ಕೆಟಿಎಂ ಆರ್‍‍ಸಿ 390 ಬೈಕಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಸಿಎಫ್‌ಮೋಟೋ 300ಎಸ್‌ಆರ್

ಚೀನಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಎಫ್‌ಮೋಟೋ ತನ್ನ ಬಿಎಸ್-6 300ಎನ್‌ಕೆ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಆದರೆ ಇದೀಗ ಮತ್ತೊಂದು ಹೊಸ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಕೆಟಿಎಂ ಆರ್‍‍ಸಿ 390 ಬೈಕಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಸಿಎಫ್‌ಮೋಟೋ 300ಎಸ್‌ಆರ್

ಸಿಎಫ್‌ಮೋಟೋ ತನ್ನ ಬಹುನಿರೀಕ್ಷಿತ 300ಎಸ್‌ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಹೊಸ 300ಎಸ್‌ಆರ್ ಬ್ರ್ಯಾಂಡ್‌ನ ಸರಣಿಯಲ್ಲಿರುವ 300 ಎನ್‌ಕೆ ನೇಕೆಡ್ ಫೇರ್ಡ್ ಆವೃತ್ತಿಯ ಅಪ್ಡೇಟ್ ವರ್ಷನ್ ಆಗಿದೆ. ಸಿಎಫ್‌ಮೋಟೋ 300ಎಸ್‌ಆರ್ ಬೈಕನ್ನು ಈಗಗಾಲೇ ಕೆಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಚೀನಾ ದೇಶದಲ್ಲಿ ಈಗಾಗಲೇ ಈ ಬೈಕಿನ ರಫ್ತನ್ನು ಪ್ರಾರಂಭಿಸಲಾಗಿದೆ.

ಕೆಟಿಎಂ ಆರ್‍‍ಸಿ 390 ಬೈಕಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಸಿಎಫ್‌ಮೋಟೋ 300ಎಸ್‌ಆರ್

ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಸಿಎಫ್‌ಮೋಟೋ 300ಎಸ್‌ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳುಗಳ ನಡುವೆ ಬಿಡುಗಡೆಯಾಗಬಹುದು.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಕೆಟಿಎಂ ಆರ್‍‍ಸಿ 390 ಬೈಕಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಸಿಎಫ್‌ಮೋಟೋ 300ಎಸ್‌ಆರ್

ಹೊಸ ಸಿಎಫ್‌ಮೋಟೋ 300ಎಸ್‌ಆರ್ ಬೈಕಿನಲ್ಲಿ ಡಿಒಹೆಚ್‌ಸಿ ಸೆಟಪ್ ಹೊಂದಿರುವ 292.4 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 8,750 ಆರ್‌ಪಿಎಂನಲ್ಲಿ 30 ಬಿಹೆಚ್‌ಪಿ ಪವರ್ ಮತ್ತು 7,250 ಆರ್‌ಪಿಎಂನಲ್ಲಿ 25.3 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕೆಟಿಎಂ ಆರ್‍‍ಸಿ 390 ಬೈಕಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಸಿಎಫ್‌ಮೋಟೋ 300ಎಸ್‌ಆರ್

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಸ್ಟ್ಯಾಂಡರ್ಡ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಫ್ಯೂಯಲ್-ಇಂಜೆಕ್ಷನ್ ಅನ್ನು ಸಹ ಹೊಂದಿದೆ. ಇದು ಈ ಬೈಕಿನ ಸುಗಮ ಸವಾರಿ ಮತ್ತು ಹೆಚ್ಚಿನ ಕಾರ್ಯಕ್ಷಮತೆಯನ್ನು ಒದಗಿಸಲು ನೆರವಾಗುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಕೆಟಿಎಂ ಆರ್‍‍ಸಿ 390 ಬೈಕಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಸಿಎಫ್‌ಮೋಟೋ 300ಎಸ್‌ಆರ್

ಇನ್ನು ಈ ಬೈಕಿನ ವಿನ್ಯಾಸದ ಬಗ್ಗೆ ಹೇಳುದಾದರೆ ಸಿಎಫ್‌ಮೊಟೊ 300 ಎಸ್‌ಆರ್ ಬೈಕಿನಲ್ಲಿ ಟ್ವಿನ್ ಹೆಡ್ ಲ್ಯಾಂಪ್ ಸೆಟಪ್ ನೊಂದಿಗೆ ಅಗ್ರೇಸಿವ್ ಆಗಿ ಕಾಣುವ ಫೇರಿಂಗ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಕಾರ್ಬನ್-ಫೈಬರ್ ಫಿನಿಶ್ ಅನ್ನು ಒಳಗೊಂಡಿರುವ ಸ್ವಲ್ಪ ಟ್ರಿಮ್ ಅನ್ನು ಸಹ ಬಳಸಲಾಗಿದೆ.

ಕೆಟಿಎಂ ಆರ್‍‍ಸಿ 390 ಬೈಕಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಸಿಎಫ್‌ಮೋಟೋ 300ಎಸ್‌ಆರ್

ಹೊಸ ಸಿಎಫ್‌ಮೋಟೋ 300 ಎಸ್‌ಆರ್ ಬೈಕ್ ಇಂಟಿಗ್ರೇಟೆಡ್ ಡಿಆರ್‌ಎಲ್‌ಗಳೊಂದಿಗಿನ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಈ ಬೈಕಿನಲ್ಲಿ ಸ್ಪ್ಲಿಟ್ ಸೀಟ್, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಅಂಡರ್‌ಬೆಲ್ಲಿ ಎಕ್ಸಾಸ್ಟ್ ಮತ್ತು ರೇರ್ ವ್ಯೂ ಮಿರರ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಕೆಟಿಎಂ ಆರ್‍‍ಸಿ 390 ಬೈಕಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಸಿಎಫ್‌ಮೋಟೋ 300ಎಸ್‌ಆರ್

ಈ ಬೈಕಿನಲ್ಲಿ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಇನ್ಸ್ ಟ್ರೂಮೆಂಟ್ ಕನ್ಸೋಲ್ ಬ್ಲೂಟೂತ್ ಸ್ಮಾರ್ಟ್ ಫೋನ್ ಕನೆಕ್ಟಿವಿಟಿಯನ್ನು ಹೊಂದಿರುವ ತಂತ್ರಜ್ಞಾನವನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸುತ್ತೇವೆ.

ಕೆಟಿಎಂ ಆರ್‍‍ಸಿ 390 ಬೈಕಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಸಿಎಫ್‌ಮೋಟೋ 300ಎಸ್‌ಆರ್

ಹೊಸ ಸಿಎಫ್‌ಮೋಟೋ 300ಎಸ್‌ಆರ್ ಬೈಕಿನ ಮುಂಭಾಗದಲ್ಲಿ (ಯುಎಸ್‌ಡಿ) ಅಪ್-ಸೈಡ್-ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಪೂರ್ವ ಲೋಡ್‌ಗೆ ಹೊಂದಿಸಬಹುದಾದ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಈ ಬೈಕಿನ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ಕೆಟಿಎಂ ಆರ್‍‍ಸಿ 390 ಬೈಕಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಸಿಎಫ್‌ಮೋಟೋ 300ಎಸ್‌ಆರ್

ಹೊಸ ಸಿಎಫ್‌ಮೋಟೋ 300ಎಸ್‌ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು. ಈ ಹೊಸ ಸಿಎಫ್‌ಮೋಟೋ 300ಎಸ್‌ಆರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಿವಿಎಸ್ ಅಪಾಚೆ ಆರ್‌ಆರ್ 310, ಕೆಟಿಎಂ ಆರ್‍‍ಸಿ 390 ಮತ್ತು ಕವಾಸಕಿ ನಿಂಜಾ 400 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

More from DriveSpark

Article Published On: Friday, March 5, 2021, 20:04 [IST]
English summary
CFMoto 300SR India Launch Planned. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+