ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ರಿವೋಲ್ಟ್ ಕಂಪನಿಯ ಇವಿ ಬೈಕ್ ಮಾದರಿಯು ವಿನೂತನ ಫೀಚರ್ಸ್, ಅಧಿಕ ಮಟ್ಟದ ಬ್ಯಾಟರಿ ರೇಂಜ್, ಬಜೆಟ್ ಬೆಲೆ ಮತ್ತು ಅತಿ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಸದ್ಯ ಮಾರುಕಟ್ಟೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಆರ್‌ವಿ400 ಇವಿ ಬೈಕ್ ಮಾದರಿಯ ಬುಕ್ಕಿಂಗ್ ಪ್ರಕ್ರಿಯೆಯನ್ನು ಇದೇ ತಿಂಗಳು 21ರಿಂದ ಪುನಾರಂಭಿಸುವುದಾಗಿ ಕಂಪನಿಯು ಹೇಳಿಕೊಂಡಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಉತ್ಪಾದನಾ ಸಾಮರ್ಥ್ಯದ ಮೇಲೆ ಇವಿ ಬೈಕ್ ಮಾದರಿಯನ್ನು ಗರಿಷ್ಠ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದೆ. ಆದರೆ ಬೇಡಿಕೆಗಿಂತಲೂ ಉತ್ಪಾದನಾ ಪ್ರಮಾಣ ಕಡಿಮೆಯಿರುವ ಹಿನ್ನಲೆಯಲ್ಲಿ ಕಂಪನಿಯು ಬುಕ್ಕಿಂಗ್ ಪ್ರಮಾಣವನ್ನು ಕಳೆದ ಕೆಲ ತಿಂಗಳಿನಿಂದ ತಡೆಹಿಡಿತ್ತು. ಇದೀಗ ಬುಕ್ಕಿಂಗ್ ಪ್ರಕ್ರಿಯೆ ಮತ್ತೆ ಚಾಲನೆ ನೀಡಲು ಮುಂದಾಗಿದ್ದು, ಪೆಟ್ರೋಲ್ ಬೆಲೆ ಹೆಚ್ಚಿರುವ ಹಿನ್ನಲೆಯಲ್ಲಿ ಇವಿ ಬೈಕ್ ಖರೀದಿಗೆ ಭಾರೀ ಪ್ರಮಾಣ ಬೇಡಿಕೆ ಹರಿದುಬರುತ್ತಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ಸದ್ಯ ರಿವೋಲ್ಟ್ ಕಂಪನಿಯು ಉತ್ಪಾದನಾ ಸಾಮರ್ಥ್ಯದ ಮೇಲೆ ಎಲೆಕ್ಟ್ರಿಕ್ ಬೈಕ್ ವಿತರಣೆಯನ್ನು ಹಂತ-ಹಂತವಾಗಿ ಹೆಚ್ಚಿಸುತ್ತಿದ್ದು, ಕಳೆದ ಜುಲೈ‌ನಲ್ಲಿ ಪುನಾರಂಭಿಸಲಾಗಿದ್ದ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಸುಮಾರು 10 ಸಾವಿರ ಇವಿ ಬೈಕ್‌ಗಳಿಗೆ ಬೇಡಿಕೆ ಬಂದಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ಹೀಗಾಗಿ ಬೇಡಿಕೆಗೆ ತಕ್ಕಂತೆ ಅಲ್ಪ ಪ್ರಮಾಣದಲ್ಲಿರುವ ಉತ್ಪಾದನಾ ಸಾಮಾರ್ಥ್ಯವನ್ನು ಹೆಚ್ಚಿಸಲಾಗುತ್ತಿದ್ದು, ಉತ್ಪಾದನಾ ಘಟಕವು ವಿಸ್ತರಣೆಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಉತ್ಪಾದನೆ ಹೆಚ್ಚಳವಾಗುವ ನೀರಿಕ್ಷೆಯಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ಉತ್ಪಾದನೆಗಿಂತ ಬೇಡಿಕೆಯು ಅಧಿಕವಾಗಿರುವ ಹಿನ್ನಲೆಯಲ್ಲಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಸದ್ಯ ಸ್ಥಗಿತಗೊಳಿಸಿರುವ ರಿವೋಲ್ಟ್ ಕಂಪನಿಯು ಶೀಘ್ರದಲ್ಲೇ ಹೊಸ ಬಣ್ಣದ ಆಯ್ಕೆ ಹೊಂದಿರುವ ಬೈಕ್ ಮಾದರಿಯೊಂದಿಗೆ ಪುನಾರಂಭಿಸಲಿದ್ದು, ಹೊಸ ಇವಿ ಬೈಕ್ ಮಾದರಿಯ ಮೂಲಕ ರಿವೋಲ್ಟ್ ಕಂಪನಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ರಿವೋಲ್ಟ್ ಕಂಪನಿಯು ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲೂ ಇವಿ ಬೈಕ್ ಮಾರಾಟಕ್ಕೆ ಸಿದ್ದವಾಗಿದ್ದು, ದೇಶದ ಪ್ರಮುಖ ನಗರಗಳಲ್ಲಿ ಈಗಾಗಲೇ ಮಾರಾಟ ಪ್ರಕ್ರಿಯೆ ಆರಂಭಿಸಿರುವ ರಿವೋಲ್ಟ್ ಕಂಪನಿಯು ಅಕ್ಬೋಬರ್ 21ರಿಂದ ಒಟ್ಟು 70 ನಗರಗಳಲ್ಲಿ ಬುಕ್ಕಿಂಗ್ ಪ್ರಕ್ರಿಯೆ ಚಾಲನೆ ನೀಡುತ್ತಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ಇನ್ನು ರಿವೋಲ್ಟ್ ಕಂಪನಿಯು ತನ್ನ ಜನಪ್ರಿಯ ಆರ್‌ವಿ400(RV400) ಇವಿ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡುವುದಾಗಿ ಖಚಿತಪಡಿಸಿದ್ದು, ಹೊಸ ಬಣ್ಣದ ಆಯ್ಕೆ ಹೊಂದಿರುವ ಆರ್‌ವಿ400 ಇವಿ ಬೈಕ್ ಮುಂದಿನ ಬ್ಯಾಚ್ ವಿತರಣೆಯಲ್ಲಿ ಲಭ್ಯವಿರಲಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ಆರ್‌ವಿ400 ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡುತ್ತದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ಹೊಸ ಇವಿ ಬೈಕ್ ಮಾದರಿಯಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಈಗಾಗಲೇ ಹಲವಾರು ತಾಂತ್ರಿಕ ಅಂಶಗಳನ್ನು ಬದಲಾವಣೆಗೊಳಿಸಿದ್ದು, ಇದೀಗ ನೀಡಲಾಗುತ್ತಿರುವ ಹೊಸ ಬಣ್ಣದ ಆಯ್ಕೆಯು ಆಕರ್ಷಕವಾಗಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ರಿವೋಲ್ಟ್ ಕಂಪನಿಯು ಇದೀಗ ಹೊಸ ಇವಿ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆಯೊಂದನ್ನು ನೀಡುತ್ತಿದ್ದು, ಸಿಲ್ವರ್ ಸ್ಮೊಕ್ ಹೊಂದಿರುವ ಹೊಸ ಬಣ್ಣದ ಆಯ್ಕೆಯು ಹೊಸ ಬೈಕ್ ಪ್ರೀಮಿಯಂ ಲುಕ್ ನೀಡಲಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ಪ್ರಸ್ತುತ ಮಾರುಕಟ್ಟೆಯಲ್ಲಿ ಆರ್‌ವಿ400 ಬೈಕ್ ಮಾದರಿಯು ರೆಬೆಲ್ ರೆಡ್ ಮತ್ತು ಕಾಸ್ಮಿಕ್ ಬ್ಲಾಕ್ ಬಣ್ಣಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಶೀಘ್ರದಲ್ಲೇ ಹೊಸ ಬಣ್ಣದ ಆಯ್ಕೆಯೊಂದಿಗೆ ಬುಕ್ಕಿಂಗ್ ಪುನಾರಂಭ ಮಾಡುವ ಯೋಜನೆಯಲ್ಲಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ಹೊಸ ಬಣ್ಣದ ಆಯ್ಕೆ ಮತ್ತು ಬುಕ್ಕಿಂಗ್ ಪುನಾರಂಭದ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ರಿವೋಲ್ಟ್ ಕಂಪನಿಯ ಸಿಇಒ ರಾಹುಲ್ ಶರ್ಮಾ ಅವರು ಮುಂಬರುವ ಹಬ್ಬದ ಋತುಗಳಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದ್ದಾರೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ಇದರೊಂದಿಗೆ ಹೊಸ ಸ್ಟಾಕ್ ವಿತರಣೆಗೆ ಸಿದ್ದವಾಗುತ್ತಿರುವ ರಿವೋಲ್ಟ್ ಕಂಪನಿಯು ಹೊಸ ಬೈಕಿನಲ್ಲಿ ಮೊದಲ ಬಾರಿಗೆ ಕೀ ಲೆಸ್ ಎಂಟ್ರಿ ಫೀಚರ್ಸ್ ಸಹ ಅಳವಡಿಸಿದ್ದು, ಅಪ್ಲಿಕೇಷನ್‌ ಆಧರಿತ ಸ್ಮಾರ್ಟ್ ಕೀ ಸೌಲಭ್ಯವಾಗಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ಹೊಸ ಕೀ ಲೆಸ್ ಎಂಟ್ರಿ ಫೀಚರ್ಸ್ ಮೂಲಕ ಬೈಕ್ ಮಾಲೀಕರು ಕೀ ಇಲ್ಲದೆಯೇ ರಿವೋಲ್ಟ್ ಮೊಬೈಲ್ ಅಪ್ಲಿಕೇಷನ್‌ನಲ್ಲಿ 'ಸ್ವೈಪ್ ಟು ಸ್ಮಾರ್ಟ್' ಬಳಸಿ ಬೈಕ್ ಚಾಲನೆ ಮಾಡಬಹುದಾಗಿದ್ದು, ಹೊಸ ಫೀಚರ್ಸ್ ಹೊಂದಿರುವ ಆರ್‌ವಿ400 ಬೈಕ್ ಹೊಸ ರೈಡಿಂಗ್ ಅನುಭವ ನೀಡಲಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ರಿವೋಲ್ಟ್ ಮೊಬೈಲ್ ಅಪ್ಲಿಕೇಷನ್‌ 'ಸ್ವೈಪ್ ಟು ಸ್ಮಾರ್ಟ್' ಮೂಲಕ ಲಾಕ್/ಅನ್‌ಲಾಕ್, ಬ್ಯಾಟರಿ ಲಭ್ಯತೆ, ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ರಿವೋಲ್ಟ್ ಕಂಪನಿಯು ಹಲವು ಹೊಸ ದಾಖಲೆಗಳಿಗೆ ಕಾರಣವಾಗುತ್ತಿದ್ದು, ಇತ್ತೀಚೆಗೆ ಕಂಪನಿಯು ತನ್ನ ಆರ್‌ವಿ400 ಬೈಕ್ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ಮೂಲಕ ಆಟೋ ಉದ್ಯಮದಲ್ಲಿ ಅಚ್ಚರಿ ಮೂಡಿಸಿದೆ.

ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ Revolt ಎಲೆಕ್ಟ್ರಿಕ್ ಬೈಕ್ ಮಾದರಿಗೆ ಬುಕ್ಕಿಂಗ್ ಆರಂಭ

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಹೊಸ ವಾಹನ ಖರೀದಿದಾರರು ಇವಿ ವಾಹನಗಳತ್ತ ಆಕರ್ಷಿತರಾಗುತ್ತಿದ್ದು, ಹೊಸ ತಂತ್ರಜ್ಞಾನ ಪ್ರೇರಿತ ರಿವೋಲ್ಟ್ ಇವಿ ಬೈಕ್‌ಗಳು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

More from DriveSpark

Article Published On: Thursday, October 14, 2021, 17:57 [IST]
English summary
Revolt motors to re open bookings from 21st october details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+