ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕನ್ನು ಜಾಗತಿವಾಗಿ ಕಳೆದ ವರ್ಷ ಪರಿಚಯಿಸಿದ್ದರು. ಇನ್ನು ಬಾರತೀಯ ಮಾರುಕಟ್ಟೆಯಲ್ಲಿ ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕನ್ನು ಕಳೆದ ತಿಂಗಳು ಬಿಡುಗಡೆಗೊಳಿಸಲಾಯಿತು.

ಇದೀಗ ಟ್ರಯಂಫ್ ಮೋಟರ್‌ಸೈಕಲ್ ಕಂಪನಿಯು ಹೊಸ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕನ್ನು ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ಚೀನಾದ ಮಾರುಕಟ್ಟೆಯಲ್ಲಿ ಕವಾಸಕಿ ಝಡ್650 ಬೈಕಿಗೆ ಪೈಪೋಟಿ ನೀಡುತ್ತದೆ. ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಹಲವಾರು ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಹೊಂದಿವೆ.

1968 ರಿಂದ 1975 ರವರೆಗೆ ಟ್ರೈಡೆಂಟ್ ಎಂಬ ಹಳೆಯ ಐಕಾನಿಕ್ ಬೈಕಿನ ಉತ್ಪಾದನೆಯಲ್ಲಿತ್ತು. ಅದೇ ಐಕಾನಿಕ್ ಬೈಕಿನ ಹೆಸರಿನಲ್ಲಿ ಟ್ರಯಂಫ್ ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಅತ್ಯಂತ ಸೊಗಸಾದ ವಿನ್ಯಾಸ ಮತ್ತು ನವೀಕರಿಸಿದ ಎಂಜಿನ್ ಅನ್ನು ಹೊಂದಿದೆ. ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಹೊಸ ವಿನ್ಯಾಸ ಶೈಲಿಯನ್ನು ಹೊಂದಿದೆ.

ಈ ಹೊಸ ಬೈಕ್ ಸ್ಕಪಲ್ಟಡ್ ಫ್ಯೂಯಲ್ ಟ್ಯಾಂಕ್ ನೊಂದಿಗೆ ಮಸ್ಕಲರ್ ಲುಕ್ ಅನ್ನು ಹೊಂದಿದೆ. ಇನ್ನು ಇದು ಸಿಂಗಲ್-ಪೀಸ್ ಸೀಟ್, ಎಕ್ಸ್‌ಪೋಸ್ಡ್ ಫ್ರೇಮ್ ಮತ್ತು ಎಂಜಿನ್ ಮತ್ತು ವೃತ್ತಾಕಾರದ ಅಂಶಗಳೊಂದಿಗೆ ಸಣ್ಣದಾಗಿ ರೆಟ್ರೋ ಶೈಲಿಯಯಲ್ಲಿ ಕಾಣುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಹೊಸ ಬೈಕಿನಲ್ಲಿ ರೈಡರ್ ಏಡ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಅನ್ನು ಸಹ ನೀಡುತ್ತದೆ, ಉದಾಹರಣೆಗೆ ರೈಡ್-ಬೈ-ವೈರ್, ಟ್ರ್ಯಾಕ್ಷನ್ ಕಂಟ್ರೋಲ್, ರೈನ್ ಮತ್ತು ರೋಡ್ ರೈಡರ್ ಮೋಡ್ ಗಳು ಸೇರಿದಂತೆ ಇತರ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿವೆ.

ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕಿನಲ್ಲಿ ಇನ್-ಲೈನ್ ಮೂರು-ಸಿಲಿಂಡರ್ 660 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,250 ಆರ್‌ಪಿಎಂನಲ್ಲಿ 80 ಬಿಹೆಚ್‌ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 64 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ ಸ್ಲಿಪ್/ಅಸಿಸ್ಟ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಟ್ರೈಡೆಂಟ್ 660 ಬೈಕ್ ಎಲ್ಇಡಿ ಲೈಟಿಂಗ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಟಿಎಫ್ಟಿ ಡಿಸ್ ಪ್ಲೇಯನ್ನು ಸಹ ಒಳಗೊಂಡಿದೆ. 'ಮೈ ಟ್ರಯಂಫ್' ಆ್ಯಪ್ ಬಳಸಿ ಡಿಜಿಟಲ್ ಡಿಸ್ಪ್ಲೇಯನ್ನು ರೈಡರ್ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾಗಿದೆ.

ಈ ಬೈಕ್ ಟೂಬುಲರ್ ಸ್ಟೀಲ್ ಚಾಸಿಸ್ ಅನ್ನು ಹೊಂದಿದೆ. ಟ್ರೈಡೆಂಟ್ 660 ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಶೋವಾ ಯುಎಸ್‌ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಶೋವಾ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಇನ್ನುಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 310 ಎಂಎಂ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಒಂದೇ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ, ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.


Click it and Unblock the Notifications








