ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ 2021ರ ಎಕ್ಸ್‌ಡಿಯಾವೆಲ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಪರಿಚಯಿಸಲಾಗಿದೆ. ಇದೀಗ ಡುಕಾಟಿ ಕಂಪನಿಯು ಭಾರತದಲ್ಲಿ ಈ ಎಕ್ಸ್‌ಡಿಯಾವೆಲ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಡುಕಾಟಿ ಕಂಪನಿಯು 2021ರ ಎಕ್ಸ್‌ಡಿಯಾವೆಲ್ ಬೈಕನ್ನು ಇದೇ ತಿಂಗಳ 12ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕನ್ನು ಯುರೋ5 ಮತ್ತು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.ಈ 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಹೊಸ ಡಾರ್ಕ್ ಮತ್ತು ಬ್ಲ್ಯಾಕ್ ಸ್ಟಾರ್ ಎಂಬ ರೂಪಾಂತರಗಳನ್ನು ಹೊಂದಿವೆ. ಎಕ್ಸ್‌ಡಿಯಾವೆಲ್ ಬೈಕ್ ಡಾರ್ಕ್ ವೆರಿಯೆಂಟ್ ಮ್ಯಾಟ್ ಬ್ಲ್ಯಾಕ್ ಬಣ್ಣದಲ್ಲಿ ಮತ್ತು ಕ್ರೋಮ್ ಬಿಟ್‌ಗಳಿಲ್ಲದೆ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಈ ಬೇಸ್ ವೆರಿಯೆಂಟ್ ಮಾದರಿಯಲ್ಲಿ ಫ್ರೇಮ್ ಮತ್ತು ಫೋರ್ಕ್‌ಗಳಿಂದ ಬೈಕ್‌ನಲ್ಲಿರುವ ಎಲ್ಲವೂ ಬ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಈ ಹೊಸ ಎಕ್ಸ್‌ಡಿಯಾವೆಲ್ ಎಸ್ ಆವೃತ್ತಿಯಲ್ಲಿ ಡುಕಾಟಿ ಮಲ್ಟಿಮೀಡಿಯಾ ಸಿಸ್ಟಂ ಅನ್ನು ನೀಡಲಾಗಿಲ್ಲ. ಇನ್ನು ಹೊಸ ಎಕ್ಸ್‌ಡಿಯಾವೆಲ್ ಬೈಕ್ 247 ಕೆಜಿ ತೂಕವನ್ನು ಹೊಂದಿದೆ. ಎಕ್ಸ್‌ಡಿಯಾವೆಲ್ ಬೈಕ್ ತನ್ನ ಎಸ್ ಮಾದರಿಯಿಂದ ಎಂ 50 ಬ್ರೇಕ್‌ಗಳ ಬದಲಿಗೆ ಬ್ರೆಂಬೊ ಎಂ 4.32 ಕ್ಯಾಲಿಪರ್‌ಗಳನ್ನು ಎರೆವಲು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಈ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬ್ಲ್ಯಾಕ್ ಸ್ಟಾರ್ ವೆರಿಯೆಂಟ್ ತನ್ನ ಸರಣಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಬ್ಲ್ಯಾಕ್ ಸ್ಟಾರ್ ವೆರಿಯೆಂಟ್ ನಲ್ಲಿ ರೆಡ್ ಸಿಲಿಂಡರ್ ಹೆಡ್ ಕವರ್‌ಗಳನ್ನು ಒಳಗೊಂಡಂತೆ ರೆಡ್ ಬಣ್ಣದ ಮುಖ್ಯಾಂಶಗಳೊಂದಿಗೆ ಸ್ಪೋರ್ಟ್ಸ್ ಕಾರ್-ಪ್ರೇರಿತ ಗ್ರೇ ಮತ್ತು ಮ್ಯಾಟ್ ಬಣ್ಣದಿಂದ ಕೂಡಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಇನ್ನು ಬ್ಲ್ಯಾಕ್ ಸ್ಟಾರ್ ಸ್ಯೂಡ್ ಸೀಟ್ ಫ್ಯಾಬ್ರಿಕ್, ಖೋಟಾ ಅಲಾಯ್ ವ್ಹೀಲ್ಸ್ ಮತ್ತು ಬ್ರೆಂಬೊ ಎಂ 50 ಕ್ಯಾಲಿಪರ್‌ಗಳನ್ನು ಸಹ ಒಳಗೊಂಡಿದೆ. ಬ್ಲ್ಯಾಕ್ ಸ್ಟಾರ್ ವೆರಿಯೆಂಟ್ ಮಾದರಿಯು 247 ಕೆ.ಜಿ ತೂಕವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಇನ್ನು ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಾಷ್-ಬ್ರೆಂಬೊ ಎಬಿಎಸ್ 9.1 ಎಂಪಿ ಕಾರ್ನರಿಂಗ್ ಬ್ರೇಕಿಂಗ್ ಸಿಸ್ಟಂ, ಟ್ರ್ಯಾಕ್ಷನ್ ಕಂಟ್ರೋಲ್, ಲಾಂಚ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಲ್ಇಡಿ ಲೈಟಿಂಗ್ ಮತ್ತು 3.5 ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಇನ್ಫೋಟೈನ್‌ಮೆಂಟ್ ಸಿಸ್ಟಂ ನಂತರ ಫೀಚರ್ಸ್ ಗಳನ್ನು ಹೊಂದಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕಿನಲ್ಲಿ ಟೆಸ್ಟಾಸ್ಟ್ರೆಟಾ ಡಿವಿಟಿ 1,262 ಸಿಸಿ ಎಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಈ ಎಂಜಿನ್ 9,500 ಆರ್‌ಪಿಎಂನಲ್ಲಿ 158 ಬಿಹೆಚ್‌ಪಿ ಮತ್ತು 5,000 ಆರ್‌ಪಿಎಂನಲ್ಲಿ 130 ಎನ್‌ಎಮ್‌ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮಥ್ಯವನ್ನು ಹೊಂದಿದೆ. ಹಿಂದಿನ ಮಾದರಿಗಿಂತ 8 ಬಿಹೆಚ್‌ಪಿ ಪವರ್ ಹೆಚ್ಚು ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಡುಕಾಟಿ ತನ್ನ ಬಹುನಿರೀಕ್ಷಿತ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು ಈ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ವಿ4 ಮತ್ತು ವಿ4 ಎಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಅಡ್ವೆಂಚರ್ ಟೂರರ್ ಬೈಕಿನಲ್ಲಿ 1,158 ಸಿಸಿ, ವಿ-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಈ ಎಂಜಿನ್ 10,500 ಆರ್‌ಪಿಎಂನಲ್ಲಿ 167 ಬಿಹೆಚ್‌ಪಿ ಪವರ್ ಮತ್ತು 8,750 ಆರ್‌ಪಿಎಂನಲ್ಲಿ 125 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಅಪ್ & ಡೌನ್ ಸಿಸ್ಟಂ ಅನ್ನು ಹೊಂದಿದೆ. ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ಅಲ್ಯೂಮಿನಿಯಂ ಫ್ರೇಮ್ ಎರಡು ಬದಿಯ ಸ್ವಿಂಗ್ ಆರ್ಮ್ ಅನ್ನು ಒಳಗೊಂಡಿದೆ,

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಈ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಆಕರ್ಷ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನವನ್ನು ಒಳಗೊಂಡಿದೆ. ಈ ಬಹುನಿರೀಕ್ಷಿತ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಇದೇ ತಿಂಗಳ 12ರಂದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

More from DriveSpark

Article Published On: Tuesday, August 10, 2021, 19:57 [IST]
English summary
New ducati xdiavel launch details two variants
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+