2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕ್ ಬಿಡುಗಡೆ: ಬೆಲೆ ರೂ.11.75 ಲಕ್ಷ

ಟ್ರಯಂಫ್ ಇಂಡಿಯಾ ಕಂಪನಿಯು ತನ್ನ 2021ರ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.11.75 ಲಕ್ಷ ಗಳಾಗಿದೆ.

2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕ್ ಬಿಡುಗಡೆ: ಬೆಲೆ ರೂ.11.75 ಲಕ್ಷ

2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಕೆಲವು ಸ್ಟೈಲಿಂಗ್ ನವೀಕರಣಗಳನ್ನು ನಡೆಸಲಾಗಿದೆ. ಈ ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕ್ ಜೆಟ್ ಬ್ಲ್ಯಾಕ್, ರೆಡ್ ಹಾಪರ್, ಮತ್ತು ಸಫೈರ್ ಬ್ಲ್ಯಾಕ್ ಮತ್ತು ಫ್ಯೂಷನ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಈ ಹೊಸ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸೆಮಿ-ಡಿಜಿಟಲ್ ಯುನಿಟ್ ಆಗಿದ್ದು, ಇದು ಅನಲಾಗ್ ಸ್ಪೀಡೋಮೀಟರ್ ಮತ್ತು ಎಲ್ಸಿಡಿ ಮಲ್ಟಿ-ಇನ್ಫೋ ಡಿಸ್ ಪ್ಲೇಯನ್ನು ಒಳಗೊಂಡಿದೆ.

2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕ್ ಬಿಡುಗಡೆ: ಬೆಲೆ ರೂ.11.75 ಲಕ್ಷ

ಇನ್ನು ಟ್ವಿನ್ ಕ್ರ್ಯಾಡಲ್ ಫ್ರೇಮ್ ಬದಲಾಗದೆ ಉಳಿದಿದೆ. ಬ್ರಿಟಿಷ್ ಮಾಡರ್ನ್ ಕ್ಲಾಸಿಕ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕಿನಲ್ಲಿ ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಯನ್ನು ಹೊಂದಿಲ್ಲ. 2021ರ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕ್ ಬಿಡುಗಡೆ: ಬೆಲೆ ರೂ.11.75 ಲಕ್ಷ

ಇನ್ನು 2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 47 ಎಂಎಂ ಶೋವಾ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಪ್ರಿ-ಲೋಡ್ ಹೊಂದಾಣಿಕೆಯೊಂದಿಗೆ ಆರ್ಎಸ್ ಯು ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕ್ ಬಿಡುಗಡೆ: ಬೆಲೆ ರೂ.11.75 ಲಕ್ಷ

ಇನ್ನು 2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕಿನಲ್ಲಿ 16 ಇಂಚಿನ ವೈರ್-ಸ್ಪೋಕ್ ವ್ಹೀಲ್ ಗಳನ್ನು ಪಡೆಯುತ್ತದೆ. ಇದರ ಮುಂಭಾಗದಲ್ಲಿ ಎಂಟಿ90 ಬಿ16 ಟೈರ್ ಮತ್ತು ಹಿಂಭಾಗದಲ್ಲಿ 150/80 ಆರ್16 ಟೈರ್ ಅನ್ನು ಹೊಂದಿರುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕ್ ಬಿಡುಗಡೆ: ಬೆಲೆ ರೂ.11.75 ಲಕ್ಷ

ಇನ್ನು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಬ್ರೆಂಬೊ ಟು-ಪಿಸ್ಟನ್ ಕಾಲಿಪರ್ ಗಳೊಂದಿಗೆ ಟ್ವಿನ್ 310 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ನಿಸ್ಸಿನ್ ಕ್ಯಾಲಿಪರ್ ಗಳೊಂದಿಗೆ 255 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿರುತ್ತದೆ. ಇನ್ನು ಇದರಲ್ಲಿ ಡ್ಯುಯಲ್ ಚಾನೆಲ್ ಎಬಿಒಎಸ್ ಅನ್ನು ನೀಡಲಾಗುತ್ತದೆ.

2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕ್ ಬಿಡುಗಡೆ: ಬೆಲೆ ರೂ.11.75 ಲಕ್ಷ

ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕಿನಲ್ಲಿ 1,200 ಸಿಸಿ ಲಿಕ್ವಿಡ್-ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,250 ಆರ್‌ಪಿಎಂನಲ್ಲಿ 78 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 107 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕ್ ಬಿಡುಗಡೆ: ಬೆಲೆ ರೂ.11.75 ಲಕ್ಷ

ಈ ಎಂಜಿನ್‍‍ನ 6-ಸ್ಪೀಡ್ ಗೇರ್‌ಬಾಕ್ಸ್‌ನಲ್ಲಿ ಮಲ್ಟಿ-ಪ್ಲೇಟ್ ಅಸಿಸ್ಟ್ ಕ್ಲಚ್ ಅನ್ನು ಜೋಡಿಸಲಾಗಿದೆ. ಈ ಎಂಜಿನ್‍‍ನಲ್ಲಿ ಮಲ್ಟಿಪಾಯಿಂಟ್ ಫ್ಯೂಯಲ್ ಇಂಜೆಕ್ಷನ್ ಥ್ರೊಟಲ್ ಪ್ರತಿಕ್ರಿಯೆಯನ್ನು ಒಳಗೊಂಡಿದೆ. ಇದು ಹೆಚ್ಚಿನ ಪರ್ಫಾಮೆನ್ಸ್ ಅನ್ನು ಒದಗಿಸುತ್ತದೆ.

2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕ್ ಬಿಡುಗಡೆ: ಬೆಲೆ ರೂ.11.75 ಲಕ್ಷ

2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕಿನಲ್ಲಿ ರೋಡ್ ಮತ್ತು ರೈನ್ ಎಂಬ ಎರಡು ರೈಡಿಂಗ್ ಮೊಡ್ ಗಳನ್ನು ನೀಡಿದೆ.ಇನ್ನು ಈ ಬೈಕಿನಲ್ಲಿ ರೌಂಡ್ ಹೆಡ್‌ಲ್ಯಾಂಪ್ ಅನ್ನು ಅಳವಡಿಸಲಾಗಿದೆ

2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕ್ ಬಿಡುಗಡೆ: ಬೆಲೆ ರೂ.11.75 ಲಕ್ಷ

ಇನ್ನು ಈ ಹೊಸ ಬೈಕಿನಲ್ಲಿ ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳು ಮತ್ತು ಲಾಂಗ್ ರೀಚ್ ಹ್ಯಾಂಡಲ್‌ಬಾರ್‌ ಅನ್ನು ನೀಡಿದೆ. ಇನ್ನು ಈ ಬೈಕಿನ ಸೀಟ್ ರಿಲಾಕ್ಸ್ ಆಗಿ ಕುಳಿತುಕೊಳ್ಳುವ ರೀತಿ ಸಿದ್ದಪಡಿಸಿದ್ದಾರೆ.

2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕ್ ಬಿಡುಗಡೆ: ಬೆಲೆ ರೂ.11.75 ಲಕ್ಷ

ಇನ್ನು 2021ರ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಬೈಕ್ 263 ಕೆ.ಜಿ ತೂಕವನ್ನು ಹೊಂದಿದೆ. ಇನ್ನು ಈ ಬೈಕ್ 12-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ. ಒಟ್ಟಾರೆಯಾಗಿ ಈ 2021ರ ಬೊನೊವೆಲ್ಲಿ ಸ್ಪೀಡ್‍‍‍ಮಾಸ್ಟರ್‍ ಕೆಲವು ಸಣ್ಣ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

Most Read Articles

Kannada
English summary
2021 Triumph Speedmaster Launched. Read In kannada.
Story first published: Thursday, April 1, 2021, 19:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X