ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ರಿವೋಲ್ಟ್ ಮೋಟಾರ್ಸ್(Revolt Motors) ಕಂಪನಿಯು ದೇಶದ ಪ್ರಮುಖ 70 ನಗರಗಳಲ್ಲಿ ವಾಹನ ಮಾರಾಟ ಆರಂಭಿಸುವುದಾಗಿ ಘೋಷಣೆ ಮಾಡಿದ್ದು, ಹೊಸ ಯೋಜನೆಯ ಭಾಗವಾಗಿ ಕಂಪನಿಯು ಇವಿ ಬೈಕ್ ಶೋರೂಂಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.

ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರಾಟ ಪ್ರಕ್ರಿಯೆಯನ್ನು ವಿಸ್ತರಿಸುತ್ತಿರುವ ರಿವೋಲ್ಟ್ ಕಂಪನಿಯು ಈಗಾಗಲೇ ಹೊಸ ಯುನಿಟ್‌ಗಳಿಗಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಬಜೆಟ್ ಬೆಲೆಯ ಅತ್ಯುತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿವೋಲ್ಟ್ ಕಂಪನಿಯು ಬೆಂಗಳೂರಿನಲ್ಲಿ ಹೊಸ ಶೋರೂಂ ಆರಂಭಿಸಿದ ನಂತರ ಇದೀಗ ಕೋಲ್ಕತ್ತಾದಲ್ಲೂ ಇದೀಗ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡುತ್ತಿದೆ.

ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ಸದ್ಯ ಶೋರೂಂಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತಿರುವ ರಿವೋಲ್ಟ್ ಕಂಪನಿಯು ಉತ್ತಮವಾದ ಮಾರಾಟ ಜಾಲದೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದ್ದು, ಈ ಮೊದಲ ದೆಹೆಲಿ, ಪುಣೆ ಮತ್ತು ಚೆನ್ನೈ ನಗರಗಳಲ್ಲಿ ಮಾತ್ರ ಬೈಕ್ ಮಾರಾಟ ಹೊಂದಿದ್ದ ಕಂಪನಿಯು ಇದೀಗ ಹೊಸದಾಗಿ ಬೆಂಗಳೂರು, ಸೂರತ್, ಮುಂಬೈ ಸೇರಿದಂತೆ ಪ್ರಮುಖ ನಗರಗಳಿಗೆ ಹೊಸ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ.

ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ರಿವೋಲ್ಟ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಆರ್‌ವಿ400 ಇವಿ ಬೈಕ್ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದು, ರಿವೋಲ್ಟ್ ಕಂಪನಿಯು ಹೊಸ ಬೈಕ್ ಖರೀದಿಗಾಗಿ ರೂ. 19,999 ಮುಂಗಡ ಹಣ ನಿಗದಿಪಡಿಸಿದೆ.

ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ಹೊಸ ಇವಿ ಬೈಕ್ ಮಾದರಿಗಾಗಿ ಬುಕ್ಕಿಂಗ್ ಮಾಡಿದ ನಂತರ ಮುಂದಿನ ಕೆಲವೇ ತಿಂಗಳಿನಲ್ಲಿ ವಿತರಣೆ ಮಾಡುವ ಭರವಸೆ ನೀಡಲಾಗಿದ್ದು, ಹೊಸ ಇವಿ ಬೈಕ್ ಮಾದರಿಯು ಫೇಮ್ 2 ಯೋಜನೆಯಡಿ ಗರಿಷ್ಠ ಸಬ್ಸಡಿಯೊಂದಿಗೆ ಮಾರಾಟಗೊಳ್ಳುತ್ತಿದೆ. ಆರಂಭದಲ್ಲಿ ಆರ್‌ವಿ300 ಮತ್ತು ಆರ್‌ವಿ400 ಮಾದರಿಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಯು ಗ್ರಾಹಕರ ಬೇಡಿಕೆಯನ್ನು ಆಧರಿಸಿ ಆರ್‌ವಿ300 ಮಾದರಿಯನ್ನು ಸ್ಥಗಿತಗೊಳಿಸಿ ಆರ್‌ವಿ400 ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದೆ.

ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ಹೊಸ ಬೈಕ್ ಮಾದರಿಯು ಕೇಂದ್ರ ಸರ್ಕಾರ ಫೇಮ್ 2 ಸಬ್ಸಡಿ ಒಳಗೊಂಡು ರೂ. 1.25 ಲಕ್ಷ ಬೆಲೆ ಹೊಂದಿದ್ದು, ಕೇಂದ್ರದ ಫೇಮ್ 2 ಸಬ್ಸಡಿ ಜೊತೆಗೆ ಕೆಲವು ರಾಜ್ಯಗಳು ತಮ್ಮ ರಾಜ್ಯದ ವಾಹನ ಖರೀದಿದಾರರಿಗಾಗಿ ಹೆಚ್ಚಿನ ಮಟ್ಟದ ಸಬ್ಸಡಿ ಒದಗಿಸುತ್ತವೆ.

ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ಹೊಸ ಆರ್‌ವಿ400 ಮಾದರಿಯು ರೆಬಲ್ ರೆಡ್, ಮಿಸ್ಟ್ ಗ್ರೆ ಮತ್ತು ಕಾಸ್ಮಿಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿದ್ದು, ಹೊಸ ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದೆ.

ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ಆರ್‌ವಿ400 ಮಾದರಿಯು ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡಲಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಈ ಬೈಕಿನಲ್ಲಿವೆ.

ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ಸಿಟಿ, ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ಹೊಸ ಇವಿ ಬೈಕ್‌ನಲ್ಲಿ ನೀಡಲಾಗಿದ್ದು, ಜೀಯೋ ಫೆನ್ಸಿಂಗ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟರ್ನ್ ಬೈ ಟರ್ನ್ ನೆವಿಗೆಷನ್, ರಿಯಲ್ ಟೈಮ್ ವೆಹಿಕಲ್ ಮತ್ತು ಬ್ಯಾಟರಿ ನಿರ್ವಹಣಾ ಸೌಲಭ್ಯಗಳು ಕೂಡಾ ಪ್ರಮುಖವಾಗಿವೆ.

ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ಬೈಕಿನ ತಾಂತ್ರಿಕ ಸೌಲಭ್ಯಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಆ್ಯಪ್ ಕೂಡಾ ನೀಡಲಾಗಿದ್ದು, ಆ್ಯಪ್ ಮೂಲಕವೇ ಹೊಸ ಬೈಕಿನ ವೇಗ, ಶಬ್ದ, ಬ್ಯಾಟರಿ ಲಭ್ಯತೆ ಸೇರಿದಂತೆ ಸಂಪೂರ್ಣ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ಇದಲ್ಲದೆ ರಿವೋಲ್ಟ್ ಕಂಪನಿಯು ಹೊಸ ಬೈಕಿನಲ್ಲಿ ಮೊದಲ ಬಾರಿಗೆ ಕೀ ಲೆಸ್ ಎಂಟ್ರಿ ಫೀಚರ್ಸ್ ಅಳವಡಿಸಿದ್ದು, ಹೊಸ ಕೀ ಲೆಸ್ ಎಂಟ್ರಿ ಫೀಚರ್ಸ್ ಮೂಲಕ ಬೈಕ್ ಮಾಲೀಕರು ಕೀ ಇಲ್ಲದೆಯೇ ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್‌ನಲ್ಲಿ 'ಸ್ವೈಪ್ ಟು ಸ್ಮಾರ್ಟ್' ಬಳಸಿ ಬೈಕ್ ಚಾಲನೆ ಮಾಡಬಹುದಾಗಿದೆ.

ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್ ಮೂಲಕ 'ಸ್ವೈಪ್ ಟು ಸ್ಮಾರ್ಟ್' ಮಾತ್ರವಲ್ಲದೇ ಲಾಕ್/ಅನ್‌ಲಾಕ್, ಬ್ಯಾಟರಿ ಲಭ್ಯತೆ, ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಪರಿಣಾಮ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆ ಸಲ್ಲಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಇವಿ ವಾಹನಗಳ ಖರೀದಿ ಮೇಲೆ ಈ ಹಿಂದೆ ನೀಡಲಾಗುತ್ತಿದ್ದ ಕೆಲವು ಆಫರ್‌ಗಳು ಇದೀಗ ನಿಧಾನವಾಗಿ ಕಡಿತಗೊಳಿಸಲಾಗುತ್ತಿದ್ದು, ರಿವೋಲ್ಟ್ ಕಂಪನಿಯು ಸಹ ಆರಂಭದಲ್ಲಿ ನೀಡಲಾಗಿದ್ದ ಕೆಲವು ಆಫರ್‌ಗಳನ್ನು ಕಡಿತಗೊಳಿಸಿ ಬೆಲೆ ಹೆಚ್ಚಳ ನಿರ್ಧಾರ ಕೈಗೊಂಡಿದೆ.

ಶೀಘ್ರದಲ್ಲೇ ಮತ್ತಷ್ಟು ಹೊಸ ಶೋರೂಂ ಆರಂಭಿಸಲು ಸಿದ್ದವಾದ ರಿವೋಲ್ಟ್

ಜೊತೆಗೆ ಕಂಪನಿಯು ಹೊಸ ಬೈಕಿನ ಬ್ಯಾಟರಿ ಮೇಲೆ ನೀಡಲಾಗುತ್ತಿದ್ದ 8 ವರ್ಷ ಅಥವಾ 1.50 ಲಕ್ಷ ಕಿ.ಮೀ ಮೇಲೆ ವಾರಂಟಿ ಅವಧಿಯನ್ನು ಇದೀಗ 6 ವರ್ಷ ಅಥವಾ 1 ಲಕ್ಷ ಕಿ.ಮೀ ಗೆ ವಾರಂಟಿ ಅವಧಿ ಇಳಿಕೆ ಮಾಡಿದ್ದು, ಬೇಡಿಕೆ ಹೆಚ್ಚಿದ್ದಂತೆ ಕೆಲವು ವಿನಾಯ್ತಿಗಳನ್ನು ಹಿಂಪಡೆದಿದೆ.

More from DriveSpark

Article Published On: Wednesday, December 1, 2021, 12:56 [IST]
English summary
Revolt to open new dealership in kolkata
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+