ಮಿಟಿಯೊರ್ 350 ಕ್ರೂಸರ್ ಬೈಕ್ ಕಾಯುವಿಕೆ ಅವಧಿಯಲ್ಲಿ ಮತ್ತೆ ಹೆಚ್ಚಳ
ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಹೊಸ ಮಿಟಿಯೊರ್ 350 ಕ್ರೂಸರ್ ಬೈಕ್ ಮಾದರಿಯು ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕ್ರೂಸರ್ ಬೈಕ್ ಮಾದರಿಯು ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಈ ಹಿಂದಿನ ಥಂಡರ್‌ಬರ್ಡ್ ಎಕ್ಸ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿರುವ ಮಿಟಿಯೊರ್ 350 ಬೈಕ್ ಮಾದರಿಯು ಥಂಡರ್‌ಬರ್ಡ್ ಬೈಕಿಗಿಂತಲೂ ಸಾಕಷ್ಟು ವಿಭಿನ್ನತೆಗಳನ್ನು ಹೊಂದಿದ್ದು, ಹೊಸ ಬೈಕ್ ಖರೀದಿಗಾಗಿ ಬೇಡಿಕೆ ಹೆಚ್ಚಿರುವುದರಿಂದ ಗ್ರಾಹಕರ ಕಾಯುವಿಕೆ ಅವಧಿ ಕೂಡಾ ಮತ್ತಷ್ಟು ಹೆಚ್ಚಳವಾಗುತ್ತಿದೆ. ಹೊಸ ಬೈಕ್ ಬಿಡುಗಡೆ ಆರಂಭದಲ್ಲಿ 2 ವಾರಗಳಿದ್ದ ಕಾಯುವಿಕೆ ಅವಧಿಯು ಇದೀಗ ಮೂರರಿಂದ ನಾಲ್ಕು ತಿಂಗಳಿಗೆ ಏರಿಕೆಯಾಗಿದೆ.

ಹೊಸ ಬೈಕಿಗೆ ಬೇಡಿಕೆ ಹೆಚ್ಚಾದ ಕಾರಣಕ್ಕೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಮಿಟಿಯೊರ್ 350 ಬೈಕಿನ ಕಾಯುವ ಅವಧಿಯನ್ನು ಹೆಚ್ಚಿಸಿದ್ದು, ಕಾಯುವ ಅವಧಿಯು ರಾಜ್ಯಗಳಿಂದ ರಾಜ್ಯಗಳಿಗೆ, ನಗರಗಳಿಂದ ನಗರಗಳಿಗೆ ಇಂತಿಷ್ಟು ದಿನವೆಂದು ನಿಗದಿಪಡಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್‌ಗಳಿಗೆ ನಮ್ಮ ಬೆಂಗಳೂರಿನ ಮಾತ್ರವೇ ಯಾವುದೇ ಕಾಯುವಿಕೆ ಅವಧಿಯಿಲ್ಲದೆ ಬೈಕ್ ವಿತರಣೆ ಮಾಡುತ್ತಿದ್ದು, ಇನ್ನುಳಿದ ನಗರಗಳಲ್ಲಿ 2 ವಾರಗಳಿಂದ ಗರಿಷ್ಠ ಐದು ತಿಂಗಳ ಕಾಲ ಕಾಯುವಿಕೆ ಅವಧಿಯನ್ನು ನಿಗದಿಪಡಿಸಿದೆ.

ಹೊಸ ಬೈಕ್ ಮಾದಿರಿಯು ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌ನೊವಾ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇತ್ತೀಚೆಗೆ ಹೊಸ ಬೈಕ್ ಮಾದರಿಗೆ 2021ರ ಇಂಡಿಯನ್ ಮೋಟಾರ್‌ಸೈಕಲ್ ಆಫ್ ಇಯರ್ ಪ್ರಶಸ್ತಿ ನೀಡಿರುವುದು ಕೂಡಾ ಗ್ರಾಹಕರನ್ನು ಸೆಳೆಯುತ್ತಿದೆ. ಹೊಸ ಬೈಕ್ ಮಾದರಿಯು ಸದ್ಯ ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ಆರಂಭಿಕವಾಗಿ ರೂ.2.22 ಲಕ್ಷ (ಫೈರ್‌ಬಾಲ್), ರೂ. 2.28 ಲಕ್ಷ (ಸ್ಟೆಲ್ಲಾರ್) ಮತ್ತು ಹೈ ಎಂಡ್ ಮಾದರಿಯಾದ (ಸೂಪರ್‌ನೊವಾ) ಮಾದರಿಯು ರೂ. 2.40 ಲಕ್ಷ ಬೆಲೆ ಹೊಂದಿದೆ.

ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಹೊಸ ಬೈಕ್ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಒದಗಿಸಲಿದ್ದು, ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್ ಅಬ್ಸಾರ್ಬರ್ ನೀಡಲಾಗಿದೆ.

ಹೊಸ ಬೈಕಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ 6 ಕೆ.ಜಿ ಕಡಿಮೆ ತೂಕ ಹೊಂದಿರುವ ಹೊಸ ಮಿಟಿಯೊರ್ 350 ಬೈಕ್ ಮಾದರಿಯು 1,400-ಎಂಎಂ ವೀಲ್ಹ್‌ಬೆಸ್, 170-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೊಸ ಮಿಟಿಯೊರ್ 350 ಬೈಕ್ ಮಾದರಿಯು ಹೊಸದಾಗಿ ಅಭಿವೃದ್ದಿಗೊಳಿಸಲಾದ ಜೆ-ಸೀರಿಸ್ ಮಾದರಿಯ ಎಂಜಿನ್ ಬಳಕೆ ಮಾಡಲಾಗಿದ್ದು, ಹೊಸ ಎಂಜಿನ್‌ನಿಂದಾಗಿ ಬೈಕಿನ ವೈಬ್ರೆಷನ್ ಪ್ರಮಾಣವು ಸಾಕಷ್ಟು ಸುಧಾರಣೆಯಾಗಿದೆ.

ಮಿಟಿಯೊರ್ 350 ಬೈಕ್ ಮಾದರಿಯು 349-ಸಿಸಿ ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 20.2-ಬಿಎಚ್‌ಪಿ ಮತ್ತು 27-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಇದರೊಂದಿಗೆ ಹೊಸ ಬೈಕಿನಲ್ಲಿ ಟಿಪ್ಪರ್ ಪಾಡ್ ಒಳಗೊಂಡಿರುವ ಟರ್ನ್-ಬೈ-ಟರ್ನ್ ಗೂಗಲ್ ನ್ಯಾವಿಗೇಷನ್, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.


Click it and Unblock the Notifications








