ಕವಾಸಕಿ ನಿಂಜಾ 1000ಎಸ್‌ಎಕ್ಸ್ ಮತ್ತು ಡಬ್ಲ್ಯು800 ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ತನ್ನ ನಿಂಜಾ 1000ಎಸ್‌ಎಕ್ಸ್ ಮತ್ತು ಡಬ್ಲ್ಯು800 ಬೈಕುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ಎರಡು ಬೈಕ್‌ಗಳ ಮೇಲಿನ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.

ಕವಾಸಕಿ ನಿಂಜಾ 1000ಎಸ್‌ಎಕ್ಸ್ ಮತ್ತು ಡಬ್ಲ್ಯು800 ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಕವಾಸಕಿ ಕಂಪನಿಯು ತನ್ನ ನಿಂಜಾ 1000ಎಸ್‌ಎಕ್ಸ್ ಮತ್ತು ಡಬ್ಲ್ಯು800 ಬೈಕುಗಳ ಮೇಲೆ ರೂ.30,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಈ ಆಫರ್ ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ. ಈ ಆಫರ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಹತ್ತಿರದ ಕವಾಸಕಿ ಡೀಲರ್ ಬಳಿ ತೆರಳಬಹುದು. ಇನ್ನು ಕವಾಸಕಿ ಕಂಪನಿಯು ಇತ್ತೀಚೆಗೆ ಕೆಲವು ಆಯ್ದ ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು.

ಕವಾಸಕಿ ನಿಂಜಾ 1000ಎಸ್‌ಎಕ್ಸ್ ಮತ್ತು ಡಬ್ಲ್ಯು800 ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಇನ್ನು ಕವಾಸಕಿ ನಿಂಜಾ 1000ಎಸ್‌ಎಕ್ಸ್ ಬೈಕಿನ ಬಗ್ಗೆ ಹೇಳುವುದಾದರೆ, ಇದು ಭಾರತದ ಮೊದಲ ಸ್ಥಳೀಯವಾಗಿ ತಯಾರಿಸಿದ ಪ್ರೀಮಿಯಂ ಸ್ಪೋರ್ಟ್-ಟೂರರ್ ಕೊಡುಗೆಯಾಗಿದೆ. ನವೀಕರಿಸಿದ 2021ರ ನಿಂಜಾ 1000 ಎಸ್‌ಎಕ್ಸ್ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಕವಾಸಕಿ ನಿಂಜಾ 1000ಎಸ್‌ಎಕ್ಸ್ ಮತ್ತು ಡಬ್ಲ್ಯು800 ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಅಲ್ಲದೇ ಈ ಬೈಕಿನಲ್ಲಿ ಹಲವಾರು ಹೊಸ ಫೀಚರ್ ಗಳನ್ನು ಒಳಗೊಂಡಿದೆ. ಕವಾಸಕಿ ಬೈಕುಗಳ ಸರಣಿಯಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್ ಪುನರ್ನಿರ್ಮಾಸಿದ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ. ಈ ಹೊಸ ಕವಾಸಕಿ ಬೈಕಿನ ಎರಡೂ ತುದಿಯಲ್ಲಿ ಟ್ವಿನ್-ಎಕ್ಸಾಸ್ಟ್ ಮತ್ತು ಬೈಕಿನ ಬಲಭಾಗದಲ್ಲಿ ಒಂದೇ ಎಕ್ಸಾಸ್ಟ್ ಸಿಸ್ಟಂ ಅನ್ನು ಬದಲಾಯಿಸಿದ್ದಾರೆ.

ಕವಾಸಕಿ ನಿಂಜಾ 1000ಎಸ್‌ಎಕ್ಸ್ ಮತ್ತು ಡಬ್ಲ್ಯು800 ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕಿನ ಸೈಡ್ ಪ್ಯಾನೆಲ್‌ಗಳು ಮತ್ತು ಸ್ವಲ್ಪ ಪರಿಷ್ಕೃತ ಬೆಲ್ಲಿ ಪ್ಯಾನ್ ಸಹ ಸೇರಿವೆ. ಹೊಸ ನಿಂಜಾ 1000 ಎಸ್‌ಎಕ್ಸ್‌ನಲ್ಲಿ ನವೀಕರಿಸಿದ ಪ್ಯಾನೆಲ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕವಾಸಕಿ ನಿಂಜಾ 1000ಎಸ್‌ಎಕ್ಸ್ ಮತ್ತು ಡಬ್ಲ್ಯು800 ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಇನ್ನು ಈ ಹೊಸ ಬೈಕಿನಲ್ಲಿ ಆ್ಯಪ್ ಮೂಲಕ ಸ್ಮಾರ್ಟ್‍ಫೋನ್ ಸಂಪರ್ಕದೊಂದಿಗೆ ಹೊಸ 4.3-ಇಂಚಿನ ಟಿಎಫ್ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಎಲ್ಇಡಿ ಲೈಟಿಂಗ್ ಅನ್ನು ಹೊಂದಿದೆ. ಇನ್ನು ಹೊಸ ನಿಂಜಾ 1000 ಎಸ್‌ಎಕ್ಸ್ ಬೈಕ್ 4-ಹಂತದ ಹೊಂದಾಣಿಕೆಯೊಂದಿಗೆ ವಿಂಡ್‌ಸ್ಕ್ರೀನ್ ಅನ್ನು ಹೊಂದಿದೆ.

ಕವಾಸಕಿ ನಿಂಜಾ 1000ಎಸ್‌ಎಕ್ಸ್ ಮತ್ತು ಡಬ್ಲ್ಯು800 ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕಿನ ರೈಡರ್ ಮತ್ತು ಪಿಲಿಯನ್ ಎರಡಕ್ಕೂ ನವೀಕರಿಸಿದ ಎರ್ಗಾನೊಮಿಕ್ಸ್ ಒಳಗೊಂಡಿದೆ. ರೈಡರ್ ಮತ್ತು ಪಿಲಿಯನ್ ಸೀಟುಗಳು ದಪ್ಪವಿದೆ. ರೈಡರ್ ಸೀಟನ್ನು ಮೊದಲಗಿಂತಲೂ ಅಗಲವಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಕವಾಸಕಿ ನಿಂಜಾ 1000ಎಸ್‌ಎಕ್ಸ್ ಮತ್ತು ಡಬ್ಲ್ಯು800 ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಹೊಸ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕಿನಲ್ಲಿ 1,043 ಸಿಸಿ ಲಿಕ್ವಿಡ್-ಕೂಲ್ಡ್ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 10,000 ಆರ್‍ಪಿಎಂನಲ್ಲಿ 140 ಬಿಹೆಚ್‍ಪಿ ಪವರ್ ಮತ್ತು 8,000 ಆರ್‍ಪಿಎಂನಲ್ಲಿ 111 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಕವಾಸಕಿ ನಿಂಜಾ 1000ಎಸ್‌ಎಕ್ಸ್ ಮತ್ತು ಡಬ್ಲ್ಯು800 ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಕವಾಸಕಿ ಡಬ್ಲ್ಯು800 ಬೈಕಿನ ಬಗ್ಗೆ ಹೇಳುವುದಾದರೆ, ಇದರ ವಿನ್ಯಾಸವನ್ನು ಕವಾಸಕಿ ಡಬ್ಲ್ಯು1 650 ಸಿಸಿ ಬೈಕ್‌‌ನಿಂದ ಪಡೆಯಲಾಗಿದೆ. ಈ ಬೈಕ್ ರೌಂಡ್ ಎಲ್ಇಡಿ ಹೆಡ್‌ಲೈಟ್ ಗಳನ್ನು ಹೊಂದಿದೆ. ಇದರ ಜೊತೆಗೆ ಈ ಬೈಕಿನಲ್ಲಿ ಟಯರ್ ಡ್ರಾಪ್ ಫ್ಯೂಯಲ್ ಟ್ಯಾಂಕ್, ಸ್ಪೋಕ್ ವ್ಹೀಲ್ಸ್, ವೈಡ್ ಹ್ಯಾಂಡಲ್ ಬಾರ್ ಹಾಗೂ ಸೆಂಟರ್-ಸೆಟ್ ಫೂಟ್ ಪೆಗ್‌ಗಳನ್ನು ಅಳವಡಿಸಲಾಗಿದೆ.

ಕವಾಸಕಿ ನಿಂಜಾ 1000ಎಸ್‌ಎಕ್ಸ್ ಮತ್ತು ಡಬ್ಲ್ಯು800 ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಈ ಬೈಕಿನಲ್ಲಿ 773 ಸಿಸಿಯ ವರ್ಟಿಕಲ್ ಟ್ವಿನ್ ಸಿಲಿಂಡರ್, ಬೆವೆಲ್ ಡ್ರೈವನ್, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಹೊಂದಿರುವ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 4,800 ಆರ್‌ಪಿಎಂನಲ್ಲಿ 62.9 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ ಅಸಿಸ್ಟ್, ಸ್ಲೀಪರ್ ಕ್ಲಚ್ ಹಾಗೂ ಅಡ್ಜಸ್ಟಬಲ್ ಲಿವರ್ ಅಳವಡಿಸಲಾಗಿದೆ.

Article Published On: Monday, April 5, 2021, 21:40 [IST]
English summary
New Discounts Make Kawasaki Ninja 1000SX & W800 More Affordable. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+