ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಬಜಾಜ್ ಪಲ್ಸರ್ 250ಎಫ್ ಬೈಕ್
ಬಜಾಜ್ ಆಟೋ ಕಂಪನಿಯ ಪಲ್ಸರ್ ಸರಣಿಯ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಹುಜನಪ್ರಿಯತೆಯನ್ನು ಗಳಿಸಿದೆ. ಪಲ್ಸರ್ ಬೈಕ್‌ಗಳಿಗೆ ಭಾರತದಲ್ಲಿ ಪ್ರತ್ಯೇಕವಾದ ಅಭಿಮಾನಿ ವರ್ಗವಿದೆ. ಬಜಾಜ್ ಕಂಪನಿಯು ಭಾರತದಲ್ಲಿ ಪಲ್ಸರ್ ಸರಣಿಯನ್ನು ವಿಸ್ತರಿಸಲು ಮುಂದಾಗಿದೆ.

ಇದರ ಭಾಗವಾಗಿ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಹೊಸ ಪಲ್ಸರ್ 250ಎಫ್ ಬೈಕನ್ನು ಮುಂದಿನ ತಿಂಗಳುಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಬಜಾಜ್ ಕಂಪನಿಯು ತನ್ನ ಪಲ್ಸರ್ ಸರಣಿಯ ಬೈಕ್‌ಗಳಿಗಾಗಿ ಸಂಪೂರ್ಣವಾಗಿ ಹೊಸ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗುತ್ತಿದೆ. ಹೊಸ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಹೊಚ್ಚ ಹೊಸ ಪಲ್ಸರ್ 250ಎಫ್ ಮಾದರಿಯು ಪಾದಾರ್ಪಣೆ ಮಾಡಲಿದೆ ಎಂದು ವರದಿಗಳಾಗಿದೆ.

ಹೊಸ ಬಜಾಜ್ ಪಲ್ಸರ್ 250ಎಫ್ ಬೈಕಿನ ಚಿತ್ರಗಖಳು ಬಹಿರಂಗಗೊಂಡಿಲ್ಲ. ಆದರೆ ಈ ಬೈಕ್ ಸ್ಪಾಟ್ ಟೆಸ್ಟ್ ನಡೆಸುವ ಸ್ಪೈ ಚಿತ್ರಗಳಲ್ಲಿ ಕೆಲವು ಮಾಹಿತಿಗಳು ಬಹಿರಂಗವಾಗಿದೆ. ಈ ಹೊಸ ಬೈಕ್ ಹೆಡ್‌ಲ್ಯಾಂಪ್ ವಿಭಾಗದ ಪಕ್ಕದಲ್ಲಿರುವ ಕ್ವಾರ್ಟರ್ ಫೇರಿಂಗ್, ಫ್ಯೂಯಲ್ ಟ್ಯಾಂಕ್, ಫೇರಿಂಗ್-ಮೌಂಟೆಡ್ ರಿಯರ್-ವ್ಯೂ ಮಿರರ್ಸ್, ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಅನ್ನು ಒಳಗೊಂಡಿದೆ.

ಇದರೊಂದಿಗೆ ಈ ಹೊಸ ಪಲ್ಸರ್ ಬೈಕಿನಲ್ಲಿ ಗ್ರ್ಯಾಬ್ ರೈಲ್ ಮತ್ತು ವಿಭಿನ್ನ ಎಲ್‌ಇಡಿ ಟೈಲ್ ಲ್ಯಾಂಪ್ ವಿನ್ಯಾಸವನ್ನು ಪಡೆಯುತ್ತದೆ. ಇನ್ನು ಅಲಾಯ್ ವ್ಹೀಲ್ಸ್, ಟೈರ್ ಹಗ್ಗರ್, ಡಿಸ್ಕ್ ಬ್ರೇಕ್ ಮತ್ತು ಎಕ್ಸಾಸ್ಟ್ ಅನ್ನು ಹೊಂದಿದೆ.

ಈ ಹೊಸ ಪಲ್ಸರ್ 250ಎಫ್ ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, ಮುಂಬರುವ ಬಜಾಜ್ ಪಲ್ಸರ್ 250 ಹೊಚ್ಚಹೊಸ 250 ಸಿಸಿ ಆಯಿಲ್-ಕೂಲ್ಡ್ ಎಂಜಿನ್‌ನೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಈ ಎಂಜಿನ್ ಸುಮಾರು 24 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಈ ಬೈಕಿನಲ್ಲಿ ಸ್ಪ್ಲಿಟ್ ಸೀಟುಗಳನ್ನು ಸಹ ಹೊಂದಿರುತ್ತದೆ, ಈ ಸೆಮಿ-ಫೇರ್ಡ್ ಬೈಕ್ ಸ್ವಲ್ಪ ಸ್ಪೋರ್ಟಿನೆಸ್ ಲುಕ್ ಅನ್ನು ಹೊಂದಿರುತ್ತದೆ.

2021ರ ಬಜಾಜ್ ಪಲ್ಸರ್ 250ಎಫ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಆಕ್ಸಲ್ಗಳಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಅನ್ನು ಓಳಗೊಂಡಿರುತ್ತದೆ.

ಈ 2021ರ ಬಜಾಜ್ ಪಲ್ಸರ್ 250ಎಫ್ ಬೈಕಿನ ಬೆಲೆಯು ಸುಮಾರು ರೂ.1.32 ಲಕ್ಷದಿಂದ ರೂ.1.34 ಲಕ್ಷಗಳಿರಬಹುದು ಎಂದು ಅಂದಾಜಿಸಲಾಗಿದೆ. ಈ ಹೊಸ ಬೈಕ್ ಶೀಘ್ರದಲ್ಲೇ ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಬಜಾಜ್ ಪಲ್ಸರ್ 250ಎಫ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಸುಜುಕಿ ಜಿಕ್ಸರ್ 250, ಯಮಹಾ ಎಫ್‌ಜೆಡ್ -25 ಮತ್ತು ಕೆಟಿಎಂ ಡ್ಯೂಕ್ 250 ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications