ಓಲಾ ಎಲೆಕ್ಟ್ರಿಕ್ ವಾಹನ ವಿನ್ಯಾಸ ವಿಭಾಗದ ಮುಖ್ಯಸ್ಥರಾಗಿ ವೇನ್ ಬರ್ಗೆಸ್ ನೇಮಕ

ಓಲಾ ಎಲೆಕ್ಟ್ರಿಕ್ ಕಂಪನಿಯು ಎಲೆಕ್ಟ್ರಿಕ್ ವಾಹನ ಉತ್ಪಾದನೆ ಆರಂಭಕ್ಕೆ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಹೊಸ ವಾಹನ ಉತ್ಪಾದನಾ ಘಟಕವನ್ನು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ನಿರ್ಮಾಣ ಮಾಡುತ್ತಿದೆ. ಈ ನಡುವೆ ಕಂಪನಿಯು ಹೊಸ ಉದ್ಯಮ ವ್ಯವಹಾರಕ್ಕಾಗಿ ವಿವಿಧ ವಿಭಾಗಗಳ ಮುಖ್ಯಸ್ಥರ ನೇಮಕ ಪ್ರಕ್ರಿಯೆಯನ್ನು ಕೈಗೊಂಡಿದೆ.

ಓಲಾ ಎಲೆಕ್ಟ್ರಿಕ್ ವಾಹನ ವಿನ್ಯಾಸದ ಮುಖ್ಯಸ್ಥರಾಗಿ ವೇನ್ ಬರ್ಗೆಸ್ ನೇಮಕ

ಎಲೆಕ್ಟ್ರಿಕ್ ವಾಹನ ಮಾರಾಟ ಪ್ರಕ್ರಿಯೆಯನ್ನು ಭಾರತದಲ್ಲಿ ಮಾತ್ರ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ವಿಸ್ತರಿಸಲಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಜಾಗತಿಕ ಆಟೋ ಉದ್ಯಮದಲ್ಲಿ ಮುಂಚೂಣಿ ಸಾಧಿಸುವ ತವಕದಲ್ಲಿದ್ದು, ಉದ್ಯಮ ವ್ಯವಹಾರಕ್ಕೆ ಪೂರಕವಾಗಿ ಆಟೋ ಉತ್ಪಾದನಾ ವಿಭಾಗದಲ್ಲಿ ಪರಿಣಿತಿ ಹೊಂದಿರುವ ಅಧಿಕಾರಗಳ ತಂಡವನ್ನು ನೇಮಕಗೊಳಿಸುತ್ತಿದ್ದು, ವಾಹನ ವಿನ್ಯಾಸ ವಿಭಾಗದ ಮುಖ್ಯಸ್ಥರಾಗಿ ವೇನ್ ಬರ್ಗೆಸ್ ಅವರನ್ನು ನೇಮಕ ಮಾಡಲಾಗಿದೆ.

ಓಲಾ ಎಲೆಕ್ಟ್ರಿಕ್ ವಾಹನ ವಿನ್ಯಾಸದ ಮುಖ್ಯಸ್ಥರಾಗಿ ವೇನ್ ಬರ್ಗೆಸ್ ನೇಮಕ

ಕಳೆದ ತಿಂಗಳು ಗ್ಲೋಬಲ್ ಸೇಲ್ಸ್ ಅಂಡ್ ಡಿಸ್ಟ್ರಿಬ್ಯೂಷನ್ ಮುಖ್ಯಸ್ಥರನ್ನಾಗಿ ಯೋಂಗ್ಸುಂಗ್ ಕಿಮ್ ಅವರನ್ನು ನೇಮಕಗೊಳಿಸಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇನ್ನು ಹಲವು ಅಧಿಕಾರಿಗಳನ್ನು ವಿವಿಧ ವಿಭಾಗಗಳಲ್ಲಿ ನೇಮಕಗೊಳಿಸುವ ಸಿದ್ದತೆಯಲ್ಲಿದ್ದು, ಇದೇ ವರ್ಷಾಂತ್ಯದೊಳಗೆ ಇವಿ ವಾಹನ ಮಾರಾಟವು ಅಧಿಕೃತವಾಗಿ ಚಾಲನೆ ಪಡೆದುಕೊಳ್ಳಲಿದೆ.

ಓಲಾ ಎಲೆಕ್ಟ್ರಿಕ್ ವಾಹನ ವಿನ್ಯಾಸದ ಮುಖ್ಯಸ್ಥರಾಗಿ ವೇನ್ ಬರ್ಗೆಸ್ ನೇಮಕ

ಭಾರತದಲ್ಲೇ ಪೂರ್ಣ ಪ್ರಮಾಣದ ವಾಹನ ಉತ್ಪಾದನೆಯ ಗುರಿಹೊಂದಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರತದಿಂದಲೇ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಇವಿ ವಾಹನಗಳನ್ನು ರಫ್ತು ಮಾಡಲು ಸಿದ್ದವಾಗಿದ್ದು, ಹೊಸ ವಾಹನ ಉತ್ಪಾದನಾ ಘಟಕ ನಿರ್ಮಾಣದ ಪ್ರಕ್ರಿಯೆ ವೇಗವಾಗಿ ಸಾಗುತ್ತಿದೆ.

ಓಲಾ ಎಲೆಕ್ಟ್ರಿಕ್ ವಾಹನ ವಿನ್ಯಾಸದ ಮುಖ್ಯಸ್ಥರಾಗಿ ವೇನ್ ಬರ್ಗೆಸ್ ನೇಮಕ

ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ಆರಂಭಿಕವಾಗಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಆರಂಭಿಸಲಿದ್ದು, ತದನಂತರವಷ್ಟೇ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳು ಮತ್ತು ಸಣ್ಣ ಗಾತ್ರದ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೊಸ ಸ್ಕೂಟರಿನ ಅಧಿಕೃತ ಚಿತ್ರಗಳನ್ನು ಈಗಾಗಲೇ ಬಹಿರಂಗಪಡಿಸಿರುವ ಓಲಾ ಕಂಪನಿಯು ಹೊಸ ಸ್ಕೂಟರ್‌ನಲ್ಲಿ ಪ್ರತಿ ಚಾರ್ಜ್‌ಗೆ ಗರಿಷ್ಠ 240 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾದ ಬ್ಯಾಟರಿ ಜೋಡಣೆ ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಓಲಾ ಎಲೆಕ್ಟ್ರಿಕ್ ವಾಹನ ವಿನ್ಯಾಸದ ಮುಖ್ಯಸ್ಥರಾಗಿ ವೇನ್ ಬರ್ಗೆಸ್ ನೇಮಕ

ಹೊಸ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಹಲವಾರು ಎಲೆಕ್ಟ್ರಿಕ್ ಮಾದರಿಗಳಿಗೆ ಬೆಲೆ ವಿಚಾರದಲ್ಲಿ ಮೈಲೇಜ್ ವಿಚಾರದಲ್ಲಿ ಭಾರೀ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಭಾರತದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಹೊಸ ಇವಿ ಸ್ಕೂಟರ್ ರಫ್ತುಗೊಳ್ಳಲಿದೆ.

ಓಲಾ ಎಲೆಕ್ಟ್ರಿಕ್ ವಾಹನ ವಿನ್ಯಾಸದ ಮುಖ್ಯಸ್ಥರಾಗಿ ವೇನ್ ಬರ್ಗೆಸ್ ನೇಮಕ

ಬೃಹತ್ ಪ್ರಮಾಣದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಯೋಜನೆಗಾಗಿ ನೇದರ್ಲ್ಯಾಂಡ್ ಮೂಲದ ಎಟರ್ಗೋ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯೊಂದಿಗೆ ಜೊತೆಗೂಡಿಸಿರುವ ಓಲಾ ಕಂಪನಿಯು ಹೊಸ ವಾಹನ ಉತ್ಪಾದನಾ ಘಟಕವನ್ನು ಇಂಡಸ್ಟ್ರಿ 4.0 ತತ್ವದ ಆಧಾರದ ಮೇಲೆ ನಿರ್ಮಾಣ ಮಾಡಲಾಗುತ್ತಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಓಲಾ ಎಲೆಕ್ಟ್ರಿಕ್ ವಾಹನ ವಿನ್ಯಾಸದ ಮುಖ್ಯಸ್ಥರಾಗಿ ವೇನ್ ಬರ್ಗೆಸ್ ನೇಮಕ

ಆಧುನಿಕ ವಾಹನ ಉತ್ಪಾದನಾ ಘಟಕದಲ್ಲಿ ಸಾವಿರಾರು ಉದ್ಯೋಗಗಳ ಜೊತೆಗೆ ವಿವಿಧ ತಾಂತ್ರಿಕ ಕಾರ್ಯಗಳಿಗಾಗಿ ಸುಮಾರು 5 ಸಾವಿರ ರೋಬೋಟ್‌ಗಳನ್ನು ಹೊಸ ಘಟಕದಲ್ಲಿ ನಿಯೋಜಿಸಲು ನಿರ್ಧರಿಸಲಾಗಿದ್ದು, ಪ್ರತಿ 2 ಸೆಕೆಂಡುಗಳಲ್ಲಿ 1 ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣಗೊಳ್ಳಲಿದೆ.

ಓಲಾ ಎಲೆಕ್ಟ್ರಿಕ್ ವಾಹನ ವಿನ್ಯಾಸದ ಮುಖ್ಯಸ್ಥರಾಗಿ ವೇನ್ ಬರ್ಗೆಸ್ ನೇಮಕ

ಬರೋಬ್ಬರಿ 500 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ವಾಹನ ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳ ನಿರ್ಮಾಣದ ಗುರಿ ಹೊಂದಲಾಗಿದ್ದು, ಒಂದೇ ಬಾರಿಗೆ ನೂರಾರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅಸೆಂಬ್ಲಿ ಮಾಡುವ ರೋಬೋಟ್‌ಗಳು ಅಂತಿಮವಾಗಿ ಪ್ರತಿ 2 ಸೆಕೆಂಡುಗಳಲ್ಲಿ ಒಂದು ಉತ್ಪಾದನಾ ಮಾದರಿಯನ್ನು ಮಾರಾಟಕ್ಕೆ ಸಿದ್ದಗೊಳಿಸಲಿವೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಓಲಾ ಎಲೆಕ್ಟ್ರಿಕ್ ವಾಹನ ವಿನ್ಯಾಸದ ಮುಖ್ಯಸ್ಥರಾಗಿ ವೇನ್ ಬರ್ಗೆಸ್ ನೇಮಕ

ಹೊಸ ಯೋಜನೆಗಾಗಿ ಓಲಾ ಕಂಪನಿಯು ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಸದ್ಯ ಇವಿ ಸ್ಕೂಟರ್ ಮಾತ್ರ ಉತ್ಪಾದನೆ ಮಾಡಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಇವಿ ವಾಹನಗಳನ್ನು ಅಭಿವೃದ್ದಿಪಡಿಸಲಿದೆ.

More from DriveSpark

Article Published On: Tuesday, May 4, 2021, 15:14 [IST]
English summary
Ola Electric Appoints Wayne Burgess As Head Of Design. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+