ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250ಎಫ್ ಬೈಕ್

ಬಜಾಜ್ ಆಟೋ ಕಂಪನಿಯ ಪಲ್ಸರ್ ಸರಣಿಯ ಬೈಕ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಬಹುಜನಪ್ರಿಯತೆಯನ್ನು ಗಳಿಸಿದೆ. ಪಲ್ಸರ್ ಬೈಕ್‌ಗಳಿಗೆ ಭಾರತದಲ್ಲಿ ಪ್ರತ್ಯೇಕವಾದ ಅಭಿಮಾನಿ ವರ್ಗವಿದೆ. ಬಜಾಜ್ ಕಂಪನಿಯು ಭಾರತದಲ್ಲಿ ಪಲ್ಸರ್ ಸರಣಿಯನ್ನು ವಿಸ್ತರಿಸಲು ಮುಂದಾಗಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250ಎಫ್ ಬೈಕ್

ಬಜಾಜ್ ಕಂಪನಿಯು ತನ್ನ ಪಲ್ಸರ್ ಸರಣಿಯ ಬೈಕ್‌ಗಳಿಗಾಗಿ ಸಂಪೂರ್ಣವಾಗಿ ಹೊಸ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗುತ್ತಿದೆ. ಹೊಸ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಹೊಚ್ಚ ಹೊಸ ಪಲ್ಸರ್ 250ಎಫ್ ಮಾದರಿಯು ಪಾದಾರ್ಪಣೆ ಮಾಡಲಿದೆ ಎಂದು ವರದಿಗಳಾಗಿದೆ. ಈ ಹೊಸ ಬಜಾಜ್ ಪಲ್ಸರ್ 250ಎಫ್ ಬೈಕ್ ಈ ವರ್ಷದ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250ಎಫ್ ಬೈಕ್

ಹೊಸ ಬಜಾಜ್ ಪಲ್ಸರ್ 250 ಸೆಮಿ-ಫೇರ್ಡ್ ಬೈಕ್ ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಬೈಕ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಚಿತ್ರಗಳನ್ನು ಬೈಕ್‌ವಾಲೆ ಬಹಿರಂಗಪಡಿಸಿದೆ. ಈ ಮಾದರಿಯನ್ನು ಪಲ್ಸರ್ 250ಎಫ್ ಎಂದು ಕರೆಯುವ ನಿರೀಕ್ಷೆಯಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250ಎಫ್ ಬೈಕ್

ಸ್ಪೈ ಚಿತ್ರಗಳಲ್ಲಿ ನೋಡಿದಂತೆ ಹೊಸ ಪಲ್ಸರ್ 250ಎಫ್ ಮರೆಮಾಚಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ. ಈ ಹೊಸ ಬೈಕ್ ಹೆಡ್‌ಲ್ಯಾಂಪ್ ವಿಭಾಗದ ಪಕ್ಕದಲ್ಲಿರುವ ಕ್ವಾರ್ಟರ್ ಫೇರಿಂಗ್, ಫ್ಯೂಯಲ್ ಟ್ಯಾಂಕ್, ಫೇರಿಂಗ್-ಮೌಂಟೆಡ್ ರಿಯರ್-ವ್ಯೂ ಮಿರರ್ಸ್, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ ಅನ್ನು ಒಳಗೊಂಡಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250ಎಫ್ ಬೈಕ್

ಇದರೊಂದಿಗೆ ಈ ಹೊಸ ಬೈಕಿನಲ್ಲಿ ಗ್ರ್ಯಾಬ್ ರೈಲ್ ಮತ್ತು ವಿಭಿನ್ನ ಎಲ್‌ಇಡಿ ಟೈಲ್ ಲ್ಯಾಂಪ್ ವಿನ್ಯಾಸವನ್ನು ಪಡೆಯುತ್ತದೆ. ಇನ್ನು ಅಲಾಯ್ ವ್ಹೀಲ್ಸ್, ಟೈರ್ ಹಗ್ಗರ್, ಡಿಸ್ಕ್ ಬ್ರೇಕ್ ಮತ್ತು ಎಕ್ಸಾಸ್ಟ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250ಎಫ್ ಬೈಕ್

ಈ ಹೊಸ ಪಲ್ಸರ್ 250ಎಫ್ ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, ಮುಂಬರುವ ಬಜಾಜ್ ಪಲ್ಸರ್ 250 ಹೊಚ್ಚಹೊಸ 250 ಸಿಸಿ ಆಯಿಲ್-ಕೂಲ್ಡ್ ಎಂಜಿನ್‌ನೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಈ ಎಂಜಿನ್ ಸುಮಾರು 24 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸಬಹುದು ಎಂದು ಹೇಳಲಾಗುತ್ತಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250ಎಫ್ ಬೈಕ್

ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಈ ಬೈಕಿನಲ್ಲಿ ಸ್ಪ್ಲಿಟ್ ಸೀಟುಗಳನ್ನು ಸಹ ಹೊಂದಿರುತ್ತದೆ, ಈ ಸೆಮಿ-ಫೇರ್ಡ್ ಬೈಕ್ ಸ್ವಲ್ಪ ಸ್ಪೋರ್ಟಿನೆಸ್ ಲುಕ್ ಅನ್ನು ಹೊಂದಿರುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250ಎಫ್ ಬೈಕ್

ಬಜಾಜ್ ಪಲ್ಸರ್ 250ಎಫ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ನೀಡಲಾಗಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿಯು ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250ಎಫ್ ಬೈಕ್

ಈ ಹೊಸ ಬೈಕ್ ಇದೇ ವರ್ಷದಲ್ಲಿ ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಬಜಾಜ್ ಪಲ್ಸರ್ 250ಎಫ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಸುಜುಕಿ ಜಿಕ್ಸರ್ 250, ಯಮಹಾ ಎಫ್‌ಜೆಡ್ -25 ಮತ್ತು ಕೆಟಿಎಂ ಡ್ಯೂಕ್ 250 ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Bajaj Pulsar 250F Spotted Testing For The First Time. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X