ಭಾರತದಲ್ಲಿ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ಬಿಡುಗಡೆ

ಇಟಲಿ ಮೂಲದ ಜನಪ್ರಿಯ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ ಬಹುನಿರೀಕ್ಷಿತ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕಿನ ಬೆಲೆಯು ರೂ.18.99 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ ಡುಕಾಟಿ ಲ್ಟಿಸ್ಟ್ರಾಡಾ ವಿ4 ಬೈಕ್ ಬಿಡುಗಡೆ

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ವಿ4 ಮತ್ತು ವಿ4 ಎಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಬೈಕಿನ ಬೆಲೆಯ ಬಗ್ಗೆ ಹೇಳುವುದಾದರೆ, ಇದರ ವಿ4 ರೂಪಾಂತರದ ಬೆಲೆಯು ರೂ.18.99 ಲಕ್ಷಗಳಾಗಿದರೆ, ವಿ4 ಎಸ್ ರೂಪಾಂತರದ ಬೆಲೆಯು ರೂ.23.10 ಲಕ್ಷಗಳಾಗಿದೆ. ಇನ್ನು ವಿ4 ಎಸ್ ರೂಪಾಂತರದ ಏವಿಯೇಟರ್ ಗ್ರೇ ಬಣ್ಣದ ಮಾದರಿಗೆ ರೂ.23.30 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಭಾರತದಲ್ಲಿ ಹೊಸ ಡುಕಾಟಿ ಲ್ಟಿಸ್ಟ್ರಾಡಾ ವಿ4 ಬೈಕ್ ಬಿಡುಗಡೆ

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಟೂರರ್ ಬೈಕಿನಲ್ಲಿ 1,158 ಸಿಸಿ, ವಿ-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 10,500 ಆರ್‌ಪಿಎಂನಲ್ಲಿ 167 ಬಿಹೆಚ್‌ಪಿ ಪವರ್ ಮತ್ತು 8,750 ಆರ್‌ಪಿಎಂನಲ್ಲಿ 125 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಹೊಸ ಡುಕಾಟಿ ಲ್ಟಿಸ್ಟ್ರಾಡಾ ವಿ4 ಬೈಕ್ ಬಿಡುಗಡೆ

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಅಪ್ & ಡೌನ್ ಸಿಸ್ಟಂ ಅನ್ನು ಹೊಂದಿದೆ. ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ಅಲ್ಯೂಮಿನಿಯಂ ಫ್ರೇಮ್ ಎರಡು ಬದಿಯ ಸ್ವಿಂಗ್ ಆರ್ಮ್ ಅನ್ನು ಕೂಡ ಹೊಂದಿದೆ.

ಭಾರತದಲ್ಲಿ ಹೊಸ ಡುಕಾಟಿ ಲ್ಟಿಸ್ಟ್ರಾಡಾ ವಿ4 ಬೈಕ್ ಬಿಡುಗಡೆ

ಈ ಹೊಸ ಅಡ್ವೆಂಚರ್ ಟೂರರ್ ಬೈಕ್ ಆನ್‌ಬೋರ್ಡ್ ನ್ಯಾವಿಗೇಷನ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಈ ಬೈಕಿನ ನ್ಯಾವಿಗೇಷನ್ ಸಿಸ್ಟಂ ಡೈರಕ್ಷನಲ್, ಟಾರ್ಗೆಟ್ ರಿಚ್ ಆಗಲು ಉಳಿದಿರುವ ದೂರ ಮತ್ತು ಇತರ ಡೇಟಾದ ನಡುವೆ ಬರುವ ಅಂದಾಜು ಸಮಯದಂತಹ ವಿವಿಧ ಮಾಹಿತಿಗಳು ನೀಡುತ್ತದೆ.

ಭಾರತದಲ್ಲಿ ಹೊಸ ಡುಕಾಟಿ ಲ್ಟಿಸ್ಟ್ರಾಡಾ ವಿ4 ಬೈಕ್ ಬಿಡುಗಡೆ

ಹೊಸ ಡುಕಾಟಿ ಬೈಕಿನಲ್ಲಿ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ನಕಲ್ ಗಾರ್ಡ್‌ಗಳು, ಫ್ರೇಮ್ ಪ್ರೊಟೆಕ್ಟರ್‌ಗಳು, ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನ ಮೇಲಿರುವ ಜಿಪಿಎಸ್ ಮೌಂಟ್ಸ್ ಜೊತೆಗೆ 12ವಿ ಚಾರ್ಜಿಂಗ್ ಸಾಕೆಟ್, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಇಂಟಿಗ್ರೇಟೆಡ್ ರಿಯರ್ ಲಗೇಜ್ ರ್ಯಾಕ್ ಮತ್ತು ಅಪ್-ಸ್ವೀಪ್ಟ್ ಎಕ್ಸಾಸ್ಟ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ ಡುಕಾಟಿ ಲ್ಟಿಸ್ಟ್ರಾಡಾ ವಿ4 ಬೈಕ್ ಬಿಡುಗಡೆ

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಫೀಚರ್ ಸೆಟ್ಟಿಂಗ್‌ಗಳನ್ನು ತೋರಿಸುತ್ತದೆ. ಇದರೊಂದಿಗೆ ಸ್ವಿಚ್‌ಗಿಯರ್ ಫೀಚರ್ ಅನ್ನು ಕೂಡ ಒಳಗೊಂಡಿದೆ. ಇನ್ನು ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಬೈಕ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 170 ಎಂಎಂ ಟ್ರ್ಯಾವೆಲ್ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ 180 ಎಂಎಂ ಸ್ಕೈಹೂಕ್ನೊಂದಿಗೆ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಡುಕಾಟಿ ಲ್ಟಿಸ್ಟ್ರಾಡಾ ವಿ4 ಬೈಕ್ ಬಿಡುಗಡೆ

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, 20 ಎಂಎಂ ಡ್ಯುಯಲ್-ಸೆಮಿ-ಫ್ಲೋಟಿಂಗ್ ಡಿಸ್ಕ್ ಗಳ ಜೊತೆಗೆ ರೇಡಿಯಲ್ ಮೌಂಟೆಡ್ ಬ್ರೆಂಬೊ ಮೊನೊಬ್ಲೋಕ್ ಫೋರ್-ಪಿಸ್ಟನ್ ಕಾಲಿಪರ್ಸ್ ಮತ್ತು ಮುಂಭಾಗದಲ್ಲಿ ರೇಡಿಯಲ್ ಮಾಸ್ಟರ್ ಸಿಲಿಂಡರ್ ಬ್ರೇಕಿಂಗ್ ಅನ್ನು ಹೊಂದಿದ್ದರೆ, ಹಿಂಭಾಗದಲ್ಲಿ 265 ಎಂಎಂ ಡಿಸ್ಕ್ ಜೊತೆಗೆ ಬ್ರೆಂಬೊ ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಡುಕಾಟಿ ಲ್ಟಿಸ್ಟ್ರಾಡಾ ವಿ4 ಬೈಕ್ ಬಿಡುಗಡೆ

ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಿದೆ. ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಆರ್ 1250 ಜಿಎಸ್ ಮತ್ತು ಹೋಂಡಾ ಸಿಆರ್ಎಫ್ 1100 ಎಲ್ ಆಫ್ರಿಕಾ ಟ್ವಿನ್ ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Thursday, July 22, 2021, 14:03 [IST]
English summary
New Ducati Multistrada V4 Launched. Read In Kannada.
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+