ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹಸ್ಕ್ವರ್ನಾ
ಸ್ವೀಡಿಷ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಸ್ಕ್ವರ್ನಾ ತನ್ನ ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಹಸ್ಕ್ವರ್ನಾ ಎಲೆಕ್ಟ್ರಿಕ್ ಬೈಕಿನ ಕಾನ್ಸೆಪ್ಟ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಭಾರತದಲ್ಲಿ ಮಾರಾಟವಾಗುವ 250ಸಿಸಿಯ ವಿಟ್‌ಪಿಲೆನ್ ಮತ್ತು ಸ್ವಾರ್ಟ್‌ಪಿಲೆನ್ ಮಾದರಿಗಳನ್ನು ಹೋಲುತ್ತದೆ. ಇ-ಪಿಲೆನ್ ಆಲ್-ಎಲೆಕ್ಟ್ರಿಕ್ ಆಗಿದ್ದು, ಮತ್ತು ಇದು ಮೂಲ ಸಂಸ್ಥೆ ಪಿಯರೆರ್ ಮೊಬಿಲಿಟಿ ಮತ್ತು ಭಾರತದ ಬಜಾಜ್ ಆಟೋ ಕಂಪನಿಗಳ ಮಾದರಿಯಾಗಿದೆ. ಇ-ಪಿಲೆನ್ ಹಸ್ಕ್ವರ್ನಾದ ಮೊದಲ ಎಲೆಕ್ಟ್ರಿಕ್ ಕಾನ್ಸೆಪ್ಟ್ ಆಗಿರಬಹುದು.

ಈ ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಶೀಘ್ರದಲ್ಲೇ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಬಹುದು. ಇದನ್ನು ಮೊದಲು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಬಹುದು. ಸಾಮಾನ್ಯ 48-ವೋಲ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಭವಿಷ್ಯದಲ್ಲಿ ವಿವಿಧ ರೀತಿಯ ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡುಬಹುದು.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಹೊಸ ಹಸ್ಕ್ವರ್ನಾ ಎಲೆಕ್ಟ್ರಿಕ್ ಬೈಕನ್ನು ಭಾರತೀಯ ಮಾರುಕಟ್ಟೆಗಾಗಿ ಬಜಾಜ್ ಆಟೋ ಘಟಕದಲ್ಲಿ ಉತ್ಪಾದಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹಸ್ಕ್ವರ್ನಾ ಕಂಪನಿಯ ಪ್ರಕಾರ, ಇ-ಪಿಲೆನ್ ಎಲೆಕ್ಟ್ರಿಕ್ ಬೈಕಿನಲ್ಲಿ 8 ಕಿ.ವ್ಯಾಟ್ ಮೋಟಾರ್ ಅನ್ನು ಅಳವಡಿಸಲಾಗುತ್ತದೆ.

ಈ ಮೋಟಾರ್ 10.73 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಬೈಕನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 100 ಕಿ.ಮೀ.ವರೆಗೆ ಚಲಿಸುತ್ತದೆ. ಕೆಟಿಎಂ, ಹೋಂಡಾ, ಯಮಹಾ ಮತ್ತು ಪಿಯಾಜಿಯೊ ನಡುವಿನ ಒಕ್ಕೂಟದ ಮೂಲಕ ಸ್ವ್ಯಾಪ್ ಮಾಡಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಬಹುದು.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹಸ್ಕ್ವರ್ನಾ ಎಲೆಕ್ಟ್ರಿಕ್ ಬೈಕಿನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡಬ್ಲ್ಯುಪಿ ಅಪೆಕ್ಸ್ ಸಸ್ಪೆಂಕ್ಷನ್ ಅನ್ನು ಪಡೆಯುತ್ತದೆ. ಫ್ರೇಮ್ ಮತ್ತು ಸ್ವಿಂಗಾರ್ಮ್ ಅನ್ನು ಮುಂದಿನ ತಲೆಮಾರಿನ ಕೆಟಿಎಂ 125, 250 ಮತ್ತು 390 ಡ್ಯೂಕ್ ಮಾದರಿಗಳೊಂದಿಗೆ ಹಂಚಿಕೊಳ್ಳಬಹುದು,

ಇನ್ನು ಹಸ್ಕ್ವರ್ನಾ ತನ್ನ ಸ್ವಾರ್ಟ್‍ಪಿಲೆನ್ 125 ಬೈಕನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125 ಬೈಕ್ ಕೆಟಿಎಂ 125 ಡ್ಯೂಕ್ ಮಾದರಿಯನ್ನು ಆಧರಿಸಿದೆ. ಈ ಹೊಸ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125 ಬೈಕನ್ನು ಪುಣೆಯಲ್ಲಿರುವ ಬಜಾಜ್ ಆಟೋ ಕಂಪನಿಯ ಚಕನ್ ಉತ್ಪಾದನಾ ಕೇಂದ್ರದಲ್ಲಿ ಉತ್ಪಾದಿಸಲಾಗುತ್ತದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹಸ್ಕ್ವರ್ನಾ ಬೈಕ್‌ಗಳು ವಿಭಿನ್ನ ಸ್ಟೈಲಿಂಗ್ ಮತ್ತು ಅಗ್ರೇಸಿವ್ ಲುಕ್ ಹೆಚ್ಚಾಗಿ ಯುವಜನತೆಯನ್ನು ಸೆಳೆಯುವಂತಿದೆ, ಬ್ರ್ಯಾಂಡ್ ಹೆಚ್ಚು ಯುವ ಗ್ರಾಹಕರನ್ನು ಗುರಿಯಾಗಿಸಿ ಬೈಕ್ ಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ.

ಇನ್ನು ಈ ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕನ್ನು ಬಾರತೀಯ ಮಾರುಕಟ್ಟೆಯಲ್ಲಿಯು ಕೂಡ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹಸ್ಕ್ವರ್ನಾ ಮಾತ್ರವಲ್ಲ ಕೆಟಿಎಂ ಮತ್ತು ಬಜಾಜ್ ಸಹ ಭಾರತದಲ್ಲಿ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಬಹುದು.


Click it and Unblock the Notifications








