ಮಾರಾಟವಾಗುವ ಪ್ರತಿಯೊಂದು ಬೈಕಿಗೂ ಒಂದು ಗಿಡ ನೆಡುತ್ತದೆ ಈ ಖ್ಯಾತ ಬೈಕ್ ತಯಾರಕ ಕಂಪನಿ

ಭಾರತದ ರಾಯಲ್ ಎನ್ ಫೀಲ್ಡ್ ಕಂಪನಿಯ ಇಟಾಲಿಯನ್ ವಿಭಾಗ ಹಾಗೂ ಟ್ರೀಡಮ್ ಕಂಪನಿಗಳು ಸಹ ಭಾಗಿತ್ವವನ್ನು ಮಾಡಿಕೊಂಡಿವೆ. ಈ ಸಹ ಭಾಗಿತ್ವದ ಅನ್ವಯ ಇಟಲಿಯಲ್ಲಿ ಪ್ರತಿಯೊಂದು ರಾಯಲ್ ಎನ್ ಫೀಲ್ಡ್ ಬೈಕ್ ಮಾರಾಟವಾದ ಬಳಿಕ ಒಂದು ಸಸಿ ನೆಡಲಾಗುವುದು. ಈ ಯೋಜನೆಯಡಿ ಈಗಾಗಲೇ ಇತ್ಳಿಯಲ್ಲಿ 800 ಸಸಿಗಳನ್ನು ನೆಡಲಾಗಿದೆ.

ಮಾರಾಟವಾಗುವ ಪ್ರತಿಯೊಂದು ಬೈಕಿಗೂ ಒಂದು ಗಿಡ ನೆಡುತ್ತದೆ ಈ ಖ್ಯಾತ ಬೈಕ್ ತಯಾರಕ ಕಂಪನಿ

ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸಸಿಗಳನ್ನು ನೆಡಲಾಗುವುದು ಎಂದು ವರದಿಯಾಗಿದೆ. ರಾಯಲ್ ಎನ್ ಫೀಲ್ಡ್ ಕಂಪನಿಯ ಬೈಕ್ ಖರೀದಿಸುವ ಪ್ರತಿಯೊಬ್ಬ ಗ್ರಾಹಕರ ಹೆಸರಿನಲ್ಲಿ ಸಸಿ ನೆಡಲಾಗುವುದು. ಯಾವ ಸಸಿ ನೆಡಬೇಕು ಎಂಬುದನ್ನು ಗ್ರಾಹಕರು ನಿರ್ಧರಿಸಬಹುದು. ರಾಯಲ್ ಎನ್ ಫೀಲ್ಡ್ ಬೈಕ್ ಖರೀದಿಸುವ ಗ್ರಾಹಕರು ಆವಕಾಡೊ ಸಸಿ ಹಾಗೂ ಓಕ್ ಸಸಿಗಳಂತಹ ವಿವಿಧ ರೀತಿಯ ಸಸಿಗಳನ್ನು ಆಯ್ಕೆ ಮಾಡಬಹುದು.

ಮಾರಾಟವಾಗುವ ಪ್ರತಿಯೊಂದು ಬೈಕಿಗೂ ಒಂದು ಗಿಡ ನೆಡುತ್ತದೆ ಈ ಖ್ಯಾತ ಬೈಕ್ ತಯಾರಕ ಕಂಪನಿ

ಟ್ರೀಡಮ್ ಕಂಪನಿಯು ಇಟಲಿಯ ಸ್ಥಳೀಯ ರೈತರ ಸಹಯೋಗದೊಂದಿಗೆ ಈ ಸಸಿಗಳ ಮೂಲಕ ಸರಿಯಾದ ಕೃಷಿಯಲ್ಲಿ ತೊಡಗಿಸಿ ಕೊಳ್ಳುತ್ತಿದೆ. ತಮ್ಮ ಹೆಸರಿನಲ್ಲಿ ನೆಟ್ಟ ಸಸಿಗಳ ಸ್ಥಿತಿ ಏನಾಗಿದೆ, ಎಷ್ಟು ಬೆಳೆದಿದೆ ಎಂಬುದನ್ನು ಗ್ರಾಹಕರು ತಿಳಿದುಕೊಳ್ಳಬಹುದು.

ಮಾರಾಟವಾಗುವ ಪ್ರತಿಯೊಂದು ಬೈಕಿಗೂ ಒಂದು ಗಿಡ ನೆಡುತ್ತದೆ ಈ ಖ್ಯಾತ ಬೈಕ್ ತಯಾರಕ ಕಂಪನಿ

ಇದೇ ವೇಳೆ ಈ ಮರಗಳಿಂದ ಸಿಗುವ ಪ್ರಯೋಜನಗಳನ್ನು ಮರವನ್ನು ನಿರ್ವಹಿಸುವ ರೈತರಿಗೆ ಸಂಪೂರ್ಣವಾಗಿ ಪಾವತಿಸಲಾಗುತ್ತದೆ. ಇದರಿಂದಾಗಿ ಈ ಯೋಜನೆಯು ಇಟಲಿಯ ರೈತರಿಗೂ ಅನುಕೂಲವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಯೋಜನೆಯನ್ನು ಸದ್ಯಕ್ಕೆ ಇಟಲಿಯಲ್ಲಿ ಮಾತ್ರ ಜಾರಿಗೊಳಿಸಲಾಗಿದೆ.

ಮಾರಾಟವಾಗುವ ಪ್ರತಿಯೊಂದು ಬೈಕಿಗೂ ಒಂದು ಗಿಡ ನೆಡುತ್ತದೆ ಈ ಖ್ಯಾತ ಬೈಕ್ ತಯಾರಕ ಕಂಪನಿ

ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಜರ್ಮನಿಗೂ ವಿಸ್ತರಿಸುವ ಸಾಧ್ಯತೆಗಳಿವೆ. ಮುಂಬರುವ ದಿನಗಳಲ್ಲಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಲಾಗುವುದು. ಇದರ ನಡುವೆ ರಾಯಲ್ ಎನ್ ಫೀಲ್ಡ್ ಕಂಪನಿಯು ಭಾರತದಲ್ಲಿ ಹೊಸ ತಲೆಮಾರಿನ ಕ್ಲಾಸಿಕ್ 350 ಬೈಕ್ ಅನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲಿ ನಿರತವಾಗಿದೆ.

ಮಾರಾಟವಾಗುವ ಪ್ರತಿಯೊಂದು ಬೈಕಿಗೂ ಒಂದು ಗಿಡ ನೆಡುತ್ತದೆ ಈ ಖ್ಯಾತ ಬೈಕ್ ತಯಾರಕ ಕಂಪನಿ

ರಾಯಲ್ ಎನ್ ಫೀಲ್ಡ್ ಕಂಪನಿಯ ಕ್ಲಾಸಿಕ್ 350 ಬೈಕ್ 350 ಸಿಸಿ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಲ್ಲಿ ಒಂದಾಗಿದೆ. ಆದರೆ ಹೋಂಡಾ ಹೈ ನೆಸ್ಸಿಬಿ 350 ನಂತಹ ಬೈಕುಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವುದರಿಂದ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ ಸ್ವಲ್ಪ ಮಟ್ಟದ ಪೈಪೋಟಿಯನ್ನು ಎದುರಿಸುವಂತಾಗಿದೆ.

ಮಾರಾಟವಾಗುವ ಪ್ರತಿಯೊಂದು ಬೈಕಿಗೂ ಒಂದು ಗಿಡ ನೆಡುತ್ತದೆ ಈ ಖ್ಯಾತ ಬೈಕ್ ತಯಾರಕ ಕಂಪನಿ

ಹಾಗಾಗಿ ರಾಯಲ್ ಎನ್ ಫೀಲ್ಡ್ ಕಂಪನಿಯು ಕ್ಲಾಸಿಕ್ 350 ಬೈಕಿನ ಹೊಸ ತಲೆಮಾರಿನ ಮಾದರಿಯನ್ನು ಬಿಡುಗಡೆಗೊಳಿಸಲು ಹೆಚ್ಚು ಸಕ್ರಿಯವಾಗಿದೆ. ಹೊಸತಲೆಮಾರಿನ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ ಅನ್ನು ಭಾರತದ ರಸ್ತೆಗಳಲ್ಲಿ ನಿರಂತರವಾಗಿ ಪರೀಕ್ಷಿಸಲಾಗುತ್ತಿದೆ. ಆ ಸಮಯದಲ್ಲಿ ತೆಗೆದ ಸ್ಪೈ ಚಿತ್ರಗಳು ಹಲವು ಬಾರಿ ಬಿಡುಗಡೆಯಾಗಿವೆ.

ಮಾರಾಟವಾಗುವ ಪ್ರತಿಯೊಂದು ಬೈಕಿಗೂ ಒಂದು ಗಿಡ ನೆಡುತ್ತದೆ ಈ ಖ್ಯಾತ ಬೈಕ್ ತಯಾರಕ ಕಂಪನಿ

ಹೊಸ ತಲೆಮಾರಿನ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ತಲೆಮಾರಿನ ರಾಯಲ್ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ ಅಧಿಕೃತವಾಗಿ ಆಗಸ್ಟ್ 27 ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಮಾರಾಟವಾಗುವ ಪ್ರತಿಯೊಂದು ಬೈಕಿಗೂ ಒಂದು ಗಿಡ ನೆಡುತ್ತದೆ ಈ ಖ್ಯಾತ ಬೈಕ್ ತಯಾರಕ ಕಂಪನಿ

ರಾಯಲ್ ಎನ್ ಫೀಲ್ಡ್ ಕಂಪನಿಯು ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಕ್ಲಾಸಿಕ್ 350 ಬೈಕಿನ ವಿನ್ಯಾಸ ಹಾಗೂ ತಂತ್ರಜ್ಞಾನದಲ್ಲಿ ಹಲವು ಅಪ್ ಡೇಟ್ ಗಳನ್ನು ಮಾಡಿದೆ. ಈಗ ಮಾರಾಟದಲ್ಲಿರುವ ಮಾದರಿಗೆ ಹೋಲಿಸಿದರೆ, ಹೊಸ ತಲೆಮಾರಿನ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ ಹೆಚ್ಚು ಬೆಲೆ ಹೊಂದಿರಲಿದೆ ಎಂದು ಹೇಳಲಾಗಿದೆ.

ಮಾರಾಟವಾಗುವ ಪ್ರತಿಯೊಂದು ಬೈಕಿಗೂ ಒಂದು ಗಿಡ ನೆಡುತ್ತದೆ ಈ ಖ್ಯಾತ ಬೈಕ್ ತಯಾರಕ ಕಂಪನಿ

ರಾಯಲ್ ಎನ್‍ಫೀಲ್ಡ್ ಕಂಪನಿಯ ಬೈಕುಗಳಿಗೆ ದೊಡ್ಡ ಅಭಿಮಾನಿ ಬಳಗವಿದೆ. ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ಕರೋನಾ ಸಾಂಕ್ರಾಮಿಕದ ನಡುವೆಯೂ ಜುಲೈ ತಿಂಗಳಿನಲ್ಲಿ ಒಟ್ಟಾರೆ 44,038 ಯುನಿಟ್‌ ಬೈಕುಗಳನ್ನು ಮಾರಾಟ ಮಾಡಿದೆ.

ಮಾರಾಟವಾಗುವ ಪ್ರತಿಯೊಂದು ಬೈಕಿಗೂ ಒಂದು ಗಿಡ ನೆಡುತ್ತದೆ ಈ ಖ್ಯಾತ ಬೈಕ್ ತಯಾರಕ ಕಂಪನಿ

2020 ರ ಜುಲೈ ತಿಂಗಳಿನಲ್ಲಿ ಕಂಪನಿಯು 40,334 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಕಂಪನಿಯ ಮಾರಾಟ ಪ್ರಮಾಣವು ಈ ವರ್ಷದ ಜುಲೈ ತಿಂಗಳಿನಲ್ಲಿ 9% ನಷ್ಟು ಹೆಚ್ಚಾಗಿದೆ. ಕಳೆದ ತಿಂಗಳು ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 39,390 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಮಾರಾಟವಾಗುವ ಪ್ರತಿಯೊಂದು ಬೈಕಿಗೂ ಒಂದು ಗಿಡ ನೆಡುತ್ತದೆ ಈ ಖ್ಯಾತ ಬೈಕ್ ತಯಾರಕ ಕಂಪನಿ

ಇನ್ನು ಕಳೆದ ತಿಂಗಳು 4,748 ಯುನಿಟ್‌ ಬೈಕುಗಳನ್ನು ರಫ್ತು ಮಾಡಲಾಗಿದೆ. ಈ ಮೂಲಕ ರಾಯಲ್ ಎನ್ ಫೀಲ್ಡ್ ಕಂಪನಿಯು ಬೈಕುಗಳ ರಫ್ತಿನಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಕಂಪನಿಯು ರಫ್ತಿನಲ್ಲಿಯೂ ಸಹ 9% ನಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಮಾರಾಟವಾಗುವ ಪ್ರತಿಯೊಂದು ಬೈಕಿಗೂ ಒಂದು ಗಿಡ ನೆಡುತ್ತದೆ ಈ ಖ್ಯಾತ ಬೈಕ್ ತಯಾರಕ ಕಂಪನಿ

ಕಂಪನಿಯು ಈ ವರ್ಷದ ಏಪ್ರಿಲ್ - ಜುಲೈ ತಿಂಗಳುಗಳ ನಡುವೆ 23,711 ಯುನಿಟ್‌ ಬೈಕುಗಳನ್ನು ರಫ್ತು ಮಾಡಿದೆ. ಈ ರಫ್ತು ಪ್ರಮಾಣವು ಜಾಗತಿಕ ಮಟ್ಟದಲ್ಲಿಯೂ ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕುಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ದೃಢಪಡಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 130 ಕ್ಕೂ ಹೆಚ್ಚು ವಿಶೇಷ ಮಳಿಗೆಗಳನ್ನು ಹೊಂದಿದ್ದು, 60 ಕ್ಕೂ ಹೆಚ್ಚು ದೇಶಗಳಲ್ಲಿ 760 ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹೊಂದಿದೆ.

Most Read Articles

Kannada
English summary
Royal enfield company plants one tree for every bike sold details
Story first published: Monday, August 23, 2021, 17:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X