ದೇಶಾದ್ಯಂತ ಇವಿ ಬೈಕ್ ಮಾರಾಟ ಮಳಿಗೆಗಳನ್ನು ಆರಂಭಿಸಲು ಸಿದ್ದವಾದ ರಿವೋಲ್ಟ್

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತಿದ್ದು, ಹಲವಾರು ಆಟೋ ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳನ್ನು ಬಿಡುಗಡೆ ಮಾಡುವುದರೊಂದಿಗೆ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸುತ್ತಿವೆ.

ದೇಶಾದ್ಯಂತ ಇವಿ ಬೈಕ್ ಮಾರಾಟ ಮಳಿಗೆಗಳನ್ನು ಆರಂಭಿಸಲು ಸಿದ್ದವಾದ ರಿವೋಲ್ಟ್

ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚುತ್ತಿದಂತೆ ಹಲವಾರು ಸ್ಟಾರ್ಟ್‌ಅಪ್ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಮಾದರಿಗಳೊಂದಿಗೆ ಗ್ರಾಹಕರ ಆಕರ್ಷಣೆ ಕಾರಣವಾಗಿದ್ದು, ಇವುಗಳಲ್ಲಿ ರಿವೋಲ್ಟ್ ಕೂಡಾ ಒಂದಾಗಿದೆ. ಇವಿ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆ ಹೆಚ್ಚುತ್ತಿದ್ದಂತೆ ಮಾರಾಟ ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ.

ದೇಶಾದ್ಯಂತ ಇವಿ ಬೈಕ್ ಮಾರಾಟ ಮಳಿಗೆಗಳನ್ನು ಆರಂಭಿಸಲು ಸಿದ್ದವಾದ ರಿವೋಲ್ಟ್

ಪುಣೆ ಮೂಲದ ರಿವೋಲ್ಟ್ ಕಂಪನಿಯು ಆರಂಭದಲ್ಲಿ ಪುಣೆ ಮತ್ತು ದೆಹಲಿಯಲ್ಲಿ ಮಾತ್ರವೇ ಹೊಸ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡುತ್ತಿತ್ತು. ಇತ್ತೀಚೆಗೆ ಹೊಸದಾಗಿ ಮುಂಬೈ ಮಹಾನಗರದಲ್ಲೂ ಇವಿ ಬೈಕ್ ಮಾರಾಟ ಮಳಿಗೆಗಳನ್ನು ತೆರೆಯುವ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ದೇಶಾದ್ಯಂತ ಇವಿ ಬೈಕ್ ಮಾರಾಟ ಮಳಿಗೆಗಳನ್ನು ಆರಂಭಿಸಲು ಸಿದ್ದವಾದ ರಿವೋಲ್ಟ್

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ರಿವೋಲ್ಟ್ ಕಂಪನಿಯು ಸದ್ಯ ಆರ್‌ವಿ300 ಮತ್ತು ಆರ್‌ವಿ400 ಎನ್ನುವ ಎರಡು ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಅತ್ಯುತ್ತಮ ಮೈಲೇಜ್ ಪ್ರೇರಣೆಯೊಂದಿಗೆ ಬೆಲೆಯಲ್ಲೂ ಆಕರ್ಷಕವಾಗಿವೆ.

ದೇಶಾದ್ಯಂತ ಇವಿ ಬೈಕ್ ಮಾರಾಟ ಮಳಿಗೆಗಳನ್ನು ಆರಂಭಿಸಲು ಸಿದ್ದವಾದ ರಿವೋಲ್ಟ್

ಹೊಸ ಎಲೆಕ್ಟ್ರಿಕ್ ಬೈಕ್‌ಗಳಿಗೆ ವಿವಿಧ ಮಾಹಾನಗರಗಳಿಂದ ಹೆಚ್ಚಿನ ಮಟ್ಟದ ಬೇಡಿಕೆ ಸಲ್ಲಿಕೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಯಂತೆ ದೇಶದ ಪ್ರಮುಖ 35 ನಗರಗಳಲ್ಲಿ ಇವಿ ಬೈಕ್ ಮಾರಾಟ ಮಳಿಗೆಗಳನ್ನು ತೆರೆಯುವುದಾಗಿ ರಿವೋಲ್ಟ್ ಕಂಪನಿಯು ಅಧಿಕೃತವಾಗಿ ಹೇಳಿಕೊಂಡಿದೆ. ಹೊಸ ಯೋಜನೆಗಾಗಿ ಕಂಪನಿಯು ಹೊಸದಾಗಿ ರೂ.150 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಹೊಸ ನಗರಗಳಲ್ಲಿ ಮಾರಾಟ ಪರಿಚಯಿಸಿದ ನಂತರ ಉತ್ಪಾದನಾ ಪ್ರಮಾಣವನ್ನು ಸಹ ಹೆಚ್ಚಿಸಬೇಕಿದೆ.

ದೇಶಾದ್ಯಂತ ಇವಿ ಬೈಕ್ ಮಾರಾಟ ಮಳಿಗೆಗಳನ್ನು ಆರಂಭಿಸಲು ಸಿದ್ದವಾದ ರಿವೋಲ್ಟ್

ಹೊಸ ಯೋಜನೆಗಾಗಿ ಬಂಡವಾಳ ಹೂಡಿಕೆಯಲ್ಲಿ ಯಶಸ್ವಿಯಾಗಿರುವ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಇವಿ ಬೈಕ್‌ಗಳ ಜೊತೆಗೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಅಭಿವೃದ್ದಿಗೊಳಿಸಲಿದ್ದು, ಹೊಸ ನಗರಗಳಲ್ಲಿ ಶೀಘ್ರದಲ್ಲೇ ರಿವೋಲ್ಟ್ ಖರೀದಿಗೆ ಲಭ್ಯವಾಗಲಿವೆ.

ದೇಶಾದ್ಯಂತ ಇವಿ ಬೈಕ್ ಮಾರಾಟ ಮಳಿಗೆಗಳನ್ನು ಆರಂಭಿಸಲು ಸಿದ್ದವಾದ ರಿವೋಲ್ಟ್

ರಿವೋಲ್ಟ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಆರ್‌ವಿ300 ಮತ್ತು ಆರ್‌ವಿ400 ಇವಿ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಆರ್‌ವಿ300 ಇವಿ ಮಾದರಿಯು ರೂ. 94,999 ಮತ್ತು ಆರ್‌ವಿ400 ಇವಿ ಮಾದರಿಯು ರೂ. 1,18,999 ಬೆಲೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ದೇಶಾದ್ಯಂತ ಇವಿ ಬೈಕ್ ಮಾರಾಟ ಮಳಿಗೆಗಳನ್ನು ಆರಂಭಿಸಲು ಸಿದ್ದವಾದ ರಿವೋಲ್ಟ್

ಗ್ರಾಹಕರು ಹೊಸ ಬೈಕ್ ಖರೀದಿಸಲು ತಮ್ಮ ಅನುಕೂಲಕ್ಕೆ ತಕ್ಕಂತೆ ಎರಡು ಮಾದರಿಯಲ್ಲಿ ದರ ಪಾವತಿ ಮಾಡಬಹುದಾಗಿದ್ದು, ಇಎಂಐ ಮೂಲಕ ಪಾವತಿ ಮಾಡುವುದಾದರೆ ಆರ್‌ವಿ400 ಇವಿ ಮಾದರಿಗಾಗಿ 24 ತಿಂಗಳಿಗೆ ರೂ. 6,075 ಮತ್ತು 36 ತಿಂಗಳ ಅವಧಿಗೆ ಪ್ರತಿ ತಿಂಗಳು ರೂ.4,399 ಪಾವತಿ ಮಾಡಬೇಕು. ಹಾಗೆಯೇ ಆರ್‌ವಿ300 ಇವಿ ಮಾದರಿಗಾಗಿ 24 ತಿಂಗಳಿಗೆ ಪ್ರತಿ ತಿಂಗಳು ರೂ.4,383 ಮತ್ತು 36 ತಿಂಗಳ ಅವಧಿಗೆ ಪ್ರತಿ ತಿಂಗಳು ರೂ.3,174 ಪಾವತಿ ಮಾಡಬೇಕು.

ದೇಶಾದ್ಯಂತ ಇವಿ ಬೈಕ್ ಮಾರಾಟ ಮಳಿಗೆಗಳನ್ನು ಆರಂಭಿಸಲು ಸಿದ್ದವಾದ ರಿವೋಲ್ಟ್

ಆರ್‌ವಿ300 ಬೈಕಿನಲ್ಲಿ 2.7kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 1.5kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 65 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 180 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ದೇಶಾದ್ಯಂತ ಇವಿ ಬೈಕ್ ಮಾರಾಟ ಮಳಿಗೆಗಳನ್ನು ಆರಂಭಿಸಲು ಸಿದ್ದವಾದ ರಿವೋಲ್ಟ್

ಹಾಗೆಯೇ ಆರ್‌ವಿ400 ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡುತ್ತದೆ.

More from DriveSpark

Article Published On: Thursday, April 29, 2021, 18:57 [IST]
English summary
Revolt Electric Motorcycles Sales Expansion To 35 Cities Soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+