ಯಮಹಾ ಎಫ್‍‍ಝಡ್-ಎಕ್ಸ್ ಬೈಕಿನ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಯಮಹಾ ಮೋಟಾರ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎಫ್‍‍ಝಡ್-ಎಕ್ಸ್ ಎಂಬ ಹೊಸ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಯಮಹಾ ಎಫ್‍‍ಝಡ್-ಎಕ್ಸ್ ಬೈಕ್ ಬಿಡುಗಡೆಯಾಗುವ ಮುನ್ನ ಹೊಸ ಫೀಚರ್ಸ್‌ಗಳ ಮಾಹಿತಿ ಬಹಿರಂಗವಾಗಿವೆ.

ಯಮಹಾ ಎಫ್‍‍ಝಡ್-ಎಕ್ಸ್ ಬೈಕಿನ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಈ ಹೊಸ ಯಮಹಾ ಎಫ್‍‍ಝಡ್-ಎಕ್ಸ್ ಬೈಕಿನ ಟಿವಿಸಿ ಚಿತ್ರೀಕರಣ ನಡೆಸುವಾಗ ಇದರ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಈ ಸ್ಪೈ ಚಿತ್ರಗಳನ್ನು ರಶ್ಲೇನ್ ಬಹಿರಂಗಪಡಿಸಿದೆ. ಸ್ಪೈ ಚಿತ್ರಗಳಿಂದ ಈ ಹೊಸ ಬೈಕಿನ ವಿನ್ಯಾಸ ಮತ್ತು ಕೆಲವು ಫೀಚರ್ಸ್‌ಗಳ ಮಾಹಿತಿಗಳು ಬಹಿರಂಗವಾಗಿದೆ. ಇನ್ನು ಈ ಹೊಸ ಎಫ್‍‍ಝಡ್-ಎಕ್ಸ್ ಬೈಕ್ ಟಿಯರ್ ಐ ಆಕಾರದ ಫ್ಯೂಯಲ್ ಟ್ಯಾಂಕ್‌ನೊಂದಿಗೆ ಆಧುನಿಕ-ರೆಟ್ರೊ ಲುಕ್ ಅನ್ನು ಹೊಂದಿದೆ.

ಯಮಹಾ ಎಫ್‍‍ಝಡ್-ಎಕ್ಸ್ ಬೈಕಿನ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಹೊಸ ಯಮಹಾ ಎಫ್‍‍ಝಡ್-ಎಕ್ಸ್ ಬೈಕ್ ರೋಡ್ಸ್ಟರ್ ವಿನ್ಯಾಸದಿಂದಾಗಿ ಟ್ಯಾಂಕ್ ಯಾವುದೇ ಫೇರಿಂಗ್ ಅಥವಾ ಟ್ರಿಮ್ ಅನ್ನು ಹೊಂದಿಲ್ಲ ಎಂಬುದನ್ನು ಗಮನಿಸಬಹುದು. ಬದಲಾಗಿ ಇದು ಡ್ಯುಯಲ್-ಟೋನ್ ಫ್ಯೂಯಲ್ ಟ್ಯಾಂಕ್ ಅನ್ನು ಬ್ಲ್ಯಾಕ್ ಔಟ್ ಸ್ಟ್ರಿಪ್ನೊಂದಿಗೆ ಮಧ್ಯದಲ್ಲಿ ಇರಿಸಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಯಮಹಾ ಎಫ್‍‍ಝಡ್-ಎಕ್ಸ್ ಬೈಕಿನ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಇನ್ನು ಈ ಹೊಸ ಬೈಕಿನಲ್ಲಿ ಇಂಟಿಗ್ರೇಟೆಡ್ ಡಿಆರ್‌ಎಲ್‌ಗಳೊಂದಿಗೆ ದುಂಡಗಿನ ಆಕಾರದ ಹೆಡ್‌ಲ್ಯಾಂಪ್, ಬ್ಲ್ಯಾಕ್ ಔಟ್ ಫೆಂಡರ್‌ಗಳು, ಎಕ್ಸಾಸ್ಟ್, ರಿಬ್ಬಡ್ ಸಿಂಗಲ್-ಪೀಸ್ ಸೀಟ್, ರಿಯರ್ ಗ್ರ್ಯಾಬ್ ರೈಲ್, ಟೈರ್ ಹಗ್ಗರ್, ಸಿಂಗಲ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಯಮಹಾ ಎಫ್‍‍ಝಡ್-ಎಕ್ಸ್ ಬೈಕಿನ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಈ ಕ್ಲಸ್ಟರ್ ಸ್ಟ್ಯಾಂಡರ್ಡ್ ಮಾದರಿಯಿಂದ ಎರವಲು ಪಡೆದುಕೊಂಡಿದೆ. ಉತ್ತಮ ಸವಾರಿ ಅನುಭವ ನೀಡುವಂತಹ ಸೀಟಿಂಗ್ ಪೋಸಿಶನ್ ಅನ್ನು ಹೊಂದಿದೆ. ವಿಶಾಲವಾದ ಹ್ಯಾಂಡಲ್‌ಬಾರ್‌ ಅನ್ನು ಹೊಂದಿದ್ದು, ಇದರೊಂದಿಗೆ ಫುಟ್‌ಪೆಗ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಯಮಹಾ ಎಫ್‍‍ಝಡ್-ಎಕ್ಸ್ ಬೈಕಿನ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಎಫ್‍‍ಝಡ್-ಎಕ್ಸ್ ಬೈಕ್ 2020 ಎಂಎಂ ಉದ್ದ, 785 ಎಂಎಂ ಅಗಲ ಮತ್ತು 1115 ಎಂಎಂ ಎತ್ತರವನ್ನು ಹೊಂದಿರುತ್ತದೆ. ಇನ್ನು ಈ ಯಮಹಾ ಎಫ್‍‍ಝಡ್-ಎಕ್ಸ್ ಬೈಕ್ 1330 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇದೇ ಸರಣಿಯ ಎಫ್‌ಜೆಡ್ -150 ಬೈಕ್ ಕೂಡ ಒಂದೇ ರೀತಿಯ ವ್ಹೀಲ್‌ಬೇಸ್ ಹೊಂದಿದೆ.

ಯಮಹಾ ಎಫ್‍‍ಝಡ್-ಎಕ್ಸ್ ಬೈಕಿನ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಯಮಹಾ ಎಫ್‍‍ಝಡ್-ಎಕ್ಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ನೊಂದಿಗೆ ಪ್ರಿ-ಲೋಡ್ ಹೊಂದಾಣಿಕೆಯನ್ನು ಒಳಗೊಂಡಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಯಮಹಾ ಎಫ್‍‍ಝಡ್-ಎಕ್ಸ್ ಬೈಕಿನ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಇನ್ನು ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಬಹುದು. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಿದೆ

ಯಮಹಾ ಎಫ್‍‍ಝಡ್-ಎಕ್ಸ್ ಬೈಕಿನ ಫೀಚರ್ಸ್‌ಗಳ ಮಾಹಿತಿ ಬಹಿರಂಗ

ಯಮಹಾ ಎಫ್‍‍ಝಡ್-ಎಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನಿಂದ ವಿಶಿಷ್ಟ ಕೊಡುಗೆಯಾಗಿದೆ. ಈ ಬೈಕ್ ಸರಳವಾದ ವಿನ್ಯಾಸವನ್ನು ಹೊಂದಿದೆ. ಈ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿರುವ ಕವಾಸಕಿ ಡಬ್ಲ್ಯು 175 ಬೈಕಿಗೆ ಪ್ಪ್ರತಿಸ್ಪರ್ಧಿಯಾಗಬಹುದು.

Most Read Articles

Kannada
Read more on ಯಮಹಾ yamaha
English summary
Yamaha FZ-X Spied During TVC Shoot Revealing New Features Ahead Of Launch. Read In Kananda.
Story first published: Wednesday, April 28, 2021, 21:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X