ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್
ಇಂದಿಗೂ ರಾಯಲ್ ಎನ್‍ಫೀಲ್ಡ್ ಬೈಕ್‍ಗಳು ಭಾರತದ ರಸ್ತೆಗಳಲ್ಲಿ ರಾಜನಂತೆ ರಾರಾಜಿಸುತ್ತಿದೆ. ಹೋಂಡಾ, ಜಾವಾ ಬೈಕ್‌ಗಳ ತೀವ್ರ ಪೈಪೋಟಿ ಇದ್ದರೂ ರಾಯಲ್ ಎನ್‌ಫೀಲ್ಡ್ ಬೇಡಿಕೆ ಕಡಿಮೆಯಾಗಿಲ್ಲ. ರಾಯಲ್ ಎನ್ಫೀಲ್ಡ್ ತನ್ನ ವಿಶಿಷ್ಟವಾದ ಲುಕ್, ಶಬ್ಧ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್.

ಈ ರಾಯಲ್ ಎನ್‍ಫೀಲ್ಡ್ ಕೇವಲ ಯುವಕರ ಕನಸಿನ ಬೈಕ್ ಮಾತ್ರವಲ್ಲ ಯುವತಿಯರ ಕನಸಿನ ಬೈಕ್ ಕೂಡ ಆಗಿದೆ. ರಾಯಲ್ ಎನ್‍ಫೀಲ್ಡ್ ಬೈಕ್ ಮೇಲೆ ಕುಳಿತು ರೈಡ್ ಮಾಡುವುದೆಂದರೆ ಅದೊಂದು ಗತ್ತು. ಆರೇಳು ದಶಕಗಳಿಂದಲೂ ಅದೇ ಕ್ರೇಜ್, ಅದೇ ಟ್ರೆಂಡ್ ಉಳಿಸಿಕೊಂಡು ಬಂದಿರುವುದು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಹೆಗ್ಗಳಿಕೆಯಾಗಿದೆ. ಕಾಲೇಜು ಯುವಕರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕೂಡ ಈ ರಾಯಲ್ ಎನ್‍ಫಿಲ್ಡ್ ಬೈಕ್‍ಗಳ ಅಭಿಮಾನಿಗಳಾಗಿದ್ದಾರೆ.

ಈ ರಾಯಲ್ ಎನ್‍ಫೀಲ್ಡ್ ಬೈಕ್‌ಗಳನ್ನು ಹಲವರು ಮಾಡಿಫೈಗೊಳಿಸಲು ಇಷ್ಟಪಡುತ್ತಾರೆ.ರಾಯಲ್ ಎನ್‍ಫಿಲ್ಡ್ ಬೈಕ್‍ಗಳ ಮಾಡಿಫೈಗೊಳಿಸಿದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಇವೆ. ಆದರೆ ಇಲ್ಲಿ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕನ್ನು ಬಾಬರ್ ಶೈಲಿಯ ಬೈಕ್ ಆಗಿ ಮಾಡಿಫೈಗೊಳಿಸಿದ್ದಾರೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಮೋಟರ್ ಹೆಡ್ಸ್ ಕಸ್ಟಮ್ಸ್ ಅವರು ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಮಾದರಿಯನ್ನು ಬಾಬರ್ ಶೈಲಿಯ ಬೈಕ್ ಆಗಿ ಮಾದರಿಯಾಗಿ ಮಾಡಿಫೈಗೊಳಿಸಿದ್ದಾರೆ. ಮಾಡಿಫೈಗೊಂಡ ರಾಯಲ್ ಎನ್‍ಫಿಲ್ಡ್ ಕ್ಲಾಸಿಕ್ 350 ಬೈಕನ್ನು ವಿಸೆರಿಯನ್ 350 ಎಂಬ ಹೆಸರನ್ನು ನೀಡಲಾಗಿದೆ.

ಮಾಡಿಫೈಗೊಂಡ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕಿನಲ್ಲಿ ಆಫ್ಟರ್ ಮಾರ್ಕೆಟ್ ಎಲ್ಇಡಿ ಹೆಡ್ ಲ್ಯಾಂಪ್, ಕಸ್ಟಮ್ ಫೋರ್ಕ್ ಕವರ್ ಮತ್ತು ಹೊಸ ಫೆಂಡರ್ ಅನ್ನು ಪಡೆಯುತ್ತದೆ. ಇನ್ನು ಈ ಬೈಕಿನಲ್ಲಿ ಸಿಂಗಲ್-ಪಾಡ್ ಅನಲಾಗ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ.
MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಇನ್ನು ಈ ಬೈಕಿನ ಹ್ಯಾಂಡಲ್‌ಬಾರ್‌ಗಳು ಸ್ಪೋರ್ಟ್ ಬಾರ್-ಎಂಡ್ ಮೀರರ್ಸ್, ಜೊತೆಗೆ ಬಾರ್-ಎಂಡ್ ಆಫ್ಟರ್ ಮಾರ್ಕೆಟ್ ಎಲ್ಇಡಿ ಇಂಡಿಕೇಟರ್ಸ್ ಮತ್ತು ಸ್ಟಾಕ್ ಫ್ಯೂಯಲ್ ಟ್ಯಾಂಕ್ ಗಿಂತ ದೊಡ್ಡ ಕಸ್ಟಮ್ ಫ್ಯೂಯಲ್ ಟ್ಯಾಂಕ್ ಅನ್ನು ನೀಡಲಾಗಿದೆ.

ಮಾಡಿಫೈಗೊಂಡ ಈ ಬೈಕಿನಲ್ಲಿ ಸಿಲಿಂಡರ್ ಹೆಡ್ ಕವರ್ ಮತ್ತು ಎಂಜಿನ್ ಕವರ್ ಕ್ರೋಮ್ ಹೊಂದಿದೆ. ಇನ್ನು ಫ್ಯೂಯಲ್ ಟ್ಯಾಂಕ್ ಮತ್ತು ಸೈಡ್ ಬಾಕ್ಸ್‌ಗಳು ಬಿಳಿ, ಬೂದು ಮತ್ತು ಕಪ್ಪು ಬಣ್ಣದಲ್ಲಿದೆ. ಉಳಿದಂತೆ ಬೈಕ್ ಸಂಪೂರ್ಣ ಕಪ್ಪು ಬಣ್ಣದಲ್ಲಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಈ ಬೈಕಿನಲ್ಲಿ 'ವಿಸೇರಿಯನ್ 350' ಬ್ರ್ಯಾಂಡಿಂಗ್ ಅನ್ನು ಪಡೆದುಕೊಳ್ಳುತ್ತದೆ, ಜೊತೆಗೆ ಕಸ್ಟಮ್ ಲೋಗೊವನ್ನು ಪಡೆಯುತ್ತದೆ. ಸಿಂಗಲ್-ಸೀಟ್ ಸಾಕಷ್ಟು ಕಡಿಮೆ ಸ್ಥಾನದಲ್ಲಿದೆ ಮತ್ತು ಸ್ಕೂಪ್ಡ್ ವಿನ್ಯಾಸವನ್ನು ಹೊಂದಿದೆ, ಇನ್ನು ಬೈಕಿನ ಹಿಂಭಾಗದ ಫೆಂಡರ್ ಅನ್ನು ನೋಡಬಹುದು.

ಇನ್ನು ಈ ಮಾಡಿಪೈ ಬೈಕಿನಲ್ಲಿ ಲ್‌ಲೈಟ್ ಮತ್ತು ನಂಬರ್‌ಪ್ಲೇಟ್ ಹೋಲ್ಡರ್ ಅನ್ನು ಎಡ ಸ್ವಿಂಗಾರ್ಮ್‌ನಲ್ಲಿ ಜೋಡಿಸಲಾಗಿದೆ. ಹಿಂಭಾಗದಲ್ಲಿ ಎಲ್ಇಡಿ ಇಂಡಿಕೇಟರ್ಸ್ ಅನ್ನು ಜೋಡಿಸಲಾಗಿದೆ. ಹಿಂಭಾಗ ಟ್ವಿನ್ ಶಾಕ್ ಅಬ್ಸಾರ್ಬರ್ ಗಳನ್ನು ಜೋಡಿಸಲಾಗಿದೆ.

ಇನ್ನು ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್ಫೀಲ್ಡ್ ತನ್ನ ಸರಣಿಯಲ್ಲಿರು ಜನಪ್ರಿಯ ಕ್ಲಾಸಿಕ್ 350 ಬೈಕನ್ನು ಹೊಸ ನವೀಕರಣದೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ.ಈ 2021ರ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ದೇಶಿಯ ಮಾರುಕಟ್ಟೆಗೆ ಶೀಘ್ರದಲ್ಲೇ ಲಗ್ಗೆಯಿಡಲಿದೆ.
Image Courtesy: Motorheads Customs


Click it and Unblock the Notifications








