ಅನಾವರಣವಾಯ್ತು ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕ್
ಚೀನಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಎಫ್‌ಮೋಟೋ ತನ್ನ ಹೊಸ 800ಎಂಟಿ ಅಡ್ವೆಂಚರ್ ಬೈಕನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಕೆಟಿಎಂ 790 ಅಡ್ವೆಂಚರ್ ಬೈಕನ್ನು ಆಧರಿಸಿ ಈ ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಮಾದರಿಯನ್ನು ಅಭಿವೃದ್ದಿಪಡಿಸಿದೆ.

ಸಿಎಫ್‌ಮೋಟೋ ಕಂಪನಿಯು ಆಸ್ಟ್ರಿಯನ್ ಬ್ರ್ಯಾಂಡ್‌ಗಾಗಿ ಎಂಜಿನ್‌ಗಳು ಮತ್ತು ಸಂಪೂರ್ಣ ಯಂತ್ರಗಳನ್ನು ತಯಾರಿಸುತ್ತದೆ, ಸಿಎಫ್‌ಮೋಟೋ 799ಸಿಸಿ ಕೆಟಿಎಂ ಎಲ್‌ಸಿ8 ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಸ ಅಡ್ವೆಂಚರ್ ಬೈಕಿನಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಕೂಡ ಸಿಎಫ್‌ಮೋಟೋ ಅಭಿವೃದ್ದಿ ಪಡಿಸಿ ಕೆಟಿಎಂಗೆ ನೀಡಿರುವುದಾಗಿದೆ. ಈ 799ಸಿಸಿ ಕೆಟಿಎಂ ಎಲ್‌ಸಿ8 ಪ್ಯಾರಲಲ್-ಟ್ವಿನ್ ಎಂಜಿನ್ ಕೇವಲ 95 ಬಿಹೆಚ್‌ಪಿ ಪವರ್ ಮತ್ತು 78 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕಿನಲ್ಲಿ ರೈಡ್-ಬೈ-ವೈರ್ ಥ್ರೊಟಲ್, ಎಂಜಿನ್ ಮ್ಯಾಪ್ಸ್ ಮತ್ತು ಸ್ಟ್ಯಾಂಡರ್ಡ್ ಕ್ರೂಸ್ ಕಂಟ್ರೋಲ್‌ನೊಂದಿಗೆ ಬರುತ್ತದೆ, ಸಿಎಫ್‌ಮೋಟೋ 800ಎಂಟಿ ತನ್ನದೇ ಆದ ಚಾಸಿಸ್ ಮತ್ತು ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಕೆವೈಬಿಯ ಸಸ್ಪೆಂಕ್ಷನ್ ಯುನಿಟ್ ಗಳು ಮತ್ತು ಸ್ಪ್ಯಾನಿಷ್ ಬ್ರ್ಯಾಂಡ್ ಜೆ. ಜುವಾನ್ ಬ್ರೇಕಿಂಗ್ ಹಾರ್ಡ್‌ವೇರ್ ಅನ್ನು ಪೂರೈಸುತ್ತಿದೆ. ಆಫ್-ರೋಡ್ ಓರಿಯೆಂಟೆಡ್ ಅಡ್ವೆಂಚರ್ ಬೈಕ್‌ನ ಬದಲು, ಸಿಎಫ್‌ಮೋಟೋ 800ಎಂಟಿ ಬೈಕ್ 790 ಅಡ್ವೆಂಚರ್ ಮಾದರಿಗಿಂತ ಲೋ-ಸ್ಲಂಗ್ ಇಂಧನ ಟ್ಯಾಂಕ್‌ಗಳಿಗಿಂತ ಹೆಚ್ಚಾಗಿ ಟಾಪ್-ಮೌಂಟಡ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಇನ್ನು ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕಿನಲ್ಲಿ ಹೀಟಡ್ ಗ್ರಿಪ್ ಸೀಟನ್ನು ಹೊಂದಿದೆ. ಇನ್ನು ಸೆಟ್‌ಲೈಟ್ ನ್ಯಾವಿಗೇಷನ್‌ನೊಂದಿಗೆ 7-ಇಂಚಿನ ಟಿಎಫ್‌ಟ ಡಿಸ್ ಪ್ಲೇಯನ್ನು ಪಡೆಯುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಈ ಹೊಸ ಅಡ್ವೆಂಚರ್ ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಾಗಲಿದ್ದು, ಎರಡೂ 19 ಇಂಚಿನ ಮುಂಭಾಗದ ವ್ಹೀಲ್ ಮತ್ತು 17 ಇಂಚಿನ ಹಿಂಬದಿ ವ್ಹೀಲ್ ಸಂಯೋಜನೆಯನ್ನು ಹೊಂದಿದೆ. ಸ್ಟ್ಯಾಂಡರ್ಡ್ ಟ್ರಿಮ್ ಅಲ್ಯೂಮಿನಿಯಂ ರಿಮ್ಸ್, ಸ್ಪೋಕ್ಡ್-ವ್ಹೀಲ್, ಡ್ಯುಯಲ್-ಸ್ಪೋರ್ಟ್ ಟಯರ್ ಗಳು ಮತ್ತು ಸ್ಟ್ಯಾಂಡರ್ಡ್ ಎಂಜಿನ್ ಬ್ಯಾಷ್ ಪ್ಲೇಟ್ ಅನ್ನು ಪಡೆಯುತ್ತದೆ.

ಸಿಎಫ್‌ಮೋಟೋ ತನ್ನ ಹೊಸ 800ಎಂಟಿ ಅಡ್ವೆಂಚರ್ ಬೈಕನ್ನು ಯಾವ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸುತ್ತದೆ ಎಂಬುದು ಇನ್ನು ಬಹಿರಂಗಪಡಿಸಿಲ್ಲ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಸಿಎಫ್‌ಮೋಟೋ ಭಾರತದಲ್ಲಿ ತನ್ನ ಎರಡನೇ ಮಾದರಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಸಿಎಫ್‌ಮೋಟೋ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಎರಡನೇ ಮಾದರಿಯಾಗಿ 650ಎನ್‌ಕೆ ಬೈಕನ್ನು ಬಿಡುಗಡೆಗೊಳಿಸಲಿದೆ. ಸಿಎಫ್‌ಮೋಟೋ ತನ್ನ ಈ ಹೊಸ 650ಎನ್‌ಕೆ ಬೈಕಿನ ಟೀಸರ್ ಬಿಡುಗಡೆಗೊಳಿಸಿದೆ.

ಈ ಹೊಸ 800ಎಂಟಿ ಅಡ್ವೆಂಚರ್ ಸಿಎಫ್‌ಮೋಟೋ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಫ್ 750 ಜಿಎಸ್, ಬಿಎಂಡಬ್ಲ್ಯು ಎಫ್ 850 ಜಿಎಸ್ ಮತ್ತು ಟ್ರಯಂಫ್ ಟೈಗರ್‌ನಂತಹ ಮಧ್ಯಮ ಗಾತ್ರದ ಅಡ್ವೆಂಚರ್ ಬೈಕ್‌ಗಳಿಗೆ ಪ್ರತಿಸ್ಪರ್ದಿಯಾಗಿ ಬಿಡುಗಡೆಗೊಳಿಸಬಹುದು.


Click it and Unblock the Notifications








