ಭಾರತದಲ್ಲಿ ಹೊಸ Ducati Scrambler Desert Sled Fasthouse ಬೈಕ್ ಬಿಡುಗಡೆ

ಇಟಲಿ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಡುಕಾಟಿ ತನ್ನ ಹೊಸ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್(Scrambler Desert Sled Fasthouse) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.99 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ Ducati Scrambler Desert Sled Fasthouse ಬೈಕ್ ಬಿಡುಗಡೆ

ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್ ಮಾದರಿಯನ್ನು ವಿಶ್ವಾದ್ಯಂತ ಕೇವಲ 800 ಯೂನಿಟ್‌ಗಳಿಗೆ ಸೀಮಿತವಾಗಿದೆ. ಇದು ಲಿಮಿಟೆಡ್ ಎಡಿಷನ್ ಬೈಕ್ ಆಗಿದೆ. ಸ್ಕ್ರ್ಯಾಂಬ್ಲರ್ ಡುಕಾಟಿ ಮತ್ತು ಫಾಸ್ಟ್‌ಹೌಸ್ ಬ್ರ್ಯಾಂಡ್ ಸಹಯೋಗದಲ್ಲಿ ಇದನ್ನು ಅಭಿವೃದ್ದಿ ಪಡಿಸಲಾಗಿದೆ. ಆದರೆ ಭಾರತಕ್ಕೆ ನಿಗದಿಪಡಿಸಿದ ಈ ಸೀಮಿತ ಬೈಕ್‌ನ ಎಲ್ಲಾ ಯೂನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಡುಕಾಟಿ ಮತ್ತು ಫಾಸ್ಟ್‌ಹೌಸ್ ಒಟ್ಟಿಗೆ ಸಹಯೋಗದಲ್ಲಿ ಅಮೇರಿಕನ್ ರೈಡರ್ ಜೋರ್ಡಾನ್ ಗ್ರಹಾಂ ಮಿಂಟ್ 400 ಆಫ್-ರೋಡ್ ರೇಸ್ ನಲ್ಲಿ ಹೂಲಿಗನ್ ವಿಭಾಗವನ್ನು ಗೆದ್ದುಕೊಂಡಿತು.

ಭಾರತದಲ್ಲಿ ಹೊಸ Ducati Scrambler Desert Sled Fasthouse ಬೈಕ್ ಬಿಡುಗಡೆ

ಇದು ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರತಿಷ್ಠಿತ ಅಮೇರಿಕನ್ ಆಫ್-ರೋಡ್ ರೇಸ್ ಆಗಿದೆ, ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್ ಸಾಮಾನ್ಯ ಸ್ಕ್ರ್ಯಾಂಬಲ್ಡ್ ಸ್ಲೆಡ್ ಅನ್ನು ಆಧರಿಸಿದೆ ಮತ್ತು ಕಳೆದ ವರ್ಷ ಮಿಂಟ್ 400 ಆಫ್-ರೋಡ್ ರೇಸ್‌ನಲ್ಲಿ ಬಳಸಿದ ಬೈಕ್‌ಗಳಿಗೆ ಗೌರವವನ್ನು ನೀಡುವ ವಿಶಿಷ್ಟವಾದ ಲೈವರಿಯನ್ನು ಹೊಂದಿದೆ.

ಭಾರತದಲ್ಲಿ ಹೊಸ Ducati Scrambler Desert Sled Fasthouse ಬೈಕ್ ಬಿಡುಗಡೆ

ಬಿಡುಗಡೆಯ ಕುರಿತು ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬಿಪುಲ್ ಚಂದ್ರ ಅವರು ಮಾತನಾಡಿ, "ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಈ ವಿಭಾಗದಲ್ಲಿ ಅತ್ಯಂತ ಸಮರ್ಥವಾದ ಆಫ್ ರೋಡ್ ಬೈಕ್‌ಗಳಲ್ಲಿ ಒಂದಾಗಿದೆ ಮತ್ತು ಭಾರತದಲ್ಲಿನ ನಮ್ಮ ಗ್ರಾಹಕರು ಅದನ್ನು ಗುರುತಿಸಿದ್ದಾರೆ. ಫಾಸ್ಟ್‌ಹೌಸ್ ಸಂಪೂರ್ಣವಾಗಿ ವಿಶಿಷ್ಟವಾದ ಸ್ಕ್ರ್ಯಾಂಬ್ಲರ್ ಅನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಡೆಸರ್ಟ್ ಸ್ಲೆಡ್ ಲೈವರಿಗಳು ಮತ್ತು ಡಸರ್ಟ್ ಮಾದರಿಯಾಗಿದೆ, ಅದಕ್ಕಾಗಿಯೇ ಪ್ರಪಂಚದಲ್ಲಿ ಕೇವಲ 800 ಜನರು ಇದನ್ನು ಹೊಂದಬಹುದು. ನಾವು ನಮ್ಮ ಡೀಲರ್ ನೆಟ್‌ವರ್ಕ್‌ಗೆ ಬುಕಿಂಗ್‌ಗಳನ್ನು ತೆರೆದಾಗ, ಭಾರತೀಯ ಮಾರುಕಟ್ಟೆಯ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಯ್ತು ಎಂದು ಹೇಳಿದರು.

ಭಾರತದಲ್ಲಿ ಹೊಸ Ducati Scrambler Desert Sled Fasthouse ಬೈಕ್ ಬಿಡುಗಡೆ

ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್ ಬೈಕ್ ಲೈವರಿಯ ಮುಖ್ಯ ಬಣ್ಣಗಳು ಬ್ಲ್ಯಾಕ್ ಮತ್ತು ಬೂದು ಗ್ರೇ ಆಗಿದೆ. ಇದು ಫ್ಯೂಯಲ್ ಟ್ಯಾಂಕ್‌ನಲ್ಲಿ ಜಿಯೋಮ್ಯಾಟ್ರಿಕ್ ಆಕಾರವನ್ನು ಹೊಂದಿದೆ, ಇದು ಡುಕಾಟಿ ಸ್ಕ್ರ್ಯಾಂಬ್ಲರ್‌ನ ಜೊತೆಗೆ ಫಾಸ್ಟ್‌ಹೌಸ್ ಲೋಗೋವನ್ನು ಸಹ ಹೊಂದಿದೆ. ಈ ಬೈಕಿನ ಫ್ರೇಮ್ ರೆಡ್ ಬಣ್ಣವನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ Ducati Scrambler Desert Sled Fasthouse ಬೈಕ್ ಬಿಡುಗಡೆ

ಇನ್ನು ಈ ಬೈಕ್ ಅನ್ನ್ ವಿಶಿಷ್ಟ ಸಂಖ್ಯೆಯನ್ನು ಹೊಂದಿರುವ ಅಲ್ಯೂಮಿನಿಯಂ ಪ್ಲೇಟ್‌ನಿಂದ ಅಲಂಕರಿಸಲಾಗಿದೆ. ಡೆಸರ್ಟ್ ಸ್ಕ್ರ್ಯಾಂಬ್ಲರ್ ಸ್ಲೆಡ್‌ನ ಸೀಟ್ ಎತ್ತರವು 840 ಎಂಎಂ ಎತ್ತರದಲ್ಲಿದೆ ಮತ್ತು ರ್ಯಾಲಿ-ಪ್ರೇರಿತ ಫುಟ್‌ಪೆಗ್‌ಗಳು ತೆಗೆಯಬಹುದಾದ ರಬ್ಬರ್ ಪ್ಯಾಡ್‌ಗಳನ್ನು ಹೊಂದಿವೆ. ಎರಡೂ ಮಡ್‌ಗಾರ್ಡ್‌ಗಳಿಗೆ ಕಪ್ಪು ಬಣ್ಣ ಬಳಿಯಲಾಗಿದೆ.

ಭಾರತದಲ್ಲಿ ಹೊಸ Ducati Scrambler Desert Sled Fasthouse ಬೈಕ್ ಬಿಡುಗಡೆ

ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್ ಬೈಕಿನಲ್ಲಿ 803 ಸಿಸಿ ಎಲ್-ಟ್ವಿನ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,250 ಆರ್‌ಪಿಎಂನಲ್ಲಿ 71.8 ಬಿಹೆಚ್‍ಪಿ ಪವರ್ ಮತ್ತು 5,750 ಆರ್‌ಪಿಎಂನಲ್ಲಿ 66.2 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ನೇರ ಕಟ್ ಗೇರ್‌ಗಳು ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ Ducati Scrambler Desert Sled Fasthouse ಬೈಕ್ ಬಿಡುಗಡೆ

ಹೊಸ ಡುಕಾಟಿ ಆಪ್-ರೋಡ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 46 ಎಂಎಂ ಅಪ್ ಸೈಡ್ ಡೌನ್ ಫೋರ್ಕ್‌ಗಳೊಂದಿಗೆ ಟ್ಯೂಬ್ಯುಲರ್ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಸೆಟಪ್ ಮತ್ತು ಕಯಾಬಾ ಮೊನೊ ಶಾಕ್ ಜೊತೆಗೆ ಹಿಂಭಾಗದಲ್ಲಿ ಪ್ರಿಲೋಡ್ ಮತ್ತು ರೀಬೌಂಡ್ ಹೊಂದಾಣಿಕೆಯೊಂದಿಗೆ ಡಬಲ್ ಸೈಡೆಡ್ ಅಲ್ಯೂಮಿನಿಯಂ ಸ್ವಿಂಗಾರ್ಮ್ ಜೊತೆಗೆ 200 ಎಂಎಂ ಟ್ರ್ಯಾವೆಲ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ Ducati Scrambler Desert Sled Fasthouse ಬೈಕ್ ಬಿಡುಗಡೆ

ಇನ್ನು ಪ್ರಮುಖವಾಗಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ರೇಡಿಯಲ್ 4-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಮುಂಭಾಗದ ಚಕ್ರದಲ್ಲಿ 330 ಎಂಎಂ ಡಿಸ್ಕ್ ಬ್ರೇಕ್ ಮತ್ತು ಸಿಂಗಲ್ ಕ್ಯಾಲಿಪರ್‌ನೊಂದಿಗೆ ಹಿಂಭಾಗದಲ್ಲಿ 245 ಎಂಎಂ ಡಿಸ್ಕ್ ಬ್ರೇಕ್ ಮೂಲಕ ಬ್ರೇಕಿಂಗ್ ಅನ್ನು ಒಳಗೊಂಡಿದೆ. ಬ್ರೇಕ್‌ಗಳಿಗೆ ಬಾಷ್‌ನಿಂದ ಡ್ಯುಯಲ್-ಚಾನೆಲ್ ಎಬಿಎಸ್ ಅಸಿಸ್ಟ್ ಹೊಂದಿದೆ.

ಭಾರತದಲ್ಲಿ ಹೊಸ Ducati Scrambler Desert Sled Fasthouse ಬೈಕ್ ಬಿಡುಗಡೆ

ಮುಂಭಾಗದ ವ್ಹೀಲ್ 120/70 R19 ಟೈರ್‌ನೊಂದಿಗೆ 19-ಇಂಚಿನ ಯುನಿಟ್ ಅನ್ನು ಹೊಂದಿದೆ. ಹಿಂದಿನ ವ್ಹೀಲ್ಕ್ ಸ್ಪೋಕ್ಡ್ 17-ಇಂಚಿನ ಯುನಿಟ್ ಆಗಿದ್ದು ಅದು 170/60 R17 ಟೈರ್ ಅನ್ನು ಹೊಂದಿದೆ. ಡಸರ್ಟ್ ಸ್ಕ್ರ್ಯಾಂಬ್ಲರ್ ಸ್ಲೆಡ್‌ನಲ್ಲಿ ಬಳಸಲಾದ ಟೈರ್‌ಗಳು ಪಿರೆಲ್ಲಿಯ ಸ್ಕಾರ್ಪಿಯನ್ ರ್ಯಾಲಿ ಎಸ್‍ಟಿಆರ್ ಗಳಾಗಿವೆ.ಇದು ರೋಡ್ ಟೈರ್‌ನೊಂದಿಗೆ ಆಫ್-ರೋಡ್ ಟೈರ್‌ನ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಸಂಯೋಜಿಸುತ್ತದೆ.

ಭಾರತದಲ್ಲಿ ಹೊಸ Ducati Scrambler Desert Sled Fasthouse ಬೈಕ್ ಬಿಡುಗಡೆ

ಇದರೊಂದಿಗೆ ಡುಕಾಟಿ ತನ್ನ ಫ್ಲ್ಯಾಗ್‌ಶಿಪ್ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಟೂರರ್ ಬೈಕಿನ ಪೈಕ್ಸ್ ಪೀಕ್ ರೂಪಾಂತರವನ್ನು ಅನಾವರಣಗೊಳಿಸಿದೆ. ಇಟಾಲಿಯನ್ ಅಡ್ವೆಂಚರ್ ಟೂರರ್‌ನ ಈ ಹೊಸ ರೂಪಾಂತರವು ಸ್ಟ್ಯಾಂಡರ್ಡ್ ಮಾದರಿಗಿಂತ ಸ್ಪೋರ್ಟಿಯರ್ ಲುಕ್ ಅನ್ನು ಹೊಂದಿದೆ. ಈ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಕುಟುಂಬದ ಈ ಹೊಸದಾಗಿ ಅನಾವರಣಗೊಂಡ ರೂಪಾಂತರವು ಚಾಸಿಸ್ ಸೆಟಪ್, ಏರೋಗಾಮಿಕ್ಸ್ ಮತ್ತು ಎಲೆಕ್ಟ್ರಾನಿಕ್ ಕಂಟ್ರೋಲ್ ಗಳಿಗೆ ಅಪ್‌ಗ್ರೇಡ್‌ಗಳನ್ನು ಪಡೆಯುತ್ತದೆ. ಪೈಕ್ಸ್ ಪೀಕ್ ಆವೃತ್ತಿಯು ಸ್ಟ್ಯಾಂಡರ್ಡ್ ಬೈಕಿನಲ್ಲಿರುವ 19-ಇಂಚಿನ ಯುನಿಟ್ ವಿರುದ್ಧವಾಗಿ 17-ಇಂಚಿನ ಮುಂಭಾಗದ ವ್ಹೀಲ್ ಅನ್ನು ಬಳಸುತ್ತದೆ.

ಭಾರತದಲ್ಲಿ ಹೊಸ Ducati Scrambler Desert Sled Fasthouse ಬೈಕ್ ಬಿಡುಗಡೆ

ಇನ್ನು ಬಹುನಿರೀಕ್ಷಿತ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್ ಬೈಕ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಆದರೆ ಭಾರತದಲ್ಲಿ ಇದರ ಎಲ್ಲಾ ಯುನಿಟ್ ಗಳು ಸೋಲ್ಡ್ ಔಟ್ ಆಗಿದೆ. ಈ ಹೊಸ ಡುಕಾಟಿ ಡೆಸರ್ಟ್ ಸ್ಕ್ರ್ಯಾಂಬ್ಲರ್ ಸ್ಲೆಡ್ ಫಾಸ್ಟ್‌ಹೌಸ್ ಬೈಕ್ ಅನ್ನು ಈಗಾಗಲೇ ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಶೀಘ್ರದಲ್ಲೇ ವಿತರಿಸಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Monday, November 1, 2021, 19:03 [IST]
English summary
New ducati scrambler desert sled fasthouse launched in india price details
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+