Just In
- 2 hrs ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 4 hrs ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 4 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 5 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸರಕು ಸಾಗಾಣಿಕೆಗಾಗಿ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ಕೋಮಕಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕೋಮಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವಲ್ಲಿ ನಿರತವಾಗಿದೆ.

ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕೋಮಕಿ ಡಿಎನ್ 95, ಕೋಮಕಿ ಎಸ್ಇ ಹಾಗೂ ಕೋಮಕಿ ಎಂ 5 ಸೇರಿದಂತೆ ಹಲವಾರು ವಾಹನಗಳನ್ನು ಬಿಡುಗಡೆಗೊಳಿಸಿದೆ. ಈಗ ಕಂಪನಿಯು ಎಕ್ಸ್‌ಜಿಟಿ ಕ್ಯಾಟ್ 2.0 ಎಂಬ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಿದೆ.

ಈ ವಾಹನವು ಕಮರ್ಷಿಯಲ್ ಸೆಗ್'ಮೆಂಟಿಗೆ ಸೇರಿದ್ದು, ಹೆಚ್ಚು ತೂಕವನ್ನು ಹೊರಬಲ್ಲದು. ಈ ವಾಹನವು 300ರಿಂದ 350 ಕೆ.ಜಿ ತೂಕದ ಸರಕುಗಳನ್ನು ಸಾಗಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ವಾಹನವನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಜೆಲ್ 72 ವಿ 42 ಎಹೆಚ್ ಹಾಗೂ ಲಿ-ಐಯಾನ್ 72 ವಿ 30 ಎಹೆಚ್‌ನ ಬ್ಯಾಟರಿ ಸಾಮರ್ಥ್ಯಗಳ ಮೇಲೆ ಈ ಮಾದರಿಗಳು ಮಾರಾಟವಾಗಲಿವೆ.

ಕೋಮಕಿ ಎಕ್ಸ್‌ಜಿಟಿ 2.0 ಜೆಲ್ ಬ್ಯಾಟರಿ ಮಾದರಿಯ ಬೆಲೆ ರೂ.75 ಸಾವಿರಗಳಾದರೆ, ಲಿ-ಐಯಾನ್ ಮಾದರಿಯ ಬೆಲೆ ರೂ.85,000ಗಳಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ವಾಹನವು ಪೂರ್ತಿಯಾಗಿ ಚಾರ್ಜ್ ಆದ ನಂತರ ಎಷ್ಟು ದೂರ ಚಲಿಸುತ್ತದೆ?
ಕೋಮಕಿ ಕಂಪನಿಯ ಹೊಸ ವಾಹನವು ಹಲವು ಸಾಮರ್ಥ್ಯಗಳನ್ನು ಹೊಂದಿದೆ. ಈ ಹೊಸ ವಾಹನವು ಹೆಚ್ಚಿನ ತೂಕವನ್ನು ಕೊಂಡೊಯ್ಯುವುದರ ಜೊತೆಗೆ ಹೆಚ್ಚಿನ ಶ್ರೇಣಿಯನ್ನು ಸಹ ನೀಡುತ್ತದೆ. ಈ ವಾಹನವು ಪೂರ್ತಿಯಾಗಿ ಚಾರ್ಜ್ ಆದ ನಂತರ 125 ಕಿ.ಮೀಗಳವರೆಗೆ ಚಲಿಸುತ್ತದೆ.

ಈ ವಾಹನದ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀಗಳಿಂದ 30 ಕಿ.ಮೀಗಳಾಗಿದೆ. ಈ ವಾಹನದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕಿಂಗ್ ಸಿಸ್ಟಂ, 6 ಸ್ಪ್ರಿಂಗ್ ಅಸಿಸ್ಟೆಡ್ ಹೈಡ್ರಾಲಿಕ್ ಶಾಕ್ ಅಬ್ಸಾರ್ವರ್, 12 ಇಂಚಿನ ಟ್ಯೂಬ್ ಲೆಸ್ ಟಯರ್, ಸೈಡ್ ಸ್ಟ್ಯಾಂಡ್ ಮೌಂಟೆಡ್ ಫೂಟ್ ರೆಸ್ಟ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಳನ್ನು ಅಳವಡಿಸಲಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಇಷ್ಟೊಂದು ಫೀಚರ್'ಗಳನ್ನು ಹೊಂದಿರುವ ವಾಹನವನ್ನು ಕೋಮಕಿ ಕಂಪನಿಯು ಕೈಗೆಟಕುವ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಕೋಮಕಿ ಕಂಪನಿಯ ಈ ಹೊಸ ವಾಹನವು ಟಿವಿಎಸ್ ಕಂಪನಿಯ ಎಕ್ಸ್‌ಎಲ್ ವಾಹನಕ್ಕೆ ಪೈಪೋಟಿ ನೀಡಲಿದೆ.
ಗಮನಿಸಿ: ಎರಡನೇ ಚಿತ್ರವನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.