ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Hero Pleasure Plus XTEC, Maestro ಸ್ಕೂಟರ್‌ಗಳು

ಈ ವರ್ಷದ ಹಬ್ಬದ ಸೀಸನ್ ಪ್ರಾರಂಭವಾಗವ ಮುನ್ನವೇ ಹೀರೋ ಮೋಟೋಕಾರ್ಪ್ ಭಾರತದಲ್ಲಿ ಹೊಸ ಮತ್ತು ನವೀಕರಿಸಿದ ಮಾದರಿಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಹೀರೋ ಮೋಟೋಕಾರ್ಪ್ ತನ್ನ ಎಕ್ಸ್‌ಪಲ್ಸ್ 200 4ವಿ, ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್‌ ಮತ್ತು ಎಕ್ಸ್‌ಟ್ರಿಮ್ 200 4ವಿ ನಂತಹ ಮಾದರಿಗಳನ್ನು ಒಳಗೊಂಡಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Hero Pleasure Plus XTEC, Maestro ಸ್ಕೂಟರ್‌ಗಳು

ಇವುಗಳ ಬಿಡುಗಡೆಗೆ ಮುಂಚಿತವಾಗಿ, ಹೀರೋ ಮೋಟೋಕಾರ್ಪ್ ಈಗ ಹೊಸ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್‌(Hero Pleasure Plus XTEC) ಸ್ಕೂಟರ್‌ ಅಧಿಕೃತ ಬಿಡುಗಡೆ ಟೀಸರ್ ವೀಡಿಯೊವನ್ನು ಹಂಚಿಕೊಂಡಿದೆ. ಇದಲ್ಲದೇ, ಹೀರೋ ಮೋಟೋಕಾರ್ಪ್ ತನ್ನ ಮೇಸ್ಟ್ರೋ ಎಡ್ಜ್ 125 ಮಾದರಿಯ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ, ಇದು ಕಂಪನಿಯ ಇನ್-ಬಿಲ್ಟ್ ಟೆಲಿಮ್ಯಾಟಿಕ್ಸ್ ಹೀರೋ ಕನೆಕ್ಟ್ ಅನ್ನು ಪಡೆಯುತ್ತದೆ.ಈ ಕಾರ್ಯವನ್ನು ಮೇಲೆ ತಿಳಿಸಿದ ಮಾದರಿಗಳಲ್ಲಿ ಕಂಪನಿಯಿಂದ ಅಳವಡಿಸಲಾಗಿರುವ ಫೀಚರ್ ಆಗಿ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Hero Pleasure Plus XTEC, Maestro ಸ್ಕೂಟರ್‌ಗಳು

ಹೀರೋ ಕನೆಕ್ಟ್ ಅಪ್ಲಿಕೇಶನ್ ಹೊಂದಿರುವ ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರು ಅದರ ಆನ್-ರೋಡ್ ಬೆಲೆಗೆ ಹೆಚ್ಚುವರಿಯಾಗಿ ರೂ.4,999 ಪಾವತಿಸಬೇಕಾಗುತ್ತದೆ. ಹೀರೋ ಕನೆಕ್ಟ್ ಅಪ್ಲಿಕೇಶನ್ ಟಾಪಲ್ ಅಲರ್ಟ್, ಟ್ರಿಪ್ ಅನಾಲಿಸಿಸ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟೌ ಅಲರ್ಟ್, ಜಿಯೋ-ಫೆನ್ಸ್ ಅಲರ್ಟ್, ಹೀರೋ ಲೊಕೇಟ್, ಸ್ಪೀಡ್ ಅಲರ್ಟ್ ಮುಂತಾದ ಫೀಚರ್ ಗಳನ್ನು ಒಳಗೊಂಡಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Hero Pleasure Plus XTEC, Maestro ಸ್ಕೂಟರ್‌ಗಳು

ಹೀರೋ ಕನೆಕ್ಟ್ ಫೀಚರ್ ಡೆಸ್ಟಿನಿ 125, ಎಕ್ಟ್ರೀಮ್ 160ಆರ್, ಎಕ್ಸ್‌ಪಲ್ಸ್ 200, ಪ್ಲೆಷರ್ ಪ್ಲಸ್ ಮತ್ತು ಪ್ಲೆಷರ್ ಪ್ಲಸ್ ಪ್ಲಾಟಿನಂ ಮಾದರಿಗಳಲ್ಲಿಯು ಲಭ್ಯವಿದೆ. ಈ ಹೀರೋ ಕನೆಕ್ಟ್ ಫೀಚರ್ ಹೆಚ್ಚು ಉಪಯುಕ್ತ ಫೀಚರ್ ಆಗಿದೆ. ಈ ಪೀಚರ್ ಮೂಲಕ ತಮ್ಮ ವಾಹನವನ್ನು ಉತ್ತಮವಾಗಿ ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ, ಇದರ ಪರಿಣಾಮವಾಗಿ ಮಾಲೀಕತ್ವದ ಅನುಭವ ಸುಲಭವಾಗುತ್ತದೆ. ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್‌ ನ ಹೊಸ ಟೀಸರ್ ವೀಡಿಯೊವನ್ನು ಕೆಳಗೆ ನೀಡಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Hero Pleasure Plus XTEC, Maestro ಸ್ಕೂಟರ್‌ಗಳು

ಇತ್ತೀಚಿನ ಸ್ಪೈ ಚಿತ್ರಗಳಲ್ಲಿ ಪ್ಲೆಷರ್ ಪ್ಲಸ್ ಎಕ್ಸ್ಟೆಕ್ ಸ್ಕೂಟರ್ ಯಾವುದೇ ದೃಶ್ಯ ಬದಲಾವಣೆಗಳನ್ನು ಕಾಣುವುದಿಲ್ಲ. ಇದರ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯೂ ಇಲ್ಲ. ಈ ಚಿತ್ರಗಳಲ್ಲಿ ಕಾಣುವ ಮೂಲಮಾದರಿಯು ಪ್ರಿಸ್ಮಾಟಿಕ್ ಹಳದಿ ಬಣ್ಣದ ಸ್ಕೀಮ್ ಮುಂಭಾಗದ ಏಪ್ರನ್ ಮೇಲೆ ಕಪ್ಪು ಬಣ್ಣದ ಛಾಯೆಗಳನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Hero Pleasure Plus XTEC, Maestro ಸ್ಕೂಟರ್‌ಗಳು

ಹೀರೋ ಪ್ಲೆಷರ್ ಪ್ಲಸ್ ಸ್ಕೂಟರ್‌ನಲ್ಲಿ 110 ಸಿಸಿಯ ಎಕ್ಸ್ ಸೆನ್ಸ್ ಟೆಕ್ನಾಲಜಿಯನ್ನು ಹೊಂದಿರುವ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8.04 ಬಿಹೆಚ್‌ಪಿ ಪವರ್ ಹಾಗೂ 8.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಿಂದಿನ ಬಿ‍ಎಸ್ 4 ಎಂಜಿನ್ ಹೊಂದಿರುವ ಸ್ಕೂಟರ್‍‍ಗಳಿಗೆ ಹೋಲಿಸಿದರೆ ಬಿ‍ಎಸ್ 6 ಎಂಜಿನ್‍‍ನ ಹೊಸ ಸ್ಕೂಟರ್ 10% ಹೆಚ್ಚು ಫ್ಯೂಯಲ್ ಎಫಿಶಿಯನ್ಸಿಯನ್ನು ಹೊಂದುವುದರ ಜೊತೆಗೆ 10% ಹೆಚ್ಚು ಆಕ್ಸೆಲರೇಷನ್ ನೀಡುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Hero Pleasure Plus XTEC, Maestro ಸ್ಕೂಟರ್‌ಗಳು

ಈ ಹೀರೋ ಪ್ಲೆಷರ್ ಪ್ಲಸ್ ಸ್ಕೂಟರ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌, ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಅನಲಾಗ್ ಸ್ಪೀಡೋಮೀಟರ್, ಡ್ಯುಯಲ್-ಎಕ್ಸಾಸ್ಟ್ ಸೀಟ್, ಎಲ್ಇಡಿ ಬೂಟ್ ಲ್ಯಾಂಪ್‌ ಹಾಗೂ ಟ್ಯೂಬ್‌ಲೆಸ್ ಟಯರ್‌ಗಳನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Hero Pleasure Plus XTEC, Maestro ಸ್ಕೂಟರ್‌ಗಳು

ಸದ್ಯ ಸ್ಕೂಟರ್ ಅನ್ನು ಸ್ಟೀಲ್ ವ್ಹೀಲ್ ಹಾಗೂ ಅಲಾಯ್ ವ್ಹೀಲ್ ಎಂಬ ಎರಡು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿವೆ. ಈ ಸ್ಕೂಟರ್ ಗ್ಲಾಸಿ ಬ್ಲಾಕ್, ಗ್ಲಾಸಿ ಬ್ಲೂ, ಗ್ಲಾಸ್ ರೆಡ್, ಗ್ಲಾಸಿ ವೈಟ್, ಮ್ಯಾಟ್ ಆಕ್ಸಿಸ್ ಗ್ರೇ, ಮ್ಯಾಟ್ ಗ್ರೀನ್ ಹಾಗೂ ಮ್ಯಾಟ್ ರೆಡ್ ಎಂಬ ಏಳು ಬಣ್ಣಗಳಲ್ಲಿ ಲಭ್ಯವಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Hero Pleasure Plus XTEC, Maestro ಸ್ಕೂಟರ್‌ಗಳು

ಆಯಾಮಗಳ ಪ್ರಕಾರ, ಹೀರೋ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ 1,843 ಎಂಎಂ ಉದ್ದ 718 ಎಂಎಂ ಅಗಲ ಮತ್ತು 1,139 ಎಂಎಂ ಎತ್ತರವನ್ನು ಹೊಂದಿರುತ್ತದೆ. ಸ್ಕೂಟರ್‌ನ ವೀಲ್‌ಬೇಸ್ 1,261 ಎಂಎಂ ಅಳತೆಯಾಗಿದ್ದು, ಇದು 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ಇನ್ನು ಈ ಸ್ಕೂಟರ್ 5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ನೀಡುತ್ತದೆ. ಮ್ಯಾಸ್ಟ್ರೊ ಎಡ್ಜ್ ಅನ್ನು ಹೆಚ್ಚಿನ ಸಂಖ್ಯೆಯ ಬಣ್ಣದ ಆಯ್ಕೆಗಳೊಂದಿಗೆ ನೀಡಲಾಗುತ್ತದೆ, ಅವುಗಳಲ್ಲಿ ಕೆಲವು ಮೋಜಿನ ಡಿಕಲ್ಸ್ ಮತ್ತು ಬಾಡಿ ಗ್ರಾಫಿಕ್ಸ್ ಅನ್ನು ಒಳಗೊಂಡಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Hero Pleasure Plus XTEC, Maestro ಸ್ಕೂಟರ್‌ಗಳು

ಸ್ಕೂಟರ್‌ನಲ್ಲಿ 124.6 ಸಿಸಿಯ ಏರ್-ಕೂಲ್ಡ್, 4-ಸ್ಟ್ರೋಕ್ ಎಸ್‌ಐ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 10.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ 11%ನಷ್ಟು ಹೆಚ್ಚು ಇಂಧನ ಉಳಿತಾಯ ಹಾಗೂ 10%ನಷ್ಟು ಆಕ್ಸೆಲರೇಷನ್ ಒದಗಿಸುತ್ತದೆ ಎಂದು ಹೀರೋ ಮೋಟೊಕಾರ್ಪ್ ಹೇಳಿದೆ.

ಹೀರೋ ಮೋಟೊಕಾರ್ಪ್ ಕಂಪನಿಯ ಐ3 ಎಸ್ ತಂತ್ರಜ್ಞಾನವನ್ನು ಈ ಸ್ಕೂಟರ್‌ನಲ್ಲಿ ಅಳವಡಿಸಲಾಗಿದೆ. ಮೆಸ್ಟ್ರೋ 125 ಸ್ಕೂಟರಿನಲ್ಲಿ ಹೊಸ ಎಲ್ಇಡಿ ಇಂಡಿಕೇಟರ್‍‍ಗಳನ್ನು ಅಳವಡಿಸಲಾಗಿದೆ. ಮೆಸ್ಟ್ರೋ ಎಡ್ಜ್ 125 ಸ್ಕೂಟರ್ ಅಲಾಯ್ ವ್ಹೀಲ್ ಹಾಗೂ ಡ್ರಮ್ ಬ್ರೇಕ್ ರೂಪಾಂತರಗಳಲ್ಲಿ ಲಭ್ಯವಿದೆ,

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Hero Pleasure Plus XTEC, Maestro ಸ್ಕೂಟರ್‌ಗಳು

ಇನ್ನು ಹೀರೋ ಮೋಟೋಕಾರ್ಪ್ ತನ್ನ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್‌ ಮತ್ತು ನವೀಕರಿಸಿದ ಹೀರೋ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು. ಈ ಹೊಸ ಸ್ಕೂಟರ್ ಗಳು ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಸಹಕಾರಿಯಾಗಿರುತ್ತದೆ.

Most Read Articles

Kannada
English summary
New hero pleasure plus xtec and maestro edge launch soon teased officially details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X