ಸ್ಕ್ರ್ಯಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650
ಇಂದಿಗೂ ರಾಯಲ್ ಎನ್‍ಫೀಲ್ಡ್ ಬೈಕ್‍ಗಳು ಭಾರತದ ರಸ್ತೆಗಳಲ್ಲಿ ರಾಜನಂತೆ ರಾರಾಜಿಸುತ್ತಿದೆ. ಹೋಂಡಾ, ಜಾವಾ ಬೈಕ್‌ಗಳ ತೀವ್ರ ಪೈಪೋಟಿ ಇದ್ದರೂ ರಾಯಲ್ ಎನ್‌ಫೀಲ್ಡ್ ಬೇಡಿಕೆ ಕಡಿಮೆಯಾಗಿಲ್ಲ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮೇಲೆ ಜನರಿಗಿರುವ ಕ್ರೇಜ್ ಇಂದು ನೆನ್ನೆಯದಲ್ಲ, ಅದು ಹಲವಾರು ದಶಕಗಳಿಂದ ಇರುವ ಕ್ರೇಜ್.

ರಾಯಲ್ ಎನ್‍ಫೀಲ್ಡ್ ತನ್ನ ವಿಶಿಷ್ಟವಾದ ಲುಕ್, ಶಬ್ಧ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್. ರಾಯಲ್ ಎನ್‍ಫೀಲ್ಡ್ ಬೈಕ್ ಯುವಕರ ಕನಸಿನ ಬೈಕ್ ಮಾತ್ರವಲ್ಲ ಯುವತಿಯರ ಕನಸಿನ ಬೈಕ್ ಕೂಡ ಆಗಿದೆ. ಇನ್ನು ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಮಾಡಿಫೈಗೊಳಿಸಲು ಹಲವರು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕನ್ನು ಸ್ಕ್ರ್ಯಾಂಬ್ಲರ್ ಶೈಲಿಯ ಮಾಡಿಫೈಗೊಳಿಸಿದ ಉದಾಹರಣೆ ಇಲ್ಲಿದೆ.

ಅರ್ಜೆಂಟೀನಾದ ಬ್ಯೂನಸ್ ಮೂಲದ ಕಸ್ಟಮ್ ಗ್ಯಾರೇಜ್ ಎಸ್ಟಿಜಿ ಟ್ರ್ಯಾಕರ್ ಅವರು ಈ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕನ್ನು ಮಾಡಿಫೈಗೊಳಿಸಿದಾರೆ. ಈ ಬೈಕಿನ ಮುಂಭಾಗದಲ್ಲಿ ಫೆಂಡರ್ ಅನ್ನು ನೋಡುತ್ತೇವೆ ಮತ್ತು ಹೆಡ್‌ಲೈಟ್ ಕೊತೆ ಮೆಶ್ ಗ್ರಿಲ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಸ್ಲಿಮ್ ನಕಲ್ ಗಾರ್ಡ್‌ಗಳ ಜೊತೆಗೆ ರೇರ್ ಮೀರರ್ ಗಳನ್ನು ಹೊಂದಿದೆ. ಇದರ ಫ್ಯೂಯಲ್ ಟ್ಯಾಂಕ್ ಸುಂದರವಾದ ಟ್ರಿಪಲ್-ಟೋನ್ ಬಣ್ಣವನ್ನು ಪಡೆಯುತ್ತದೆ, ಈ ಬೈಕಿನಲ್ಲಿ ಟ್ಯಾನ್ ಲೆದರ್ ಸೀಟ್ ಅನ್ನು ಪಡೆಯುತ್ತದೆ, ಸಿಂಗಲ್-ಪೀಸ್ ವಿನ್ಯಾಸದೊಂದಿಗೆ, ಇದು ಸಾಕಷ್ಟು ಆಕರ್ಷಕವಾಗಿದೆ.

ಈ ಬೈಕಿನಲ್ಲಿ ಒಂದು ಸಣ್ಣ ಎಲ್ಇಡಿ ಟೈಲ್ ಲೈಟ್, ಜೆರ್ರಿ ಕ್ಯಾನ್ ಮೌಂಟ್ ಮತ್ತು ಸಣ್ಣ ಫೆಂಡರ್ ಅನ್ನು ಹೊಂದಿದೆ. ಇನ್ನು ಈ ಬೈಕ್ ಫ್ರೇಮ್, ಎಂಜಿನ್ ಜೋಡಣೆ ಮತ್ತು ಸೈಡ್ ಪ್ಯಾನೆಲ್‌ಗಳನ್ನು ಕಪ್ಪಾಗಿಸಲಾಗಿದೆ. ಅಲ್ಲದೆ, 'ಎಸ್‌ಟಿಜಿ' ಲೋಗೊ ಜೊತೆಗೆ ಸೈಡ್ ಪ್ಯಾನೆಲ್‌ಗಳಲ್ಲಿ 'ಸ್ಕ್ರ್ಯಾಂಬ್ಲರ್ 650' ಬ್ರ್ಯಾಂಡಿಂಗ್ ಇದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇದರ ಎಕ್ಸಾಸ್ಟ್ ಪೈಪ್ ಅನ್ನು ನವೀಕರಿಸಲಾಗಿದೆ. ಆಫ್-ರೋಡಿಂಗ್ ಮಾಡಲು ಸಹಕಾರವಾಗುವಂತೆ ಬ್ಯಾಷ್ ಪ್ಲೇಟ್ ಅನ್ನು ಸಹ ಇಲ್ಲಿ ಸೇರಿಸಲಾಗಿದೆ. ಅಲ್ಲದೆ ಎಂಜಿನ್ ಕೇಸ್ ಗಾರ್ಡ್ ರೈಲ್ ಜೊತೆ ಅಸಿಸ್ಟ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ. ಇನ್ನು ಇದರಲ್ಲಿ ಸ್ಪೋರ್ಟ್ಸ್ ವೈರ್-ಸ್ಪೋಕ್ ವ್ಹೀಲ್ ಗಳು, ನಾಬಿ ಟೈರ್‌ಗಳನ್ನು ನೀಡಿದೆ.

ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಈ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕಿನಲ್ಲಿ ಅದೇ 649ಸಿಸಿ ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಒಳಗೊಡಿದೆ.
MOST READ: ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಈ ಎಂಜಿನ್ 7,250 ಆರ್‌ಪಿಎಂನಲ್ಲಿ 47 ಬಿಹೆಚ್‌ಪಿ ಪವರ್ ಮತ್ತು 5,250 ಆರ್‌ಪಿಎಂನಲ್ಲಿ 52 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಇಂಟರ್‍ಸೆಪ್ಟರ್ 650 ಬೈಕ್ ಉತ್ತಮ ಸೀಟಿಂಗ್ ಪೊಷಿಷನ್ ಅನ್ನು ಹೊಂದಿದೆ. ಇನ್ನು ಇದು ಉದ್ದವಾದ ಟ್ಯಾಂಕ್ ವಿನ್ಯಾಸ ಮತ್ತು ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳೊಂದಿಗೆ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.


Click it and Unblock the Notifications








