ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್

ಹೀರೋ ಮೊಟೊಕಾರ್ಪ್ ಕಂಪನಿಯು ಶೀಘ್ರದಲ್ಲೇ ತನ್ನ ಹೊಸ ಗ್ಲ್ಯಾಮರ್ ಎಕ್ಸ್‌ಟೆಕ್ ಎಂಬ ಬೈಕನ್ನು ಬಿಡುಗಡೆಗೊಳಿಸಲಿದೆ. ಈ ಹೊಸ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಮುನ್ನವೇ ಇದರ ಮಾಹಿತಿಗಳು ಬಹಿರಂಗವಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್

ಹೊಸ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್ ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ಹಲವಾರು ಅತ್ಯುತ್ತಮ ಫೀಚರ್ಸ್ ಗಳನ್ನು ಪಡೆಯಲಿದೆ. ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್ ನವೀಕರಿಸಿದ ಗ್ರಾಫಿಕ್ಸ್, ಹೊಸ ಬಣ್ಣಗಳ ಆಯ್ಕೆ, ವಿನ್ಯಾಸ ಮಾಹಿತಿಗಳು ಸೋರಿಕೆಯಾದ ಚಿತ್ರಗಳಿಂದ ಬಹಿರಂಗವಾಗಿದೆ. ಈ ಹೊಸ ಹೀರೋ ಬೈಕಿನಲ್ಲಿ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ನೀಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್

ಹೊಸ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್ ಅನ್ನು ಸ್ಮಾರ್ಟ್ ಫೋನ್ ಅಪ್ಲಿಕೇಶನ್‌ಗೆ ಜೋಡಿಸಲು ಕನ್ಸೋಲ್ ಬ್ಲೂಟೂತ್ ಕನೆಕ್ಟಿವಿಟಿಯನ್ನು ನೀಡಿದೆ. ಈ ರೀತಿಯಲ್ಲಿ ಅಪ್ಲಿಕೇಶನ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಬಳಕೆದಾರರಿಗೆ ಡೇಟಾ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಒದಗಿಸುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್

ಈ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್ ಟೆಕ್ನೋ ಬ್ಲ್ಯಾಕ್, ಗ್ಲ್ಯಾಮರ್ ಗ್ರೇ ಬ್ಲೂ ಮತ್ತು ಗ್ಲ್ಯಾಮರ್ ಗ್ರೇ ರೆಡ್ ಎಂಬ ಬಣ್ಣಗಳ ಆಯ್ಕೆಗಳನ್ನು ಕೂಡ ಪಡೆಯುತ್ತದೆ. ಇನ್ನು ಈ ಬೈಕ್ ಕೆಲವು ಸೂಕ್ಷ್ಮ ಗ್ರಾಫಿಕ್ಸ್ ಅನ್ನು ಒಳಗೊಂಡಿರುತ್ತವೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್

ಈ ಹೊಸ ಬೈಕ್ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಹೊರತಾಗಿ, ಎಂಜಿನ್‌ನಲ್ಲಿ ಮಾಡಿದ ಒಂದೆರಡು ಬದಲಾವಣೆಗಳ ಬಗ್ಗೆ ಮಾಹಿತಿಗಳು ಬಹಿರಂಗವಾಗಿದೆ. ಈ ಹೊಸ ಬೈಕಿನಲ್ಲಿ ಗ್ಲ್ಯಾಮರ್ ಮಾದರಿಯಲ್ಲಿರುವ ಅದೇ 124.7 ಸಿಸಿ ಎಂಜಿನ್‌ ಅನ್ನು ಅಳವಡಿಸಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್

ಹೊಸ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಗ್ಲ್ಯಾಮರ್ ಬೈಕಿನಲ್ಲಿ ಒಟ್ಟಾರೆ ಮೈಲೇಜ್ ಅನ್ನು ಶೇ.ರಷ್ಟು ಸುಧಾರಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಎಂಜಿನ್ ನೊಂದಿಗೆ 5-ಸ್ಫೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್

ಹೊಸ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕಿನ ಹೆಚ್ಚಿನ ಮಾಹಿತಿಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಬಹುದು. ಉಳಿದಂತೆ ತಾಂತ್ರಿಕ ಅಂಶಗಳನ್ನು ಸ್ಟ್ಯಾಂಡರ್ಡ್ ಗ್ಲ್ಯಾಮರ್ ಬೈಕ್ ನಿಂದ ಎರವಲು ಪಡೆಯಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್

ಹೀರೋ ಗ್ಲ್ಯಾಮರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಟ್ವಿನ್ ಶಾಕ್ ಅಬ್ಸಾರ್ಬರ್ ಗಳನ್ನು ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್

ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಇನ್ನು ಹೊಸ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್ ಆಕರ್ಷಕ ವಿನ್ಯಾಸ ಮತ್ತು ಹೊಸ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಲಿದೆ.

Source: Autoverse_IND

Article Published On: Wednesday, June 16, 2021, 14:37 [IST]
English summary
Hero Glamour XTEC Design Features Leaked Ahead Of India Launch. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+