ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ 2021ರ ಎಕ್ಸ್‌ಡಿಯಾವೆಲ್ ಬೈಕನ್ನು ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ. 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕನ್ನು ಯುರೋ5 ಮತ್ತು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಇನ್ನು ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಾಷ್-ಬ್ರೆಂಬೊ ಎಬಿಎಸ್ 9.1 ಎಂಪಿ ಕಾರ್ನರಿಂಗ್ ಬ್ರೇಕಿಂಗ್ ಸಿಸ್ಟಂ, ಟ್ರ್ಯಾಕ್ಷನ್ ಕಂಟ್ರೋಲ್, ಲಾಂಚ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಲ್ಇಡಿ ಲೈಟಿಂಗ್ ಮತ್ತು 3.5 ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕಿನಲ್ಲಿ ಟೆಸ್ಟಾಸ್ಟ್ರೆಟಾ ಡಿವಿಟಿ 1,262 ಸಿಸಿ ಎಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಯುರೋ5 ಮತ್ತು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಈ ಎಂಜಿನ್ 10,500 ಆರ್‌ಪಿಎಂನಲ್ಲಿ 167 ಬಿಹೆಚ್‌ಪಿ ಪವರ್ ಮತ್ತು 8,750 ಆರ್‌ಪಿಎಂನಲ್ಲಿ 125 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಅಪ್ & ಡೌನ್ ಸಿಸ್ಟಂ ಅನ್ನು ಹೊಂದಿದೆ. ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ಅಲ್ಯೂಮಿನಿಯಂ ಫ್ರೇಮ್ ಎರಡು ಬದಿಯ ಸ್ವಿಂಗ್ ಆರ್ಮ್ ಅನ್ನು ಕೂಡ ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಈ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದಾಗಿ ಕಂಪನಿ ಖಚಿತಪಡಿಸಿದೆ. ಆದರೆ ಡುಕಾಟಿ ಕಂಪನಿಯು ಈ ಹೊಸ ಎಕ್ಸ್‌ಡಿಯಾವೆಲ್ ಬೈಕನ್ನು ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಡುಕಾಟಿ ducati
English summary
New ducati xdiavel bike to be launch in india soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X