ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ 2021ರ Royal Enfield Classic 350 ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಕ್ಲಾಸಿಕ್ 350 ಬೈಕ್ ಅನ್ನು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಈ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350(Royal Enfield Classic 350) ಬೈಕ್ ಉತ್ಪಾದನೆಯು 1 ಲಕ್ಷ ಮೈಲಿಗಲ್ಲನ್ನು ದಾಟಿದೆ.

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ 2021ರ Royal Enfield Classic 350 ಬೈಕ್

ಈ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಮಾರಾಟವಾಗುತ್ತಿದೆ. ಈ ಬೈಕ್ ಯುರೋಪ್, ದಕ್ಷಿಣ ಏಷ್ಯಾ, ದಕ್ಷಿಣ ಅಮೇರಿಕಾ, ಆಸ್ಟ್ರೇಲಿಯಾ, ಇತ್ಯಾದಿ ದೇಶಗಳಲ್ಲಿ ಮಾರಾಟವಾಗುತ್ತಿದೆ. ರಾಯಲ್ ಎನ್‌ಫೀಲ್ಡ್ ಈ ಮೈಲಿಗಲ್ಲನ್ನು ಬಹಳ ಹಿಂದೆಯೇ ಸಾಧಿಸುತ್ತಿತ್ತು, ಆದರೆ ಬಿಡಿ ಭಾಗಗಳ ಜಾಗತಿಕ ಕೊರತೆಯಿಂದ ತಡವಾಗಿದೆ. ಈ ಹೊಸ ಕ್ಲಾಸಿಕ್ 350 ಬೈಕಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಇದರ ಪರಿಣಾಮವಾಗಿ ಕಾಯುವ ಅವಧಿಯು ಹೆಚ್ಚಾಗುತ್ತಿದೆ.

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ 2021ರ Royal Enfield Classic 350 ಬೈಕ್

ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ಭಾರತದಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿತ್ತು. ಈ ಹೊಸ ಬೈಕ್ ಮಾದರಿಯು ರೆಡ್‌ಡಿಚ್, ಹಾಲ್ಕೈನ್, ಸಿಗ್ನಲ್ಸ್, ಡಾರ್ಕ್ ಮತ್ತು ಕ್ರೋಮ್ ಎಂಬ ಐದು ವೆರಿಯೆಂಟ್ ಗಳಲ್ಲಿ ಲಭ್ಯವಿದೆ, ಈ ಹೊಸ ಬೈಕ್ J1A ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗಿದೆ.

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ 2021ರ Royal Enfield Classic 350 ಬೈಕ್

ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಕ್ರೋಮ್ ರೆಡ್, ಕ್ರೋಮ್ ಬ್ರೊಂಜ್, ಡಾರ್ಕ್ ಸ್ಟೆಲ್ತ್ ಬ್ಲ್ಯಾಕ್, ಡಾರ್ಕ್ ಗನ್‌ಮೆಟಲ್ ಗ್ರೇ, ಸಿಗ್ನಲ್ಸ್ ಮಾರ್ಷ್ ಗ್ರೇ, ಸಿಗ್ನಲ್ಸ್ ಸ್ಯಾಂಡ್ ಸ್ಟಾರ್ಮ, ಹಾಲ್ಸಿಯಾನ್ ಗ್ರೀನ್, ಹಾಲ್ಸಿಯಾನ್ ಬ್ಲ್ಯಾಕ್, ಹಾಲ್ಸಿಯಾನ್ ಗ್ರೇ, ರೆಡ್‌ಡಿಚ್ ಗ್ರೀನ್ ಮತ್ತು ರೆಡ್‌ಡಿಚ್ ಗ್ರೇ ಎಂಬ ಬಣ್ಣಗಳನ್ನು ಹೊಂದಿದೆ.

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ 2021ರ Royal Enfield Classic 350 ಬೈಕ್

ಹೊಸ ಬೈಕ್ ಮಾದರಿಯು ಇತ್ತೀಚೆಗೆ ಬಿಡುಗಡೆಯಾಗಿರುವ ಮಿಟಿಯೊರ್ 350 ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದೆ. 2021ರ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಸಸ್ಷೆಂಷನ್ ಸೆಟಪ್ ಮತ್ತು ಬ್ರೇಕಿಂಗ್ ಸಿಸ್ಟಂ ಅನ್ನು ಸಂಪೂರ್ಣವಾಗಿ ಬದಲಾವಣೆಗೊಳಿಸಲಾಗಿದೆ. ಈ ಹೊಸ ಬೈಕಿನಲ್ಲಿ ಇದೀಗ ಫ್ಯೂಲ್ ಗೇಜ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಪ್ರಮುಖ ಆಕರ್ಷಣೆಯಾಗಿದೆ.

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ 2021ರ Royal Enfield Classic 350 ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್ ಮಾದರಿಯಲ್ಲಿ ಮಿಟಿಯೊರ್ 350 ಮಾದರಿಗಾಗಿ ಪರಿಚಯಿಸಿರುವ 349 ಸಿಸಿ SOHC ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 19.1 ಬಿಎಚ್‌ಪಿ ಪವರ್ ಮತ್ತು 28 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ,

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ 2021ರ Royal Enfield Classic 350 ಬೈಕ್

ಕ್ಲಾಸಿಕ್ 350 ಬೈಕಿನಲ್ಲಿ ಈ ಹಿಂದೆ ಬಳಕೆ ಮಾಡಲಾಗುತ್ತಿದ್ದ 346 ಸಿಸಿ ಯುಸಿಇ ಎಂಜಿನ್ ತೆಗೆದುಹಾಕಿರುವ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ 349 ಸಿಸಿ SOHC ಎಂಜಿನ್ ನೀಡಿದೆ. ಈ ಹಿಂದಿನ ಮಾದರಿಗಳಲ್ಲಿ ಇದ್ದ ವೈಬ್ರೆಷನ್ ಪ್ರಮಾಣವು ಗಣನೀಯವಾಗಿ ಸುಧಾರಣೆಯಾಗಿದೆ.

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ 2021ರ Royal Enfield Classic 350 ಬೈಕ್

ಜೊತೆಗೆ ಎಲೆಕ್ಟ್ರಾನಿಕ್ಸ್ ಸೌಲಭ್ಯಗಳು ಬೈಕ್ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲಿದ್ದು, ಹೊಸ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಎಲ್‌ಸಿಡಿ ಜೊತೆಗೆ ಪ್ರತ್ಯೇಕವಾದ ಫ್ಯೂಲ್ ಗೇಜ್ ಮತ್ತು ಟ್ರಿಪ್ಲರ್ ಮೀಟರ್ ನೀಡಲಾಗಿದ್ದು, ಮಿಟಿಯೊರ್ ಮಾದರಿಯಲ್ಲಿರುವಂತೆ ಪ್ರತ್ಯೇಕವಾದ ಟ್ವಿನ್ ಪಾಡ್ ನೀಡದೆ ಇಂಟ್ರಾಗ್ರೆಟೆಡ್ ಮಾಡಲಾಗಿದೆ.

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ 2021ರ Royal Enfield Classic 350 ಬೈಕ್

ಟಾಪ್ ಎಂಡ್ ಮಾದರಿಗಳಿಗಾಗಿ ಮಾತ್ರವೇ ಕಂಪನಿಯು ಟ್ರಿಪ್ಪರ್ ಮೀಟರ್ ಅನ್ನು ಜೋಡಣೆ ಮಾಡಿದ್ದು, ಈ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮೂಲಕ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಹೊಸ ಬೈಕಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಬದಲಾಗಿ ಹಾಲೊಜೆನ್ ಬಲ್ಬ್ ಬಳಕೆ ಮಾಡಿದ್ದು, ಹೆಡ್‌ಲ್ಯಾಂಪ್ ಮಾತ್ರವಲ್ಲ ಟೈಲ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಸಹ ಹಾಲೊಜೆನ್ ಬಲ್ಬ್ ಹೊಂದಿವೆ.

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ 2021ರ Royal Enfield Classic 350 ಬೈಕ್

ಹೊಸ ಬೈಕಿನಲ್ಲಿರುವ ಸ್ವಿಚ್ ಗೇರ್ ಸೌಲಭ್ಯವನ್ನು ಮಿಟಿಯೊರ್ 350 ಮಾದರಿಯಿಂದ ಎರವಲು ಪಡೆದುಕೊಳ್ಳಲಾಗಿದ್ದು, ಕಂಪನಿಯು ಹೊಸ ಬೈಕ್ ಮಾದರಿಯನ್ನು ಸಿಂಗಲ್ ಕ್ರೆಡಲ್ ಫ್ರೆಮ್ ಬದಲಾಗಿ ಡ್ಯುಯಲ್ ಡೌನ್ ಟ್ಯೂಬ್ ಚಾರ್ಸಿ‌ಯೊಂದಿಗೆ ಅಭಿವೃದ್ದಿಗೊಳಿಸಿದೆ.

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ 2021ರ Royal Enfield Classic 350 ಬೈಕ್

ಡಬಲ್ ಕ್ರೆಡ್ ಚಾರ್ಸಿಸ್ ಬದಲಾವಣೆಯಿಂದಾಗಿ ಬೈಕ್ ರೈಡಿಂಗ್ ದೂರದ ಪ್ರಯಾಣದಲ್ಲೂ ಉತ್ತಮ ಅನುಭವವನ್ನು ನೀಡುತ್ತದೆ. ಈ ಹೊಸ ಬೈಕ್ ಸಸ್ಪೆಂಕ್ಷನ್ 41 ಎಂಎಂ ಟೆಲಿಸ್ಕೊಪಿಕ್ ಫೋರ್ಕ್‌ನೊಂದಿಗೆ 170 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ. ಇನ್ನು ಇದರ , ಈ ಬ್ರೇಕಿಂಗ್ ಕೂಡ ಸಾಕಷ್ಟು ಸುಧಾರಿಸಿದೆ. ಇದು ಎರಡೂ ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ, ಇದರೊಂದಿಗೆ ಎಬಿಎಸ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಖರೀದಿದಾರರು ಆಯ್ಕೆ ಮಾಡಿದ ರೂಪಾಂತರವನ್ನು ಅವಲಂಬಿಸಿ ಸಿಂಗಲ್-ಚಾನೆಲ್ ಅಥವಾ ಡ್ಯುಯಲ್-ಚಾನೆಲ್ ಎಬಿಎಸ್ ಪಡೆಯುತ್ತಾರೆ

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ 2021ರ Royal Enfield Classic 350 ಬೈಕ್

ಈ ಬೈಕಿನ 13-ಲೀಟರ್ ಇಂಧನ ಟ್ಯಾಂಕ್ ನೊಂದಿಗೆ ಬರುತ್ತದೆ. ಸುಮಾರು 36 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಒಟ್ಟಾರೆಯಾಗಿ, ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350ಹಳೆಯ ಮಾದರಿಗಿಂತ ದೊಡ್ಡ ಸುಧಾರಣೆಯಾಗಿದೆ. ಈ ಬೈಕಿನಲ್ಲಿ ದೂರ ಪ್ರವಾಸವು ಆನಂದದಿಂದ ಕೂಡಿರುತ್ತದೆ, ಈ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಹೈನೆಸ್ ಸಿಬಿ350 ಮತ್ತು ಜಾವಾ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Article Published On: Wednesday, December 15, 2021, 19:48 [IST]
English summary
Royal enfield rolled out 1 lakh new classic 350 motorcycle details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+