ಗುಣಮಟ್ಟದ ಹೆಲ್ಮೆಟ್ ಬಳಕೆಗಾಗಿ ಜೂನ್ 1ರಿಂದಲೇ ಜಾರಿಯಾಗಿದೆ ಹೊಸ ನಿಯಮ

ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಬೈಕ್ ಸವಾರರ ಸವಾರರ ಜೊತೆಗೆ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಿದ್ದರೂ ದಂಡದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕಳಪೆ ಹೆಲ್ಮೆಟ್‌ಗಳ ಬಳಕೆಯು ಹೆಚ್ಚಳವಾಗಿದ್ದು, ಇವು ಬೈಕ್ ಸವಾರರಿಗೆ ರಕ್ಷಣೆ ನೀಡುವ ಬದಲಾಗಿ ಪ್ರಾಣಕ್ಕೆ ಕುತ್ತು ತರುತ್ತಿವೆ.

ಗುಣಮಟ್ಟದ ಹೆಲ್ಮೆಟ್ ಬಳಕೆಗಾಗಿ ಜೂನ್ 1ರಿಂದಲೇ ಜಾರಿಯಾಗಿದೆ ಹೊಸ ನಿಯಮ

ಭಾರತದಲ್ಲಿ ಬೈಕ್ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಬಳಕೆಯನ್ನು ಜಾರಿಗೆ ತರುವಲ್ಲಿ ಆಯಾ ರಾಜ್ಯಗಳ ಸಾರಿಗೆ ಇಲಾಖೆಗಳು ಯಶಸ್ವಿಯಾಗುತ್ತಿದ್ದರೂ ಕಳಪೆ ಹೆಲ್ಮೆಟ್ ಬಳಕೆಯನ್ನು ತಡೆಯುವಲ್ಲಿ ವಿಫಲವಾಗುತ್ತಿವೆ. ವಾಹನ ಸವಾರರು ದುಬಾರಿ ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಗುಣಮಟ್ಟದ ಬಗ್ಗೆ ತಡೆಕೆಡಿಸಿಕೊಳ್ಳದೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಬಳಸುತ್ತಿರುವುದು ವಾಹನ ಸವಾರರ ಪ್ರಾಣ ಹಾನಿಗೆ ಪ್ರಮುಖ ಕಾರಣವಾಗುತ್ತಿವೆ.

ಗುಣಮಟ್ಟದ ಹೆಲ್ಮೆಟ್ ಬಳಕೆಗಾಗಿ ಜೂನ್ 1ರಿಂದಲೇ ಜಾರಿಯಾಗಿದೆ ಹೊಸ ನಿಯಮ

ಇದೇ ವಿಚಾರವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವ ಕೇಂದ್ರ ಸಾರಿಗೆ ಇಲಾಖೆಯು ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, 2021ರ ಜೂನ್‌ 1 ರಿಂದಲೇ ಅನ್ವಯವಾಗುವಂತೆ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ಆದೇಶ ನೀಡಿದೆ.

ಗುಣಮಟ್ಟದ ಹೆಲ್ಮೆಟ್ ಬಳಕೆಗಾಗಿ ಜೂನ್ 1ರಿಂದಲೇ ಜಾರಿಯಾಗಿದೆ ಹೊಸ ನಿಯಮ

ಈ ಹಿಂದೆಯೇ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್‌ಗಳ ಮಾತ್ರ ಮಾರಾಟ ಮಾಡಬೇಕೆಂಬ ನಿಯಮವನ್ನು ಜಾರಿಗೆ ತಂದಿದ್ದರೂ ಹಲವಾರು ಹೆಲ್ಮೆಟ್ ಕಂಪನಿಗಳು ಅಗ್ಗದ ಬೆಲೆಯ ಹೆಲ್ಮೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ಮುಂದುವರಿಸಿದ್ದವು. ಇದಕ್ಕಾಗಿ ಉತ್ಪಾದಕರಿಗೆ ಮತ್ತು ಬಳಕೆದಾರರಿಗೂ ಅನ್ವಯವಾಗುವ ಹೊಸ ನಿಯಮ ಜಾರಿಗೆ ತಂದಿರುವ ಸಾರಿಗೆ ಇಲಾಖೆಯು ಮೊದಲ ಕಳಪೆ ಹೆಲ್ಮೆಟ್ ತಯಾಕರ ವಿರುದ್ಧ ಸಮರ ಸಾರಿದೆ.

ಗುಣಮಟ್ಟದ ಹೆಲ್ಮೆಟ್ ಬಳಕೆಗಾಗಿ ಜೂನ್ 1ರಿಂದಲೇ ಜಾರಿಯಾಗಿದೆ ಹೊಸ ನಿಯಮ

ಕಳಪೆ ಹೆಲ್ಮೆಟ್ ಮಾರಾಟಗಾರರಿಗೆ ದಂಡ ಇಲ್ಲವೇ ಶಿಕ್ಷೆ ಫಿಕ್ಸ್

ಹೌದು, ಕಳಪೆ ಹೆಲ್ಮೆಟ್ ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ಕಠಿಣ ಶಿಕ್ಷೆ ಘೋಷಣೆ ಮಾಡಿರುವ ಕೇಂದ್ರ ಸಾರಿಗೆ ಇಲಾಖೆಯು ಕಳಪೆ ಹೆಲ್ಮೆಟ್ ಮಾರಾಟ ಕಂಡುಬಂದಲ್ಲಿ ತಯಾಕರಿಗೆ ಮತ್ತು ಮಾರಾಟಗಾರರಿಗೆ ಒಂದು ವರ್ಷ ಜೈಲು ಇಲ್ಲವೆ ರೂ.1 ಲಕ್ಷ ದಂಡ ವಿಧಿಸುವ ನಿಯಮವನ್ನು ಅಧಿಕೃತಗೊಳಿಸಿದೆ.

ಗುಣಮಟ್ಟದ ಹೆಲ್ಮೆಟ್ ಬಳಕೆಗಾಗಿ ಜೂನ್ 1ರಿಂದಲೇ ಜಾರಿಯಾಗಿದೆ ಹೊಸ ನಿಯಮ

ಬಳಕೆದಾರರಿಗೂ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೆ ತಂದಿದ್ದರೂ ದಂಡ ಕುರಿತು ಯಾವುದೇ ಪ್ರಸ್ತಾಪ ಮಾಡಲಾಗಿಲ್ಲ. ಸದ್ಯಕ್ಕೆ ಕಳಪೆ ಹೆಲ್ಮೆಟ್ ಮಾರಾಟಕ್ಕೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲಾಗುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಬಳಕೆದಾರಿಗೂ ದಂಡ ವಿಧಿಸಬಹುದಾಗಿದೆ.

ಗುಣಮಟ್ಟದ ಹೆಲ್ಮೆಟ್ ಬಳಕೆಗಾಗಿ ಜೂನ್ 1ರಿಂದಲೇ ಜಾರಿಯಾಗಿದೆ ಹೊಸ ನಿಯಮ

ಭಾರತದಲ್ಲಿ ಹೊಸ ವಾಹನಗಳ ಸಂಖ್ಯೆ ಹೆಚ್ಚುತ್ತಿರುವಂತೆ ಅಪಘಾತ ಪ್ರಕಣಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಬೈಕ್ ಸವಾರರಿಗೆ ಗುಣಮಟ್ಟದ ಹೆಲ್ಮೆಟ್ ಬಳಕೆ ಕುರಿತು ಹಲವಾರು ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲಾಗುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ 240ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಎನರ್ಜಿ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಗುಣಮಟ್ಟದ ಹೆಲ್ಮೆಟ್ ಬಳಕೆಗಾಗಿ ಜೂನ್ 1ರಿಂದಲೇ ಜಾರಿಯಾಗಿದೆ ಹೊಸ ನಿಯಮ

ಜೊತೆಗೆ ಬೈಕ್ ಅಪಘಾತಗಳಲ್ಲಿ ಪ್ರಾಣಕಳೆದುಕೊಂಡ ಹಲವು ಬೈಕ್ ಸವಾರರು ಹೆಲ್ಮೆಟ್ ಬಳಕೆ ಮಾಡಿದ್ದರೂ ಕೂಡಾ ಕಳೆಪೆ ಹೆಲ್ಮೆಟ್‌ ಕಾರಣದಿಂದಲೂ ಜೀವಕಳೆದುಕೊಂಡ ಸಾವಿರಾರು ಪ್ರಕರಣಗಳನ್ನು ಪತ್ತೆಯಾಗಿದ್ದು, ಬೈಕ್ ಸವಾರರ ಸುರಕ್ಷತೆ ಕುರಿತಂತೆ ಸಾರಿಗೆ ಇಲಾಖೆಯು ಕೈಗೊಂಡಿರುವ ಕ್ರಮಗಳ ಕುರಿತು ಇತ್ತೀಚೆಗೆ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತ್ತು.

ಗುಣಮಟ್ಟದ ಹೆಲ್ಮೆಟ್ ಬಳಕೆಗಾಗಿ ಜೂನ್ 1ರಿಂದಲೇ ಜಾರಿಯಾಗಿದೆ ಹೊಸ ನಿಯಮ

ಈ ಹಿನ್ನಲೆ ಸುಪ್ರೀಂಕೋರ್ಟ್ ಆದೇಶದಂತೆ ಜೂನ್ 1ರಿಂದಲೇ ಅನ್ವಯವಾಗುವಂತೆ ದ್ವಿಚಕ್ರ ವಾಹನ ಸವಾರರು ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ಮಾತ್ರ ಬಳಕೆ ಮಾಡಬೇಕೆಂಬ ಆದೇಶ ನೀಡಿದ್ದು, ಸಾರಿಗೆ ಇಲಾಖೆಯ ಹೊಸ ನಿರ್ಣಯವನ್ನು ಇಂಟರ್ನ್ಯಾಷನಲ್ ರೋಡ್ ಫೆಡರೇಶನ್ ಕೂಡಾ ಸ್ವಾಗತಿಸಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಗುಣಮಟ್ಟದ ಹೆಲ್ಮೆಟ್ ಬಳಕೆಗಾಗಿ ಜೂನ್ 1ರಿಂದಲೇ ಜಾರಿಯಾಗಿದೆ ಹೊಸ ನಿಯಮ

ಹೊಸ ನಿಯಮದಿಂದ ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿನ ಸಾವಿನ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಬಹುದೆಂಬ ವಿಶ್ವಾಸ ವ್ಯಕ್ತಪಡಿಸಲಾಗಿದ್ದು, ಕಳಪೆ ಹೆಲ್ಮೆಟ್ ಉತ್ಪಾದನೆಗೆ ಮಾತ್ರವಲ್ಲ ಬಳಕೆಗೂ ಕಡಿವಾಣ ಹಾಕಲು ಹೊಸ ಆದೇಶ ಸಹಕಾರಿಯಾಗಿಲಿದೆ.

ಗುಣಮಟ್ಟದ ಹೆಲ್ಮೆಟ್ ಬಳಕೆಗಾಗಿ ಜೂನ್ 1ರಿಂದಲೇ ಜಾರಿಯಾಗಿದೆ ಹೊಸ ನಿಯಮ

ಜೊತೆಗೆ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್ ಬಳಕೆ ವಿಚಾರವಾಗಿ ಕೆಲವು ಮಹತ್ವದ ಬದಲಾವಣೆ ತಂದಿರುವ ಬಿಎಸ್ಐ ಸಂಸ್ಥೆಯು ಸಹ ಹೆಲ್ಮೆಟ್ ತೂಕದಲ್ಲಿ ಕೆಲವು ಸಡಿಲಿಕೆ ನೀಡಿದ್ದು, ಹಗುರವಾದ ಮತ್ತು ಸುಧಾರಿತ ಗುಣಮಟ್ಟದ ಹೆಲ್ಮೆಟ್‌ಗಳ ಉತ್ಪಾದನೆಗೂ ಅವಕಾಶ ನೀಡಿದೆ.

MOST READ: ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಗುಣಮಟ್ಟದ ಹೆಲ್ಮೆಟ್ ಬಳಕೆಗಾಗಿ ಜೂನ್ 1ರಿಂದಲೇ ಜಾರಿಯಾಗಿದೆ ಹೊಸ ನಿಯಮ

ಇನ್ನು ಬೈಕ್ ಸವಾರರು ಕೇವಲ ದಂಡದಿಂದ ತಪ್ಪಿಸಲುಕೊಳ್ಳಲು ಮಾತ್ರವಲ್ಲ ತಮ್ಮದೆ ರಕ್ಷಣೆಗಾಗಿ ಅಗ್ಗದ ಬೆಲೆಯ ಹೆಲ್ಮೆಟ್‌ ಬಳಕೆ ಬಿಟ್ಟು ಒಂದು ಉತ್ತಮ ಗುಣಮಟ್ಟದ ಹೆಲ್ಮೆಟ್ ಬಳಕೆ ಮಾಡುವುದು ಉತ್ತಮ. ಯಾಕೆಂದ್ರೆ ಒಂದು ಕೆಜಿ ತರಕಾರಿ ಖರೀದಿಸುವಾಗ ತೋರುವ ನಮ್ಮ ಜಾಣ್ಮೆಯನ್ನ ಒಂದು ಹೆಲ್ಮೆಟ್ ಖರೀದಿಸುವಾಗಲೂ ಬಳಕೆ ಮಾಡದ್ದಿಲ್ಲಿ ಮುಂದೆ ಆಗಬಹುದಾದ ದುರಂತಗಳನ್ನು ಈಗಲೇ ತಡೆಯಬಹುದು ಅಲ್ಲವೇ?

More from DriveSpark

Article Published On: Thursday, June 3, 2021, 18:04 [IST]
English summary
Helmets without ISI mark banned in India from 1st June details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+