ್ಟ್ ಅಲಾರ್ಮ್‌ಗಳನ್ನು ಹೊಂದಿದೆ.

ಇದರ ಜೊತೆಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಸ್ಟೆಪ್ ಅಪ್ ಸೀಟ್ ಹಾಗೂ ಸಿಂಗಲ್ ಪೀಸ್ ಪಿಲ್ಲರ್ ಗ್ರಾಬ್ ರೈಲ್ ಅನ್ನು ಸಹ ಹೊಂದಿದೆ. ಇದು ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಆಧುನಿಕ ನೋಟವನ್ನು ನೀಡುತ್ತದೆ. ಹೀರೋ ಎಲೆಕ್ಟ್ರಿಕ್ (Hero Electric) ಮುಂದಿನ ಐದು ವರ್ಷಗಳಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು 5 ಮಿಲಿಯನ್ ಯುನಿಟ್‌ಗಳಿಗೆ ಹೆಚ್ಚಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕಂಪನಿಯು ಲುಧಿಯಾನದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ 2022ರ ಮಧ್ಯದ ವೇಳೆಗೆ ಉತ್ಪಾದನೆಯನ್ನು ವಾರ್ಷಿಕ 5 ಲಕ್ಷ ಯುನಿಟ್‌ಗಳಿಗೆ ಹೆಚ್ಚಿಸಲಿದೆ. ನಂತರ ಕಂಪನಿಯು ಹೊಸ ಸ್ಥಳದಲ್ಲಿ ಉತ್ಪಾದನಾ ಘಟಕವನ್ನು ತೆರೆಯುವ ಮೂಲಕ ಉತ್ಪಾದನೆಯನ್ನು ಹೆಚ್ಚಿಸಲಿದೆ. ಫೇಮ್ 2 ಯೋಜನೆ ಹಾಗೂ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಸಬ್ಸಿಡಿ ನೀಡುತ್ತಿರುವುದು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಹೆಚ್ಚಳ ಕಂಡು ಬರುವುದಕ್ಕೆ ಕಾರಣವಾಗಿದೆ ಎಂದು ಹೀರೋ ಎಲೆಕ್ಟ್ರಿಕ್‌ನ ಎಂಡಿ ನವೀನ್ ಮುಂಜಾಲ್ ಹೇಳಿದ್ದಾರೆ.

ಕಳೆದ ಎಂಟು ತಿಂಗಳ ಅವಧಿಯಲ್ಲಿ ಹೀರೋ ಎಲೆಕ್ಟ್ರಿಕ್‌ನ ದ್ವಿಚಕ್ರ ವಾಹನಗಳ ಬೇಡಿಕೆಯೂ ತೀವ್ರವಾಗಿ ಹೆಚ್ಚಿದೆ ಎಂದು ಅವರು ಹೇಳಿದರು. ಸದ್ಯ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಅವರು ತಿಳಿಸಿದರು. ನವೀನ್ ಮುಂಜಾಲ್ ರವರ ಪ್ರಕಾರ, ಹೀರೋ ಎಲೆಕ್ಟ್ರಿಕ್ ತನ್ನ ಸಂಪೂರ್ಣ ಸಾಮರ್ಥ್ಯದಲ್ಲಿ ವಾಹನಗಳನ್ನು ಉತ್ಪಾದಿಸುತ್ತಿದೆ.

ಕಂಪನಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ 1 ಲಕ್ಷ ಯೂನಿಟ್ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಗುರಿಯನ್ನು ಹೊಂದಿದೆ. ಈ ಗುರಿಯು ಹಿಂದಿನ ಆರ್ಥಿಕ ವರ್ಷದ ಉತ್ಪಾದನೆಗಿಂತ ದ್ವಿಗುಣವಾಗಿದೆ. ಇದಲ್ಲದೆ, ಕಂಪನಿಯು ಉತ್ಪಾದನಾ ಸಾಮರ್ಥ್ಯಗಳನ್ನು ಸುಧಾರಿಸಲು ಹೂಡಿಕೆ ಮಾಡಲು ನೋಡುತ್ತಿದೆ. ನವೆಂಬರ್ ತಿಂಗಳಲ್ಲಿ, ಹೀರೋ ಎಲೆಕ್ಟ್ರಿಕ್ ಭಾರತದಲ್ಲಿ 7,000 ಸಿಟಿ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯು ಕೇವಲ 1,169 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಹೀರೋ ಎಲೆಕ್ಟ್ರಿಕ್ ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 6,366 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಹೈ ಸ್ಪೀಡ್ ಸಿಟಿ ಸ್ಕೂಟರ್ ವಿಭಾಗದಲ್ಲಿ Optima ಹಾಗೂ NYX ಪ್ರಮುಖ ವಾಹನಗಳಾಗಿವೆ. ಈ ವರ್ಷದ ಜನವರಿ - ಜುಲೈ ಅವಧಿಯಲ್ಲಿ ಕಂಪನಿಯು ಈ ಎರಡೂ ಎಲೆಕ್ಟ್ರಿಕ್ ಹೈ ಸ್ಪೀಡ್ ಸ್ಕೂಟರ್‌ಗಳ 15,000 ಯುನಿಟ್‌ಗಳನ್ನು ದೇಶಾದ್ಯಂತ ಮಾರಾಟ ಮಾಡಿದೆ.

ಹೀರೋ ಎಲೆಕ್ಟ್ರಿಕ್ ಹೆಚ್ಚಿನ ವೇಗದ ಹಾಗೂ ಕಡಿಮೆ ವೇಗದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಚಾಲನೆ ಮಾಡಲು ಚಾಲನಾ ಪರವಾನಗಿಯ ಅಗತ್ಯವಿಲ್ಲ. ಹೀರೋ ಎಲೆಕ್ಟ್ರಿಕ್ ಕಂಪನಿಯು ಕಳೆದ ವರ್ಷ ನವೆಂಬರ್‌ನಲ್ಲಿ ಸಿಟಿ ಸ್ಪೀಡ್ ಸರಣಿಯಲ್ಲಿ ಆಪ್ಟಿಮಾ ಹೆಚ್‌ಎಕ್ಸ್, ಫೋಟಾನ್ ಹೆಚ್‌ಎಕ್ಸ್ ಹಾಗೂ ಎನ್‌ವೈಎಕ್ಸ್ ಹೆಚ್‌ಎಕ್ಸ್ ಎಂಬ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿತ್ತು.

ಈ ಎಲ್ಲಾ ಸ್ಕೂಟರ್ ಗಳು 30 ಕಿ.ಮೀಗಿಂತ ಹೆಚ್ಚಿನ ವೇಗವನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಾಗಿವೆ. ಈ ಸ್ಕೂಟರ್‌ಗಳನ್ನು ಎಲ್ಲಾ ರೀತಿಯ ನಗರ ರಸ್ತೆಗಳಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸ್ಕೂಟರ್ ಗಳನ್ನು ಫ್ಲೈಓವರ್ ಹಾಗೂ ಕ್ಲೈಂಬಿಂಗ್ ಪಥಗಳಲ್ಲಿ ಸುಲಭವಾಗಿ ಚಾಲನೆ ಮಾಡಬಹುದು. ಕಂಪನಿಯು ಈ ಸ್ಕೂಟರ್‌ಗಳೊಂದಿಗೆ ಪವರ್ ಹಾಗೂ ಪರ್ಫಾಮೆನ್ಸ್'ಗಳ ಅತ್ಯುತ್ತಮ ಸಂಯೋಜನೆಯನ್ನು ನೀಡಿದೆ.

ಹೀರೋ ಎಲೆಕ್ಟ್ರಿಕ್ ಭಾರತದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಒದಗಿಸಲು ಮುಂದಾಗುತ್ತಿದೆ. ಕಂಪನಿಯು ಮಾಸಿವ್ ಮೊಬಿಲಿಟಿ ಸಹಭಾಗಿತ್ವದಲ್ಲಿ ದೇಶಾದ್ಯಂತ 10,000 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಹೀರೋ ಎಲೆಕ್ಟ್ರಿಕ್ ಭಾರತದಾದ್ಯಂತ ಸುಮಾರು 1,650 ಚಾರ್ಜಿಂಗ್ ಕೇಂದ್ರಗಳನ್ನು ನಿರ್ವಹಿಸುತ್ತಿದೆ. ಕಂಪನಿಯು ಮುಂದಿನ ವರ್ಷದ ಅಂತ್ಯದ ವೇಳೆಗೆ ಈ ಸಂಖ್ಯೆಯನ್ನು 20,000 ಕ್ಕೆ ಏರಿಸುವ ಗುರಿಯನ್ನು ಹೊಂದಿದೆ.


Click it and Unblock the Notifications








