ತಾಂತ್ರಿಕ ದೋಷ: ರಿಕಾಲ್ ಆಗುತ್ತಿವೆ 2.36 ಲಕ್ಷ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಭಾರತ, ಥೈಲ್ಯಾಂಡ್, ಮಲೇಷ್ಯಾ, ಇಂಡೋನೇಷ್ಯಾ, ಫಿಲಿಪೈನ್ಸ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಏಳು ಏಳು ದೇಶಗಳಲ್ಲಿ 236,966 ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ರಿಕಾಲ್ ಆಗುತ್ತಿವೆ. ಇದರಲ್ಲಿ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350, ಕ್ಲಾಸಿಕ್ 350 ಮತ್ತು ಬುಲೆಟ್ 350 ಬೈಕ್‌ಗಳು ಸೇರಿವೆ.

ತಾಂತ್ರಿಕ ದೋಷ: ರಿಕಾಲ್ ಆಗುತ್ತಿವೆ 2.36 ಲಕ್ಷ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಇಗ್ನಿಷನ್ ಕಾಯಿಲ್‌ನಲ್ಲಿ ದೋಷವಿರಬಹುದು ಎಂದು ಕಂಪನಿಯು ಹೇಳಿಕೊಂಡಿದೆ, ಇದು ಅಪರೂಪದ ಸಂದರ್ಭಗಳಲ್ಲಿ ಎಂಜಿನ್ ತಪ್ಪಾಗಿ ಕಾರ್ಯನಿರ್ವಹಿಸುತ್ತದೆ, ಇನ್ನು ವಾಹನದ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರಬಹುದು ಮತ್ತು ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಬಹುದು. ರಾಯಲ್ ಎನ್‌ಫೀಲ್ಡ್ ಕಂಪನಿಯು ಬೈಕ್‌ಗಳ ಆಂತರಿಕ ಟೆಸ್ಟ್ ನಡೆಸುವ ಸಂದರ್ಭದಲ್ಲಿ ಈ ದೋಷವನ್ನು ಕಂಡುಹಿಡಿಯಲಾಗಿದೆ.

ತಾಂತ್ರಿಕ ದೋಷ: ರಿಕಾಲ್ ಆಗುತ್ತಿವೆ 2.36 ಲಕ್ಷ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

2020ರ ಡಿಸೆಂಬರ್ ಮತ್ತು 2021ರ ಏಪ್ರಿಲ್ ತಿಂಗಳುಗಳ ನಡುವಿನ ಅವಧಿಯಲ್ಲಿ ವಿತರಣೆಯಾದ ನಿರ್ದಿಷ್ಟ ಬ್ಯಾಚ್‌ಗಳಿಗೆ ಈ ಸಮಸ್ಯೆಯನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಈಗಾಗಲೇ ಇದನ್ನು ಪ್ರತ್ಯೇಕಿಸಲಾಗಿದೆ ಎಂದು ರಾಯಲ್ ಎನ್‌ಫೀಲ್ಡ್ ಹೇಳಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ತಾಂತ್ರಿಕ ದೋಷ: ರಿಕಾಲ್ ಆಗುತ್ತಿವೆ 2.36 ಲಕ್ಷ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 2020ರ ಡಿಸೆಂಬರ್ ಮತ್ತು 2021ರ ಏಪ್ರಿಲ್ ತಿಂಗಳುಗಳ ನಡುವೆ ತಯಾರಿಸಲ್ಪಟ್ಟವು ಮತ್ತು ಇದೇ ಅವಧಿಯಲ್ಲಿ ಮಾರಾಟವಾಗಿವೆ. ಆದರೆ ಕ್ಲಾಸಿಕ್ ಮತ್ತು ಬುಲೆಟ್ 2021ರ ಜನವರಿ ಮತ್ತು ಏಪ್ರಿಲ್ ನಡುವೆ ತಯಾರಿಸಿ ಮಾರಾಟ ಮಾಡಲಾಗಿದೆ.

ತಾಂತ್ರಿಕ ದೋಷ: ರಿಕಾಲ್ ಆಗುತ್ತಿವೆ 2.36 ಲಕ್ಷ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಆದರೆ ಈ ಅವಧಿಯ ಎಲ್ಲಾ ಬೈಕ್‌ಗಳಲ್ಲಿ ದೋಷವಿಲ್ಲ ಎಂದು ರಾಯಲ್ ಎನ್‌ಫೀಲ್ಡ್ ಹೇಳಿಕೊಂಡಿದೆ. ಆದರೆ ಕಂಪನಿಯ ಸುರಕ್ಷತಾ ನಿಯಮಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳಿಗೆ ಅನುಗುಣವಾಗಿ,ಎಲ್ಲಾ ಮಾದರಿಗಳನ್ನು ಪೂರ್ವಭಾವಿಯಾಗಿ ಹಿಂಪಡೆಯಲು ಆರ್‌ಇ ನಿರ್ಧರಿಸಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ತಾಂತ್ರಿಕ ದೋಷ: ರಿಕಾಲ್ ಆಗುತ್ತಿವೆ 2.36 ಲಕ್ಷ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಇನ್ನು ಅಗತ್ಯವಿದ್ದರೆ, ಹೇಳಿದ ದೋಷಯುಕ್ತ ಭಾಗವನ್ನು ಪರಿಶೀಲಿಸಲು ಮತ್ತು ಬದಲಿಸಲು ಒಳಪಡಿಸಲಾಗುತ್ತದೆ. ರಾಯಲ್ ಎನ್‌ಫೀಲ್ಡ್ ಅಂದಾಜಿನ ಪ್ರಕಾರ ದೋಷ ಪೋರಿತ ಬೈಕ್‌ಗಳಲ್ಲಿ ಶೇ.10 ಕ್ಕಿಂತ ಕಡಿಮೆ ಭಾಗವು ಬದಲಾಯಿಸುವ ಅಗತ್ಯವಿರುತ್ತದೆ.

ತಾಂತ್ರಿಕ ದೋಷ: ರಿಕಾಲ್ ಆಗುತ್ತಿವೆ 2.36 ಲಕ್ಷ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು ಒಟ್ಟು 53,298 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ರಾಯಲ್ ಎನ್‌ಫೀಲ್ಡ್ ಕಂಪನಿಯು 2021ರ ಮಾರ್ಚ್ ತಿಂಗಳಿನಲ್ಲಿ ಒಟ್ಟು 66,058 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಮಾಸಿಕ ಮಾರಾಟದಲ್ಲಿ ಶೇ.19.32 ರಷ್ಟು ಕುಸಿತವನ್ನು ಕಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ತಾಂತ್ರಿಕ ದೋಷ: ರಿಕಾಲ್ ಆಗುತ್ತಿವೆ 2.36 ಲಕ್ಷ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾತ್ರ ರಾಯಲ್ ಎನ್‌ಫೀಲ್ಡ್ ಕಂಪನಿಯು ಕಳೆದ ತಿಂಗಳು 48,789 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಆದರೆ 2021ರ ಮಾರ್ಚ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮಾತ್ರ 60,173 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇದನ್ನು ಕಳೆದ ತಿಂಗಳ ಮಾರಾಟ ಮಾಡಿದ ಯುನಿಟ್‌ಗಳಿಗೆ ಹೋಲಿಸಿದರೆ ಶೇ.18.92 ರಷ್ಟು ಕುಸಿತುವನ್ನು ಕಂಡಿದೆ.

ತಾಂತ್ರಿಕ ದೋಷ: ರಿಕಾಲ್ ಆಗುತ್ತಿವೆ 2.36 ಲಕ್ಷ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಡೀಲರುಗಳು ದೋಷ ಪೋರಿತ ಬೈಕ್‌ಗಳ ಮಾಲೀಕರನ್ನು ಸಂಪರ್ಕಿಸುತ್ತಾರೆ. ಗ್ರಾಹಕರು ಕೂಡ ತಮ್ಮ ಬೈಕಿನಲ್ಲಿ ದೋಷ ಕಂಡು ಬಂದಲ್ಲಿ ರಾಯಲ್ ಎನ್‌ಫೀಲ್ಡ್ ಡೀಲರುಗಳನ್ನು ಸಂಪರ್ಕಿಸಬಹುದಾಗಿದೆ.

Most Read Articles

Kannada
English summary
Royal Enfield Recalls Over 2.36 Lakh Motorcycles Across Seven Countries. Read In Kannada.
Story first published: Thursday, May 20, 2021, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X