ಬಹುನಿರೀಕ್ಷಿತ ಬಿಎಸ್6 ಸಿಎಫ್‌ಮೋಟೋ 300ಎನ್‌ಕೆ ಬೈಕ್ ಬಿಡುಗಡೆ

ಚೀನಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಎಫ್‌ಮೋಟೋ ತನ್ನ ಬಿಎಸ್-6 300ಎನ್‌ಕೆ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.2.29 ಲಕ್ಷಗಳಾಗಿದೆ.

ಬಹುನಿರೀಕ್ಷಿತ ಬಿಎಸ್6 ಸಿಎಫ್‌ಮೋಟೋ 300ಎನ್‌ಕೆ ಬೈಕ್ ಬಿಡುಗಡೆ

ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್ ಬಿಡುಗಡೆ ಮಾಡಿರುವುದಾಗಿ ಕಂಪನಿಯು ತನ್ನ ಸೋಷಿಯಲ್ ಮೀಡಿಯಾ ಪೇಜ್ ಗಳಲ್ಲಿ ಹೇಳಿಕೊಂಡಿದೆ. ಸಿಎಫ್‌ಮೋಟೋ ಕಂಪನಿಯು ಬೆಲೆಯನ್ನು ಘೋಷಿಸಿದ್ದರೂ, ನವೀಕರಿಸಿದ ಎಂಜಿನ್ ಸ್ಪೆಕ್ಸ್ ಮತ್ತು ಹೊಸ ಬೈಕಿನಲ್ಲಿ ಮಾಡಿದ ಬದಲಾವಣೆಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಬಿಎಸ್-6 ಸಿಎಫ್‌ಮೋಟೋ 300ಎನ್‌ಕೆ ಬೈಕ್ ಫುಲ್-ಎಲ್ಇಡಿ ಹೆಡ್‌ಲ್ಯಾಂಪ್, ಮಸ್ಕ್ಲರ್ ಫ್ಯೂಯಲ್ ಟ್ಯಾಂಕ್, ಅಪ್‌ಸ್ಪೆಟ್ ಹಿಂಭಾಗದ ವಿಭಾಗ, ಸ್ಪ್ಲಿಟ್-ಸೀಟ್ ಸೆಟಪ್, ಅಂಡರ್ ಬೆಲ್ಲಿ ಎಕ್ಸಾಸ್ಟ್, ರಿಯರ್-ಫೆಂಡರ್ ಮೌಂಟಡ್ ಸಂಖ್ಯೆಯನ್ನು ಒಳಗೊಂಡಿರುತ್ತದೆ.

ಬಹುನಿರೀಕ್ಷಿತ ಬಿಎಸ್6 ಸಿಎಫ್‌ಮೋಟೋ 300ಎನ್‌ಕೆ ಬೈಕ್ ಬಿಡುಗಡೆ

ಇನ್ನು ಇದರೊಂದಿಗೆ 5-ಸ್ಪೋಕ್ ಅಲಾಯ್ ವ್ಹೀಲ್ ಅನ್ನು ನೀಡಲಾಗಿದೆ. ಇನ್ನು ಹೊಸ ಸಿಎಫ್‌ಮೋಟೋ 300ಎನ್‌ಕೆ ಬೈಕ್ ಬಣ್ಣ ಮತ್ತು ಗ್ರಾಫಿಕ್ಸ್ ಬಿಎಸ್ 4 ಮಾದರಿಗೆ ಹೋಲುತ್ತದೆ. ಫೀಚರ್ ಗಳು ಕೂಡ ಹಿಂದಿನ ಮಾದರಿಯಲ್ಲಿರುವುದನ್ನು ಅದೇ ರೀತಿ ಮುಂದುವರೆಸಲಾಗಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಬಹುನಿರೀಕ್ಷಿತ ಬಿಎಸ್6 ಸಿಎಫ್‌ಮೋಟೋ 300ಎನ್‌ಕೆ ಬೈಕ್ ಬಿಡುಗಡೆ

ಇನ್ನು ಈ ಬಿಎಸ್-6 300ಎನ್‌ಕೆ ಬೈಕ್ ಫುಲ್ ಎಲ್ಇಡಿ ಲೈಟಿಂಗ್ ಮತ್ತು ಎರಡು ಡಿಸ್ ಪ್ಲೇ ಮೋಡ್ ಗಳೊಂದಿಗೆ ಕಲರ್ ಟಿಎಫ್ಟಿ ಸ್ಕ್ರೀನ್ ಅನ್ನು ಹೊಂದಿದೆ. ಬಿಎಸ್-6 3 ಸಿಎಫ್‌ಮೋಟೋ 300ಎನ್‌ಕೆ ಬೈಕ್ ಹೊಸ ಫೀಚರ್ ಗಳನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಬಹುನಿರೀಕ್ಷಿತ ಬಿಎಸ್6 ಸಿಎಫ್‌ಮೋಟೋ 300ಎನ್‌ಕೆ ಬೈಕ್ ಬಿಡುಗಡೆ

ಬಿಎಸ್6 ಸಿಎಫ್‌ಮೋಟೋ 300ಎನ್‌ಕೆ ಬೈಕ್ 1,990 ಎಂಎಂ ಉದ್ದ, 1,070 ಎಂಎಂ ಎತ್ತರವಿದೆ ಮತ್ತು 1,360 ಎಂಎಂ ವೀಲ್‌ಬೇಸ್ ಹೊಂದಿದೆ. ಈ ಬೈಕು ಸೀಟ್ ಎತ್ತರವನ್ನು 795ಎಂಎಂ ನೀಡಿದರೆ, ಗ್ರೌಂಡ್ ಕ್ಲಿಯರೆನ್ಸ್ 150 ಎಂಎಂ ಆಗಿದೆ. ಇನ್ನು 2.5-ಲೀಟರ್ ಇಂಧನ ಸಾಮರ್ಥ್ಯವನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಹುನಿರೀಕ್ಷಿತ ಬಿಎಸ್6 ಸಿಎಫ್‌ಮೋಟೋ 300ಎನ್‌ಕೆ ಬೈಕ್ ಬಿಡುಗಡೆ

ಇನ್ನು ಬಿಎಸ್6 ಸಿಎಫ್‌ಮೋಟೋ 300ಎನ್‌ಕೆ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಬಹುನಿರೀಕ್ಷಿತ ಬಿಎಸ್6 ಸಿಎಫ್‌ಮೋಟೋ 300ಎನ್‌ಕೆ ಬೈಕ್ ಬಿಡುಗಡೆ

ಇನ್ನು ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಸಿಎಫ್‌ಮೋಟೋ 300ಎನ್‌ಕೆ ಬೈಕಿನ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಒದಗಿಸುತ್ತದೆ. ಈ ಬೈಕ್ ಒಟ್ಟು 151 ಕೆ.ಜಿ. ತೂಕವಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಹುನಿರೀಕ್ಷಿತ ಬಿಎಸ್6 ಸಿಎಫ್‌ಮೋಟೋ 300ಎನ್‌ಕೆ ಬೈಕ್ ಬಿಡುಗಡೆ

ಸಿಎಫ್‌ಮೋಟೋ 300ಎನ್‌ಕೆ ಬೈಕಿನ ಸ್ಟೈಲಿಂಗ್ ಮತ್ತು ಫೀಚರ್ ಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೆ ಇದರಲ್ಲಿ ಪ್ರಮುಖ ಬದಲಾವಣೆ ಅಂದರೆ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಬಹುನಿರೀಕ್ಷಿತ ಬಿಎಸ್6 ಸಿಎಫ್‌ಮೋಟೋ 300ಎನ್‌ಕೆ ಬೈಕ್ ಬಿಡುಗಡೆ

ಇನ್ನು ಈ ಹೊಸ ಬೈಕಿನಲ್ಲಿ ಅದೇ 292.4ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಇದರ ಹಿಂದಿನ ಬಿಎಸ್ 4 ಮಾದರಿಯು 28 ಬಿಹೆಚ್‌ಪಿ ಪವರ್ ಮತ್ತು 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತಿತ್ತು. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗುತ್ತದೆ.

ಬಹುನಿರೀಕ್ಷಿತ ಬಿಎಸ್6 ಸಿಎಫ್‌ಮೋಟೋ 300ಎನ್‌ಕೆ ಬೈಕ್ ಬಿಡುಗಡೆ

ಆದರೆ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಪವರ್ ಮತ್ತು ಟಾರ್ಕ್ ಅಂಕಿಅಂಶಗಳು ಇದೇ ರೀತಿ ಇರಬಹುದು ಎಂದು ನಿರೀಕ್ಷಿಸುತ್ತೇವೆ. ಶೀಘ್ರದಲ್ಲೇ ಸಿಎಫ್‌ಮೊಟೊ ಕಂಪನಿಯು ತನ್ನ ಬಿಎಸ್6 300ಎನ್‌ಕೆ ಬೈಕಿನಲ್ಲಿ ಮಾಡಲಾದ ಬದಲಾವಣೆಗಳ ಬಗ್ಗೆ ಬಹಿರಂಗಪಡಿಸಬಹುದು.

More from DriveSpark

Article Published On: Wednesday, March 3, 2021, 12:37 [IST]
English summary
CFMoto 300NK BS6 Launched. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+