ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಜಾಜ್ ಸಿಟಿ 110 ಎಕ್ಸ್ ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಸಿಟಿ 110ಎಕ್ಸ್ ಎಂಬ ಹೊಸ ಬೈಕನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಬಜಾಜ್ ಸಿಟಿ 110ಎಕ್ಸ್ ಬೈಕ್ ಸರಳವಾದ ವಿನ್ಯಾಸ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಜಾಜ್ ಸಿಟಿ 110ಎಕ್ಸ್ ಬೈಕ್

ಮುಂಭಾಗದ ಯುನಿಟ್ ಡಿಆರ್‌ಎಲ್‌ನೊಂದಿಗೆ ಗ್ರಿಲ್‌ನಲ್ಲಿ ಸುತ್ತುವರೆದಿರುವ ರೌಂಡ್ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಇನ್ನು ಈ ಬೈಕ್ ಹೆಚ್ಚಾಗಿ ಬ್ಲೂ, ಸಿಲ್ವರ್ ಮತ್ತು ಗೇ ಬಣ್ಣಗಳ ಗ್ರಾಫಿಕ್ಸ್‌ನೊಂದಿಗೆ ಬ್ಲ್ಯಾಕ್ ಬಣ್ಣದಲ್ಲಿದೆ. ಇನ್ನು ಈ ಸಿಟಿ 110 ಎಕ್ಸ್ ಕೆಂಪು ಬಣ್ಣದ ಟ್‌ಗಳನ್ನು ಸಹ ಹೊಂದಿದೆ. ಮ್ಯಾಟ್ ಬ್ಲ್ಯಾಕ್ ಫೆಂಡರ್‌ಗಳು ಬಣ್ಣದ ಥೀಮ್‌ಗೆ ಎದ್ದು ಕಾಣುತ್ತವೆ. ಇನ್ನು ಹೊಸ ಬಜಾಜ್ ಸಿಟಿ 110 ಎಕ್ಸ್ ಬೈಕ್ ಉದ್ದನೆಯ ಸೀಟನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಜಾಜ್ ಸಿಟಿ 110ಎಕ್ಸ್ ಬೈಕ್

ಇನ್ನು ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಹೊಂದಿದೆ. ವ್ಹೀಲ್ ಸೆಟಪ್ 17 ಎಂಆರ್ಎಫ್ ವ್ಹೀಲ್ ಗಳನ್ನು ಒಳಗೊಂಡಿದೆ, ಇದರಲ್ಲಿ 5 ಸ್ಪೋಕ್ ಅಲಾಯ್ ವ್ಹೀಲ್ ಗಳಿವೆ. ಇದು ಕೂಡ ಹ್ಯಾಂಡಲ್‌ಬಾರ್‌ನೊಂದಿಗೆ ಬ್ಲ್ಯಾಕ್ ಬಣ್ಣದ ಥೀಮ್ ಅನ್ನು ಅನುಸರಿಸುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಜಾಜ್ ಸಿಟಿ 110ಎಕ್ಸ್ ಬೈಕ್

ಈ ಹೊಸ ಬಜಾಜ್ ಸಿಟಿ 110 ಎಕ್ಸ್ ಬೈಕಿನಲ್ಲಿ ಸರಳವಾದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಸ್ಪೀಡ್, ಕಿ,ಮೀ ಮತ್ತು ಫ್ಯೂಯಲ್ ಗೇಜ್ ಅನ್ನು ಪ್ರದರ್ಶಿಸುತ್ತದೆ. ಇದರೊಂದಿಗೆ ಎರಡು ಡಯಲ್‌ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಜಾಜ್ ಸಿಟಿ 110ಎಕ್ಸ್ ಬೈಕ್

ಇನ್ನು 110 ಸಿಸಿ ವಿಭಾಗದ ಹೊಸ ಬಜಾಜ್ ಸಿಟಿ 110 ಎಕ್ಸ್ ಬೈಕಿನಲ್ಲಿ 115 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9.41 ಬಿಹೆಚ್‍ಪಿ ಪವರ್ ಮತ್ತು 8.45 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಜಾಜ್ ಸಿಟಿ 110ಎಕ್ಸ್ ಬೈಕ್

ಇನ್ನು ಫ್ಯೂಯಲ್ ಇಂಜೆಕ್ಟರ್ (ಇಎಫ್ಐ) ಸಿಸ್ಟಂ ಅನ್ನು ಒಳಗೊಂಡಿದೆ.ಎಂಜಿನ್ ಸೆಟಪ್ ಬ್ಯಾಕ್ ಮತ್ತು ಎಂಜಿನ್ ಗಾರ್ಡ್‌ ಬ್ಲ್ಯಾಕ್ ಬಣ್ಣದಲ್ಲಿದ್ದರೆ, ಕ್ರ್ಯಾಶ್ ಗಾರ್ಡ್ ಗ್ರೇ ಬಣ್ಣದಲ್ಲಿದೆ. ಇನ್ನು ಈ ಬೈಕ್ 11 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ,

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಜಾಜ್ ಸಿಟಿ 110ಎಕ್ಸ್ ಬೈಕ್

ಬ್ಲ್ಯಾಕ್ ಸೈಲೆನ್ಸರ್ ಹೀಟ್ ಶಿಲ್ಡ್ ಯುನಿಟ್ ನೊಂದಿಗೆ ಅಳವಡಿಸಲಾಗಿದೆ. ಪಿಲಿಯನ್ ಫುಟ್‌ರೆಸ್ಟ್ ಸಾಮಾನ್ಯ ರಬ್ಬರ್ ನಿಂದ ಕೂಡಿದೆ. ಇನ್ನು ಟ್ರೈಗಲ್ ಹ್ಯಾಲೊಜೆನ್ ಟೈಲ್ಯಾಂಪ್ ಅನ್ನು ಕೆಲಗಿನ ಭಾಗದಲ್ಲಿ ಇರಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಜಾಜ್ ಸಿಟಿ 110ಎಕ್ಸ್ ಬೈಕ್

ಇನ್ನು ಸರಳವಾದ ಇಂಡಿಕೇಟರ್ ಅನ್ನು ಅಳವಡಿಸಲಾಗಿದೆ. ಈ ಹೊಸ ಬಜಾಜ್ ಸಿಟಿ 110ಎಕ್ಸ್ ಬೈಕ್ 90 ಕಿ.ಮೀ.ಗಳಷ್ಟು ಗರಿಷ್ಠ ಮೈಲೇಜ್ ಅನ್ನು ನೀಡಬಹುದು ಎಂದು ಹೇಳಲಾಗುತ್ತಿದೆ. ಇನ್ನು ಈ ಬೈಕ್ ಹೈ ಲೋ ಬೀಮ್ ಸ್ವೀಚ್, ಇಂಡಿಕೇಟರ್ ಸ್ವೀಚ್, ಇಗ್ನೇಷನ್ ಸ್ಟಾರ್ಟ್ ಬಟನ್ ಮತ್ತು ಹಾರ್ನ್ ಸ್ವಿಚ್ ಅನ್ನು ಹ್ಯಾಂಡಲ್‌ಬಾರ್‌ನಲ್ಲಿ ಇರಿಸಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಜಾಜ್ ಸಿಟಿ 110ಎಕ್ಸ್ ಬೈಕ್

ಈ ಹೊಸ ಬಜಾಜ್ ಸಿಟಿ 110 ಎಕ್ಸ್ ಬೈಕ್ ಈಗಗಾಲೇ ಡೀಲರ್ ಬಳಿ ತಲುಪಲು ಪ್ರಾರಂಭವಾಗಿದೆ. ಇದರಿಂದ ಈ ಹೊಸ ಬಜಾಜ್ ಸಿಟಿ 110ಎಕ್ಸ್ ಬೈಕ್ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.

Image Courtesy: Jet wheels

Most Read Articles

Kannada
English summary
New Bajaj CT 110 X Arrives At Dealer Showroom. Read In Kannada.
Story first published: Tuesday, April 13, 2021, 15:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X