YouTube

ನವೆಂಬರ್‌ನಲ್ಲಿ ಒಟ್ಟು ಐದು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ರಿವೋಲ್ಟ್ ಮೋಟಾರ್ಸ್(Revolt Motors) ಕಂಪನಿಯು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮಾರಾಟ ಮಳಿಗೆಗಳನ್ನು ಪ್ರಮುಖ ನಗರಗಳಿಗೆ ವಿಸ್ತರಿಸುತ್ತಿದೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ರಿವೋಲ್ಟ್ ಕಂಪನಿಯು ಕಳೆದ ವಾರವಷ್ಟೇ ದೇಶದ ಪ್ರಮುಖ 70 ನಗರಗಳಲ್ಲಿ ಹೊಸದಾಗಿ ವಾಹನ ಮಾರಾಟ ಆರಂಭಿಸುವುದಾಗಿ ಘೋಷಣೆ ಮಾಡಿದ್ದು, ಹೊಸ ಯೋಜನೆಯ ಭಾಗವಾಗಿ ಕಂಪನಿಯು ಇವಿ ಬೈಕ್ ಶೋರೂಂಗಳನ್ನು ವಿಸ್ತರಿಸುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರಾಟ ಪ್ರಕ್ರಿಯೆಯನ್ನು ವಿಸ್ತರಿಸುತ್ತಿರುವ ರಿವೋಲ್ಟ್ ಕಂಪನಿಯು ಈಗಾಗಲೇ ಹೊಸ ಯುನಿಟ್‌ಗಳಿಗಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಬಜೆಟ್ ಬೆಲೆಯ ಅತ್ಯುತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಬೈಕ್‌ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ಅಕ್ಟೋಬರ್ ಅವಧಿಯಲ್ಲಿ ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ ನಂತರ ಗುಜರಾತಿನ ಸೂರತ್ ನಗರದಲ್ಲೂ ಪರಿಸರ ಸ್ನೇಹಿ ವಾಹನ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಿದ್ದು, ಇದೀಗ ನವೆಂಬರ್ ಮತ್ತೆ ಐದು ರಾಜ್ಯಗಳಲ್ಲಿ ಇವಿ ಬೈಕ್ ಮಾರಾಟ ಆರಂಭಿಸುತ್ತಿದೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ರಿವೋಲ್ಟ್ ಕಂಪನಿಯ ಮಾಹಿತಿ ಪ್ರಕಾರ ಕೋಲ್ಕತ್ತಾ, ಕೊಯಮತ್ತೂರು, ವೈಜಾಗ್, ಮಧುರೈ ಮತ್ತು ವಿಜಯವಾಡದಲ್ಲಿ ಐದು ಹೊಸ ಡೀಲರ್‌ಶಿಪ್‌ಗಳನ್ನು ತೆರೆಯತ್ತಿದ್ದು, ಪೆಟ್ರೋಲ್ ಬೆಲೆಯಿಂದಾಗಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ಬೈಕ್‌ಗಳಿಗೆ ಉತ್ತಮ ಬೇಡಿಕೆ ಬರುತ್ತಿರುವುದಕ್ಕೆ ಕಂಪನಿಯು ಹರ್ಷ ವ್ಯಕ್ತಪಡಿಸಿದೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ಅಕ್ಟೋಬರ್ 21ರಂದು 70 ನಗರಗಳಿಗೆ ಬುಕ್ಕಿಂಗ್ ಪ್ರಾರಂಭಿಸಿರುವ ರಿವೋಲ್ಟ್ ಕಂಪನಿಯು ಈ ಹೊಸ ಬ್ಯಾಚ್‌ನ ವಿತರಣೆಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಪ್ರಾರಂಭಿಸಬಹುದಾಗಿದ್ದು, ರಿವೋಲ್ಟ್ ಕಂಪನಿಯು ಹೊಸ ಬೈಕ್ ಖರೀದಿಗಾಗಿ ರೂ. 19,999 ಮುಂಗಡ ಹಣ ನಿಗದಿಪಡಿಸಿದೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ರಿವೋಲ್ಟ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಆರ್‌ವಿ400 ಇವಿ ಬೈಕ್ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಹೊಸ ಇವಿ ಬೈಕ್ ಮಾದರಿಯು ಫೇಮ್ 2 ಯೋಜನೆಯಡಿ ಗರಿಷ್ಠ ಸಬ್ಸಡಿಯೊಂದಿಗೆ ಮಾರಾಟಗೊಳ್ಳುತ್ತಿದೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ಆರಂಭದಲ್ಲಿ ಆರ್‌ವಿ300 ಮತ್ತು ಆರ್‌ವಿ400 ಮಾದರಿಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಯು ಗ್ರಾಹಕರ ಬೇಡಿಕೆಯನ್ನು ಆಧರಿಸಿ ಆರ್‌ವಿ300 ಮಾದರಿಯನ್ನು ಸ್ಥಗಿತಗೊಳಿಸಿ ಆರ್‌ವಿ400 ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ಹೊಸ ಬೈಕ್ ಮಾದರಿಯು ಕೇಂದ್ರ ಸರ್ಕಾರ ಫೇಮ್ 2 ಸಬ್ಸಡಿ ಒಳಗೊಂಡು ರೂ. 1.25 ಲಕ್ಷ ಬೆಲೆ ಹೊಂದಿದ್ದು, ಕೇಂದ್ರದ ಫೇಮ್ 2 ಸಬ್ಸಡಿ ಜೊತೆಗೆ ಕೆಲವು ರಾಜ್ಯಗಳು ತಮ್ಮ ರಾಜ್ಯದ ವಾಹನ ಖರೀದಿದಾರರಿಗಾಗಿ ಹೆಚ್ಚಿನ ಮಟ್ಟದ ಸಬ್ಸಡಿ ಒದಗಿಸುತ್ತವೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ಸದ್ಯ ದೆಹಲಿ, ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ ಸರ್ಕಾರಗಳು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಜೊತೆಗೆ ತಮ್ಮ ರಾಜ್ಯಗಳಲ್ಲಿನ ಇವಿ ವಾಹನ ಮಾರಾಟ ಮೇಲೆ ಹೆಚ್ಚುವರಿ ಸಬ್ಸಡಿ ನೀಡುತ್ತಿದ್ದು, ಹೆಚ್ಚುವರಿ ಸಬ್ಸಡಿ ಹೊಂದಿರದ ರಾಜ್ಯಗಳಲ್ಲಿ ಮಾತ್ರ ಕಂಪನಿಯು ನಿರ್ಧರಿಸಿರುವ ರೂ. 1.25 ಲಕ್ಷ ಅನ್ವಯಿಸಲಿದೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ಕರ್ನಾಟಕ ಸೇರಿದಂತೆ ಪ್ರಮುಖ ರಾಜ್ಯಗಳು ಕೇಂದ್ರದ ಫೇಮ್ 2 ಸಬ್ಸಡಿ ಆಯ್ಕೆ ಮಾತ್ರ ಹೊಂದಿದ್ದು, ಇವಿ ನೀತಿ ಅಡಿ ಹೆಚ್ಚುವರಿಯಾಗಿ ಯಾವುದೇ ಸಬ್ಸಡಿ ಹೊಂದಿಲ್ಲ. ಹೀಗಾಗಿ ಸಬ್ಸಡಿ ಹೊಂದಿರದ ರಾಜ್ಯಗಳಲ್ಲಿ ಆರ್‌ವಿ400 ಮಾದರಿಯು ರೂ. 1.25 ಲಕ್ಷ ಹೊಂದಿದ್ದು, ಪ್ರಮುಖ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ಹೊಸ ಆರ್‌ವಿ400 ಮಾದರಿಯು ರೆಬಲ್ ರೆಡ್, ಮಿಸ್ಟ್ ಗ್ರೆ ಮತ್ತು ಕಾಸ್ಮಿಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿದ್ದು, ಹೊಸ ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ಆರ್‌ವಿ400 ಮಾದರಿಯು ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡಲಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಈ ಬೈಕಿನಲ್ಲಿವೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ಸಿಟಿ, ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ಹೊಸ ಇವಿ ಬೈಕ್‌ನಲ್ಲಿ ನೀಡಲಾಗಿದ್ದು, ಜೀಯೋ ಫೆನ್ಸಿಂಗ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟರ್ನ್ ಬೈ ಟರ್ನ್ ನೆವಿಗೆಷನ್, ರಿಯಲ್ ಟೈಮ್ ವೆಹಿಕಲ್ ಮತ್ತು ಬ್ಯಾಟರಿ ನಿರ್ವಹಣಾ ಸೌಲಭ್ಯಗಳು ಕೂಡಾ ಪ್ರಮುಖವಾಗಿವೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ಬೈಕಿನ ತಾಂತ್ರಿಕ ಸೌಲಭ್ಯಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಆ್ಯಪ್ ಕೂಡಾ ನೀಡಲಾಗಿದ್ದು, ಆ್ಯಪ್ ಮೂಲಕವೇ ಹೊಸ ಬೈಕಿನ ವೇಗ, ಶಬ್ದ, ಬ್ಯಾಟರಿ ಲಭ್ಯತೆ ಸೇರಿದಂತೆ ಸಂಪೂರ್ಣ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ಇದಲ್ಲದೆ ರಿವೋಲ್ಟ್ ಕಂಪನಿಯು ಹೊಸ ಬೈಕಿನಲ್ಲಿ ಮೊದಲ ಬಾರಿಗೆ ಕೀ ಲೆಸ್ ಎಂಟ್ರಿ ಫೀಚರ್ಸ್ ಅಳವಡಿಸಿದ್ದು, ಹೊಸ ಕೀ ಲೆಸ್ ಎಂಟ್ರಿ ಫೀಚರ್ಸ್ ಮೂಲಕ ಬೈಕ್ ಮಾಲೀಕರು ಕೀ ಇಲ್ಲದೆಯೇ ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್‌ನಲ್ಲಿ 'ಸ್ವೈಪ್ ಟು ಸ್ಮಾರ್ಟ್' ಬಳಸಿ ಬೈಕ್ ಚಾಲನೆ ಮಾಡಬಹುದಾಗಿದೆ.

ನವೆಂಬರ್‌ನಲ್ಲಿ ಒಟ್ಟು ಹೊಸ ಎಲೆಕ್ಟ್ರಿಕ್ ಬೈಕ್ ಡೀಲರ್ಸ್ ತೆರೆಯಲಿದೆ ರಿವೋಲ್ಟ್

ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್ ಮೂಲಕ 'ಸ್ವೈಪ್ ಟು ಸ್ಮಾರ್ಟ್' ಮಾತ್ರವಲ್ಲದೇ ಲಾಕ್/ಅನ್‌ಲಾಕ್, ಬ್ಯಾಟರಿ ಲಭ್ಯತೆ, ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

Most Read Articles

Kannada
English summary
Revolt all set to expand network in five new cities in this month november details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X