ಕಡಿಮೆ ಬೆಲೆಗೆ ಬಿಡುಗಡೆಯಾಗಿ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಿದೆ ಟ್ರಯಂಫ್ ಸ್ಪೀಡ್ 400
ಹಲವು ದಶಕಗಳಿಂದ 350 ಮತ್ತು 500cc ಒಳಗಿನ ಬೈಕ್‌ಗಳ ಬೇಡಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಎನ್‌ಫೀಲ್ಡ್‌ಗೆ ಭೀಕರ ಪೈಪೋಟಿ ನೀಡಲು ಅಂತರಾಷ್ಟ್ರೀಯ ಬ್ರಾಂಡ್ ಒಂದು ದೇಶೀಯ ಬ್ರಾಂಡ್‌ನೊಂದಿಗೆ ಕೈ ಜೋಡಿಸಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಸಜ್ಜಾಗಿಬಿಟ್ಟಿದೆ. ಇದೀಗ ಆ ಹೊಸ ಬೈಕ್ ಬಿಡುಗಡೆಯಾಗಿದೆ.
ಅದೇ ಟ್ರಯಂಪ್ ಸ್ಪೀಡ್ 400 ರಾಯಲ್ ಎನ್‌ಫೀಲ್ಡ್‌ಗೆ ಮೊದಲ ಎಚ್ಚರಿಕೆ ಗಂಟೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಇಲ್ಲಿ ತಿಳಿಸಿಕೊಡಲಿದ್ದೇವೆ. ಕಂಪನಿಯು ಹೊಸ ಟ್ರಯಂಫ್ ಸ್ಪೀಡ್ 400 ಅನ್ನು ರೈಡ್ ಮಾಡಲು ನಮ್ಮ ಡ್ರೈವ್‌ಸ್ಪಾರ್ಕ್ ತಂಡಕ್ಕೆ ವಾಹನವನ್ನು ನೀಡಿದ್ದು, ನಾವು ಪುಣೆಯಲ್ಲಿ ಹೊಸ ಟ್ರಯಂಫ್ ಸ್ಪೀಡ್ 400 ಅನ್ನು ಎಲ್ಲಾ ವಿಧಗಳಲ್ಲೂ ಬೈಕ್ ಓಡಿಸಿ ರಿವ್ಯೂ ನೀಡಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.
ಈ ಹೊಸ ಟ್ರಯಂಫ್ ಸ್ಪೀಡ್ 400 ನ 398cc ಸಿಂಗಲ್-ಸಿಲಿಂಡರ್ ಎಂಜಿನ್ ಫ್ಯೂಲ್-ಇಂಜೆಕ್ಟೆಡ್ ಮತ್ತು ಲಿಕ್ವಿಡ್-ಕೂಲ್ಡ್ ನೊಂದಿಗೆ ಬರುತ್ತದೆ. ಈ ಎಂಜಿನ್ 39.5bhp ಮತ್ತು 37.5 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಬಲ-ಬದಿಯ ಚೈನ್-ಡ್ರೈವ್ ಸೆಟಪ್ ಎಂಜಿನ್ ಹಿಂದಿನ ಚಕ್ರಕ್ಕೆ ಪವರ್ ನೀಡಲು ಸಹಾಯ ಮಾಡುತ್ತದೆ.
ಬೆಂಗಳೂರಿನಲ್ಲಿ ಟ್ರಯಂಫ್ ಸ್ಪೀಡ್ 400 ಬೈಕ್ ಆನ್-ರೋಡ್ ಬೆಲೆಯು ರೂ.3,05,869 ಇದೆ. ಅದರಲ್ಲಿ ರೂ.2,32,997 ಎಕ್ಸ್ ಶೋರೂಂ ದರ, ರೂ.46,553 ರಸ್ತೆ ತೆರಿಗೆ, ರೂ.1,188 ನೋಂದಣಿ ಶುಲ್ಕ, ರೂ.1,500 ನಿರ್ವಹಣೆ ಶುಲ್ಕ ಹಾಗೂ ರೂ.23,632 ವಿಮೆ ಸೇರಿದೆ. ದೆಹಲಿ, ಹೈದರಾಬಾದ್, ಗೋವಾ ಹಾಗೂ ಮುಂಬೈ ಆನ್-ರೋಡ್ ದರಕ್ಕಿಂತ ಬೆಂಗಳೂರು ಆನ್-ರೋಡ್ ಬೆಲೆ ತುಂಬಾ ಹೆಚ್ಚಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications