ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ಟೈಗರ್ 850 ಸ್ಪೋರ್ಟ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕಿನ ಬಿಡುಗಡೆಯ ದಿನಾಂಕವನ್ನು ಮಾಹಿರಂಗಪಡಿಸಿದೆ.

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಇದೇ ತಿಂಗಳ 9 ರಂದು ಬಿಡುಗಡೆಯಾಗಲಿದೆ. ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬ್ರ್ಯಾಂಡ್‌ನ ಎಂಟ್ರಿ ಲೆವಲ್ ಮಾದರಿಯಾಗಿದೆ. ಟ್ರಯಂಫ್ ಮೋಟಾರ್‌ಸೈಕಲ್ಸ್ ಇಂಡಿಯಾ ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಹೊಸ ಟೈಗರ್ 850 ಸ್ಪೋರ್ಟ್ ಬೈಕಿನ ಹೆಸರನ್ನು ಸೇರಿಸಲಾಗಿದೆ. ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಹೆಚ್ಚು ರಸ್ತೆ ಆಧಾರಿತ ಅಡ್ವೆಂಚರ್ ಟೂರರ್ ಎಂದು ಹೇಳಲಾಗುತ್ತದೆ.

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಇದರ ದೊಡ್ಡಣ್ಣ ಟೈಗರ್ 900 ಮಾದರಿಯಂತೆ ವಿನ್ಯಾಸವಿದೆ. ಇವೆರಡರ ನಡುವೆ ವ್ಯತ್ಯಾಸ ಹೊಸ ಟೈಗರ್ 850 ಹೊಸ ಬಾಡಿ ಗ್ರಾಫಿಕ್ಸ್ ಮತ್ತು ಗ್ರ್ಯಾಫೈಟ್/ಡಯಾಬ್ಲೊ ರೆಡ್ ಮತ್ತು ಗ್ರ್ಯಾಫೈಟ್/ಕ್ಯಾಸ್ಪಿಯನ್ ಬ್ಲೂ ಎಂಬ ಎರಡು ಹೊಸ ಡ್ಯುಯಲ್-ಟೋನ್ ಬಣ್ಣಗಳನ್ನು ಒಳಗೊಂಡಿವೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಟೈಗರ್ 900 ನಲ್ಲಿರುವಂತೆ ಹೊಸ ಟೈಗರ್ 850 ಸ್ಪೋರ್ಟ್ ಬೈಕ್ ಮುಂಭಾಗ ಹೊಂದಾಣಿಕೆ ಮಾಡಬಹುದಾದ ವಿಂಡ್‌ಶೀಲ್ಡ್, ಫ್ಯೂಯಲ್ ಟ್ಯಾಂಕ್, ರೇಡಿಯೇಟರ್ ಮತ್ತು ಎಲ್‌ಇಡಿ ಲೈಟ್ ಗಳನ್ನು ಹೊಂದಿವೆ. ಇನ್ನು ಈ ಟೈಗರ್ 850 ಸ್ಪೋರ್ಟ್ ಬೈಕಿನಲ್ಲಿ ಹಲವಾರು ಅಕ್ಸೇಸರೀಸ್ ಗಳನ್ನು ಕೂಡ ಒಳಗೊಂಡಿರುತ್ತದೆ.

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಅದೇ 888 ಸಿಸಿ ಲಿಕ್ವಿಡ್-ಕೂಲ್ಡ್ ಇನ್-ಲೈನ್ ಮೂರು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 85 ಬಿಹೆಚ್‍ಪಿ ಪವರ್ ಮತ್ತು 82 ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟೈಗರ್ 900 ಬೈಕಿಗೆ ಹೋಲಿಸಿದರೆ 10 ಬಿಹೆಚ್‌ಪಿ ಮತ್ತು 5 ಎನ್ಎಂ ಟಾರ್ಕ್ ಕಡಿಮೆ ಉತ್ಪಾದಿಸಲಾಗುತ್ತದೆ. ಇನ್ನು ಎಂಜಿನ್ ಅನ್ನು ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಟೈಗರ್ 850 ಸ್ಪೋರ್ಟ್ ಬೈಕ್ ರೈನ್ ಮತ್ತು ರೋಡ್ ಎಂಬ ಎರಡು ರೈಡಿಂಗ್ ಮೋಡ್‌ಗಳೊಂದಿಗೆ ಬರಲಿದೆ. ಆದರೆ ಕ್ವಿಕ್-ಶಿಫ್ಟರ್ ಅನ್ನು ಹೆಚ್ಚುವರಿ ಅಕ್ಸೇಸರೀಸ್ ಆಗಿ ನೀಡಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಸ್ಪೋರ್ಟ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 43 ಎಂಎಂ ಅಪ್ ಸೈಡ್ ಡೌನ್ ಫೋರ್ಕ್‌ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿರುತ್ತದೆ.ಇನ್ನು ಹಿಂಭಾಗವು 170 ಎಂಎಂ ಅನ್ನು ಮ್ಯಾನುವಲ್ ಪ್ರಿ ಲೋಡ್ ಹೊಂದಾಣಿಕೆಯೊಂದಿಗೆ ನೀಡುತ್ತದೆ.

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಪ್ರಮುಖವಾಗಿ ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕಿನ ಮುಂಭಾಗದಲ್ಲಿ ಡಬಲ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 255 ಎಂಎಂ ಡಿಸ್ಕ್ ಅನ್ನು ನೀಡಲಾಗುತ್ತದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಜೋಡಿಸಲಾಗುತ್ತದೆ.

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಟೈಗರ್ 900 ಬೈಕ್ ಬೆಲೆಗೆ ಹೋಲಿಸಿದರೆ, ಟ್ರಯಂಫ್ ಟೈಗರ್ 850 ಸ್ಪೋರ್ಟ್ ಮಾದರಿಯನ್ನು ಕೈಗೆಟುಕುವ ಬೆಲೆಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಇದೇ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

More from DriveSpark

Article Published On: Thursday, February 4, 2021, 12:19 [IST]
English summary
2021 Triumph Tiger 850 Sport Launch Date Revealed. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+