ಪ್ರತಿ ಚಾರ್ಜ್'ಗೆ 40 ಕಿ.ಮೀ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ತಯಾರಕ ಕಂಪನಿಯಾದ Huawei, LQI ಎಂಬ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್‌ನ ಬೆಲೆ 375 ಡಾಲರ್ ಅಂದರೆ ಸುಮಾರು ರೂ. 27 ಸಾವಿರಗಳಾಗಿದೆ. ವರದಿಗಳ ಪ್ರಕಾರ, ಈ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗ ಹಾಗೂ ಹಿಂಭಾಗದಲ್ಲಿ 9-ಇಂಚಿನ ಆಟೋಮೋಟಿವ್ ಗ್ರೇಡ್ ಹೈ ಎಲಾಸ್ಟಿಕ್ ವ್ಯಾಕ್ಯೂಮ್ ಎಕ್ಸ್ ಪ್ಲೋಷನ್ ಪ್ರೂಫ್ ಟಯರ್‌ಗಳನ್ನು ಅಳವಡಿಸಲಾಗಿದೆ.

ಪ್ರತಿ ಚಾರ್ಜ್'ಗೆ 40 ಕಿ.ಮೀ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಈ ಟಯರ್ ಅಪಘಾತದ ಸಾಧ್ಯತೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ 350 ವ್ಯಾ ಹೈ ಪವರ್ ಮೋಟರ್ ಅನ್ನು ಹೊಂದಿದ್ದು 630 ವ್ಯಾ ಎಲೆಕ್ಟ್ರಿಕ್ ಪವರ್ ಉತ್ಪಾದಿಸುತ್ತದೆ. ಈ ಮೋಟರ್ IPX7 ದರ್ಜೆಯ ವಾಟರ್ ಪ್ರೂಫ್ 10.4 ಎಹೆಚ್ ಟರ್ನರಿ ಲಿಥಿಯಂ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗುತ್ತದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಸುಮಾರು 40 ಕಿ.ಮೀಗಳವರೆಗೆ ಚಲಿಸಬಹುದು.

ಪ್ರತಿ ಚಾರ್ಜ್'ಗೆ 40 ಕಿ.ಮೀ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಈ ಎಲೆಕ್ಟ್ರಿಕ್ ಸ್ಕೂಟರ್ 75 ಕೆ.ಜಿ ತೂಕ ಹೊರುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ 25 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ರಸ್ತೆಯಲ್ಲಿ ಸ್ಕೂಟರ್‌ನ ಗೋಚರತೆಯನ್ನು ಹೆಚ್ಚಿಸಲು, ಸ್ಕೂಟರಿನ ಸುತ್ತಲೂ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ. ಜೊತೆಗೆ ಹಿಂಭಾಗದಲ್ಲಿ ಕೆಂಪು ಎಲ್ಇಡಿ ದೀಪವನ್ನು ನೀಡಲಾಗಿದೆ.

ಪ್ರತಿ ಚಾರ್ಜ್'ಗೆ 40 ಕಿ.ಮೀ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಕ್‌ಫಾಕ್ಸ್ ಆಲ್ಫಾ ಎಸ್ ಎಲೆಕ್ಟ್ರಿಕ್ ವಾಹನಗಳ ಸಣ್ಣ ಬ್ಯಾಚ್‌ನ ಉತ್ಪಾದನೆ ಹಾಗೂ ವಿತರಣೆಯನ್ನು ಆರಂಭಿಸುವುದಾಗಿ Huawei ಕಂಪನಿ ಇತ್ತೀಚೆಗೆ ಘೋಷಿಸಿತು. ಆಲ್ಫಾ ಎಸ್ ಅನ್ನು BAIC ಗ್ರೂಪ್‌ನ ಘಟಕದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಪ್ರತಿ ಚಾರ್ಜ್'ಗೆ 40 ಕಿ.ಮೀ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

Huawei ಕಂಪನಿಯು Huawei Inside ಸಿಸ್ಟಂ ಹೊಂದಿರುವ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ಎಲೆಕ್ಟ್ರಿಕ್ ಕಾರು ಸಂಪೂರ್ಣವಾಗಿ ಆಟೋಮ್ಯಾಟಿಕ್ ಆಗಿದ್ದು, ಚಾಲನೆ ಮಾಡಲು ಚಾಲಕನ ಅಗತ್ಯವಿಲ್ಲ. ಚೀನಾದ ಮತ್ತೊಂದು ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾದ Xiaomi ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಪ್ರತಿ ಚಾರ್ಜ್'ಗೆ 40 ಕಿ.ಮೀ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಕಂಪನಿಯು ಕಳೆದ ವರ್ಷವಷ್ಟೇ ಚೀನಾ ಮಾರುಕಟ್ಟೆಯಲ್ಲಿ A1 ಹಾಗೂ A1 Pro ಎಲೆಕ್ಟ್ರಿಕ್ ಮೊಪೆಡ್‌ಗಳನ್ನು ಬಿಡುಗಡೆಗೊಳಿಸಿತ್ತು. ಈ ಮೊಪೆಡ್ ಹೊರ ತೆಗೆಯಬಹುದಾದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಹೊರ ತೆಗೆದು ಮನೆಯಲ್ಲಿಯೇ ಚಾರ್ಜ್ ಮಾಡಬಹುದು. ಈ ಎರಡೂ ಮೊಪೆಡ್‌ಗಳು ಎಲ್‌ಇಡಿ ಲೈಟ್‌ ಹಾಗೂ ಟಿಎಫ್‌ಟಿ ಕಲರ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿವೆ.

ಪ್ರತಿ ಚಾರ್ಜ್'ಗೆ 40 ಕಿ.ಮೀ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಇವುಗಳ ವ್ಯಾಪ್ತಿಯ ಬಗ್ಗೆ ಹೇಳುವುದಾದರೆ A1 ಎಲೆಕ್ಟ್ರಿಕ್ ಮೊಪೆಡ್ ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಗರಿಷ್ಠ 60 ಕಿ.ಮೀಗಳವರೆಗೆ ಚಲಿಸಿದರೆ, A1 Pro ಎಲೆಕ್ಟ್ರಿಕ್ ಮೊಪೆಡ್ ಪೂರ್ತಿಯಾಗಿ ಚಾರ್ಜ್ ಆದ ನಂತರ 70 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಎರಡೂ ಎಲೆಕ್ಟ್ರಿಕ್ ಮೊಪೆಡ್‌ಗಳ ಗರಿಷ್ಠ ವೇಗ ಪ್ರತಿ ಗಂಟೆಗೆ 25 ಕಿ.ಮೀಗಳಾಗಿದೆ. ಈ ಎರಡೂ ಮಾದರಿಗಳನ್ನು ಸದ್ಯಕ್ಕೆ ಚೀನಾದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ.

ಪ್ರತಿ ಚಾರ್ಜ್'ಗೆ 40 ಕಿ.ಮೀ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಇನ್ನು ಭಾರತದ ಆಟೋ ಮೊಬೈಲ್ ಉದ್ಯಮವು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನ ಹರಿಸುತ್ತಿದೆ. ಬಹುತೇಕ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ತಯಾರಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ. ಭಾರತೀಯ ಗ್ರಾಹಕರು ಸಹ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ.

ಪ್ರತಿ ಚಾರ್ಜ್'ಗೆ 40 ಕಿ.ಮೀ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು, ಖ್ಯಾತ ಸೈಕಲ್ ತಯಾರಕ ಕಂಪನಿಯಾದ ಹೀರೋ ತನ್ನ ಎಲೆಕ್ಟ್ರಿಕ್ ಸೈಕಲ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ಸೈಕಲ್ ಗಳನ್ನು ವಿಶ್ವ ಎಲೆಕ್ಟ್ರಿಕ್ ವಾಹನಗಳ ದಿನವಾದ ಸೆಪ್ಟೆಂಬರ್ 9ರಂದು ಬಿಡುಗಡೆಗೊಳಿಸಿತ್ತು. ಹೀರೋ ಕಂಪನಿಯು ತನ್ನ ಹೀರೋ ಲೆಕ್ಟ್ರೋ ಸೈಕಲ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಪ್ರತಿ ಚಾರ್ಜ್'ಗೆ 40 ಕಿ.ಮೀ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಬಿಡುಗಡೆಯಾದಾಗ ಈ ಎಲೆಕ್ಟ್ರಿಕ್ ಸೈಕಲ್‌ಗಳ ಬೆಲೆ ರೂ.24,999ಗಳಿಂದ ರೂ.1,35,000 ಗಳಾಗಿತ್ತು. ಲೆಕ್ಟ್ರೋ (Lectro) ಹೀರೋ ಎಲೆಕ್ಟ್ರಿಕ್ ಸೈಕಲ್'ನ ಪ್ರಮುಖ ಮಾದರಿಯಾಗಿದೆ. ಕರೋನಾ ವೈರಸ್ ಅವಧಿಯಲ್ಲಿ ಭಾರತದ ಗ್ರಾಹಕರಲ್ಲಿ ಉಂಟಾದ ಬದಲಾವಣೆಯನ್ನು ಕಂಡು ಕೊಂಡ ನಂತರ ಹೀರೋ ಕಂಪನಿಯು ಇ-ಸೈಕಲ್ ಗಳನ್ನು ಅಭಿವೃದ್ಧಿಪಡಿಸಿದೆ.

ಪ್ರತಿ ಚಾರ್ಜ್'ಗೆ 40 ಕಿ.ಮೀ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಕಂಪನಿಯು ಇದರಿಂದ ಲಾಭ ಪಡೆಯುವ ಭರವಸೆಯನ್ನು ಹೊಂದಿದೆ. ಹೀರೋದ ಈ ಎಲೆಕ್ಟ್ರಿಕ್ ಸೈಕಲ್ ಗಳ ಸರಣಿಯನ್ನು ಬ್ರಿಟನ್ ನ ಮ್ಯಾಂಚೆಸ್ಟರ್‌ನಲ್ಲಿರುವ ಗ್ಲೋಬಲ್ ಡಿಸೈನ್ ಸೆಂಟರ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸೈಕಲ್ ಗಳ ಹೊಸ ಸರಣಿಯನ್ನು ಕಮ್ಯೂಟರ್ (ಪ್ರಯಾಣಿಕ), ಫಿಟ್‌ನೆಸ್ ಹಾಗೂ ಲೀಷರ್ (ವಿರಾಮ) ಎಂದು ಮೂರು ಭಾಗಗಳಾಗಿ ವರ್ಗೀಕರಿಸಲಾಗಿದೆ. ಈ ಸೈಕಲ್‌ನಲ್ಲಿ ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಫೀಚರ್ ಅನ್ನು ಸಹ ನೀಡಲಾಗಿದೆ. ಹೀರೋ ಲೆಕ್ಟ್ರೊ ಸೈಕಲ್ ಗಳ ವ್ಯಾಪ್ತಿಯು ಸಣ್ಣ ಹಾಗೂ ಮಧ್ಯಮ ದೂರದ ಪ್ರಯಾಣಕ್ಕೆ ಸೂಕ್ತವಾಗಿದೆ. ಲೀಷರ್ ಸರಣಿಯ ಸೈಕಲ್'ಗಳನ್ನು ವಿರಾಮದ ಸವಾರಿಗಾಗಿ ಹಾಗೂ ಫಿಟ್‌ನೆಸ್ ಸರಣಿಯ ಸೈಕಲ್ ಗಳನ್ನು ದೂರ ಸಾಗುವ ಫಿಟ್‌ನೆಸ್ ಉತ್ಸಾಹಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಗಮನಿಸಿ: ಕೊನೆಯ ಮೂರು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Huawei launches smart electric scooter which travels upto 40 kms in single charge details
Story first published: Saturday, November 13, 2021, 10:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X