ಹೊಸ Triumph Speed Twin ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ Triumph Motorcycles ತನ್ನ ಹೊಸ Speed Twin ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ Triumph ಕಂಪನಿಯು Speed Twin ಬೈಕಿನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಲಾಗಿದೆ.

ಹೊಸ Triumph Speed Twin ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ Triumph Speed Twin ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಇದೇ ತಿಂಗಳ 31ರಂದು ಬಿಡುಗಡೆಯಾಗಲಿದೆ, Triumph ಕಂಪನಿಯು Speed Twin ಬೈಕಿನ ಖರೀದಿಗಾಗಿ ಪ್ರಿ-ಬುಕ್ಕಿಂಗ್ ಅನ್ನು ಭಾರತದಲ್ಲಿ ಪ್ರಾರಂಭಿಸಿದ್ದಾರೆ. ಈ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. Triumph ಕಂಪನಿಯು ಈ Speed Twin ಬೈಕಿನ ಹೆಸರನ್ನು ತನ್ನ ಭಾರತೀಯ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿದೆ. ಈ ಹೊಸ Triumph Speed Twin ಬೈಕನ್ನು ಯುರೋ5 ಮತ್ತು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದೆ.

ಹೊಸ Triumph Speed Twin ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ Triumph Speed Twin ಬೈಕ್ ಇದೀಗ ಹೆಚ್ಚಿನ ಪರ್ಫಾಮೆನ್ಸ್ ಅನ್ನು ಹೊಂದಿದೆ. ಜೊತೆಗೆ ಚಾಸಿಸ್ ಮತ್ತು ಎಲೆಕ್ಟ್ರಾನಿಕ್ಸ್ ಸೂಟ್‌ಗೆ ನವೀಕರಣಗಳನ್ನು ಒಳಗೊಂಡಿದೆ. ಇನ್ನು ಈ ಬೈಕ್ ಹೊಸ ಕಾಸ್ಮೆಟಿಕ್ ಬದಲಾವಣೆಗಳಿವೆ, ಇನ್ನು ಈ ಹೊಸ Triumph Speed Twin ಬೈಕಿನಲ್ಲಿ 1,200 ಸಿಸಿ 'ಹೈ ಪವರ್' ಎಂಜಿನ್ ಹೊಂದಿದೆ.

ಹೊಸ Triumph Speed Twin ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇದರ ಹೊಸ ಬ್ಯಾಲೆನ್ಸರ್ ಶಾಫ್ಟ್, ಹೊಸ ಕ್ಯಾಮ್ ಪ್ರೊಫೈಲ್, ಪರಿಷ್ಕೃತ ಪೋರ್ಟ್ಸ್ ಮತ್ತು ಹೆಚ್ಚಿನ ಕಂಪರೇಷನ್ ಪಿಸ್ಟನ್‌ಗಳು ಈ ನವೀಕರಣಗಳನ್ನು ತಂದಿವೆ. Triumph Speed Twin ಬೈಕಿನಲ್ಲಿ ನೀಡಿರುವ 1,200 ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ 7,250 ಆರ್‌ಪಿಎಂನಲ್ಲಿ 99 ಬಿಹೆಚ್‌ಪಿ ಮತ್ತು 4,250 ಆರ್‌ಪಿಎಂನಲ್ಲಿ 112 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ Triumph Speed Twin ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ Triumph Speed Twin ಬೈಕಿನ ಒಟ್ಟಾರೆ ಸಿಲೂಯೆಟ್ ಒಂದೇ ಆಗಿರುತ್ತದೆ, ಆದರೆ ಕೆಲವು ವಿಶಿಷ್ಟವಾದ ಬದಲಾವಣೆಗಳಿವೆ, ಹೆಚ್ಚು ಪ್ರೀಮಿಯಂ ಶೈಲಿಯನ್ನು ಮತ್ತು ವಿವರಗಳನ್ನು ಒಳಗೊಂಡಿದೆ. ಈ ಬೈಕ್ 14.5 ಲೀಟರ್ ಫ್ಯೂಯಲ್ ಟ್ಯಾಂಕ್ ಹೊಸ ಗ್ರಾಫಿಕ್ಸ್ ಪಡೆಯುತ್ತದೆ.

ಹೊಸ Triumph Speed Twin ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಬೈಕಿನಲ್ಲಿ ಹೊಸ ಹೆಡ್‌ಲ್ಯಾಂಪ್, ಸೈಲೆನ್ಸರ್‌ಗಳು ಬ್ರಷ್ಡ್ ಅಲ್ಯೂಮಿನಿಯಂ ಫಿನಿಶ್ ಪಡೆಯುತ್ತವೆ, ಇದರೊಂದಿಗೆ ಇತರ ಪ್ರೀಮಿಯಂ ಬಿಟ್‌ಗಳಲ್ಲಿ ಕ್ಲಾಸಿಕ್ ಮೊನ್ಜಾ ಫ್ಯೂಯಲ್ ಕ್ಯಾಪ್ ಮತ್ತು ಆನೊಡೈಸ್ಡ್ ಅಲ್ಯೂಮಿನಿಯಂ ಸ್ವಿಂಗಾರ್ಮ್ ಸೇರಿವೆ. ಇನ್ನು ಹೊಸ ಟ್ರಯಂಫ್ ಸ್ಪೀಡ್ ಟ್ವಿನ್‌ ಬೈಕಿನ ಮುಂಭಾಗ ಮತ್ತು ಹಿಂಭಾಗದ ಮಡ್‌ಗಾರ್ಡ್‌ಗಳು ಹೊಸ ಮೌಂಟಡ್ ಗಳನ್ನು ಪಡೆಯುತ್ತವೆ, ಇದರ ಹೀಲ್ ಗಾರ್ಡ್‌ಗಳ ಜೊತೆಗೆ ಅಲ್ಯೂಮಿನಿಯಂ ಫಿನಿಷ್ಡ್ ಬ್ರಷ್ ಮಾಡುತ್ತವೆ.

ಹೊಸ Triumph Speed Twin ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಬೈಕಿನಲ್ಲಿ ರೈನ್, ರೋಡ್ ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಪಡೆಯುತ್ತದೆ, ಇನ್ನು ಇದರಲ್ಲಿ ಥ್ರೊಟಲ್ ರೆಸ್ಪಾನ್ಸ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಸೆಟ್ಟಿಂಗ್‌ಗಳೆರಡನ್ನೂ ಸವಾರರ ಆದ್ಯತೆಗೆ ಸರಿಹೊಂದಿಸಬಹುದು. ಬೈಕ್ ಚಲಿಸುವಾಗ ರೈಡಿಂಗ್ ಮೋಡ್ ಗಳನ್ನು ಬದಲಾಯಿಸಬಹುದಾಗಿದೆ.

ಹೊಸ Triumph Speed Twin ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಈ ಹೊಸ Triumph Speed Twin ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಕಾರ್ಟ್ರಿಡ್ಜ್ ಡ್ಯಾಂಪಿಂಗ್‌ನೊಂದಿಗೆ 43 ಎಂಎಂ ಮಾರ್ಜೋಚಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಪ್ರಿ-ಲೋಡಡ್ ಟ್ವಿನ್ ಶಾಕ್ ಸಸ್ಪೆಂಕ್ಷನ್ ಯುನಿಟ್ ಅನ್ನು ಹೊಂದಿದೆ.

ಹೊಸ Triumph Speed Twin ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಪ್ರಮುಖವಾಗಿ ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಬ್ರೆಂಬೊ ಫೋರ್-ಪಿಸ್ಟನ್ ಎಂ 50 ರೇಡಿಯಲ್ ಮೊನೊಬ್ಲೋಕ್ ಕ್ಯಾಲಿಪರ್‌ಗಳು ಟ್ವಿನ್ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಹೊಂದಿರುವ ನಿಸ್ಸಿನ್ ಎರಡು-ಪಿಸ್ಟನ್ ಕ್ಯಾಲಿಪರ್ ಅನ್ನು ಹೊಂದಿದೆ. ಇದರೊಂದಿಗೆ ಈ ಬೈಕಿನಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಅನ್ನು ಹೊಂದಿದೆ.

ಹೊಸ Triumph Speed Twin ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇದರೊಂದಿಗೆ Triumph ಕಂಪನಿಯು ತನ್ನ ಹೊಸ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕನ್ನು ಬಿಡುಗಡೆಗೊಳಿಸಲಿದೆ. ಇದೀಗ Triumph ಕಂಪನಿಯು ತನ್ನ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕಿನ ಡಿಸೈನ್ ಕಾನ್ಸೆಪ್ಟ್‌ನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಟೀಸರ್ ಮುಂಬರುವ ಪ್ರೊಡಕ್ಷನ್-ಸ್ಪೆಕ್ ಸೂಪರ್ ಬೈಕ್ ಆಗಿರಬಹುದು. ಹೊಸ ಟೀಸರ್ ಬ್ರಿಟಿಷ್ ಪ್ರೀಮಿಯಂ ಬ್ರ್ಯಾಂಡ್ ಡ್‌ನ ಫೇರ್ಡ್ ಸ್ಪೋರ್ಟ್ಸ್‌ಬೈಕ್‌ಗಾಗಿ ಕಾಯುತ್ತಿರುವ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ,

ಹೊಸ Triumph Speed Twin ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಟೀಸರ್ ವೀಡಿಯೊದಲ್ಲಿ ಡಾರ್ಕ್ ಆಗಿ ಲೂಯೆಟ್‌ನಲ್ಲಿ ಕೆಲವು ತುಣುಕುಗಳನ್ನು ಪ್ರದರ್ಶಿಸಿದೆ. ಈ ಬೈಕಿನ ಮುಂಭಾಗದ ಫಾಸಿಕ ರೆಟ್ರೊ ಸಿಂಗಲ್ ಹೆಡ್‌ಲೈಟ್ ಅನ್ನು ಮುಂಚಿತವಾಗಿ ಹೊಂದಿದೆ, ಇದು ಎಂವಿ ಅಗಸ್ಟಾ ಸೂಪರ್‌ವೊಲೋಸ್ 800 ಅನ್ನು ನೆನಪಿಸುವಂತಿದೆ.ಟೀಸರ್ ಪೆಟ್ರೋಲ್ ಟ್ಯಾಂಕ್ ಕೆಳಗೆ ಇರಿಸಿದ ಕಾರ್ಬನ್ ಫೈಬರ್ ಅಸ್ಸೆಂಟ್ ಗಳನ್ನು ಹೊಂದಿದೆ, ಜೊತೆಗೆ ಸೀಟಿನ ಮೇಲೆ ಹೊಲಿದ ವಿನ್ಯಾಸವಿದೆ. ಬೈಕ್‌ನಲ್ಲಿ ಎಲೆಕ್ಟ್ರಾನಿಕ್ ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಫೋರ್ಕ್ಸ್ ಮತ್ತು ಟಿಎಫ್ಟಿ ಸ್ಕ್ರೀನ್ ಡ್ಯಾಶ್ ಇರುತ್ತದೆ.

ಹೊಸ Triumph Speed Twin ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2021ರ Triumph Speed Twin ಬೈಕ್ 14.5 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ, ಸೈಲೆನ್ಸರ್‌ಗಳು ಈಗ ಬ್ರಷ್ ಮಾಡಿದ ಅಲ್ಯೂಮಿನಿಯಂ ಫಿನಿಶ್ ಅನ್ನು ಪಡೆಯುತ್ತವೆ, ಇತರ ಪ್ರೀಮಿಯಂ ಬಿಟ್‌ಗಳು ಕ್ಲಾಸಿಕ್ ಮೊನ್ಜಾ ಫ್ಯೂಯಲ್ ಕ್ಯಾಪ್ ಮತ್ತು ಕ್ಲಿಯರ್ ಅನೋಡೈಸ್ಡ್ ಅಲ್ಯೂಮಿನಿಯಂ ಸ್ವಿಂಗಾರ್ಮ್ ಅನ್ನು ಒಳಗೊಂಡಿವೆ. ಒಟ್ಟಿನಲ್ಲಿ ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿರುವ ಬಹುನಿರೀಕ್ಷಿತ riumph Speed Twin ಬೈಕ್ ಈ ತಿಂಗಳ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

More from DriveSpark

Article Published On: Tuesday, August 24, 2021, 10:06 [IST]
English summary
New triumph speed twin 2021 india launch details revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+