ಜೊತೆಗೂಡಿ ಸ್ವ್ಯಾಪಬಲ್ ಬ್ಯಾಟರಿ ಹಬ್ ತೆರೆಯಲಿವೆ ಜಪಾನ್ ಮೂಲದ ಕಂಪನಿಗಳು

ವಾಯು ಮಾಲಿನ್ಯವನ್ನು ಪರಿಹರಿಸಲು ಭಾರತದಲ್ಲಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಇಂಧನ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ.

ಜೊತೆಗೂಡಿ ಸ್ವ್ಯಾಪಬಲ್ ಬ್ಯಾಟರಿ ಹಬ್ ತೆರೆಯಲಿವೆ ಜಪಾನ್ ಮೂಲದ ಕಂಪನಿಗಳು

ಇವುಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ, ತೆರಿಗೆ ವಿನಾಯಿತಿ, ನೋಂದಣಿ ಶುಲ್ಕದಿಂದ ವಿನಾಯಿತಿ ಸೇರಿದಂತೆ ವಿವಿಧ ವಿಶೇಷ ಕೊಡುಗೆಗಳು ಸೇರಿವೆ. ಆದರೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾದ ಮೂಲ ಸೌಲಭ್ಯಗಳು ಲಭ್ಯವಿಲ್ಲದೇ ಇರುವುದೇ ಜನರ ಈ ಹಿಂಜರಿಕೆಗೆ ಪ್ರಮುಖ ಕಾರಣ.

ಜೊತೆಗೂಡಿ ಸ್ವ್ಯಾಪಬಲ್ ಬ್ಯಾಟರಿ ಹಬ್ ತೆರೆಯಲಿವೆ ಜಪಾನ್ ಮೂಲದ ಕಂಪನಿಗಳು

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ, ಚಾರ್ಜ್ ಬ್ಯಾಟರಿಯನ್ನು ಪೂರೈಸುವ ಕೇಂದ್ರಗಳ ಸ್ಥಾಪನೆ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಜೊತೆಗೂಡಿ ಸ್ವ್ಯಾಪಬಲ್ ಬ್ಯಾಟರಿ ಹಬ್ ತೆರೆಯಲಿವೆ ಜಪಾನ್ ಮೂಲದ ಕಂಪನಿಗಳು

ಈ ಕಾರ್ಯದಲ್ಲಿ ಕೆಲವು ವಾಹನ ತಯಾರಕ ಕಂಪನಿಗಳು ಸಹ ಕೈಜೋಡಿಸಿವೆ. ಎಂಜಿ ಕಂಪನಿಯು ಇತ್ತೀಚೆಗೆ ಟಾಟಾ ಮೋಟಾರ್ಸ್‌ ಸಹಭಾಗಿತ್ವದಲ್ಲಿ ಚೆನ್ನೈನಲ್ಲಿಹೈಸ್ಪೀಡ್ ಚಾರ್ಜಿಂಗ್ ಕೇಂದ್ರವನ್ನು ತೆರೆದಿದೆ.

ಜೊತೆಗೂಡಿ ಸ್ವ್ಯಾಪಬಲ್ ಬ್ಯಾಟರಿ ಹಬ್ ತೆರೆಯಲಿವೆ ಜಪಾನ್ ಮೂಲದ ಕಂಪನಿಗಳು

ಈಗ ಜಪಾನ್ ಮೂಲದ ನಾಲ್ಕು ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಹೋಂಡಾ, ಯಮಹಾ, ಸುಜುಕಿ ಹಾಗೂ ಕವಾಸಕಿ ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಯ್ವಾಪಬಲ್ ಬ್ಯಾಟರಿ ಹಬ್ ಆರಂಭಿಸಲು ಕೈಜೋಡಿಸಿವೆ ಎಂದು ವರದಿಯಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಜೊತೆಗೂಡಿ ಸ್ವ್ಯಾಪಬಲ್ ಬ್ಯಾಟರಿ ಹಬ್ ತೆರೆಯಲಿವೆ ಜಪಾನ್ ಮೂಲದ ಕಂಪನಿಗಳು

ಈ ಸ್ಯ್ವಾಪಬಲ್ ಬ್ಯಾಟರಿ ಹಬ್'ಗಳು ಕೈಗೆಟಕುವ ದರದಲ್ಲಿ ಲಭ್ಯವಿರಲಿವೆ ಎಂದು ಈ ಕಂಪನಿಗಳು ತಿಳಿಸಿವೆ. ಈ ಕಂಪನಿಗಳು ಒಂದುಗೂಡಿ ಹೊಸ ತಂತ್ರಜ್ಞಾನವನ್ನು ಹೊಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ಯಾಟರಿಗಳನ್ನು ನಿರ್ಮಿಸಲಿವೆ.

ಜೊತೆಗೂಡಿ ಸ್ವ್ಯಾಪಬಲ್ ಬ್ಯಾಟರಿ ಹಬ್ ತೆರೆಯಲಿವೆ ಜಪಾನ್ ಮೂಲದ ಕಂಪನಿಗಳು

ಈ ಬ್ಯಾಟರಿಗಳು ಸ್ವ್ಯಾಪಬಲ್ ಆಗಿರಲಿವೆ ಎಂಬುದು ವಿಶೇಷ. ಎಲೆಕ್ಟ್ರಿಕ್ ವಾಹನಗಳಲ್ಲಿ ಈ ಫೀಚರ್ ಒದಗಿಸುವ ಮೂಲಕ ಈ ನಾಲ್ಕು ಕಂಪನಿಗಳು ಹೊಸತನಕ್ಕೆ ನಾಂದಿ ಹಾಡಲಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಜೊತೆಗೂಡಿ ಸ್ವ್ಯಾಪಬಲ್ ಬ್ಯಾಟರಿ ಹಬ್ ತೆರೆಯಲಿವೆ ಜಪಾನ್ ಮೂಲದ ಕಂಪನಿಗಳು

ಈ ಬ್ಯಾಟರಿ ಹಬ್'ಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಿರುವ ಬ್ಯಾಟರಿಯನ್ನು ಖಾಲಿಯಾಗಿರುವ ಬ್ಯಾಟರಿಯೊಂದಿಗೆ ಬದಲಿಸಬಹುದು. ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಬಹುತೇಕ ಎಲೆಕ್ಟ್ರಿಕ್ ಬೈಕ್‌ಗಳು ಬ್ಯಾಟರಿ ಸ್ವ್ಯಾಪಬಲ್ ಫೀಚರ್ ಹೊಂದಿವೆ.

ಜೊತೆಗೂಡಿ ಸ್ವ್ಯಾಪಬಲ್ ಬ್ಯಾಟರಿ ಹಬ್ ತೆರೆಯಲಿವೆ ಜಪಾನ್ ಮೂಲದ ಕಂಪನಿಗಳು

ಈ ನಾಲ್ಕು ಕಂಪನಿಗಳು ಸೇರಿ ಸ್ವ್ಯಾಪಬಲ್ ಬ್ಯಾಟರಿ ಹಬ್‌ಗಳನ್ನು ರಚಿಸಲು ನಿರ್ಧರಿಸಿವೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕಂಪನಿಗಳು ಶೀಘ್ರದಲ್ಲೇ ಈ ಕೇಂದ್ರಗಳನ್ನು ಆರಂಭಿಸುವ ನಿರೀಕ್ಷೆಗಳಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಜೊತೆಗೂಡಿ ಸ್ವ್ಯಾಪಬಲ್ ಬ್ಯಾಟರಿ ಹಬ್ ತೆರೆಯಲಿವೆ ಜಪಾನ್ ಮೂಲದ ಕಂಪನಿಗಳು

ವರದಿಗಳ ಪ್ರಕಾರ ವಿಶ್ವದಾದ್ಯಂತವಿರುವ ಕಂಪನಿಗಳು ಈ ತಂತ್ರಜ್ಞಾನವನ್ನು ಪರಿಚಯಿಸಲು ನಿರ್ಧರಿಸಿವೆ. ಇದರ ಜೊತೆಗೆ ಆಯಾ ಕಂಪನಿಗಳು ಈ ಹಿಂದೆ ಪರಿಚಯಿಸಲಾದ ಮೂಲಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ತರುವ ಪ್ರಯತ್ನದಲ್ಲಿವೆ.

ಜೊತೆಗೂಡಿ ಸ್ವ್ಯಾಪಬಲ್ ಬ್ಯಾಟರಿ ಹಬ್ ತೆರೆಯಲಿವೆ ಜಪಾನ್ ಮೂಲದ ಕಂಪನಿಗಳು

ಹೋಂಡಾ, ಸುಜುಕಿ, ಯಮಹಾ ಹಾಗೂ ಕವಾಸಕಿ ಕಂಪನಿಗಳು ಸ್ವ್ಯಾಪಬಲ್ ಬ್ಯಾಟರಿ ಹಬ್‌ಗಳನ್ನು ಆರಂಭಿಸಲು ನಿರ್ಧರಿಸಿರುವ ಬಗ್ಗೆ ವರದಿಯಾಗಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ.

Most Read Articles

Kannada
English summary
Japanese two wheeler giants joins together to develop swappable battery technology. Read in Kannada.
Story first published: Monday, March 29, 2021, 21:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X