ಅಮೇಜಾನ್‌ನಲ್ಲಿ 2021ರ ಕವಾಸಕಿ ನಿಂಜಾ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಕೊನೆಗೂ ತನ್ನ 2021ರ ನಿಂಜಾ 300 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ 2021ರ ಕವಾಸಕಿ ನಿಂಜಾ 300 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.18 ಲಕ್ಷಗಳಾಗಿದೆ.

ಅಮೇಜಾನ್‌ನಲ್ಲಿ 2021ರ ಕವಾಸಕಿ ನಿಂಜಾ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಈ ಬಿಎಸ್ 6 ನಿಂಜಾ 300 ಬೈಕ್ ಖರೀದಿಗೆ ಪ್ರಿ-ಬುಕ್ಕಿಂಗ್ ಈಗ ಅಮೇಜಾನ್ ಇಂಡಿಯಾದಲ್ಲಿ ಲಭ್ಯವಿದೆ. ಆಸಕ್ತ ಖರೀದಿದಾರರು ಅಮೇಜಾನ್ ಇಂಡಿಯಾದಲ್ಲಿ ರೂ.3,000 ಮೌಲ್ಯದ ಪ್ರಿ-ಬುಕ್ಕಿಂಗ್ ಕೂಪನ್ ವೋಚರ್ ಅನ್ನು ಖರೀದಿಸಬಹುದು ಮತ್ತು ಅದನ್ನು ಕವಾಸಕಿಯ ಅಧಿಕೃತ ಡೀಲರುಗಳಲ್ಲಿ ಪಡೆದುಕೊಳ್ಳಬಹುದು. ಈ ವೋಚರ್ ಅನ್ನು ಕವಾಸಕಿ ಡೀಲರ್ ಗಳ ಬಳಿ ನೀಡಿದಾಗ ಅಂತಿಮ ಪಾವತಿಯಿಂದ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.

ಅಮೇಜಾನ್‌ನಲ್ಲಿ 2021ರ ಕವಾಸಕಿ ನಿಂಜಾ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಈ ಕವಾಸಕಿ ನಿಂಜಾ 300 ಬೈಕನ್ನು ಬಿಎಸ್6 ಮಾಲಿನ್ಯ ನಿಯಮ ಜಾರಿಯಾಗುವ ಮುನ್ನವೇ 2019ರ ಡಿಸೆಂಬರ್‌ನಲ್ಲಿ ಸ್ಥಗಿತಗೊಳಿಸಿತ್ತು. ಇದೀಗ ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಹೊಸ ಕವಾಸಕಿ ನಿಂಜಾ 300 ಬೈಕನ್ನು ನವೀಕರಿಸಿ ಬಿಡುಗಡೆಗೊಳಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅಮೇಜಾನ್‌ನಲ್ಲಿ 2021ರ ಕವಾಸಕಿ ನಿಂಜಾ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ಹೊಸ ಮಾದರಿಗೆ ರೂ.20 ಸಾವಿರ ಹೆಚ್ಚಿಸಲಾಗಿದೆ. ಇನ್ನು ಈ ಹೊಸ ಕವಾಸಕಿ ನಿಂಜಾ 300 ಬೈಕ್ ಡೀಲರುಗಳ ಬಳಿ ತಲುಪಲು ಈಗಾಗಲೇ ಪ್ರಾರಂಭವಾಗಿದೆ.

ಅಮೇಜಾನ್‌ನಲ್ಲಿ 2021ರ ಕವಾಸಕಿ ನಿಂಜಾ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಈ ಕವಾಸಕಿ ನಿಂಜಾ 300 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಅತ್ಯಂತ ಒಳ್ಳೆಯ ಮಾದರಿಯಾಗಿದೆ. ಬಿಎಸ್6 ಕವಾಸಕಿ ನಿಂಜಾ 300 ಬೈಕಿನಲ್ಲಿ ಎಂಜಿನ್ ಅನ್ನು ಬದಲಾಯಿಸಲಾಗಿಲ್ಲ. ಅದೇ ಎಂಜಿನ್ ಅನ್ನು ನವೀಕರಿಸಲಾಗಿದೆ. ಇದು 296ಸಿಸಿ ಪ್ಯಾರೆಲಲ್-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್‌ ಆಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅಮೇಜಾನ್‌ನಲ್ಲಿ 2021ರ ಕವಾಸಕಿ ನಿಂಜಾ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಈ ಎಂಜಿನ್ 38.4 ಬಿಹೆಚ್‌ಪಿ ಪವರ್ ಮತ್ತು 27 ಎನ್‌ಎಂ ಪೀಕ್ ಟಾರ್ಕ್ ಅಭಿವೃದ್ಧಿಪಡಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದ್ದು, ಇದರೊಂದಿಗೆ ಅಸಿಸ್ಟ್ ಸ್ಲಿಪ್ಪರ್ ಕ್ಲಚ್ ಅನ್ನು ಪಡೆಯುತ್ತದೆ.

ಅಮೇಜಾನ್‌ನಲ್ಲಿ 2021ರ ಕವಾಸಕಿ ನಿಂಜಾ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

2021ರ ಕವಾಸಕಿ ನಿಂಜಾ 300 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಹಿಂದಿನ ಮಾದರಿಗೆ ಹೋಲಿಸಿದರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದರ ಮುಂಭಾಗದಲ್ಲಿ 37ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಹೊಂದಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಅಮೇಜಾನ್‌ನಲ್ಲಿ 2021ರ ಕವಾಸಕಿ ನಿಂಜಾ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಕವಾಸಕಿ ನಿಂಜಾ 300 ಬೈಕಿನ ಮುಂಭಾಗ 290 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಅಮೇಜಾನ್‌ನಲ್ಲಿ 2021ರ ಕವಾಸಕಿ ನಿಂಜಾ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಇದರ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಬದಲಾಯಿಸಲಾಗಿಲ್ಲ. ಎಂಆರ್ಎಫ್ ನೈಲೋಗ್ರಿಪ್ ಟಯರ್ ಗಳನ್ನು ಇದರಲ್ಲಿ ನೀಡಲಾಗಿದೆ. ಹೊಸ ಕವಾಸಕಿ ನಿಂಜಾ 300 ಬೈಕಿನ ವಿನ್ಯಾಸದಲ್ಲಿ ಯಾವುದೇ ಪ್ರಮಖ ಬದಲಾವಣೆಗಳನ್ನು ಮಾಡಲಾಗಿಲ್ಲ.

ಅಮೇಜಾನ್‌ನಲ್ಲಿ 2021ರ ಕವಾಸಕಿ ನಿಂಜಾ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಆದರೆ ನಿಂಜಾ ಸರಣಿಯ ದೊಡ್ಡ ಬೈಕ್‌ಗಳಿಂದ ಪ್ರೇರಿತವಾದ ಹೊಸ ಡೆಕಲ್‌ಗಳೊಂದಿಗೆ ಹೊಸ ಮೂರು ಬಣ್ಣಗಳ ಆಯ್ಕೆಗಳನ್ನು ಕೂಡ ಪಡೆದುಕೊಂಡಿದೆ. ಈ 2021ರ ಕವಾಸಕಿ ನಿಂಜಾ 300 ಬೈಕ್ ಗ್ರೀನ್, ಕ್ಯಾಂಡಿ ಲೈಮ್ ಗ್ರೀನ್ ಮತ್ತು ಎಬೊನಿ ಎಂಬ ಹೊಸ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಅಮೇಜಾನ್‌ನಲ್ಲಿ 2021ರ ಕವಾಸಕಿ ನಿಂಜಾ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಕವಾಸಕಿ ನಿಂಜಾ 300 ಬೆಲೆಯನ್ನು ಅದೇ ಸರಣಿಯ ಬೈಕುಗಳಿಗೆ ಹೋಲಿಸಿದರೆ ತುಸು ದುಬಾರಿಯಾಗಿದೆ. 2021ರ ಕವಾಸಕಿ ನಿಂಜಾ 300 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಆರ್​ಆರ್310 ಮತ್ತು ಕೆಟಿಎಂ ಆರ್ಸಿ 390 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಅಮೇಜಾನ್‌ನಲ್ಲಿ 2021ರ ಕವಾಸಕಿ ನಿಂಜಾ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಈ ಹೊಸ ಕವಾಸಕಿ ನಿಂಜಾ 300 ಬೈಕ್ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿರುವುದರಿಂದ ಶೀಘ್ರದಲ್ಲೇ ವಿತರಣೆಯನ್ನು ಪ್ರಾರಂಭಿಸಬಹುದು ಎಂದು ನಿರೀಕ್ಷಿಸುತ್ತೇವೆ. 2021ರ ಕವಾಸಕಿ ನಿಂಜಾ 300 ಬೈಕನ್ನು ಖರೀದಿಸಲು ಬಯಸುವವರು ಅಮೇಜಾನ್ ಮೂಲಕ ಕೂಡ ಬುಕ್ಕಿಂಗ್ ಮಾಡಿಕೊಳ್ಳಬಹುದು.

More from DriveSpark

Article Published On: Tuesday, March 23, 2021, 21:59 [IST]
English summary
Kawasaki Ninja 300 Pre-Bookings Open On Amazon India. Read In Kananda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+