Just In
- 12 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 13 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 14 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 14 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- News Namma Metro: ಬೆಂಗಳೂರಿನ ಮತದಾರರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕ್
ಇಟಲಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಹೊಸ ಕ್ರೂಸರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ನಾಳೆ ಪರಿಚಯಿಸಲಿದೆ. ಬೆನೆಲ್ಲಿ 502ಸಿ ಎಂದು ಕರೆಯಲ್ಪಡುವ ಅರ್ಬನ್ ಕ್ರೂಸರ್ ಬೈಕಿನ ಖರೀದಿಗಾಗಿ ನಾಳೆ ಪ್ರಿ-ಬುಕ್ಕಿಂಗ್ ಅನ್ನು ಪ್ರಾರಂಭಿಸುವ ಸಾಧ್ಯತೆಗಳಿದೆ.
ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕನ್ನು ಬ್ರ್ಯಾಂಡ್ನ 500 ಸಿಸಿ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ, ಇದು ಲಿಯಾನ್ಸಿನೊ ಮತ್ತು ಟಿಆರ್ಕೆ 502 ಮಾದರಿಗಳಿಗೂ ಆಧಾರವಾಗಿದೆ. ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕ್ ಲಿಯಾನ್ಸಿನೊ ಮಾದರಿಗಿಂತ ಮೇಲಿನ್ ಸ್ಥಾನದಲ್ಲಿ ಇರಿಸಬಹುದು. ಈ ಹೊಸ ಕ್ರೂಸರ್ ಬೈಕಿನ ಬೆಲೆಯು ಸುಮಾರು ರೂ.5 ಲಕ್ಷವಿರಬಹುದು. ಈ ಅರ್ಬನ್ ಕ್ರೂಸರ್ ವಿನ್ಯಾಸವು ಹೆಚ್ಚು ಜನಪ್ರಿಯವಾದ ಡುಕಾಟಿ ಡಯಾವೆಲ್ 1260 ನಿಂದ ಸ್ಫೂರ್ತಿ ಪಡೆದಿದೆ.
ಬೆನೆಲ್ಲಿ 502ಸಿ ಕ್ರೂಸರ್ ಬೈಕಿನ ಹೆಡ್ಲೈಟ್ ಹೊರತುಪಡಿಸಿ, ದೊಡ್ಡ ಫ್ಯೂಯಲ್ ಟ್ಯಾಂಕ್, ಸೀಟ್ ವಿನ್ಯಾಸ ಮತ್ತು ಸ್ಪ್ಲಿಟ್ ಟೈಲ್-ಲ್ಯಾಂಪ್ಗಳು ಸೇರಿದಂತೆ ಉಳಿದ ವಿನ್ಯಾಸವು ಡಯಾವೆಲ್ 1260 ನಿಂದ ಸ್ಫೂರ್ತಿ ಪಡೆದಿದೆ.
ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನಲ್ಲಿ 500 ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ, ಇದೇ ಎಂಜಿನ್ ಅನ್ನು ಬೆನೆಲ್ಲಿ ಲಿಯಾನ್ಸಿನೊ ಮತ್ತು ಟಿಆರ್ಕೆ 502 ಬೈಕ್ ಗಳು ಕೂಡ ಹೊಂದಿವೆ.
500 ಸಿಸಿ ಎಂಜಿನ್ ಎಂಜಿನ್ 8,500 ಆರ್ಪಿಎಂನಲ್ಲಿ 47.6 ಬಿಹೆಚ್ಪಿ ಪವರ್ ಮತ್ತು 6,000 ಆರ್ಪಿಎಂನಲ್ಲಿ 46 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ಬಾಕ್ಸ್ಗೆ ಜೋಡಿಸಲಾಗಿದೆ.
ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಅನ್ನು ಆಧರಿಸಿದ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಯುಎಸ್ಡಿ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಪ್ರಿಲೋಡ್-ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸೆಟಪ್ ಅನ್ನು ಹೊಂದಿರುತ್ತದೆ.
ಇನ್ನು ಈ ಕ್ರೂಸರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 4-ಪಿಸ್ಟನ್ ಕ್ಯಾಲಿಪರ್ಗಳೊಂದಿಗೆ ಟ್ವಿನ್ 280 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಪಿಸ್ಟನ್ ಕ್ಯಾಲಿಪರ್ನೊಂದಿಗೆ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.
ಬೆನೆಲ್ಲಿ 502ಸಿ ಕ್ರೂಸರ್ 2,280 ಎಂಎಂ ಉದ್ದ ಮತ್ತು 1,140 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಬೈಕ್ 1,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಬೈಕ್ 750 ಎಂಎ ಎತ್ತರದ ಸೀಟ್ ಅನ್ನು ಹೊಂದಿದೆ.
ಇನ್ನು ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನಲ್ಲಿ 21-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಬೆನೆಲ್ಲಿ 502ಸಿ ಕ್ರೂಸರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ವಲ್ಕನ್ ಎಸ್ ಬೈಕಿಗೆ ಪೈಪೋಟಿ ನೀಡುತ್ತದೆ.