ಜನಪ್ರಿಯ ಬುಲೆಟ್ 350 ಬೈಕ್ ಬೆಲೆ ಏರಿಸಿದ ರಾಯಲ್ ಎನ್‌ಫೀಲ್ಡ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹಲವು ಮಾದರಿಗಳ ಬೆಲೆಗಳನ್ನು ಹೆಚ್ಚಿಸಿದೆ. ಇದೀಗ ರಾಯಲ್ ಎನ್‌ಫೀಲ್ಡ್ ತನ್ನ ಸರಣಿಯಲ್ಲಿರುವ ಮತ್ತೊಂದು ಜನಪ್ರಿಯ ಮಾದರಿಯ ಬುಲೆಟ್ 350 ಬೆಲೆಯನ್ನು ಕೂಡ ಹೆಚ್ಚಿಸಿದೆ.

ಜನಪ್ರಿಯ ಬುಲೆಟ್ 350 ಬೈಕ್ ಬೆಲೆ ಏರಿಸಿದ ರಾಯಲ್ ಎನ್‌ಫೀಲ್ಡ್

ಇನ್ನು ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕಿನ ಬೆಲೆಯು ರೂ.1,30,228 ಗಳಾಗಿತ್ತು. ಆದರೆ ಇದೀಗ ಬೆಲೆ ಏರಿಕೆಯ ಬಳಿಕ ರೂ.1,30,228 ಗಳಾಗಿದೆ. ಇನ್ನು ಬುಲೆಟ್ 350 ಬೈಕಿನ ವೆರಿಯೆಂಟ್ ಗಳ ಅನುಗುಣವಾಗಿ ಬೆಲೆ ಏರಿಕೆಯ ಬಳಿಕ, ಬುಲೆಟ್ ಎಕ್ಸ್ 350 ಇಎಫ್‌ಐ ಓನಿಕ್ಸ್ ಬ್ಲ್ಯಾಕ್/ಸಿಲ್ವರ್ ವೆರಿಯೆಂಟ್ ಬೆಲೆಯು ರೂ.1,30,228, ಬುಲೆಟ್ 350 ಇಎಫ್‌ಐ ಬ್ಲ್ಯಾಕ್/ಫಾರೆಸ್ಟ್ ಗ್ರೀನ್ ವೆರಿಯೆಂಟ್ ಬೆಲೆಯು ರೂ.1,36,502 ಗಳಾಗಿದ್ದರೆ ಬುಲೆಟ್ ಎಕ್ಸ್ 350 ಇಎಸ್ ಇಎಫ್‌ಐ ರಾಯಲ್ ಬ್ಲೂ/ರೀಗಲ್ ರೆಡ್ /ಜೆಟ್ ಬ್ಲಾಕ್ ವೆರಿಯೆಂಟ್ ಬೆಲೆಯು ರೂ.1,46,152 ಗಳಾಗಿದೆ.

ಜನಪ್ರಿಯ ಬುಲೆಟ್ 350 ಬೈಕ್ ಬೆಲೆ ಏರಿಸಿದ ರಾಯಲ್ ಎನ್‌ಫೀಲ್ಡ್

ಇನ್ನು ಮೇಲಿನ ಎಲ್ಲಾ ಬೆಲೆಗಳು ಅಹಮದಾಬಾದ್ ಎಕ್ಸ್ ಶೋರೂಂ ಪ್ರಕಾರವಾಗಿದೆ. ಬೆಲೆಯ ಏರಿಕೆಯನ್ನು ಹೊರತುಪಡಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕಿನಲ್ಲಿ ಯಾವುದೇ ಬದಲಾವಣೆಗಳಿಲ್ಲ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಜನಪ್ರಿಯ ಬುಲೆಟ್ 350 ಬೈಕ್ ಬೆಲೆ ಏರಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕಿನಲ್ಲಿರುವ ಮಾದರಿಯ ಎಂಜಿನ್ ಅನ್ನು ಬುಲೆಟ್ 350 ಬೈಕಿನಲ್ಲಿ ಅಳವಡಿಸಲಿದೆ. ಕ್ಲಾಸಿಕ್ 350 ಬೈಕಿನಲ್ಲಿರುವ 346 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‍ನಂತೆಯೇ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಈ ಹೊಸ ಬೈಕಿನಲ್ಲಿ ಅಳವಡಿಸಿದೆ.

ಜನಪ್ರಿಯ ಬುಲೆಟ್ 350 ಬೈಕ್ ಬೆಲೆ ಏರಿಸಿದ ರಾಯಲ್ ಎನ್‌ಫೀಲ್ಡ್

ಅದರೆ ಬುಲೆಟ್ ಬೈಕಿನಲ್ಲಿರುವ ಎಂಜಿನ್ 19.3 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಕ್ಲಾಸಿಕ್ 350 ಬೈಕಿನ ಎಂಜಿನ್‍‍ಗೆ ಹೋಲಿಸಿದರೆ 0.71 ಬಿ‍‍ಹೆಚ್‍‍ಪಿ ಪವರ್ ಕಡೆಮೆ ಉತ್ಪಾದಿಸುತ್ತದೆ. ಟಾರ್ಕ್ ಅಂಕಿ ಅಂಶದಲ್ಲಿ ಯಾವುದೇ ಬದಲಾವಣೆಗಳು ಇಲ್ಲ, ಅದೇ 28 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಜನಪ್ರಿಯ ಬುಲೆಟ್ 350 ಬೈಕ್ ಬೆಲೆ ಏರಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ರೇರ್ ಶಾಕ್ ಅಬ್ಸಾರ್ಬರ್ ಅನ್ನು ಹೊಂದಿದೆ.

ಜನಪ್ರಿಯ ಬುಲೆಟ್ 350 ಬೈಕ್ ಬೆಲೆ ಏರಿಸಿದ ರಾಯಲ್ ಎನ್‌ಫೀಲ್ಡ್

ಇನ್ನು ಈ ಬೈಕಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷತೆಗಾಗಿ 280 ಎಂಎಂ ಫ್ರಂಟ್ ಡಿಸ್ಕ್ ಮತ್ತು 153 ಎಂಎಂ ಡ್ರಮ್ ಬೈಕ್ ಅನ್ನು ಹೊಂದಿದೆ. ಸಿಂಗಲ್ ಚಾನೆಲ್ ಎಬಿಎಸ್ ಸ್ಟ್ಯಾಡಂರ್ಡ್ ಆಗಿ ಅಳವಡಿಸಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಜನಪ್ರಿಯ ಬುಲೆಟ್ 350 ಬೈಕ್ ಬೆಲೆ ಏರಿಸಿದ ರಾಯಲ್ ಎನ್‌ಫೀಲ್ಡ್

ಇದರೊಂದಿಗೆ ಇದೀಗ ಜನಪ್ರಿಯ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಕೂದ ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ದುಬಾರಿಯಾಗಿದೆ. ಈ ಹಿಂದೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ ಆರಂಭಿಕ ಬೆಲೆಯು ರೂ.1,61,688 ಗಳಾಗಿತ್ತು. ಆದರೆ ಬೆಲೆ ಏರಿಕೆಯ ಬಳಿಕ ಇದೀಗ ಇದರ ಆರಂಭಿಕ ಬೆಲೆಯು 1,67,235 ಗಳಾಗಿದೆ. ಈ ಬೆಲೆಯು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಜನಪ್ರಿಯ ಬುಲೆಟ್ 350 ಬೈಕ್ ಬೆಲೆ ಏರಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹಲವು ಮಾದರಿಗಳ ಬೆಲೆಗಳನ್ನು ಹೆಚ್ಚಿಸುತ್ತಿದೆ. ಬೆಲೆ ಏರೆಕೆಯು ಬೈಕುಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತದಯೇ ಎಂಬುದನ್ನು ಕಾದು ನೋಡಬೇಕು.

Article Published On: Monday, February 15, 2021, 20:24 [IST]
English summary
Royal Enfield Bullet 350 Gets Expensive. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+