ಟ್ರ್ಯಾಕ್ಟರ್ ರೀತಿಯ ಟಯರ್‌ಗಳೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ರಾಯಲ್ ಎನ್‌ಫೀಲ್ಡ್ ಬೈಕುಗಳು ಭಾರತದಲ್ಲಿರುವ ಜನಪ್ರಿಯ ಬೈಕುಗಳಲ್ಲಿ ಒಂದಾಗಿವೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ರೆಟ್ರೊ ಶೈಲಿಯ ಬೈಕುಗಳ ತಯಾರಿಕೆಗೆ ಹೆಸರುವಾಸಿಯಾಗಿದೆ.

ಟ್ರ್ಯಾಕ್ಟರ್ ರೀತಿಯ ಟಯರ್‌ಗಳೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಕಂಪನಿಯು 350 ಸಿಸಿ ಎಂಜಿನ್ ಬೈಕುಗಳಿಂದ 650 ಸಿಸಿ ಎಂಜಿನ್ ಬೈಕುಗಳವರೆಗೆ ಹಲವು ರೀತಿಯ ಬೈಕುಗಳನ್ನು ಮಾರಾಟ ಮಾಡುತ್ತದೆ. ರಾಯಲ್ ಎನ್‌ಫೀಲ್ಡ್‌ ಕಂಪನಿಯ ಬೈಕ್‌ಗಳು ಆಟೋ ಉತ್ಸಾಹಿಗಳ ನೆಚ್ಚಿನ ಬೈಕುಗಳಾಗಿವೆ. ಈ ಕಾರಣಕ್ಕೆ ಹಲವು ರಾಯಲ್ ಎನ್‌ಫೀಲ್ಡ್ ಬೈಕುಗಳ ಮಾಲೀಕರು ತಮ್ಮ ಬೈಕ್‌ಗಳನ್ನು ಕಸ್ಟಮೈಸ್ ಮಾಡಿರುವುದನ್ನು ಕಾಣಬಹುದು.

ಟ್ರ್ಯಾಕ್ಟರ್ ರೀತಿಯ ಟಯರ್‌ಗಳೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಇದೇ ರೀತಿಯಾಗಿ ಮಾಡಿಫೈಗೊಂಡಿರುವ ರಾಯಲ್ ಎನ್‌ಫೀಲ್ಡ್ ಬೈಕಿನ ವೀಡಿಯೊ ಯೂಟ್ಯೂಬ್'ನಲ್ಲಿ ವೈರಲ್ ಆಗಿದೆ. ಈ ಬೈಕಿನ ಮಾಲೀಕರಾದ ಮಣಿ ಗಿಲ್ ಎಂಬುವವರು ಈ ಬೈಕಿನಲ್ಲಿ ಟ್ರ್ಯಾಕ್ಟರ್'ಗಳಲ್ಲಿರುವಂತಹ ದೊಡ್ಡ ಗಾತ್ರದ ಟಯರ್‌ಗಳನ್ನು ಅಳವಡಿಸಿದ್ದಾರೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಟ್ರ್ಯಾಕ್ಟರ್ ರೀತಿಯ ಟಯರ್‌ಗಳೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಈ ಬೈಕಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ದೊಡ್ಡ ಗಾತ್ರದ ಅಗಲವಾದ ಟಯರ್‌ಗಳನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ ಆಫ್ಟರ್ ಮಾರ್ಕೆಟ್ ಹೆಡ್‌ಲ್ಯಾಂಪ್ ಎಲ್‌ಇಡಿ ಯುನಿಟ್ ಅಳವಡಿಸಲಾಗಿದೆ.

ಟ್ರ್ಯಾಕ್ಟರ್ ರೀತಿಯ ಟಯರ್‌ಗಳೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಇದರ ಜೊತೆಗೆ ಈ ಬೈಕಿನಲ್ಲಿ ವಿಶಾಲವಾದ, ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್ ಅನ್ನು ಸಹ ಕಾಣಬಹುದು. ಈ ಬೈಕಿನಲ್ಲಿ ದೊಡ್ಡ ಟಯರ್‌ಗಳನ್ನು ಅಳವಡಿಸಲು ಮುಂಭಾಗದ ಸಸ್ಪೆಂಷನ್ ಬದಲಿಸಲಾಗಿದ್ದು, ಕಸ್ಟಮ್ ಟ್ರಿಪಲ್ ಟ್ರೀ ಅಳವಡಿಸಲಾಗಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಟ್ರ್ಯಾಕ್ಟರ್ ರೀತಿಯ ಟಯರ್‌ಗಳೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಈ ಬೈಕಿನಲ್ಲಿದ್ದ ಫ್ಯೂಯಲ್ ಟ್ಯಾಂಕ್ ಅನ್ನು ಮಾಡಿಫೈಗೊಳಿಸಲಾಗಿದ್ದು, ಮಸ್ಕ್ಯುಲರ್ ಲುಕ್ ನೀಡಲಾಗಿದೆ. ಈ ಬೈಕಿನಲ್ಲಿ ವಿಶಿಷ್ಟವಾದ ಕಸ್ಟಮ್ ಸೀಟ್ ಅಳವಡಿಸಲಾಗಿದೆ. ಮಾಡಿಫೈಗೊಂಡಿರುವ ಈ ಬೈಕಿನ ಹಿಂಭಾಗದಲ್ಲಿ ಹೊಸ ರೇರ್ ಫೆಂಡರ್ ಅಳವಡಿಸಲಾಗಿದೆ.

ಟ್ರ್ಯಾಕ್ಟರ್ ರೀತಿಯ ಟಯರ್‌ಗಳೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಈ ಬೈಕಿನಲ್ಲಿದ್ದ ಸ್ವಿಂಗ್ ಆರ್ಮ್ ಅನ್ನು ಸಹ ಕಸ್ಟಮೈಸ್ ಮಾಡಲಾಗಿದೆ. ಹಿಂದಿನ ಚಕ್ರವು ಮೊನೊಶಾಕ್ ಸಸ್ಪೆಂಷನ್ ಹೊಂದಿದ್ದು, ಟೇಲ್ ಲೈಟ್ ಹಾಗೂ ನಂಬರ್ ಪ್ಲೇಟ್ ಹೋಲ್ಡರ್ ಅನ್ನು ಎಡ ಸ್ವಿಂಗ್ ಆರ್ಮ್'ನಲ್ಲಿ ಇರಿಸಲಾಗಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಟ್ರ್ಯಾಕ್ಟರ್ ರೀತಿಯ ಟಯರ್‌ಗಳೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಈ ಬೈಕಿನಲ್ಲಿ ಆಫ್ಟರ್ ಮಾರ್ಕೆಟ್ ಟರ್ನ್ ಇಂಡಿಕೇಟರ್ ಹಾಗೂ ಕಸ್ಟಮ್ ಮೇಡ್ ಎಕ್ಸಾಸ್ಟ್ ಪೈಪ್ ಅಳವಡಿಸಲಾಗಿದೆ. ಗ್ಯಾಟ್ಲಿಂಗ್ ಗನ್ ಶೈಲಿಯ ಪಾಸ್ ಅನ್ನು ಬೈಕ್‌ನ ಬಲಭಾಗದಲ್ಲಿರುವ ಎಂಜಿನ್‌ನ ಪಕ್ಕದಲ್ಲಿ ಇರಿಸಲಾಗಿದೆ.

ಟ್ರ್ಯಾಕ್ಟರ್ ರೀತಿಯ ಟಯರ್‌ಗಳೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಈ ಬೈಕಿನ ಎಂಜಿನ್‌ನಲ್ಲಿ ಯಾವುದಾದರೂ ಬದಲಾವಣೆ ಮಾಡಲಾಗಿದೆಯೇ ಇಲ್ಲವೇ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಮಾಡಿಫೈಗೊಂಡಿರುವ ಈ ಬೈಕಿನಲ್ಲಿರುವ ಎಲ್ಲಾ ಎಕ್ಸಾಸ್ಟ್'ಗಳು ವಿಶಿಷ್ಟವಾಗಿ, ಆಕರ್ಷಕವಾಗಿ ಕಾಣುತ್ತವೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಟ್ರ್ಯಾಕ್ಟರ್ ರೀತಿಯ ಟಯರ್‌ಗಳೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಬೈಕ್ ಅನ್ನು ಇಷ್ಟು ಪ್ರಮಾಣದಲ್ಲಿ ಮಾರ್ಪಾಡು ಮಾಡಿರುವುದು ಬೈಕಿನ ಸವಾರಿ, ಪರ್ಫಾಮೆನ್ಸ್ ಹಾಗೂ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.ಟ್ರಾಕ್ಟರುಗಳಲ್ಲಿರುವಂತಹ ದೊಡ್ಡ ಗಾತ್ರದ ಟಯರ್ ಅಳವಡಿಸಿರುವುದರಿಂದ ಈ ಬೈಕ್ ದೈತ್ಯಾಕಾರವಾಗಿ ಕಾಣುತ್ತದೆ.

ಮೂಲ: ಶಾಂತೊನಿಲ್ ನಾಗ್

More from DriveSpark

Article Published On: Thursday, May 13, 2021, 19:33 [IST]
English summary
Royal Enfield bike modified with tractor size tyres. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+