ಫಾರೆಸ್ಟ್ ಗ್ರೀನ್ ಬಣ್ಣದಲ್ಲಿ ಬಿಡುಗಡೆಯಾದ ಬುಲೆಟ್ 350 ಬೈಕ್

ಬುಲೆಟ್ 350, ರಾಯಲ್ ಎನ್‌ಫೀಲ್ಡ್‌ ಕಂಪನಿಯ ಎಂಟ್ರಿ ಲೆವೆಲ್ ಬೈಕ್ ಆಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಬೈಕ್ ಅನ್ನು ಮೊದಲ ಬಾರಿಗೆ 1932ರಲ್ಲಿ ಬಿಡುಗಡೆಗೊಳಿಸಿತು. ಈ ಬೈಕ್ ತನ್ನ ಸರಳ ವಿನ್ಯಾಸ ಹಾಗೂ ಹ್ಯಾಂಡ್ ಕ್ರಾಫ್ಟ್ ಕ್ರೋಮ್'ನಿಂದಾಗಿ ಜನರ ಗಮನ ಸೆಳೆಯುತ್ತದೆ.

ಫಾರೆಸ್ಟ್ ಗ್ರೀನ್ ಬಣ್ಣದಲ್ಲಿ ಬಿಡುಗಡೆಯಾದ ಬುಲೆಟ್ 350 ಬೈಕ್

ಕಂಪನಿಯು ಈ ಬೈಕ್ ಅನ್ನು ಸ್ಟ್ಯಾಂಡರ್ಡ್ ಹಾಗೂ ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಗಳಲ್ಲಿ ಹಲವು ಬಣ್ಣಗಳೊಂದಿಗೆ ಮಾರಾಟ ಮಾಡುತ್ತದೆ. ಕಂಪನಿಯು ಈ ಬೈಕ್ ಅನ್ನು ಈಗ ಹೊಸ ಫಾರೆಸ್ಟ್ ಗ್ರೀನ್ ಬಣ್ಣದಲ್ಲಿ ಬಿಡುಗಡೆಗೊಳಿಸಿದೆ. ಈ ಎರಡೂ ಮಾದರಿಗಳನ್ನು ಬುಲೆಟ್ ಸಿಲ್ವರ್, ಒನೆಕ್ಸ್ ಬ್ಲ್ಯಾಕ್ ಹಾಗೂ ಬ್ಲ್ಯಾಕ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಫಾರೆಸ್ಟ್ ಗ್ರೀನ್ ಬಣ್ಣದಲ್ಲಿ ಬಿಡುಗಡೆಯಾದ ಬುಲೆಟ್ 350 ಬೈಕ್

ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಯನ್ನು ರೀಗಲ್ ರೆಡ್, ರಾಯಲ್ ಬ್ಲೂ ಹಾಗೂ ಝಡ್ ಬ್ಲ್ಯಾಕ್‌ ಬಣ್ಣಗಳಲ್ಲಿಯೂ ಮಾರಾಟ ಮಾಡಲಾಗುತ್ತದೆ. ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಫಾರೆಸ್ಟ್ ಗ್ರೀನ್‌ ಬೈಕಿನಲ್ಲಿ ಬಣ್ಣದ ಹೊರತಾಗಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಹೊಸ ಬಣ್ಣವನ್ನು ಹೊಂದಿರುವ ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.33 ಲಕ್ಷಗಳಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಫಾರೆಸ್ಟ್ ಗ್ರೀನ್ ಬಣ್ಣದಲ್ಲಿ ಬಿಡುಗಡೆಯಾದ ಬುಲೆಟ್ 350 ಬೈಕ್

ಈ ಬೈಕಿನಲ್ಲಿ 346 ಸಿಸಿಯ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್ ಇಂಜೆಕ್ಷನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 5,250 ಆರ್‌ಪಿಎಂನಲ್ಲಿ 20 ಬಿಹೆಚ್‌ಪಿ ಪವರ್ ಹಾಗೂ 4,000 ಆರ್‌ಪಿಎಂನಲ್ಲಿ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯು ಈ ಎಂಜಿನ್‌ನೊಂದಿಗೆ 5-ಸ್ಪೀಡಿನ ಗೇರ್‌ಬಾಕ್ಸ್ ಅನ್ನು ಜೋಡಿಸಿದೆ.

ಫಾರೆಸ್ಟ್ ಗ್ರೀನ್ ಬಣ್ಣದಲ್ಲಿ ಬಿಡುಗಡೆಯಾದ ಬುಲೆಟ್ 350 ಬೈಕ್

ಈ ಬೈಕಿನಲ್ಲಿ ಸಿಂಗಲ್ ಪೀಸ್ ಟ್ಯೂಬ್ಯುಲರ್ ಹ್ಯಾಂಡಲ್‌ಬಾರ್, ಸಿಂಗಲ್-ಪೀಸ್ ಸೀಟ್ ಸೆಟಪ್, ಕ್ರಾಪ್ಡ್ ಎಕ್ಸಾಸ್ಟ್, ಕ್ರೋಮ್ ಹೌಸಿಂಗ್‌ ಹೊಂದಿರುವ ರೌಂಡ್ ಶೇಪಿನ ಹೆಡ್‌ಲ್ಯಾಂಪ್‌, ರೆಕ್ಟಾಂಗ್ಯುಲರ್ ಟೇಲ್ ಲ್ಯಾಂಪ್‌, ಕ್ರಾಪ್ಡ್ ಟರ್ನ್ ಇಂಡಿಕೇಟರ್ ಹಾಗೂ ಮಿರರ್'ಗಳನ್ನು ಅಳವಡಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಫಾರೆಸ್ಟ್ ಗ್ರೀನ್ ಬಣ್ಣದಲ್ಲಿ ಬಿಡುಗಡೆಯಾದ ಬುಲೆಟ್ 350 ಬೈಕ್

ಇದರ ಜೊತೆಗೆ ಈ ಬೈಕಿನಲ್ಲಿ 35 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌, 5 ವೇ ಪ್ರೀ-ಲೋಡ್ ಅಡ್ಜಸ್ಟಬಲ್ ರೇರ್ ಟ್ವಿನ್ ಶಾಕ್ ಅಬ್ಸಾರ್ವರ್, ಎರಡು-ಪಿಸ್ಟನ್ ಬ್ರೇಕ್ ಕ್ಯಾಲಿಪರ್‌ ಹೊಂದಿರುವ 280 ಎಂಎಂ ಫ್ರಂಟ್ ಡಿಸ್ಕ್, 153 ಎಂಎಂ ರೇರ್ ಡ್ರಮ್ ಬ್ರೇಕ್ ಹಾಗೂ ಸಿಂಗಲ್-ಚಾನೆಲ್ ಎಬಿಎಸ್ ಸಿಸ್ಟಂಗಳನ್ನು ನೀಡಲಾಗಿದೆ.

ಫಾರೆಸ್ಟ್ ಗ್ರೀನ್ ಬಣ್ಣದಲ್ಲಿ ಬಿಡುಗಡೆಯಾದ ಬುಲೆಟ್ 350 ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ತನ್ನ ವ್ಯವಹಾರವನ್ನು ವಿಸ್ತರಿಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ಕಂಪನಿಯು ತನ್ನ ಹೊಸ ಮೆಟಿಯೊರ್ 350 ಬೈಕ್ ಅನ್ನು ಥೈಲ್ಯಾಂಡ್'ನಲ್ಲಿ ಬಿಡುಗಡೆಗೊಳಿಸಿತ್ತು. ಇತ್ತೀಚೆಗೆ ಕಂಪನಿಯು ತನ್ನ ಮೊದಲ ಶೋರೂಂ ಅನ್ನು ಜಪಾನ್‌ನಲ್ಲಿ ತೆರೆದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಫಾರೆಸ್ಟ್ ಗ್ರೀನ್ ಬಣ್ಣದಲ್ಲಿ ಬಿಡುಗಡೆಯಾದ ಬುಲೆಟ್ 350 ಬೈಕ್

ಈ ಶೋರೂಂ ಮೂಲಕ ಕಂಪನಿಯು ತನ್ನ 5 ಬೈಕ್‌ಗಳನ್ನು ಜಪಾನ್‌ನಲ್ಲಿ ಮಾರಾಟ ಮಾಡಲಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಪಿಸಿಐ ಲಿಮಿಟೆಡ್ ಅನ್ನು ಜಪಾನ್‌ನಲ್ಲಿ ತನ್ನ ಅಧಿಕೃತ ಡೀಲರ್ ಆಗಿ ಆಯ್ಕೆ ಮಾಡಿದ್ದು, ಟೋಕಿಯೊದಲ್ಲಿ ಈ ಶೋರೂಂ ಅನ್ನು ತೆರೆಯಲಾಗಿದೆ.

Most Read Articles

Kannada
English summary
Royal Enfield launches Bullet 350 bike in new green forest color option. Read in Kannada.
Story first published: Saturday, January 30, 2021, 17:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X