2021ರ ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಟೀಸರ್ ಬಿಡುಗಡೆ

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ಜನಪ್ರಿಯ ಜಿಎಸ್‌ಎಕ್ಸ್ ಎಸ್1000 ಬೈಕನ್ನು ನವೀಕರಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ನೇಕೆಡ್ ಲೀಟರ್-ಕ್ಲಾಸ್ ಸ್ಟ್ರೀಟ್‌ಫೈಟರ್ ಮಾದರಿಯ ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಹಲವು ಹೊಸ ನವೀಕರಣಗಳೊಂದಿಗೆ ಬರಲಿದೆ.

2021ರ ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಟೀಸರ್ ಬಿಡುಗಡೆ

ಇದೀಗ ಸುಜುಕಿ ತನ್ನ ಈ ಜಿಎಸ್‌ಎಕ್ಸ್ ಎಸ್1000 ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ 2015 ದಿಂದ ಮಾರಾಟದಲ್ಲಿದೆ ಆದರೆ ಇದುವರೆಗೂ ಯಾವುದೇ ಪ್ರಮುಖ ನವೀಕರಣಗಳನ್ನು ಸ್ವೀಕರಿಸಿಲ್ಲ. ಆದರೆ ಈ ಬಾರಿ ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಪ್ರಮುಖ ನವೀಕರಣಗಳೊಂದಿಗೆ ಇದೇ ತಿಂಗಳ 26 ರಂದು ಜಾಗತಿಕ ಮಟ್ಟದಲ್ಲಿ ಅನಾವರಣವಾಗಲಿದೆ.

2021ರ ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಟೀಸರ್ ಬಿಡುಗಡೆ

ಇನ್ನು ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಕೇವಲ ವಿನ್ಯಾಸದಲ್ಲಿ ಮಾತ್ರವಲ್ಲದೇ ಕಾರ್ಯಕ್ಷಮತೆ ವಿಭಾಗದಲ್ಲೂ ಬದಲಾವಣೆಗಳಿರುತ್ತದೆ. ಈ ಹೊಸ ಸುಜುಕಿ ನೇಕೆಡ್ ಲೀಟರ್-ಕ್ಲಾಸ್ ಸ್ಟ್ರೀಟ್‌ಫೈಟರ್ ಸ್ಟೈಲಿಂಗ್ ಬದಲಾವಣೆಗಳ ಕುರಿತು ಹೇಳುವುದಾದರೆ, ಇದು ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಜೊತೆಗೆ ಹೊಸ ಅಗ್ರೇಸಿವ್ ಹೆಡ್‌ಲೈಟ್ ಅನ್ನು ಪಡೆದುಕೊಂಡಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

2021ರ ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಟೀಸರ್ ಬಿಡುಗಡೆ

ಇನ್ನು ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಎರೋಡೈನಾಮಿಕ್ ಗುಣಮಟ್ಟವನ್ನು ಹೆಚ್ಚಿಸಲು ಸಂಯೋಜಿಸಲಾಗಿರುವ ಫ್ಯೂಯಲ್ ಟ್ಯಾಂಕ್‌ನಿಂದ ವ್ಹೀಂಗ್ ಗಳನ್ನು ವಿಸ್ತರಿಸುವುದು ಅತ್ಯಂತ ಗಮನಾರ್ಹ ಅಂಶವಾಗಿದೆ.

2021ರ ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಟೀಸರ್ ಬಿಡುಗಡೆ

ಉಳಿದಂತೆ ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕಿನ ಸ್ಟೈಲಿಂಗ್ ನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳು ಇಲ್ಲ.ಈ ಲೀಟರ್-ಕ್ಲಾಸ್ ನೇಕೆಡ್ ಸ್ಟ್ರೀಟ್‌ಫೈಟರ್ ಬೈಕ್ ರೈಡರ್-ಫೋಕಸ್ಡ್ ಎಲೆಕ್ಟ್ರಾನಿಕ್ ಏಡ್ಸ್ ಅನ್ನು ಹೊಂದಿರಲಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

2021ರ ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಟೀಸರ್ ಬಿಡುಗಡೆ

ಇನ್ನು ಇದರೊಂದಿಗೆ ಕಾರ್ನರಿಂಗ್ ಎಬಿಎಸ್, ಆಂಟಿ-ವ್ಹೀಲಿ ಫಂಕ್ಷನ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ನಂತಹ ಸುರಕ್ಷತೆ-ಸಂಬಂಧಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇನ್ನು ಈ ಬೈಕ್ ಕ್ವೀಕ್ -ಶಿಫ್ಟರ್ ಸಹ ಹೊಂದಿರಬಹುದು.

2021ರ ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಟೀಸರ್ ಬಿಡುಗಡೆ

ಹೊಸ ವಿ-ಸ್ಟ್ರೋಮ್ 1050 ಮತ್ತು ಹಯಾಬುಸಾ ಬೈಕ್ ಗಳಂತೆ ಈ ಹೊಸ ಬೈಕ್ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿರುತ್ತದೆ. ಸುಜುಕಿ ಜಿಎಸ್‌ಎಕ್ಸ್ ಎಸ್1000 ಭಾರತದಲ್ಲಿ ಮಾರಾಟವಾಗುತ್ತಿತ್ತು ನಂತರ ಸ್ಥಗಿತಗೊಳಿಸಿತು. ಮತ್ತೊಮ್ಮೆ ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲಾಗುತ್ತದೆ ಎಂದು ನಿರೀಕ್ಷಿಸುತ್ತೇವೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

2021ರ ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಟೀಸರ್ ಬಿಡುಗಡೆ

ಇನ್ನು 2021ರ ಸುಜುಕಿ ಹಯಾಬುಸಾ ಸೂಪರ್ ಬೈಕ್ ಇದೇ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಸುಜುಕಿ ಮೋಟಾರ್‌ಸೈಕಲ್‌ ಕಂಪನಿಯು ಖಚಿತಪಡಿಸಿದೆ. ಇದರ ಬಿಡುಗಡೆ ದಿನಾಂಕ ಮತ್ತು ಇತರ ಬುಕ್ಕಿಂಗ್ ವಿವರಗಳನ್ನು ಬಹಿರಂಗಪಡಿಸಿಲ್ಲ

2021ರ ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಟೀಸರ್ ಬಿಡುಗಡೆ

ಹೊಸ ಸುಜುಕಿ ಜಿಎಸ್‌ಎಕ್ಸ್ ಎಸ್1000 ಬೈಕ್ ಬಿಡುಗಡೆಯಾದ ಬಳಿಕ ಎಪ್ರಿಲಿಯಾ ಟುವೊನೊ ವಿ4, ಡುಕಾಟಿ ಸ್ಟ್ರೀಟ್‌ಫೈಟರ್ ವಿ4, ಟ್ರಯಂಫ್ ಸ್ಪೀಡ್ ಟ್ರಿಪಲ್, ಬಿಎಂಡಬ್ಲ್ಯು ಎಸ್1000ಆರ್ ಮತ್ತು ಕೆಟಿಎಂ 1290 ಸೂಪರ್ ಡ್ಯೂಕ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Wednesday, April 7, 2021, 12:36 [IST]
English summary
2021 Suzuki GSX S1000 Teased. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+