ಹೊಸ ಫೀಚರ್ಸ್‌ಗಳೊಂದಿಗೆ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ

ಬಜಾಜ್ ಆಟೋ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಆಕರ್ಷಕ ವಿನ್ಯಾಸ ಮತ್ತು ಹೊಸ ಫೀಚರ್ಸ್‌ನೊಂದಿಗೆ ಸಿಟಿ110ಎಕ್ಸ್ ಎಂಬ ಹೊಸ ಬೈಕನ್ನು ಬಿಡುಗಡೆಗೊಳಿಸಿದೆ. ಈ ಹೊಸ ಬಜಾಜ್ ಸಿಟಿ110ಎಕ್ಸ್ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.55,494 ಗಳಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಕೈಗೆಟುಕುವ ದರದಲ್ಲಿ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ

ಈ ಹೊಸ ಬೈಕ್ ಬಜಾಜ್‍ನ ಸಿಟಿ ಸರಣಿಯ ಟಾಪ್-ಸ್ಪೆಕ್ ರೂಪಾಂತರವಾಗಿದೆ. ಬಜಾಜ್ ಸಿಟಿ 110ಎಕ್ಸ್ ಬೈಕನ್ನು ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಹಲವಾರು ಬದಲಾವಣೆಗಳನ್ನು ಹೊಂದಿದೆ. ಈ ಬಜಾಜ್ ಸಿಟಿ 110ಎಕ್ಸ್ ಬೈಕ್ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಇನ್ನು ಈ ಹೊಸ ಬೈಕಿನಲ್ಲಿ ಕಾಸ್ಮೆಟಿಕ್ ನವೀಕರಣವು ಪಡೆದುಕೊಂಡಿದೆ. ಇದು ಈ ಬೈಕಿಗೆ ರಗಡ್ ಲುಕ್ ಅನ್ನು ನೀಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಕೈಗೆಟುಕುವ ದರದಲ್ಲಿ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ

ಹೊಸ ಬಜಾಜ್ ಸಿಟಿ110ಎಕ್ಸ್ ಬೈಕಿನಲ್ಲಿ ಹ್ಯಾಂಡಲ್ ಬಾರ್ ಕಟ್ಟುಪಟ್ಟಿಯನ್ನು ಒಳಗೊಂಡಿದೆ. ಇದು ಸ್ಮಾರ್ಟ್ ಫೋನ್ ಇಡಲು ನೆರವಾಗುತ್ತದೆ. ಇದರ ಹ್ಯಾಂಡಲ್ ಬಾರ್ ಸೆಟಪ್ ಉತ್ತಮವಾಗಿದ್ದು, ಆರಾಮದಾಯಕ ರೈಡಿಂಗ್ ಅನುಭವನ್ನು ಪಡೆಯಬಹುದು.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಫೀಚರ್ಸ್‌ಗಳೊಂದಿಗೆ ಕೈಗೆಟುಕುವ ದರದಲ್ಲಿ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ

ಇತರ ಗಮನಾರ್ಹ ಬದಲಾವಣೆಯೆಂದರೆ ದುಂಡಗಿನ ಆಕಾರದ ಹೆಡ್‌ಲ್ಯಾಂಪ್‌ಗಳು ಪ್ರೊಟಕಿಟಿವ್ ಗ್ರಿಲ್ ಮತ್ತು ಎಲ್ಇಡಿ ಡಿಆರ್‌ಎಲ್ ಅನ್ನು ಹೊಸ ಬ್ಲ್ಯಾಕ್-ಔಟ್ ವೀಸರ್ ಮೇಲೆ ಇರಿಸಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಕೈಗೆಟುಕುವ ದರದಲ್ಲಿ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ

ಇತರ ವಿನ್ಯಾಸ ಬದಲಾವಣೆಗಳಲ್ಲಿ ದಪ್ಪವಾದ ಕ್ರ್ಯಾಶ್ ಗಾರ್ಡ್‌ಗಳು, ಡ್ಯುಯಲ್-ಸೈಡೆಡ್ ಲಾಂಗ್-ಪೀಸ್ ಫುಟ್-ರೆಸ್ಟ್, ಡ್ಯುಯಲ್ ಟೆಕ್ಸ್ಚರ್ ಮತ್ತು ಡ್ಯುಯಲ್ ಸ್ಟಿಚ್ಡ್ ಪ್ರೀಮಿಯಂ ಸೀಟ್, ವಿಶಾಲವಾದ ಪ್ರೊಫೈಲ್ ಇಂಧನ ಟ್ಯಾಂಕ್ ಮತ್ತು ಹಿಂಭಾಗದಲ್ಲಿ ಫ್ಯಾಕ್ಟರಿ ಫಿಟಡ್ ಲಗೇಜ್ ರ್ಯಾಕ್ ಸೇರಿವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಫೀಚರ್ಸ್‌ಗಳೊಂದಿಗೆ ಕೈಗೆಟುಕುವ ದರದಲ್ಲಿ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ

ಹೊಸ ಬಜಾಜ್ ಸಿಟಿ110ಎಕ್ಸ್ ಬೈಕಿನಲ್ಲಿ ಹೆಡ್ ಲ್ಯಾಂಪ್ ಕೌಲ್, ಇಂಧನ ಟ್ಯಾಂಕ್ ಮತ್ತು ಸೈಡ್ ಕವರ್ ಗಳಲ್ಲಿ ಹೊಸ ಗ್ರಾಫಿಕ್ಸ್ ಅನ್ನು ಹೊಂದಿದೆ, ‘ಸಿಟಿ110 ಎಕ್ಸ್' ಬ್ಯಾಡ್ಜಿಂಗ್ ಅನ್ನು ಬೈಕಿನ ಸೈಡ್ ಕವರ್‌ಗಳಲ್ಲಿ ನೀಡಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಕೈಗೆಟುಕುವ ದರದಲ್ಲಿ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ

ಈ ಬೈಕ್ ಒರಟಾದ ರಸ್ತೆಗಳಲ್ಲಿ ಸುಲಭವಾಗಿ ಸಾಗಲು ಸೆಮಿ ನಾಬಿ ಎಂಆರ್‌ಎಫ್ ಟೈರ್‌ಗಳನ್ನು ನೀಡಲಾಗಿದೆ. ಸಿಟಿ110ಎಕ್ಸ್ ಇಂಟಿಗ್ರೇಟೆಡ್ ಟ್ಯಾಂಕ್ ಪ್ಯಾಡ್ ಮತ್ತು ಫ್ರಂಟ್ ಫೆಂಡರ್ ಅನ್ನು ಸಹ ಒಳಗೊಂಡಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ಫೀಚರ್ಸ್‌ಗಳೊಂದಿಗೆ ಕೈಗೆಟುಕುವ ದರದಲ್ಲಿ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ

ಮೇಲೆ ತಿಳಿಸಿದ ಬದಲಾವಣೆಗಳ ಹೊರತಾಗಿ, ಸಿಟಿ110ಎಕ್ಸ್ ಬೈಕ್ ಉಳಿದ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಮಾದರಿಯಿಂದ ಎರವಲು ಪಡೆಯಲಾಗಿದೆ. ಇದರಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಕ್ಷನ್, ಫುಲ್ ಜೈನ್ ಕವರ್, ಎಂಜಿನ್ ಸಂಪ್ ಗಾರ್ಡ್, ಕ್ರ್ಯಾಶ್ ಪ್ರೊಟೆಕ್ಟರ್‌ಗಳು, ಅಲಾಯ್ ವ್ಹೀಲ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಕೈಗೆಟುಕುವ ದರದಲ್ಲಿ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ

ಈ ಹೊಸ ಬಜಾಜ್ ಸಿಟಿ 110ಎಕ್ಸ್ ಬೈಕ್ ಒಂದೇ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ 11 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಬಜಾಜ್ ಸಿಟಿ 110ಎಕ್ಸ್ ಬೈಕ್ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,285 ಎಂಎಂ ಉದ್ದದ ವ್ಹೀಲ್ ಬೇಸ್ ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಕೈಗೆಟುಕುವ ದರದಲ್ಲಿ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ

ಹೊಸ ಬಜಾಜ್ ಸಿಟಿ110ಎಕ್ಸ್ ಬೈಕಿನಲ್ಲಿ ಎಲೆಕ್ಟ್ರಾನಿಕ್-ಕಾರ್ಬ್ಯುರೇಟೆಡ್ ಸಿಂಗಲ್ ಸಿಲಿಂಡರ್ 115.45 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 8.48 ಬಿಹೆಚ್‍ಪಿ ಪವರ್ ಹಾಗೂ 5,000 ಆರ್‌ಪಿಎಂನಲ್ಲಿ 9.81 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಕೈಗೆಟುಕುವ ದರದಲ್ಲಿ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ

ಬಜಾಜ್ ಸಿಟಿ ದೇಶಿಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಈ ಎಂಟ್ರಿ ಲೆವೆಲ್ ಕಮ್ಯೂಟರ್ ಬೈಕಿನ ಟಾಪ್-ಸ್ಪೆಕ್ ರೂಪಾಂತರವಾಗಿ ಸಿಟಿ110ಎಕ್ಸ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ವಿನ್ಯಾಸ ಮತ್ತು ಫೀಚರ್ಸ್‌ಗಳಲ್ಲಿ ಹಲವಾರು ಬದಲಾವಣೆಗಳಿವೆ.

Most Read Articles

Kannada
English summary
Bajaj CT110X Launched In India Priced At Rs 55,494. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X