ಹೊಸ ಸಿಎಫ್‌ಮೋಟೋ 650ಎಂಟಿ ಅಡ್ವೆಂಚರ್ ಬೈಕ್ ಟೀಸರ್ ಬಿಡುಗಡೆ
ಚೀನಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಎಫ್‌ಮೋಟೋ ತನ್ನ 650ಎಂಟಿ ಸ್ಪೋರ್ಟ್ಸ್-ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಭಾಗವಾಗಿ 2021ರ ಸಿಎಫ್‌ಮೋಟೋ 650ಎಂಟಿ ಅಡ್ವೆಂಚರ್ ಬೈಕಿನ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಸಿಎಫ್‌ಮೋಟೋ ಕಂಪನಿಯು ತನ್ನ 650ಎಂಟಿ ಸ್ಪೋರ್ಟ್ಸ್-ಅಡ್ವೆಂಚರ್ ಟೂರರ್ ಬೈಕಿನ ಖರೀದಿಗಾಗಿ ಆನ್‌ಲೈನ್ ಮೂಲಕ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಇನ್ನು ಸಿಎಫ್‌ಮೋಟೋ 300ಎನ್‌ಕೆ, 650ಎನ್‌ಕೆ ಮತ್ತು 650ಜಿಟಿ ಮಾದರಿಗಳಿಗೂ ಕೂಡ ಬುಕ್ಕಿಂಗ್ ಪ್ರಾರಂಭಿಸಿದೆ. ಈ ಮಾದರಿಗಳಲ್ಲಿ ಯಾವುದಾದರೂ ಒಂದು ಮಾದರಿಯನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.5,000 ಪಾವತಿಸಿ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಸಿಎಫ್‌ಮೋಟೋ ಕಂಪನಿಯು ಶೀಘ್ರದಲ್ಲೇ 650ಎಂಟಿ ಸ್ಪೋರ್ಟ್ಸ್-ಅಡ್ವೆಂಚರ್ ಟೂರರ್ ಬೈಕನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

2021ರ ಸಿಎಫ್‌ಮೋಟೋ 650ಎಂಟಿ ಸ್ಪೋರ್ಟ್ಸ್-ಅಡ್ವೆಂಚರ್ ಟೂರರ್ ಬೈಕ್ ಹಿಂದಿನ ಬಿಎಸ್4 ಮಾದರಿಯಂತೆ ಸ್ಟೈಲಿಂಗ್ ಅನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಆದರೆ ಕೆಲವು ಸಣ್ಣ ನವೀಕರಣಗಳನ್ನು ಪಡೆದುಕೊಳ್ಳಬಹುದು ಎಂದು ನಿರೀಕ್ಷಿಸುತ್ತೇವೆ.

ಈ 2021ರ ಸಿಎಫ್‌ಮೋಟೋ 650ಎಂಟಿ ಬೈಕಿನಲ್ಲಿ ಟ್ವಿನ್-ಪಾಡ್ ಹೆಡ್‌ಲೈಟ್, ಎತ್ತರದ ವಿಂಡ್‌ಸ್ಕ್ರೀನ್, ನೇರವಾದ ಏರೋಗೊನಾಮಿಕ್, ಸ್ಟೆಪ್-ಅಪ್ ತಡಿ ಮತ್ತು ಕಾಂಪ್ಯಾಕ್ಟ್ ಎಕ್ಸಾಸ್ಟ್ ಕ್ಯಾನಿಸ್ಟರ್ ಅನ್ನು ಒಳಗೊಂಡಿರುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಈ ಬೈಕಿನ ಹಾರ್ಡ್‌ವೇರ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಇದರ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ಹೊಂದಿರುತ್ತದೆ.

ಈ ಬಿಎಸ್6 ಸಿಎಫ್‌ಮೋಟೋ 650ಎಂಟಿ ಸ್ಪೋರ್ಟ್ಸ್-ಅಡ್ವೆಂಚರ್ ಟೂರರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟ್ವಿನ್ ರೋಟಾರ್‌ಗಳು ಮತ್ತು ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಕೂಡ ಅಳವಡಿಸಲಾಗುತ್ತದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಸಿಎಫ್‌ಮೋಟೋ 650ಎಂಟಿ ಬೈಕಿನಲ್ಲಿ ಅದೇ 649 ಸಿಸಿ ಪ್ಯಾರಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 9,500 ಆರ್‌ಪಿಎಂನಲ್ಲಿ ಗರಿಷ್ಠ 56.4 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 62 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಸಿಎಫ್‌ಮೋಟೋ 650ಎಂಟಿ ಸ್ಪೋರ್ಟ್ಸ್-ಅಡ್ವೆಂಚರ್ ಬೈಕ್ ಒಂದು ರೂಪಾಂತರದಲ್ಲಿ ಮಾತ್ರ ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಈ ಬೈಕಿನ ಬೆಲೆಯು ಸುಮಾರು ರೂ.4.99 ಲಕ್ಷಗಳಾಗಿರಬಹುದು ಎಂದು ಅಂದಾಜಿಸುತ್ತೇವೆ.

ಈ ಬಿಎಸ್6 ಸಿಎಫ್‌ಮೋಟೋ 650ಎಂಟಿ ಸ್ಪೋರ್ಟ್ಸ್-ಅಡ್ವೆಂಚರ್ ಟೂರರ್ ಬೈಕ್ ಗ್ರೇ ಬ್ಲ್ಯಾಕ್ ಮತ್ತು ಗ್ರೇ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಸಿಎಫ್‌ಮೋಟೋ 650ಎಂಟಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ವರ್ಸಸ್ 650 ಮತ್ತು ಬೆನೆಲ್ಲಿ ಟಿಆರ್‌ಕೆ 502 ಸ್ಪೋರ್ಟ್ಸ್ ಅಡ್ವೆಂಚರ್ ಟೂರರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








