ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿವೋಲ್ಟ್ ಮೋಟಾರ್ಸ್ ಕಂಪನಿಯು ದಕ್ಷಿಣ ಭಾರತದಲ್ಲಿ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದ್ದು, ಕಂಪನಿಯು ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲೂ ತನ್ನ ಮೊದಲ ಇವಿ ಬೈಕ್ ಮಾರಾಟ ಮಳಿಗೆಗೆ ಅಧಿಕೃತವಾಗಿ ಚಾಲನೆ ನೀಡಿತು.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ವಿನೂತನ ಫೀಚರ್ಸ್, ಅಧಿಕ ಮಟ್ಟದ ಬ್ಯಾಟರಿ ರೇಂಜ್, ಬಜೆಟ್ ಬೆಲೆ ಮತ್ತು ಅತಿ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಸದ್ಯ ಮಾರುಕಟ್ಟೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿವೋಲ್ಟ್ ನಿರ್ಮಾಣದ ಹೊಸ ಆರ್‌ವಿ400 ಇವಿ ಬೈಕ್ ಮಾದರಿಯು ಇದೀಗ ನಮ್ಮ ಬೆಂಗಳೂರಿನಲ್ಲಿ ಖರೀದಿಗೆ ಲಭ್ಯವಾಗುತ್ತಿದ್ದು, ಹೊಸ ಬೈಕ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಇದೇ ತಿಂಗಳು 21ರಿಂದ ಆರಂಭಗೊಳಿಸುವುದಾಗಿ ಕಂಪನಿಯು ಹೇಳಿಕೊಂಡಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ರಿವೋಲ್ಟ್ ಹೊಸ ವಾಹನ ಮಾರಾಟ ಮಳಿಗೆಯು ಬೆಂಗಳೂರಿನ ಕೋರಮಂಗಲದ ಕೃಷ್ಣ ನಗರ ಇಂಡಸ್ಟ್ರಿಯಲ್ ಲೇಔಟ್‌ನಲ್ಲಿ ಆರಂಭಗೊಂಡಿದ್ದು, ಬುಕ್ಕಿಂಗ್ ಆಧಾರದ ಮೇಲೆ ಕಂಪನಿಯು ಶೀಘ್ರದಲ್ಲೇ ಹೊಸ ಬೈಕ್ ವಿತರಣೆ ಆರಂಭಿಸಲಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ಹೊಸ ಆರ್‌ವಿ400 ಇವಿ ಬೈಕ್ ಮಾದರಿಗಾಗಿ ಸದ್ಯ ಬುಕ್ಕಿಂಗ್ ಪ್ರಕ್ರಿಯೆಯನ್ನು ಸ್ಥಗೀತಗೊಳಿಸಿರುವ ಕಂಪನಿಯು ಉತ್ಪಾದನಾ ಸಾಮಾರ್ಥ್ಯಕ್ಕೆ ಅನುಗುಣವಾಗಿ ಬುಕ್ಕಿಂಗ್ ಸ್ವಿಕರಿಸುತ್ತಿದ್ದು, ಇದೇ ತಿಂಗಳು 21ರಿಂದ ಬುಕ್ಕಿಂಗ್ ಪ್ರಕ್ರಿಯೆಯನ್ನು ಪುನಾರಂಭಿಸುವುದಾಗಿ ಮಾಹಿತಿ ನೀಡಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ಪೆಟ್ರೋಲ್ ಬೆಲೆ ಹೆಚ್ಚಿರುವ ಹಿನ್ನಲೆಯಲ್ಲಿ ಇವಿ ಬೈಕ್ ಖರೀದಿಗೆ ಭಾರೀ ಪ್ರಮಾಣ ಬೇಡಿಕೆ ಹರಿದುಬರುತ್ತಿದ್ದು, ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಉತ್ಪಾದನೆ ಹೊಂದಿದ್ದ ರಿವೋಲ್ಟ್ ಕಂಪನಿಯು ಇದೀಗ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ಸದ್ಯ ರಿವೋಲ್ಟ್ ಕಂಪನಿಯು ಉತ್ಪಾದನಾ ಸಾಮರ್ಥ್ಯದ ಮೇಲೆ ಎಲೆಕ್ಟ್ರಿಕ್ ಬೈಕ್ ವಿತರಣೆಯನ್ನು ಹಂತ-ಹಂತವಾಗಿ ಹೆಚ್ಚಿಸುತ್ತಿದ್ದು, ಕಳೆದ ಜುಲೈ‌ನಲ್ಲಿ ಪುನಾರಂಭಿಸಲಾಗಿದ್ದ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಸುಮಾರು 10 ಸಾವಿರ ಇವಿ ಬೈಕ್‌ಗಳಿಗೆ ಬೇಡಿಕೆ ಬಂದಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ಹೀಗಾಗಿ ಬೇಡಿಕೆಗೆ ತಕ್ಕಂತೆ ಅಲ್ಪ ಪ್ರಮಾಣದಲ್ಲಿರುವ ಉತ್ಪಾದನಾ ಸಾಮಾರ್ಥ್ಯವನ್ನು ಹೆಚ್ಚಿಸಲಾಗುತ್ತಿದ್ದು, ಉತ್ಪಾದನಾ ಘಟಕವು ವಿಸ್ತರಣೆಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಉತ್ಪಾದನೆ ಹೆಚ್ಚಳವಾಗುವ ನೀರಿಕ್ಷೆಯಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ಉತ್ಪಾದನೆಗಿಂತ ಬೇಡಿಕೆಯು ಅಧಿಕವಾಗಿರುವ ಹಿನ್ನಲೆಯಲ್ಲಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಸದ್ಯ ಸ್ಥಗಿತಗೊಳಿಸಿರುವ ರಿವೋಲ್ಟ್ ಕಂಪನಿಯು ಶೀಘ್ರದಲ್ಲೇ ಹೊಸ ಬಣ್ಣದ ಆಯ್ಕೆ ಹೊಂದಿರುವ ಬೈಕ್ ಮಾದರಿಯೊಂದಿಗೆ ಪುನಾರಂಭಿಸುತ್ತಿದ್ದು, ಹೊಸ ಇವಿ ಬೈಕ್ ಮಾದರಿಯ ಮೂಲಕ ರಿವೋಲ್ಟ್ ಕಂಪನಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ರಿವೋಲ್ಟ್ ಕಂಪನಿಯು ನಮ್ಮ ಬೆಂಗಳೂರು ಸೇರಿದಂತೆ ಅಕ್ಬೋಬರ್ 21ರಿಂದ ಒಟ್ಟು 70 ನಗರಗಳಲ್ಲಿ ಬುಕ್ಕಿಂಗ್ ಪ್ರಕ್ರಿಯೆ ಚಾಲನೆ ನೀಡುತ್ತಿದ್ದು, ಅತ್ಯುತ್ತಮ ಮೈಲೇಜ್, ಪ್ರೀಮಿಯಂ ಫೀಚರ್ಸ್, ಆಕರ್ಷಕ ಬೆಲೆ ಹೊಸ ಬೈಕ್ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ಆರ್‌ವಿ400 ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡುತ್ತದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ಹೊಸ ಇವಿ ಬೈಕ್ ಮಾದರಿಯಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಈಗಾಗಲೇ ಹಲವಾರು ತಾಂತ್ರಿಕ ಅಂಶಗಳನ್ನು ಬದಲಾವಣೆಗೊಳಿಸಿದ್ದು, ಇದೀಗ ನೀಡಲಾಗುತ್ತಿರುವ ಹೊಸ ಬಣ್ಣದ ಆಯ್ಕೆಯು ಆಕರ್ಷಕವಾಗಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ರಿವೋಲ್ಟ್ ಕಂಪನಿಯು ಇದೀಗ ಹೊಸ ಇವಿ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆಯೊಂದನ್ನು ನೀಡುತ್ತಿದ್ದು, ಸಿಲ್ವರ್ ಸ್ಮೊಕ್ ಹೊಂದಿರುವ ಹೊಸ ಬಣ್ಣದ ಆಯ್ಕೆಯು ಹೊಸ ಬೈಕ್ ಪ್ರೀಮಿಯಂ ಲುಕ್ ನೀಡಲಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ಪ್ರಸ್ತುತ ಮಾರುಕಟ್ಟೆಯಲ್ಲಿ ಆರ್‌ವಿ400 ಬೈಕ್ ಮಾದರಿಯು ರೆಬೆಲ್ ರೆಡ್ ಮತ್ತು ಕಾಸ್ಮಿಕ್ ಬ್ಲಾಕ್ ಬಣ್ಣಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಶೀಘ್ರದಲ್ಲೇ ಹೊಸ ಬಣ್ಣದ ಆಯ್ಕೆಯೊಂದಿಗೆ ಬುಕ್ಕಿಂಗ್ ಪುನಾರಂಭ ಮಾಡುವ ಯೋಜನೆಯಲ್ಲಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ಹೊಸ ಬಣ್ಣದ ಆಯ್ಕೆ ಮತ್ತು ಬುಕ್ಕಿಂಗ್ ಪುನಾರಂಭದ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ರಿವೋಲ್ಟ್ ಕಂಪನಿಯ ಸಿಇಒ ರಾಹುಲ್ ಶರ್ಮಾ ಅವರು ಮುಂಬರುವ ಹಬ್ಬದ ಋತುಗಳಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದ್ದಾರೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬೈಕ್ ಶೋರೂಂ ಆರಂಭಿಸಿದ Revolt Motors

ಇದರೊಂದಿಗೆ ಹೊಸ ಸ್ಟಾಕ್ ವಿತರಣೆಗೆ ಸಿದ್ದವಾಗುತ್ತಿರುವ ರಿವೋಲ್ಟ್ ಕಂಪನಿಯು ಹೊಸ ಬೈಕಿನಲ್ಲಿ ಮೊದಲ ಬಾರಿಗೆ ಕೀ ಲೆಸ್ ಎಂಟ್ರಿ ಫೀಚರ್ಸ್ ಸಹ ಅಳವಡಿಸಿದ್ದು, ಅಪ್ಲಿಕೇಷನ್‌ ಆಧರಿತ ಸ್ಮಾರ್ಟ್ ಕೀ ಸೌಲಭ್ಯವಾಗಿದೆ. ರಿವೋಲ್ಟ್ ಮೊಬೈಲ್ ಅಪ್ಲಿಕೇಷನ್‌ 'ಸ್ವೈಪ್ ಟು ಸ್ಮಾರ್ಟ್' ಮೂಲಕ ಲಾಕ್/ಅನ್‌ಲಾಕ್, ಬ್ಯಾಟರಿ ಲಭ್ಯತೆ, ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

More from DriveSpark

Article Published On: Tuesday, October 19, 2021, 8:45 [IST]
English summary
Revolt motors opens first showroom in bengaluru details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+