ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮೇಲೆ ಭರ್ಜರಿ ಆಫರ್
ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಬಿಎಸ್-6 ಎಕ್ಸ್‌ಪಲ್ಸ್ 200 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದ ಜುಲೈ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಹೀರೋ ಕಂಪನಿಯು ತನ್ನ ಎಕ್ಸ್‌ಪಲ್ಸ್ 200 ಬೈಕಿನ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದೆ.

ಈ ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.15 ಲಕ್ಷಗಳಾಗಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಬಿಎಸ್-6 ಎಕ್ಸ್‌ಪಲ್ಸ್ 200 ಬೈಕಿನ ಮೇಲೆ ಒಟ್ಟು ರೂ,16 ಸಾವಿರಗಳವರೆಗೂ ಆಫರ್ ಅನ್ನು ನೀಡಿದ್ದಾರೆ. ಇದರಲ್ಲಿ ರೂ.4000 ವರೆಗೂ ವಿನಿಮಯ/ಲಾಯಲ್ಟಿ ಬೋನಸ್ ಅನ್ನು ನೀಡಿದ್ದಾರೆ. ಇನ್ನು ರೂ.12,000 ವರೆಗೂ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಘೋಷಿಸಿದ್ದಾರೆ. ಇದು ಇಎಂಐ, ಡೆಬಿಟ್ ಕಾರ್ಡ್ ಮತ್ತು ಆಯ್ದ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ವಹಿವಾಟುಗಳಲ್ಲಿ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಗಮನಿಸಬೇಕು.

ಈ ಆಫರ್ ಗಳಿಗೆ ನಿಯಮಗಳು ಮತ್ತು ಕೆಲವು ಷರತ್ತುಗಳನ್ನು ಒಳಗೊಂಡೀದೆ. ಈ ಆಫರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ನಿಮ್ಮ ಹತ್ತಿರದ ಹೀರೋ ಡೀಲರ್ ಅನ್ನು ಸಂಪರ್ಕಿಸಬಹುದು. ಈ ಆಫರ್ ಗಳು ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹೀರೋ ಎಕ್ಸ್‌ಪಲ್ಸ್ 200 ಬೈಕಿನ 199.6 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 17.8 ಬಿಹೆಚ್‌ಪಿ ಪವರ್ ಮತ್ತು 6,400 ಆರ್‌ಪಿಎಂನಲ್ಲಿ 16.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಈ ಬೈಕಿನಲ್ಲಿ ಏರ್/ಆಯಿಲ್-ಕೂಲಿಂಗ್ ಮತ್ತು ಫ್ಯೂಯಲ್ ಇಂಜೆಕ್ಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಹೀರೋ ಎಕ್ಸ್‌ಪಲ್ಸ್ 200 ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಹಿಂದಿನ ಮಾದರಿಗಿಂತ ತೂಕ ಹೆಚ್ಚಾಗಿದೆ. ಹೊಸ ಹೀರೋ ಎಕ್ಸ್‌ಪಲ್ಸ್ 200 ಬೈಕ್ 157 ಕೆಜೆ ತೂಕವನ್ನು ಹೊಂದಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಎಸ್-6 ಎಕ್ಸ್‌ಪಲ್ಸ್ ಬೈಕಿನಲ್ಲಿ ಎಕ್ಸಾಸ್ಟ್ ಪೈಪಿನ ಸ್ಥಾನವನ್ನು ಬದಲಾಯಿಸಲಾಗಿದೆ. ಈ ಬೈಕಿನ ಎಂಜಿನ್ ಬೆಲ್ಲಿ-ಪ್ಯಾನ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ. ಬಿಎಸ್-6 ಎಕ್ಸ್‌ಪಲ್ಸ್ ಮೊದಲಿನಂತೆಯೇ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಹೊಸ ಎಕ್ಸ್‌ಪಲ್ಸ್ 200 ಬೈಕಿನ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 37 ಎಂಎಂ ಲಾಂಗ್-ಟ್ರಾವೆಲ್ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ 10-ಹಂತದ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿರುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ಅಳವಡಿಸಲಾಗಿದೆ.

ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನಲ್ಲಿ ಎಲ್‌ಇಡಿ ಹೆಡ್‌ಲೈಟ್, ಎಲ್‌ಇಡಿ ಟೈಲ್‌ಲೈಟ್, ಬ್ಲೂಟೂತ್ ಕನೆಕ್ಟ್ ಆಗಿರುವ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಒಳಗೊಂಡಿದೆ.

ಎಕ್ಸ್‌ಪಲ್ಸ್ 200 ಬೈಕ್ ವೈಟ್, ಮ್ಯಾಟ್ ಗ್ರೀನ್, ಮ್ಯಾಟ್ ಗ್ರೇ, ಸ್ಪೋರ್ಟ್ಸ್ ರೆಡ್ ಮತ್ತು ಪ್ಯಾಂಥರ್ ಬ್ಲ್ಯಾಕ್ ಎಂಬ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಹೆಚ್ಚಾಗಿ ಯುವ ಗ್ರಾಹಕರನ್ನು ಸೆಳೆಯುತ್ತದೆ.


Click it and Unblock the Notifications