2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಟ್ರಯಂಫ್ ಕಂಪನಿಯು ಈ ಹೊಸ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕಿನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ.

2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಇದೇ ತಿಂಗಳ 28 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇನ್ನು ಟ್ರಯಂಫ್ ಕಂಪನಿಯು ಈ ಹೊಸ ಐಷಾರಾಮಿ ಬೈಕನ್ನು ಜಾಗತಿಕವಾಗಿ ಇದೇ ತಿಂಗಳ 26ರಂದು ಪರಿಚಯಿಸಲಿದೆ. ಇತ್ತೀಚೆಗೆ ಬ್ರಿಟಿಷ್ ಬ್ರ್ಯಾಂಡ್ ಟ್ರಯಂಫ್ ಈ ಹೊಸ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕಿನ ಟೀಸರ್ ಚಿತ್ರಗಳನ್ನು ಬಿಡುಗಡೆಗೊಳಿಸಿತ್ತು.

2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಬಿಡುಗಡೆಗೊಳಿಸಿದ ಟೀಸರ್ ಚಿತ್ರದಲ್ಲಿ, ಹೊಸ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ತನ್ನ ತನ್ನ ಒಡಹುಟ್ಟಿದವರಾದ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ನಲ್ಲಿ ಕಂಡುಬರುವಂತಹ ಎಲ್ಇಡಿ ಡಿಆರ್ಎಲ್ ಗಳಂತೆ ಹೆಡ್ ಲ್ಯಾಂಪ್ ವಿನ್ಯಾಸವನ್ನು ಹೊಂದಿರುವ ಅಂತಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಟೀಸರ್ ಚಿತ್ರಗಳಲ್ಲಿ ಮುಂಭಾಗದಲ್ಲಿ ಗೋಲ್ಡನ್ ಫೋರ್ಕ್ಸ್ ಮತ್ತು 'ಟ್ರಯಂಫ್' ಲೋಗೋನೊಂದಿಗೆ ಕಾರ್ಬನ್-ಫೈಬರ್ ಫೆಂಡರ್ ಅನ್ನು ಸಹ ಬಹಿರಂಗಪಡಿಸಿದೆ. ಇದರೊಂದಿಗೆ ಹೊಸ ಎಂ-ಆಕಾರದ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಫ್ಯೂಯಲ್ ಟ್ಯಾಂಕ್‌ನಲ್ಲಿ ಕಾಣುವ 'ಆರ್‍ಎಸ್' ಗ್ರಾಫಿಕ್ಸ್ ಅನ್ನು ಸಹ ಬಹಿರಂಗಪಡಿಸಲಾಗಿದೆ.

2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಕಂಪನಿಯು ಹೊಸ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕಿನ ಟೀಸರ್ ವೀಡಿಯೋವನ್ನು ಕೂಡ ಬಿಡುಗಡೆಗೊಳಿಸಲಾಗಿತ್ತು. ಈ ವೀಡಿಯೋದಲ್ಲಿ ಬೈಕಿನ ಶಬ್ದವನ್ನು ಕೇಳಿಸಿದ್ದಾರೆ. ರೇಸಿಂಗ್ ಬೈಕ್ ಮಾದರಿಯ ಶಬ್ದವನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಎಕ್ಸಾಸ್ಟ್ ನೋಟ್ ಗಮನಾರ್ಹವಾಗಿ ವಿಭಿನ್ನವಾಗಿದೆ. ಹೊಸ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕಿನಲ್ಲಿ 1200ಸಿಸಿ ಇನ್-ಲೈನ್ ಮೂರು-ಸಿಲಿಂಡರ್ ಎಂಜಿನ್ ಅನ್ನು ಪಡೆಯಬಹುದು. ಹೊಸ ಎಂಜಿನ್ 150 ಬಿಎಚ್‍ಪಿ ಪವರ್ ಅನ್ನು ಉತ್ಪಾದಿಸಬಹುದು ಎಂದು ನಿರೀಕ್ಷಿಸುತ್ತೇವೆ.

2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು 2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕಿನ ಎಂಜಿನ್ ಜಾಗತಿಕ ಮಾರುಕಟ್ಟೆಯಲ್ಲಿ ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿರುತ್ತದೆ. ಇನ್ನು ಭಾರತದಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿರುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಹೊಸ ಸ್ಪೀಡ್ ಟ್ರಿಪಲ್ ಎಬಿಎಸ್, ವ್ಹೀಲಿ ಮತ್ತು ಸ್ಲೈಡ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ವಿವಿಧ ರೈಡಿಂಗ್ ಮೋಡ್ ಗಳನ್ನು ಒಳಗೊಂಡಿರುತ್ತದೆ.

2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಈ ಹೊಸ ಟ್ರಯಂಫ್ ಬೈಕ್ ಪುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯಬಹುದು. ಇನ್ನು ಈ ಹೊಸ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕಿನಲ್ಲಿ ಹೊಸ ಹಗುರವಾದ ಫ್ರೇಮ್, ಹಗುರವಾದ ಎಂಜಿನ್ ಮತ್ತು ಹಗುರವಾದ ಯುನಿಟ್ ಗಳನ್ನು ಅಳವಡಿಸಿ ಒಟ್ಟು ತೂಕವನ್ನು ಕಡಿಮೆ ಮಾಡಬಹುದು ಎಂದು ನಿರೀಕ್ಷಿಸುತ್ತೇವೆ.

Article Published On: Thursday, January 21, 2021, 19:20 [IST]
English summary
2021 Triumph Speed Triple 1200 RS India Launch Date Revealed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+